ಪ್ರತಿಷ್ಠಿತ ಹೀರೋ ಮೋಟೊಕಾರ್ಪ್ ತನ್ನ ಎಲೆಕ್ಟ್ರಿಕ್ ವಾಹನಗಳಿಗಾಗಿ ಭಾರತದಲ್ಲೇ ಮೊದಲ ಅನುಭವ ಕೇಂದ್ರವನ್ನು (ಎಕ್ಸ್‌ಪೀರಿಯನ್ಸ್ ಸೆಂಟರ್) ಬೆಂಗಳೂರಿನಲ್ಲಿ ತೆರೆದಿದೆ.
ಎಲ್ಲೆಡೆ ಎಲೆಕ್ಟ್ರಿಕ್ ವಾಹನಗಳಿಗೆಬೇಡಿಕೆ ಹೆಚ್ಚಾಗಿದ್ದು, ಜನರು, ಪೆಟ್ರೋಲ್, ಡೀಸೆಲ್ ವಾಹನಳಿಂದ ದೂರ ಉಳಿಯುತ್ತಿದ್ದಾರೆ. ಅದರಲ್ಲೂ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಗೆ ಭಾರಿ ಬೇಡಿಕೆ ಹೆಚ್ಚಾಗಿದೆ. ಹೀರೋ ಮೋಟೋಕಾರ್ಪ್ ಇತ್ತೀಚೆಗೆ ವಿಡಾ ವಿ೧ ಪ್ಲಸ್ ಮತ್ತು ವಿ೧ಪ್ರೋ ಎಲೆಕ್ಟ್ರಿಕ್ ದ್ವಿಚಕ್ರ ವಾಹನವನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಈ ವಾಹನಗಳ ಖರೀದಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಆದರೆ, ಜನರು ಈ ವಾಹನಗಳನ್ನು ಒಮ್ಮೆ ಟ್ರೈಯಲ್‌ರೈಡ್ ಮಾಡಲು ಇಚ್ಚೆ ವ್ಯಕ್ತವಾಗಿತ್ತು. ಹೀಗಾಗಿ ಮೊದಲ ಅನುಭವ ಕೇಂದ್ರವನ್ನು ಬೆಂಗಳೂರಿನ ವಿಠ್ಠಲ್ ಮಲ್ಯರಸ್ತೆಯಲ್ಲಿ ವಿಡಾ ಸಂಸ್ಥೆ ಇರಲಿದ್ದು, ಇಲ್ಲಿ ಎಲೆಕ್ಟ್ರಿಕ್ ದ್ವಿಚಕ್ರವಾಹನಗಳ ಟ್ರಯಲ್ ರನ್ ಅನ್ನು ಪಡೆಯಬಹುದು.
ಈಗಾಗಲೇ ವಿಡಾ ಎಲೆಕ್ಟ್ರಿಕ್ ವಾಹನಗಳ ಬುಕ್ಕಿಂಗ್ ತೆರೆದಿದ್ದು, ವಾಹನಗಳ ಡೆಲಿವರಿ ಡಿಸೆಂಬರ್ ಎರಡನೇ ವಾರದಿಂದ ಪ್ರಾರಂಭವಾಗಲಿದೆ ಎಂದು ಕಂಪನಿ ತಿಳಿಸಿದೆ. ವಿಡಾ ಅನುಭವ ಕೇಂದ್ರವನ್ನು ೮೫೦೦ ಚ.ಕೀ ವ್ಯಾಪ್ತಿಯಲ್ಲಿ ನಿರ್ಮಿಸಿದ್ದು, ಇಲ್ಲಿ ವಿಡಾ ವಿ೧ ಇವಿ ವಾಹನ ಪ್ರದರ್ಶನಕ್ಕೆ ಇಡಲಾಗಿದೆ. ಜೊತೆಗೆ ಇವಿ ಚಾರ್ಜಿಂಗ್ ಗಾಗಿ ಉತ್ತಮ ಸ್ಥಳಾವಕಾಶ ನೀಡಲಾಗಿದೆ.
ಹೀರೋ ಮೋಟೋಕಾರ್ಪ್ ಈ ಅನುಭವ ಕೇಂದ್ರವನ್ನು ಟೆಕ್ ಮೊದಲ ವಿಧಾನದೊಂದಿಗೆ ಅಭಿವೃದ್ಧಿ ಪಡಿಸಿದೆ. ಇದು ಗ್ರಾಹರಕರಿಗೇ ತಲ್ಲೀನಗೊಳ್ಳುವ ಅನುಭವ ನೀಡಲಿದೆ. ಮುಂದಿನ ದಿನಗಳಲ್ಲಿ ನವದೆಹಲಿ, ಜೈಪುರ್‌ನಂತಹ ಸ್ಥಳಗಳಲ್ಲಿಯೂ ಕೇಂದ್ರ ತೆರೆಯಲು ಯೋಜಿಸಿದೆ.
ಈ ಕುರಿತು ಮಾತನಾಡಿದ ಹೀರೋ ಮೋಟರ್ ಮೊಬಿಲಿಟಿ ಬ್ಯುಸಿನೆಸ್ ಯುನಿಟ್ (ಇಎಂಬಿಯು) ಮುಖ್ಯಸ್ಥ ಸ್ವದೇಶ್ ಶ್ರೀವಾಸ್ತವ, ಇವಿ ಅನುಭವವನ್ನು ನೀಡಲು ಬೆಂಗಳೂರಿನಲ್ಲಿ ಮೊದಲ ಕೇಂದ್ರವನ್ನು ತೆರೆದಿದ್ದು, ಗ್ರಾಹಕರು ಇವಿ ಅನುಭವ ಪಡೆಯಲು ನೇರವಾಗಿ ಬರಬಹುದು. ಖಂಡಿತವಾಗಿಯೂ ವಿಡಾ ಇವಿ ನಿಮಗೆ ಉತ್ತಮ ಅನುಭವ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದರು.