Saturday, 23rd November 2024

ಲೊಡ್ಡೆಗಳ ಬೆತ್ತಲೆ ಮಾಡಿದ ಟಿಪ್ಪು ನಿಜಕನಸು

ವೀಕೆಂಡ್ ವಿತ್‌ ಮೋಹನ್

camohanbn@gmail.com

ನಮ್ಮ ಶಾಲಾ ದಿನಗಳಲ್ಲಿ ಪುಕ್ಕಲು ರಾಜನೊಬ್ಬನನ್ನು ಮೈಸೂರು ಹುಲಿಯೆಂದು ಪಠ್ಯಪುಸ್ತಕಗಳಲ್ಲಿ ಮುದ್ರಿಸುವ ಮೂಲಕ ಸುಳ್ಳು ಇತಿಹಾಸವೊಂದನ್ನು ತುರುಕಲಾಗಿತ್ತು. ಬ್ರಿಟಿಷರು ಭಾರತದ ಮೇಲೆ ಆಕ್ರಮಣ ಮಾಡಿ ಲೂಟಿ ಮಾಡಿರುವುದರ ಜೊತೆಗೆ ಮೊಘಲರು, ಡಚ್ಚರು, ಫ್ರೆಂಚರು ಭಾರತವನ್ನು ಲೂಟಿ ಮಾಡಿದ್ದರು. ತಂತ್ರ್ಯಾ ನಂತರ ಎಡಚರ ಕೈಗೆ ಸಿಕ್ಕ ಇತಿಹಾಸ ಪಠ್ಯ ಪರಿಷ್ಕರಣೆಯಲ್ಲಿ ಕೇವಲ ಬ್ರಿಟಿಷರ ಅಕ್ರಮಣವನ್ನಷ್ಟೇ ಹೆಚ್ಚಾಗಿ ಪ್ರಕಟಿಸಿ, ಇತರರ ದಾಳಿಗಳನ್ನು ವ್ಯವಸ್ಥಿತವಾಗಿ ಮುಚ್ಚಿ ಹಾಕಲಾಯಿತು.

ಪಠ್ಯಪುಸ್ತಕಗಳ ಜೊತೆಗೆ ಸಮಾಜದಲ್ಲಿದ್ದ ಒಂದಷ್ಟು ಎಡಚ ಸಾಹಿತಿಗಳು ಟಿಪ್ಪುವಿನ ನೈಜ ಚಿತ್ರಣವನ್ನು ಜನರ ಮುಂದಿರಿಸುವ ಬದಲು, ತಮ್ಮ ಹಿರಿಯರು ಪ್ರತಿಪಾದಿಸಿದ ಸುಳ್ಳು ಗಳನ್ನೇ ರಂಗದ ಮೇಲೆ ಪ್ರಸ್ತುತಪಡಿಸಿದ್ದರು. ಮೊದಲ ಬಾರಿಗೆ 1999ರಲ್ಲಿ ಗಿರೀಶ್ ಕಾರ್ನಾಡರ ಟಿಪ್ಪು ಕನಸುಗಳು ಎಂಬ ನಾಟಕದ ಪ್ರಯೋಗ ಮಾಡಲಾಯಿತು. ’ತುಘಲಕ್’ ನಾಟಕವನ್ನು ಊಹಿಸಿ ಕೊಂಡು ಬರೆದಂತೆ ಟಿಪ್ಪುವಿನ ನಾಟಕವನ್ನೂ ಸಹ ತಮ್ಮ ಊಹೆಗೆ ತಕ್ಕಂತೆ ಬರೆದು ರಂಗ ಪ್ರಯೋಗಕ್ಕೆ ನಿಂತರು.

ತಮ್ಮ ನಾಟಕದಲ್ಲಿನ ವಿಚಾರಗಳಿಗೆ ಇತಿಹಾಸದಲ್ಲಿನ ಪುರಾವೆಗಳನ್ನು ಒದಗಿಸುವಂತೆ ಬಹಿರಂಗವಾಗಿ ಹಲವು ಸಾಹಿತಿಗಳು ಕೇಳಿ
ದರೂ, ಪುರಾವೆಗಳನ್ನು ಒದಗಿಸಲಾಗದೆ ಇದೊಂದು ನಾಟಕದ ಪ್ರಯೋಗವಷ್ಟೇ ಇತಿಹಾಸದ ಪುಸ್ತಕವಲ್ಲವೆಂಬ ಸಬೂಬು ಹೇಳಿ ಜಾರಿಕೊಂಡರು.

