Friday, 13th December 2024

ಯುನೈಟೆಡ್‌ ವೇ ಜೊತೆಗೆ ಸಹಭಾಗಿತ್ವದಲ್ಲಿ ಬೆಂಗಳೂರಿನಲ್ಲಿ ಸ್ಟೆಮ್ ಲ್ಯಾಬ್ಸ್‌ ಆರಂಭಿಸಿದ ಪ್ರಾಟ್ & ವೈಟ್ನೆ

ಬೆಂಗಳೂರು: ಬೆಂಗಳೂರಿನಲ್ಲಿ ಎರಡು ಸ್ಟೆಮ್ ಲ್ಯಾಬ್‌ಗಳನ್ನು ಯುನೈಟೆಡ್‌ ವೇ (ಲಾಭೋದ್ದೇಶ ರಹಿತ ಸಂಸ್ಥೆ) ಸಹಭಾಗಿತ್ವದಲ್ಲಿ ಯುನೈಟೆಡ್‌ ಟೆಕ್ನಾಲಜೀಸ್ ಕಾರ್ಪೊರೇಶನ್ ಇಂಡಿಯಾ ಪ್ರೈ. ಲಿ. (ಯುಟಿಸಿಐಪಿಎಲ್) ಮೂಲಕ ತೆರೆಯುವು ದಾಗಿ ಪ್ರಾಟ್ & ವೈಟ್ನೆ ಘೋಷಣೆ ಮಾಡಿದೆ. ಶಾಲಾ ಮಕ್ಕಳಲ್ಲಿ ವಿಜ್ಞಾನ ಮತ್ತು ಗಣಿತ ಕಲಿಕೆಯನ್ನು ಪ್ರೋತ್ಸಾಹಿಸಲು ವಿನ್ಯಾಸ ಮಾಡಲಾಗಿರುವ ಸ್ಟೆಮ್ ಲ್ಯಾಬ್ಸ್‌ ಅನ್ನು ಕರ್ನಾಟಕ ಸಾರ್ಜನಿಕ ಶಾಲೆ (ಕೃಷ್ಣಾನಂದನಗರ) ಮತ್ತು ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ (ವೃಷಭಾವತಿನಗರ) ಯಲ್ಲಿ ಸ್ಥಾಪಿಸಲಾಗಿದೆ. ಲ್ಯಾಬ್‌ಗಳು ಎರಡೂ ಶಾಲೆಗಳಲ್ಲಿ 1000 ಕ್ಕೂ ಹೆಚ್ಚು ಮಕ್ಕಳಿಗೆ ಸ್ಫೂರ್ತಿ ತುಂಬುತ್ತದೆ ಮತ್ತು ಧನಾತ್ಮಕ ಪರಿಣಾಮ ಬೀರುತ್ತದೆ ಎಂಬುದನ್ನು ನಿರೀಕ್ಷಿಸಲಾಗಿದೆ.

“ಕಳೆದ ಹಲವು ವರ್ಷಗಳಿಂದಲೂ ಪ್ರಾಟ್ & ವೈಟ್ನೆ ಸ್ಟೆಮ್ ಕಲಿಕೆಯನ್ನು ಪೋಷಿಸಲು ಹೂಡಿಕೆಯ ಮೇಲೆ ಗಮನ ಕೇಂದ್ರೀಕರಿಸಿದೆ ಮತ್ತು ಯುನೈಟೆಡ್‌ ವೇ ಸಹಭಾಗಿತ್ವದಲ್ಲಿ ಈ ಎರಡು ಲ್ಯಾಬ್‌ಗಳನ್ನು ಆರಂಭಿಸುವುದಾಗಿ ಘೋಷಣೆ ಮಾಡಿದೆ” ಎಂದು ಪ್ರಾಟ್ & ವೈಟ್ನೆ, ಯುಟಿಸಿಐಪಿಎಲ್‌ನ ಅಧ್ಯಕ್ಷೆ ಮತ್ತು ದೇಶೀಯ ಮುಖ್ಯಸ್ಥೆ ಅಶ್ಮಿತಾ ಸೇಥಿ ಹೇಳಿದ್ದಾರೆ.

