Friday, 13th December 2024

ಕಾರ್ಯಕರ್ತರ ಅಭಿಮಾನದ ಋಣ ತೀರಿಸಲಾರೆ, ಪಂಚರತ್ನ ರಥಯಾತ್ರೆ ಜೆಡಿಎಸ್ ಶಕ್ತಿಯಾಗಲಿದೆ: ಕೆ.ಪಿ.ಬಚ್ಚೇಗೌಡ

ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರ ವಿಧಾನ ಸಭಾ ಕ್ಷೇತ್ರದಲ್ಲಿ ರುವ ಜೆಡಿಎಸ್ ಪಕ್ಷದ ನಿಷ್ಟಾವಂತ ಕಾರ್ಯಕರ್ತರು, ಮುಖಂಡರ ಋಣ ನನ್ನ ಮೇಲಿದ್ದು ಅದಕ್ಕೆ ಬೆಲೆ ಕಟ್ಟಲಾಗದು. ೨೦೨೩ಕ್ಕೆ ಜೆಡಿಎಸ್ ಸ್ವಂತಬಲದ ಮೇಲೆ ಅಧಿಕಾರಕ್ಕೆ ಏರಲು ಕುಮಾರಸ್ವಾಮಿ ಮತ್ತೊಮ್ಮೆ ಮುಖ್ಯಮಂತ್ರಿ ಆಗಲು ಪಂಚರತ್ನ ರಥಯಾತ್ರೆ ಶಕ್ತಿ ತುಂಬುವ ಕೆಲಸ ಮಾಡಲಿದೆ ಎಂದು ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ ಹೇಳಿದರು.

ನಗರ ಹೊರವಲಯ ಸೂಲಾಲಪ್ಪನ ದಿನ್ನೆಯಲ್ಲಿರುವ ಶ್ರೀವೀರಾಂಜನೇಯಸ್ವಾಮಿ ದೇವರಿಗೆ ವಿಶೇಷ ಪೂಜೆಸಿದ ನಂತರ ವೇದಿಕೆ ಕಾರ್ಯಕ್ರಮದಲ್ಲಿ ಕೇಕ್ ಕತ್ತರಿಸುವ ಮೂಲಕ ತಮ್ಮ ೬೯ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಅವರು ಸುದ್ದಿಗಾರ ರೊಂದಿಗೆ ಮಾತನಾಡಿದರು.

ನನ್ನ ಹುಟ್ಟು ಹಬ್ಬವನ್ನು ಇಷ್ಟು ಅದ್ದೂರಿಯಾಗಿ ನೂರಾರು ಕಾರ್ಯಕರ್ತರ ಸಮ್ಮುಖದಲ್ಲಿ ಆಚರಣೆ ಮಾಡುತ್ತಿರುವುದು ಸಂತೋಷ ತಂದಿದೆ.ನಮ್ಮ ತಂದೆ ಕೆ.ಬಿ.ಪಿಳ್ಳಪ್ಪ ಅವರ ಜನಪರ ಸೇವೆ, ದೇವರ ಕೃಪೆ, ಪಕ್ಷದ ವರಿಷ್ಟರ ಆಶೀರ್ವಾಧದಿಂದ ಜನಸೇವೆಯಲ್ಲಿ ಇದ್ದೇನೆ.ನಿಮ್ಮೆಲ್ಲರ ಪ್ರೀತಿ ವಿಶ್ವಾಸಕ್ಕೆ ನಾನೆಂದೂ ಅಭಾರಿಯಾಗಿರುವೆ ಎಂದರು.

ರಾಜ್ಯದ ಸಮರ್ಥ ಪ್ರಾದೇಶಿಕ ಪಕ್ಷವಾದ ಜಾತ್ಯಾತೀತ ಜನತಾದಳಕ್ಕೆ ವರಿಷ್ಟ ದೇವೇಗೌಡ, ಮಾಜಿ ಮುಖ್ಯಮಂತ್ರಿ ಹೆಚ್‌ಡಿ ಕುಮಾರಸ್ವಾಮಿ ಎರಡು ಕಣ್ಣುಗಳಿದ್ದಂತೆ. ಇವರ ಮಾರ್ಗದರ್ಶನದಲ್ಲಿ ಪಕ್ಷಕ್ಕೆ ಸಾರ್ವಜನಿಕರ ಸೇವೆ ಮಾಡುವ ಅವಕಾಶ ದೊರೆತಾಗಲೆಲ್ಲಾ ಸಮರ್ಥವಾಗಿ ನಿರ್ವಹಿಸಿ ತಮ್ಮ ಶಕ್ತಿ, ಜನಪರ ಕಾಳಜಿ ಏನೆಂಬುದನ್ನು ತೋರಿಸಿದ್ದಾರೆ.ಚುನಾವಣೆ ಘೋಷಣೆಗೂ ಮುನ್ನವೇ ಪಂಚರತ್ನ ಯೋಜನೆಯ ಕನಸನ್ನು ಸಾರ್ವಜನಿಕರ ಮುಂದಿಡುವ ಮೂಲಕ ತಮ್ಮ ಪಕ್ಷದ ಸಂಕಲ್ಪ ಏನೆಂಬುದನ್ನು ತಿಳಿಸಿದ್ದಾರೆ.