ಎಡಚರ ಮನಸ್ಥಿತಿಯೇ ಹೀಗಿರುತ್ತದೆ, ಭಾರತೀಯ ಸಂಸ್ಕೃತಿ, ಇತಿಹಾಸ, ಪರಂಪರೆಯನ್ನು ಮುಚ್ಚಿ ಹಾಕುವಲ್ಲೇ ತಮ್ಮ ಇಡೀ ಜೀವನವನ್ನು ಕಳೆಯುತ್ತಾರೆ. ಆದರೆ ಎಡಚರ ಟಿಪ್ಪುವಿನ ಸುಳ್ಳು ಇತಿಹಾಸವನ್ನು ಮಕಾಡೆ ಮಲಗಿಸುವ ನಾಟಕ ‘ಟಿಪ್ಪು ನಿಜ ಕನಸುಗಳು’ ಈಗ ಪ್ರದರ್ಶನ ಕಂಡಿದೆ. ಮೈಸೂರಿನ ರಂಗಾಯಣದ ನಿರ್ದೇಶಕರಾದ ಶ್ರೀ ‘ಅದ್ದಂಡ ಸಿ ಕಾರ್ಯಪ್ಪ’ನವರು
ಬರೆದಿರುವ ನಾಟಕ ಎಡಚರ ಬುಡಕ್ಕೆ ಬೆಂಕಿ ಇಟ್ಟಿದೆ.

ಹಿಂದೂಗಳ ಮೇಲೆ ನಿರಂತರ ಆಕ್ರಮಣ ನಡೆಸಿ, ಅವರ ತಾಳ್ಮೆಯನ್ನು ಪರೀಕ್ಷಿಸಿ ಕೊನೆಗೆ ಅವರ ಕೋಪಕ್ಕೆ ತುತ್ತಾಗಿ ಅಂತ್ಯ ಕಂಡ ಪುಕ್ಕಲು ಟಿಪ್ಪುವಿಗಾದ ಗತಿಯೇ, ಇಂದು ಸುಳ್ಳು ಇತಿಹಾಸ ಬರೆದ ಎಡಚರಿಗೆ ಬಂದೊದಗಿದೆ. ತಮ್ಮ ಸುಳ್ಳು ಇತಿಹಾಸ ಅನಾವರಣಗೊಳ್ಳುತ್ತಿದ್ದಂತೆಯೇ ವಿಚಲಿತರಾಗಿರುವ ಅವರು ಪುಸ್ತಕವನ್ನು ಬ್ಯಾನ್ ಮಾಡುವಂತೆ ಒತ್ತಾಯಿಸುತ್ತಿದ್ದಾರೆ. ನ್ಯಾಯಾಲಯದಲ್ಲಿ ಪುಸ್ತಕ ಮಾರಾಟಕ್ಕೆ ತಡೆಯಾಜ್ಞೆ ತರುವ ಮೂಲಕ ತಮ್ಮ ಭಯ ಹೊರಹಾಕಿದ್ದಾರೆ.