“ಈ ಲ್ಯಾಬ್‌ಗಳ ಪ್ರಾಯೋಗಿಕ ಕಲಿಕೆಯು ಮಕ್ಕಳಲ್ಲಿ ವಿಜ್ಞಾನ, ತಂತ್ರಜ್ಞಾನ ಮತ್ತು ವೈಮಾನಿಕ ಕ್ಷೇತ್ರದಲ್ಲಿ ಉದ್ಯೋಗ ಕೈಗೊಳ್ಳುವುದಕ್ಕೆ ಉತ್ಸಾಹ ಮತ್ತು ಸ್ಫೂರ್ತಿಯನ್ನು ಮೂಡಿಸುತ್ತದೆ ಎಂದು ನಾವು ಭಾವಿಸಿದ್ದೇವೆ.”

ಯುನೈಟೆಡ್‌ ವೇ ಸಹಭಾಗಿತ್ವದಲ್ಲಿ ರಚಿಸಿದ ಸ್ಟೆಮ್ ಲ್ಯಾಬ್‌ಗಳು ವಿಶೇಷ ಕಲಿಕೆ ಸಹಾಯಕಗಳು, ಕಿಟ್‌ಗಳು ಮತ್ತು ಪಠ್ಯಕ್ರಮ ವನ್ನು ಹೊಂದಿರಲಿವೆ. ಇವು ಶಾಲಾ ಮಕ್ಕಳಿಗೆ ಅನುಭವದ ಆಧಾರದಲ್ಲಿ ವಿಜ್ಞಾನ ಮತ್ತು ಗಣಿತ ಕಲಿಕೆಯ ಮೇಲೆ ಗಮನ ಕೇಂದ್ರೀಕರಿಸಲಿವೆ. ಬೆಂಗಳೂರಿನ ಪ್ರಾಟ್ & ವೈಟ್ನೆ ಉದ್ಯೋಗಿಗಳು ಕೂಡಾ ವಿಶೇಷ ಪ್ರಾಜೆಕ್ಟ್‌ಗಳು ಮತ್ತು ಸಂವಾದಗಳಲ್ಲಿ ಮಕ್ಕಳ ಜೊತೆಗೆ ಕೆಲಸ ಮಾಡುತ್ತಾರೆ.

“ಬೆಂಗಳೂರಿನಲ್ಲಿ ಸ್ಟೆಮ್ ಶಿಕ್ಷಣವನ್ನು ಪ್ರೋತ್ಸಾಹಿಸುವಲ್ಲಿ ಪ್ರಾಟ್ & ವೈಟ್ನೆ ಮತ್ತು ಯುನೈಟೆಡ್ ವೇ ಪ್ರಯತ್ನವು ನಮಗೆ ಖುಷಿ ನೀಡಿದೆ” ಎಂದು ಕರ್ನಾಟಕ ಸರ್ಕಾರದ ಉದ್ಯಮಗಳು ಮತ್ತು ವಾಣಿಜ್ಯ ಇಲಾಖೆ ನಿರ್ದೇಶಕ ಮತ್ತು ಔದ್ಯಮಿಕ ಅಭಿವೃದ್ಧಿ ಕಮೀಷನರ್ ಗುಂಜನ್ ಕೃಷ್ಣ ಹೇಳಿದ್ದಾರೆ. “ಭಾರತದಲ್ಲಿ ವಿಜ್ಞಾನ, ತಂತ್ರಜ್ಞಾನ ಮತ್ತು ವೈಮಾನಿಕ ಕ್ಷೇತ್ರದಲ್ಲಿ ಬೆಂಗಳೂರು ಪ್ರಮುಖ ಕೇಂದ್ರವಾಗಿದೆ ಮತ್ತು ಮುಂದಿನ ತಲೆಮಾರಿನ ಪ್ರತಿಭಾವಂತ ಅನ್ವೇಷಕರು, ಸಂಶೋಧಕರು ಮತ್ತು ಇಂಜಿನಿಯರು ಗಳನ್ನು ಪ್ರೋತ್ಸಾಹಿಸಲು ಇಂತಹ ಉಪಕ್ರಮಗಳು ನೆರವಾಗುತ್ತವೆ ಎಂದು ನಾವು ಭಾವಿಸಿದ್ದೇವೆ.”

