ಮುಂದಿನ 25 ವರ್ಷಗಳಲ್ಲಿ ನನ್ನ ಭಾರತ ಮಾನವೀಯತೆಗಾಗಿ ಪರಿಸರ ಸ್ನೇಹಿ ರೊಬೋಟ್ ಗಳನ್ನು ಅಭಿವೃದ್ಧಿಗೊಳಿಸುವ ವಿಜ್ಞಾನಿಗಳನ್ನು ಹೊಂದಲಿದೆ’ ಎಂಬ ಬರಹದೊಂದಿಗೆ ಶ್ಲೋಕ್ ತಮ್ಮ ಡೂಡಲ್ ಅನ್ನು ಹಂಚಿಕೊಂಡಿದ್ದಾರೆ. ಈ ವರ್ಷ 1-10ನೇ ತರಗತಿವರೆಗಿನ ಸುಮಾರು 115000 ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
‘ಮುಂದಿನ 25 ವರ್ಷಗಳಲ್ಲಿ ನನ್ನ ಭಾರತ’ ಎಂಬ ಧ್ಯೇಯವನ್ನು ಸ್ಪರ್ಧೆ ಹೊಂದಿತ್ತು. ಟಿಂಕಲ್‌ನ ಕಾಮಿಕ್ಸ್‌ನ ಮುಖ್ಯಸ್ಥೆ ನೀನಾ ಗುಪ್ತಾ ಸೇರಿದಂತೆ ಸಮಾಜದ ಕೆಲ ಗಣ್ಯರು ಸ್ಪರ್ಧೆಯ ತೀರ್ಪುಗಾರರಾಗಿದ್ದರು.
‘ಮಕ್ಕಳ ಕ್ರಿಯಾಶೀಲತೆ ಮತ್ತು ಪರಿಕಲ್ಪನೆ ಅಚ್ಚರಿ ಮೂಡಿಸಿದೆ. ಹಲವು ಡೂಡಲ್‌ಗಳಲ್ಲಿ ಮುಂಚೂಣಿ ತಂತ್ರಜ್ಞಾನ ಮತ್ತು ಸುಸ್ಥಿರತೆಗಳು ಸಾಮಾನ್ಯ ಧ್ಯೇಯವಾಗಿತ್ತು’ ಎಂದು ಗೂಗಲ್ ಹೇಳಿದೆ. ಅಂತಿಮ 20 ಡೂಡಲ್‌ಗಳನ್ನು ಸಾರ್ವಜನಿಕ ವೋಟಿಂಗ್ ಗಾಗಿ ತೆರೆದಿಡಲಾಗಿತ್ತು.