ಸುಳ್ಳುಗಳ ಸರಮಾಲೆಗಳನ್ನೇ ಬರೆದಿದ್ದ ’ಭಗವಾನ್ ’ರ ’ ’RSS ಆಳ ಮತ್ತು ಅಗಲ’ ಪುಸ್ತಕಕ್ಕೆ ಯಾರೂ ಸಹ ನ್ಯಾಯಾಲಯದ ಮೆಟ್ಟಿಲೇರಲಿಲ್ಲ. ಲೊಡ್ಡೆಗಳೇ ಹಾಗೆ ನೇರವಾಗಿ ಚರ್ಚೆಗೆ ಬರುವ ಧೈರ್ಯ ಅವರಿಗಿರುವುದಿಲ್ಲ. ತಮ್ಮ ಮನಸ್ಸಿಗೆ ಬಂದಿದ್ದನ್ನು ಬರೆದು, ಅದನ್ನೇ ನೂರು ಬಾರಿ ಹೇಳುತ್ತಿರುತ್ತಾರೆ. ತನ್ನ ಜೀವನದಲ್ಲಿ ಒಂದೇ ಒಂದು ಬಾರಿ ಸಂಘದ ಶಾಖೆಗೆ ಹೋಗದ ದೇವನೂರು ಮಹಾದೇವ ’RSS’ ನ ಬಗ್ಗೆ ಪುಸ್ತಕ ಬರೆದರೆ ಇವರಿಗೆ ಸತ್ಯ, ಆದರೆ ಸ್ವತಃ ತನ್ನ ಪೂರ್ವಜರೇ ಟಿಪ್ಪುವಿನ ಕ್ರೌರ್ಯಕ್ಕೆ ಒಳಗಾಗಿದ್ದನ್ನು ಅನುಭವಿಸಿರುವ ‘ಅದ್ದಂಡ ಸಿ ಕಾರ್ಯಪ್ಪ’ನವರು ಪುಸ್ತಕ ಬರೆದರೆ ಲೊಡ್ಡೆಗಳಿಗೆ ಸುಳ್ಳಿನಂತೆ ಕಾಣಿಸುತ್ತದೆ.

ಸ್ವಾತಂತ್ರ್ಯ ಪೂರ್ವದಲ್ಲಿ ವೀರ ಸಾವರ್ಕರ್ 1857ರ ‘ಪ್ರಥಮ ಸ್ವಾತಂತ್ರ್ಯ ಸಂಗ್ರಾಮ’ದ ಕುರಿತು ಬರೆದ ಪುಸ್ತಕವನ್ನು
ಬ್ರಿಟಿಷರು ಮುದ್ರಿಸಲು ಬಿಟ್ಟಿರಲಿಲ್ಲ. ಲಂಡನ್ನಿನಲ್ಲಿ ಈ ಸಂಗ್ರಾಮವನ್ನು ‘ಸಿಪಾಯಿ ದಂಗೆ’ ಎನ್ನುವ ಮೂಲಕ ಜನರಿಗೆ ಮಣ್ಣೆರೆ ಚುವ ಕೆಲಸ ಮಾಡಿದ್ದರು. ಕದ್ದು ಮುಚ್ಚಿ ವೀರ ಸಾವರ್ಕರ್ ತಮ್ಮ ಪುಸ್ತಕವನ್ನು ಕ್ರಾಂತಿಕಾರಿಗಳಿಗೆ ತಲುಪಿಸುವ ಪರಿಸ್ಥಿತಿ ನಿರ್ಮಾಣವಾಗಿತ್ತು.

ಸ್ವಾತಂತ್ರ್ಯಾ ನಂತರ ಇತಿಹಾಸ ತಿರುಚುವ ಕೆಲಸ ಮಾಡಿದ ಎಡಚರು ಬ್ರಿಟಿಷರು ಮಾಡಿದ ಕೆಲಸವನ್ನೇ ಮುಂದುವರೆಸಿಕೊಂಡು
ಬಂದು ಸಾವರ್ಕರರ ನೈಜ ಇತಿಹಾಸವನ್ನೇ ಮರೆಮಾಚಿ ಬಿಟ್ಟರು. ಬ್ರಿಟಿಷರಂತೆ ಮೊಘಲರೂ ಸಹ ಹೊರಗಿನಿಂದ ಬಂದ ಅಕ್ರಮಣಕಾರಿಗಳೆಂಬ ನೈಜ ಇತಿಹಾಸವನ್ನು ಬಿಂಬಿಸುವ ಬದಲು, ಅವರನ್ನು ದೊಡ್ಡ ನಾಯಕರಂತೆ ಬಿಂಬಿಸಿದರು. 1947 ರ ನಂತರ ತಾವು ಸೃಷ್ಟಿಸಿದ ಸುಳ್ಳು ಇತಿಹಾಸಕ್ಕೆ ನಾಯಕನೊಬ್ಬನನ್ನು ಹುಡುಕುತ್ತಿರುವಾಗ ಸಿಕ್ಕವನೇ ’ಟಿಪ್ಪು ಸುಲ್ತಾನ್’. ಯುದ್ಧ ಮಾಡಲಾಗದೆ ಸ್ವತಃ ತನ್ನ ತಂದೆಯಿಂದಲೇ ಛಡಿಯೇಟು ತಿಂದವನನ್ನು ಬ್ರಿಟಿಷರ ವಿರುದ್ದ ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರನೆಂಬಂತೆ ಬಿಂಬಿಸಿದರು.

