Friday, 13th December 2024

ನಕಲಿ ಇಡಿ ಸಮನ್ಸ್ ಸೃಷ್ಟಿಸಿ ಉದ್ಯಮಿ ಸುಲಿಗೆ: ಖತರ್ನಾಕ್ ಗ್ಯಾಂಗ್ ಬಂಧನ

ನವದೆಹಲಿ: ನಕಲಿ ಇಡಿ ಸಮನ್ಸ್ ಸೃಷ್ಟಿಸಿ ಉದ್ಯಮಿಯನ್ನು ಸುಲಿಗೆ ಮಾಡುತ್ತಿದ್ದ ಅಸ್ಸಾಂ ರೈಫಲ್ಸ್ ಹೆಡ್ ಕಾನ್ಸ್ಟೆಬಲ್ ಸೇರಿದಂತೆ ಒಂಬತ್ತು ಜನರ ಖತರ್ನಾಕ್ ಗ್ಯಾಂಗ್ ನ್ನು ದೆಹಲಿ ಪೊಲೀಸರ ಅಪರಾಧ ವಿಭಾಗವು ಬಂಧಿಸಿದೆ.
ದೆಹಲಿ ಮೂಲದ ವಕೀಲ ಸೇರಿದಂತೆ ಇನ್ನೂ ಕೆಲವರನ್ನು ಶೀಘ್ರದಲ್ಲೇ ಬಂಧಿಸಲಾಗು ವುದು ಎಂದು ಪೊಲೀಸ್ ಅಧಿಕಾರಿ ರವೀಂದ್ರ ಯಾದವ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಅವರು, ಹಣವನ್ನು ಸುಲಿಗೆ ಮಾಡಲು ಮುಖ್ಯ ಆರೋಪಿಯು ತಾನು ಗುತ್ತಿಗೆದಾರನಾಗಿ ಕೆಲಸ ಮಾಡುತ್ತಿದ್ದ ಕಂಪನಿಯಲ್ಲಿ ನಕಲಿ ಇಡಿ ಸಮನ್ಸ್ ಸೃಷ್ಟಿಸುವ ಮೂಲಕ ಭಯ ಸೃಷ್ಟಿಸಿದ್ದ ಮತ್ತು ಇಡಿ ಅಧಿಕಾರಿಗಳಂತೆ ನಟಿಸುತ್ತಿದ್ದ ವ್ಯಕ್ತಿಗಳು ಮತ್ತು ಕಂಪನಿ ಅಧಿಕಾರಿಗಳೊಂದಿಗೆ ಸಭೆಗಳನ್ನು ನಡೆಸಿದ್ದ ಎಂದು ಅವರು ಮಾಹಿತಿ ನೀಡಿದರು.
ಈ ಸಂಬಂಧ 9 ವ್ಯಕ್ತಿಗಳ ಗ್ಯಾಂಗ್ ಬಂಧಿಸಲಾಗಿದೆ. ಶೀಘ್ರದಲ್ಲೇ ಇತರರನ್ನು ಬಂಧಿಸ ಲಾಗುವುದು ಎಂದು ರವೀಂದ್ರ ಯಾದವ್ ಹೇಳಿದರು.