“ಪರಿಕಲ್ಪನೆಯನ್ನು ದೃಶ್ಯೀಕರಿಸುವುದು, ಅನಾವರಣಗೊಳಿಸುವಿಕೆ ಮತ್ತು ಪ್ರಯೋಗದ ಮೂಲಕ ಪಠ್ಯಪುಸ್ತಕದಾಚೆಗೂ ಕಲಿಕೆಗೆ ಮಕ್ಕಳಿಗೆ ಸ್ಟೆಮ್ ಲ್ಯಾಬ್‌ಗಳು ಸಹಾಯ ಮಾಡುವುದರಿಂದ ಈ ಗಮನಾರ್ಹ ಪ್ರಯತ್ನಕ್ಕೆ ನಾವು ಸಹಭಾಗಿತ್ವ ಸಾಧಿಸಲು ಹೆಮ್ಮೆ ಹೊಂದಿದ್ದೇವೆ. ಇದು ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವವನ್ನು ಬೆಳೆಸುತ್ತದೆ ಮತ್ತು ಸ್ಟೆಮ್ ಸಂಬಂಧಿತ ಕ್ಷೇತ್ರಗಳಲ್ಲಿ ವೃತ್ತಿ ಪಡೆಯಲು ನೆರವಾಗುತ್ತದೆ” ಎಂದು ಯುನೈಟೆಡ್‌ ವೇ ಬೆಂಗಳೂರಿನ ಸಿಇಒ ರಾಜೇಶ್‌ ಕೃಷ್ಣನ್ ಹೇಳಿದ್ದಾರೆ.

ಜಾಗತಿಕವಾಗಿ ಪ್ರಾಟ್ & ವೈಟ್ನೆ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (ಸಿಎಸ್‌ಆರ್‌) ಕಾರ್ಯಕ್ರಮಗಳು ಮತ್ತು ಪಾಲುದಾರಿಕೆ ಗಳು ಮುಂದಿನ ತಲೆಮಾರನ್ನು ಸ್ಫೂರ್ತಿಗೊಳಿಸುವುದರ ಮೇಲೆ ಗಮನ ಕೇಂದ್ರೀಕರಿಸಿದೆ ಮತ್ತು ತಮ್ಮ ಸಮುದಾಯಗಳ ಮೇಲೆ ಧನಾತ್ಮಕ ಪರಿಣಾಮ ಬೀರುವುದಕ್ಕೆ ಉದ್ಯೋಗಿಗಳನ್ನು ಸಬಲಗೊಳಿಸುತ್ತದೆ ಮತ್ತು ಅನ್ವೇಷಣೆ ಮತ್ತು ತಂತ್ರಜ್ಞಾನವನ್ನು ಸಬಲಗೊಳಿಸುತ್ತದೆ. ಪ್ರಾಟ್ & ವೈಟ್ನೆ ಇತ್ತೀಚೆಗೆ ಉತ್ತರ ಅಮೆರಿಕ ಅಸೋಸಿಯೇಶನ್‌ ಫಾರ್ ಎನ್ವಿರಾನ್ಮೆಂಟಲ್ ಎಜುಕೇಶನ್ (ಎನ್‌ಎಎಇಇ) ಸಹಾಭಿತ್ವದಲ್ಲಿ ಪ್ರಾಟ್ & ವೈಟ್ನೆ ಇ-ಸ್ಟೆಮ್‌ ಪುರಸ್ಕಾರಗಳನ್ನು ಘೋಷಿಸಿದೆ.