ಟಿಪ್ಪುವಿನ ಮತಾಂಧ ಮಾನಸಿಕತೆಯನ್ನು ಇತಿಹಾಸದಲ್ಲಿ ಹೇಳಲೇ ಇಲ್ಲ, ಹಿಂದುಸ್ತಾನವನ್ನು ಸಂಪೂರ್ಣ ಇಸ್ಲಾಮಿಕ್ ರಾಷ್ಟ್ರ ವನ್ನಾಗಿಸುವ ಟಿಪ್ಪುವಿನ ಹುನ್ನಾರವನ್ನು ಮರೆಮಾಚಿ ಬಿಟ್ಟರು. ಸ್ವಾತಂತ್ರ್ಯ ಪೂರ್ವದಲ್ಲಿ ರಾಜರುಗಳ ನಡುವೆ ಯುದ್ಧ
ನಡೆಯುತ್ತಿದ್ದದ್ದು ನಿಜ, ಆದರೆ ಟಿಪ್ಪುವಿನ ವಿಚಾರದಲ್ಲಿ ಅದು ಕೇವಲ ಯುದ್ಧವಾಗಿರಲಿಲ್ಲ. ಮತಾಂಧತೆಯ ಅಮಲನ್ನು ತಲೆಗೇರಿಸಿಕೊಂಡಿದ್ದ ಟಿಪ್ಪು ಯುದ್ಧದ ಹೆಸರಿನಲ್ಲಿ ತನ್ನ ಮೌಲ್ವಿ ಹೇಳಿಕೊಟ್ಟಂತಹ ಇಸ್ಲಾಮಿಕ್ ರಾಷ್ಟ್ರದ ಕಲ್ಪನೆಯ ಬೆನ್ನತ್ತಿ ಹೊರಟಿದ್ದ ಈತನ ಹುಚ್ಚಾಟಕ್ಕೆ ತಾಯಿ ‘ಫಾತಿಮಾ ಉನ್ನಿಸಾ’ ಹಾಗು ಪತ್ನಿ ’ರುಖಿಯಾ ಭಾನು’ ಹೈರಾಣಾಗಿ ಹೋಗಿದ್ದಾರೆಂಬ ಸತ್ಯವನ್ನೂ ಸಹ ಎಡಚರು ಮುಚ್ಚಿಹಾಕಿದ್ದರು.

ಈತನ ಹುಚ್ಚಾಟವನ್ನು ಕಂಡ ಪತ್ನಿ’ರುಖಿಯಾ ಭಾನು’ ಶ್ರೀರಂಗಪಟ್ಟಣ, ಮೇಲುಕೋಟೆ, ನಂಜನಗೂಡು ದೇವಸ್ಥಾನಗಳನ್ನು ನಾಶ ಮಾಡದಂತೆ ಟಿಪ್ಪುವಿನ ಬಳಿ ಭಾಷೆ ತೆಗೆದುಕೊಂಡಿರುತ್ತಾಳೆ. ಇಲ್ಲದಿದ್ದರೆ ಟಿಪ್ಪು ಎಂದೋ ಈ ದೇವಸ್ಥಾನಗಳನ್ನು ಕೆಡವಿರುತ್ತಿದ್ದ, ಟಿಪ್ಪು ನಂಜುಂಡನ ಭಕ್ತನಾಗಿದ್ದನೆಂದು ಪುಂಗಿ ಊದಿದ್ದ ಎಡಚರ ಪುಂಗಿ ಅದ್ದಂಡರ ಪುಸ್ತಕದಿಂದ ಬಂದ್ ಆಗಿಹೋಗಿದೆ. ಟಿಪ್ಪು ಶೃಂಗೇರಿ ದೇವಸ್ಥಾನಕ್ಕೆ ದಾನ ನೀಡಿದನೆಂದು ಇತಿಹಾಸದಲ್ಲಿ ನಮೂದಿಸಿ, ಆತ ಹಿಂದೂಗಳ ಬೆಂಬಲಿಗ ನೆಂಬ ಮತ್ತೊಂದು ಸುಳ್ಳು ಹೇಳಿದ್ದರು.