ಯಾವ ರಾಷ್ಟಿçÃಯ ಪಕ್ಷಗಳೂ ಕೂಡ ಈವರೆಗೆ ಈಕೆಲಸ ಮಾಡಿಲ್ಲ ಎಂಬುದನ್ನು ಜನತೆ ಅರಿತಿದ್ದಾರೆ.ಈ ಬಾರಿ ಜೆಡಿಎಸ್ ಸ್ವಂತ ಬಲದ ಮೇಲೆ ಯಾರ ಹಂಗಿಗೂ ಒಳಗಾಗದಂತೆ ಅಧಿಕಾರಕ್ಕೆ ಬಂದರೆ ಖಂಡಿತವಾಗಿ ರಾಜ್ಯವು ಮಾದರಿಯಾದ ಆಡಳಿತಕ್ಕೆ ಸಾಕ್ಷಿಯಾಗಲಿದೆ.ಈದಿಸೆಯಲ್ಲಿ ಜನತೆ ಮನಸ್ಸು ಮಾಡಿದ್ದಾರೆ. ಕಾಂಗ್ರೆಸ್, ಬಿಜೆಪಿ ಪಕ್ಷದ ದುರಾಡಳಿತ ಕೊನೆ ಗಾಣಿಸಬೇಕಾದರೆ ಜೆಡಿಎಸ್‌ಗೆ ಆಶೀರ್ವದಿಸಬೇಕಿದೆ. ಈ ಕೆಲಸ ಜನತೆ ಮಾಡಲಿದ್ದಾರೆ ಎಂದರು.

ಜಿಲ್ಲಾಧ್ಯಕ್ಷ ಕೆ.ಎಂ.ಮುನೇಗೌಡ ಮಾತನಾಡಿ ಜಿಲ್ಲೆಗೆ ಪಂಚರತ್ನ ಯಾತ್ರೆಯು ನ.೨೩ಕ್ಕೆ ಬರಲಿದ್ದು ಜಿಲ್ಲೆಯಲ್ಲಿ ಇದಕ್ಕೆ ಬೇಕಾದ ಎಲ್ಲಾ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ. ಜಿಲ್ಲೆಯ ಪ್ರವಾಸದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್‌ಡಿ ಕುಮಾರಣ್ಣ ನಮ್ಮ ಜತೆಗಿರಲಿದ್ದು ೫ ತಾಲೂಕಿನ ಒಂದೊ0ದು ಹಳ್ಳಿಯಲ್ಲಿ ಗ್ರಾಮವಾಸ್ತವ್ಯ ಮಾಡಲಿದ್ದು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದರು

ನವೆ0ಬರ್ ೨೩ರಂದು ಚಿಂತಾಮಣಿ, ೨೪ರ0ದು ಶಿಡ್ಲಘಟ್ಟ, ೨೫ಕ್ಕೆ ಬಾಗೇಪಲ್ಲಿ,೨೬ರಂದು ಗೌರಿಬಿದನೂರು,೨೭ಕ್ಕೆ ಚಿಕ್ಕಬಳ್ಳಾಪುರದಲ್ಲಿ ಪಂಚರತ್ನ ರಥಯಾತ್ರೆ ಸಾಗಲಿದೆ.ಆಡಳಿತ ಪಕ್ಷವಾದ ಬಿಜೆಪಿ ಸಂಕಲ್ಪಯಾತ್ರೆ ಮೂಲಕ ಕಾಂಗ್ರೆಸ್ ಪಕ್ಷವನ್ನು ಟೀಕಿಸಿದರೆ,ವಿರೋಧ ಪಕ್ಷವಾದ ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆ ಮೂಲಕ ಬಿಜೆಪಿಯನ್ನು ದೂರುವ ಕೆಲಸ ಮಾಡುತ್ತಿವೆ. ಇವೆರಡೂ ಕೂಡ ಜನಸಾಮಾನ್ಯರ ಕಷ್ಟಕ್ಕೆ ಸ್ಪಧಿಸದೆ ಕಾಲಹರಣ ಮಾಡುತ್ತಿವೆ. ರಾಜ್ಯದ ಸರ್ವಾಂಗೀಣ ಅಭಿವೃದ್ದಿಗೆ ಜೆಡಿಎಸ್ ಪಕ್ಷವನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.

ಈ ವೇಳೆ ಡಾ.ಕೆ.ಪಿ. ಶ್ರೀನಿವಾಸ್,ಸ್ವರೂಪ್, ಮುಕ್ತ ಮುನಿಯಪ್ಪ, ಶಿಲ್ಪಗೌಡ, ಬಂಡ್ಲು ಶ್ರೀನಿವಾಸ್, ಕೆ.ಆರ್.ರೆಡ್ಡಿ, ಕೆ.ಬಿ. ಮುನಿರಾಜು, ಅಣ್ಣಮ್ಮ, ಶ್ರೀನಿವಾಸ್ ಸೇರಿದಂತೆ ಕೆಪಿ ಬಚ್ಚೇಗೌಡರ ಕುಟುಂಬವರ್ಗ, ಪಕ್ಷದ ಮುಖಂಡರು ಕಾರ್ಯಕರ್ತರು, ಅಭಿಮಾನಿಗಳು ಹಾರತುರಾಯಿ ಹಾಕುವ ಮೂಲಕ ಶುಭಾಶಯ ತಿಳಿಸಿದರು.