ಇದು ವಿಶ್ವಾದ್ಯಂತ ಅನ್ವೇಷಣೀಯ ಇ-ಸ್ಟೆಮ್ ಶಿಕ್ಷಣ ಕಾರ್ಯಕ್ರಮಗಳಿಗೆ ಬೆಂಬಲ ಒದಗಿಸಲು ಒಟ್ಟು $250,000 ಯುಎಸ್‌ಡಿ ಅನುದಾನವನ್ನು ನೀಡುತ್ತದೆ. ಪರಿಸರ ಸವಾಲುಗಳನ್ನು ಪರಿಹರಿಸಲು ವಿಜ್ಞಾನ, ಇಂಜಿನಿಯರಿಂಗ್‌ ಮತ್ತು ಗಣಿತ ಬಳಕೆ ಮಾಡಲು 11-18 ವಯಸ್ಸಿನ ವಿದ್ಯಾರ್ಥಿಗಳಿಗೆ ಕೌಶಲಗಳು ಮತ್ತು ಸಾಮರ್ಥ್ಯವನ್ನು ನಿರ್ಮಾಣ ಮಾಡಲು ನೆರವಾಗುತ್ತದೆ. ಭಾರತದಿಂದ ತಮಿಳುನಾಡಿನ ಚೆನ್ನೈ ಮೂಲದ ಎನ್‌ಜಿಒ ಭೂಮಿ ಮತ್ತು ಉತ್ತರಾಖಂಡದ ಹರಿತಧಾರಾ ರೀಸರ್ಚ್‌ ಡೆವಲಪ್‌ ಮೆಂಟ್ ಆಂಡ್ ಎಜುಕೇಶನ್ ಫೌಂಡೇಶನ್ (ಎಚ್‌ಆರ್‌ಡಿಇಎಫ್‌) ತಲಾ $15000 ಮತ್ತು $5000 ಅನುದಾನವನ್ನು ಗೆದ್ದಿದೆ.

ಭಾರತದ ಕುಗ್ರಾಮಗಳಲ್ಲಿನ ಕಡಿಮೆ ಆದಾಯವನ್ನು ಹೊಂದಿರುವ ಕುಟುಂಬಗಳ ಮಕ್ಕಳಿಗೆ ಸ್ಟೆಮ್ ಚಟುವಟಿಕೆಗಳು ಮತ್ತು ಕಲಿಕೆ ಅವಕಾಶಗಳನ್ನು ಮುಖಾಮುಖಿ ಮತ್ತು ವರ್ಚುಲ್ ಕಲಿಕೆ ಮೂಲಕ ಒದಗಿಸುವ ಶಾಲೆ ಕಾರ್ಯಕ್ರಮಗಳೊಂದಿಗೆ ಭೂಮಿ ಸಹಭಾಗಿತ್ವ ಸಾಧಿಸುತ್ತದೆ. ಪರಿಸರ ನಿರ್ವಹಣೆ, ನೀರು, ಇಂಧನ, ತ್ಯಾಜ್ಯ, ಹವಾಮಾನ ಬದಲಾವಣೆ ಮತ್ತು ಸಾರಿಗೆ ಸಮಸ್ಯೆಗಳ ಕುರಿತ ಪ್ರಾಜೆಕ್ಟ್‌ಗಳೊಂದಿಗೆ ವಿದ್ಯಾರ್ಥಿಗಳನ್ನು ಎಚ್‌ಆರ್‌ಡಿಇಎಫ್‌ ತೊಡಗಿಸುತ್ತದೆ.

ಪ್ರಾಟ್ & ವೈಟ್ನೆ ಭಾರತದಲ್ಲಿ ಗಮನಾರ್ಹ ಹೂಡಿಕೆಗಳನ್ನು ಮಾಡಿದ್ದು, ಹೈದರಾಬಾದ್‌ನಲ್ಲಿ ಅತ್ಯಾಧುನಿಕ ಭಾರತ ಗ್ರಾಹಕ ತರಬೇತಿ ಕೇಂದ್ರವನ್ನು ಸ್ಥಾಪಿಸಿದೆ. ಬೆಂಗಳೂರಿನಲ್ಲಿರುವ ಭಾರತೀಯ ವಿಜ್ಞಾನ ಸಂಸ್ಥೆಯ ಸಹಭಾಗಿತ್ವದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರವನ್ನು ತೆರೆದಿದೆ. ಬೆಂಗಳೂರಿನಲ್ಲಿ ಇಂಡಿಯಾ ಕ್ಯಾಪಬಿಲಿಟಿ ಸೆಂಟರ್‌ ಹಾಗೂ ಇಂಡಿಯಾ ಇಂಜಿನಿಯರಿಂಗ್‌ ಸೆಂಟರ್ 2023 ರಲ್ಲಿ ಆರಂಭವಾಗುವ ನಿರೀಕ್ಷೆಯಿದೆ.