ತನ್ನ ಪಾಪದ ಕೊಡ ತುಂಬಿದ ಸಮಯದಲ್ಲಿ ಹಿಂದೂ ದೇವರುಗಳನ್ನು ನೆನಪಿಸಿಕೊಂಡ ಟಿಪ್ಪು ದಿವಾನ್ ಪೂರ್ಣಯ್ಯನವರ ಸಲಹೆಯ ಮೇರೆಗೆ ತಾನು ಸಾಯುವ ಸಂದರ್ಭದಲ್ಲಿ ಮಾಡಿದ ಕೆಲಸವಿದು. ಬ್ರಿಟಿಷ್ ಸೆಂಟ್ರಲ್ ಲೈಬ್ರರಿಯಲ್ಲಿ ಭದ್ರವಾಗಿರುವ
ಟಿಪ್ಪುವಿನ ಪತ್ರಗಳನ್ನು ಸಂಗ್ರಹಿಸಿ ಕೇರಳದ ಪತ್ರಕರ್ತ ರೊಬ್ಬರು 1923ರಲ್ಲಿ ಮೊದಲ ಬಾರಿಗೆ ಟಿಪ್ಪುವಿನ ಮತಾಂಧ ಮನಸ್ಥಿತಿ ಜನರಿಗೆ ತಿಳಿಸುವ ಕೆಲಸ ಮಾಡಿದ್ದರು. ನಂತರ ಸಂಶೋಧಕ ಡಾ.ಚಿದಾನಂದ ಮೂರ್ತಿಯವರು ಮೊಟ್ಟ ಮೊದಲ ಬಾರಿಗೆ ಕನ್ನಡದಲ್ಲಿ ಟಿಪ್ಪುವಿನ ನೈಜ ಇತಿಹಾಸ ವನ್ನು ಜನರಿಗೆ ಹೇಳಿದರು.

ಆಂಗ್ಲೋ ಮೈಸೂರು ಯುದ್ಧದಲ್ಲಿ ಸೋತು ಸುಣ್ಣವಾಗಿದ್ದ ಟಿಪ್ಪುವಿನ ಬಳಿ ಬ್ರಿಟಿಷರಿಗೆ ನೀಡಲು ಕಪ್ಪದ ಹಣವಿರುವುದಿಲ್ಲ, ಆದರೆ ತನ್ನ ಸೊಕ್ಕಿಗೆ ಮಾತ್ರ ಎಂದೂ ಕಡಿಮೆ ಮಾಡಿಕೊಂಡಿರಲಿಲ್ಲ. ಬ್ರಿಟಿಷ್ ಅಧಿಕಾರಿಗಳು ಟಿಪ್ಪು ಬಾಕಿ ಕಪ್ಪದ ಹಣ ನೀಡುವ ತನಕ ಅವನ ಮಕ್ಕಳನ್ನು ಒತ್ತೆಯಾಳುಗಳಾಗಿ ಇಟ್ಟುಕೊಳ್ಳುವುದಾಗಿ ಹೇಳಿರುತ್ತಾರೆ. ಆತನ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವು ದಾಗಿಯೂ ಅವನ ಬಳಿ ಹೇಳಿರುತ್ತಾರೆ, ಆದರೆ ಟಿಪ್ಪು ಬ್ರಿಟಿಷರ ಆಂಗ್ಲ ಶಿಕ್ಷಣ ನನ್ನ ಮಕ್ಕಳಿಗೆ ಬೇಡವೆಂದು ಅರಚಿರುತ್ತಾನೆ.

