ಇಂಡಿ: ರೈತ ಮೋರ್ಚಾ ರಾಜ್ಯ ಅಧ್ಯಕ್ಷ ಹಾಗೂ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ತಮ್ಮ ಕೆಲಸ ನಿಮಿತ್ಯ ಕಲ್ಲೋಳ್ಳಿ ತೆರಳುವ ಸಮಯದಲ್ಲಿ ಮಾರ್ಗಮಧ್ಯ ಸತೀಶ ಜಾರಕಿ ಹೊಳಿ ಬೆಂಬಲಿಗರು ಕಾರಿಗೆ ಮುತ್ತಿಗೆ ಹಾಕಿರುವುದು ಜಾರಕಿಹೊಳಿಯವರಿಗೆ ಶೋಭ್ಯ ತರುವುದಿಲ್ಲ ಎಂದು ವಿಜಯಪೂರ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಕಾಸುಗೌಡ ಬಿರಾದಾರ ಖಂಡಿಸಿದ್ದಾರೆ.
ಸತೀಶ ಜಾರಕಿಹೋಳಿ ಹಿಂದು ಧರ್ಮದ ಬಗ್ಗೆ ಅವಹೇಳನಕಾರಿ ಪ್ರಚೋದನಾತ್ಮಕ ಮಾತುಗಳು ಬಹುಸಂಖ್ಯಾತ ಹಿಂದುಗಳಿಗೆ ನೋವಾಗಿದೆ. ಭಾರತ ಹಿಂದು ದೇಶ ಹೀಗಿರು ವಾಗ ಮಾತು ಆಡಿದರೆ ಹೋಯಿತು ಮುತ್ತು ಒಡೇದರೆ ಹೋಯಿತು ಎನ್ನುವಂತೆ ತಾವು ಒಂದು ಕ್ಷೇತ್ರದ ಶಾಸಕರಾಗಿರುವ ನೀವು ಧರ್ಮದ ವಿಷಯದಲ್ಲಿ ಮಾತನಾಡಿರುವುದು ಅಕ್ಷೇಮೆ ಅಪರಾಧ ಹೀಗಿರುವಾಗ ಯಾವುದೂ ಕಾರಣಕ್ಕೆ ಕೆಲಸದ ನಿಮಿತ್ಯ ರಾಜ್ಯಸಭಾ ಸದಸ್ಯರಾದ ಈರಣ್ಣಾ ಕಡಾಡಿ ತೇರಳುವ ಮಾರ್ಗ ಮಧ್ಯ ನಿಮ್ಮ ಗುಂಡಾಗಳು ಕಾರನ್ನು ಅಡ್ಡಗಟ್ಟಿ ಬಿಜೆಪಿ ನಾಯಕರ ವಿರುಧ್ಧ ಜೈಕಾರ ಕೂಗಿರುವುದು ಪ್ರಜಾಪ್ರಭುತ್ವ ಕಗ್ಗೋಲೆ ಮಾಡಿ ದಂತಾಗಿದೆ.
ಪ್ರಜಾಪ್ರಭುತ್ವದ ಬಗ್ಗೆ ಹಾಗೂ ದಲಿತರ ಸಮುದಾಯದ ಬಗ್ಗೆ ಮಾತುಗಳು ಬರೇ ಮುಖವಾಡ ಹಾಕಿಕೊಂಡರೆ ಸಾಲದು ಪ್ರಜಾ ಪ್ರಭುತ್ವದ ನಂಬಿಕೆ ಇದ್ದರೆ ನೀವು ಹೇಳಿರುವ ಹೇಳಿಕೆ ಈಗಾಗಲೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ತಿಳಿಸಿರುವ ನೀವು ನಿಮ್ಮ ಗುಂಡಾಗಳ ಮೇಲೆ ಹಿಡಿತವಿರಲಿ ಎನ್ನೋಮ್ಮೆ ಇಂತಹ ಕೃತ್ಯ ಎಸಗಿದರೆ ಬಿಜೆಪಿ ರೈತ ಮೋರ್ಚಾವತಿಯಿಂದ ರಾಜ್ಯವ್ಯಾಪಿ ಉಗ್ರಹೋರಾಟ ಮಾಡಲಾಗುವುದು ಎಂದು ತಿಳಿಸಿದ್ದಾರೆ.