ಟಿಪ್ಪುವಿನ ಈ ಪ್ರಸಂಗ ಈಗ ಯಾಕೆ ಹೇಳಿದೆಯೆಂದರೆ, ಎಡಚರ ದ್ವಂದ್ವ ಮನಸ್ಥಿತಿ ಹೇಗಿರುತ್ತದೆ ಎಂಬುದನ್ನು ತಿಳಿಸಲು. ಒಂದೆಡೆ ಟಿಪ್ಪುವಿನ ಸುಳ್ಳು ಇತಿಹಾಸವನ್ನು ವೈಭವೀಕರಿಸಿದ್ದಾರೆ, ಮತ್ತೊಂದೆಡೆ ಟಿಪ್ಪು ವಿರೋಧಿಸಿದ ಆಂಗ್ಲ ಶಿಕ್ಷಣ ನೀತಿ (ಮೆಕಾಲೆ ಶಿಕ್ಷಣ ನೀತಿ)ಯನ್ನು ಬೆಂಬಲಿಸುತ್ತಾರೆ. ತಮ್ಮ ಅನುಕೂಲಕ್ಕೆ ತಕ್ಕಂತೆ ಉಸರವಳ್ಳಿಯಂತೆ ಬಣ್ಣ ಬದಲಿಸುವ ಎಡಚ ರರು ಭಾರತದಲ್ಲಿ ಮಾಡಿದ ಅನಾಹುತಗಳು ಒಂದೊಂದಲ್ಲ. ಟಿಪ್ಪು ತನ್ನ ಮಕ್ಕಳನ್ನು ಸ್ವಾತಂತ್ರ್ಯ ಹೋರಾಟಕ್ಕಾಗಿ ಒತ್ತೆಯಾ ಳಾಗಿತ್ತನೆಂದು ವರಸೆ ಬದಲಿಸಿದ್ದಾರೆ, ಆದರೆ ಅದೇ ಟಿಪ್ಪು ‘ಸೋಂದಾ’ದ ರಾಜನ ಮಕ್ಕಳನ್ನು ಹೊತ್ತು ತಂದ ಇತಿಹಾಸವನ್ನು ಮುಚ್ಚಿ ಹಾಕುತ್ತಾರೆ.

ಗಿರೀಶ್ ಕಾರ್ನಾಡ್ ’ತುಘಲಕ್’ ಮಾದರಿಯಲ್ಲಿಯೇ ಟಿಪ್ಪುವಿನ ಸುಳ್ಳು ಇತಿಹಾಸವನ್ನು ರಂಗದ ಮೂಲಕ ಜನರಿಗೆ ತಲುಪಿಸಲು ಒಂದು ದೊಡ್ಡ ವ್ಯವಸ್ಥಿತ ತಂಡವನ್ನೇ ಕಟ್ಟಿಕೊಂಡಿದ್ದರು. ಮೈಸೂರು ಅರಸರ ಮನೆತನಕ್ಕೆ ದ್ರೋಹ ಬಗೆದು ಲೂಟಿಗಳ ಮೂಲಕ ಸಾಮ್ರಾಜ್ಯ ಸ್ಥಾಪಿಸಿದ ಹೈದರಾಲಿ ಹಾಗೂ ಟಿಪ್ಪುವಿನ ಆಡಳಿತ ಕಾಲ ಕೇವಲ ನಲವತ್ತು ವರ್ಷಗಳು ಮಾತ್ರ. ಈ ನಲವತ್ತು ವರ್ಷದಲ್ಲಿ ನಡೆದ ಘಟನೆಗಳನ್ನು 400 ವರ್ಷಗಳು ನಡೆದಂತೆ ಬಿಂಬಿಸುವಲ್ಲಿ ಎಡಚರರು ಯಶಸ್ವಿಯಾಗಿದ್ದರು.

1857ರ ವರೆಗೂ ಭಾರತೀಯರೆಲ್ಲರೂ ಒಟ್ಟುಗೂಡಿ ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯಕ್ಕಾಗಿ ಹೋರಾಡುವ ಕಲ್ಪನೆಯೇ ಇರಲಿಲ್ಲ, ಮೊದಲ ಸ್ವಾತಂತ್ರ್ಯ ಸಂಗ್ರಾಮ ಶುರುವಾದದ್ದೇ ಈ ಕಾಲದಲ್ಲಿ.ಟಿಪ್ಪು ಸುಲ್ತಾನನು ಸತ್ತಿದ್ದು 1799 ರಲ್ಲಿ,ಹಾಗಾದರೆ ಪುಕ್ಕಲ ಟಿಪ್ಪು ಅದ್ಯಾವ ರೀತಿಯಲ್ಲಿ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಡಿದ? ಎರಡೆರಡು ಬಾರಿ ಕಠಿಣ ‘ಕರಿನೀರ’ ಶಿಕ್ಷೆ ಅನುಭವಿಸಿದ ವೀರ ಸಾವರ್ಕರರ ಪತ್ರವನ್ನಿಟ್ಟುಕೊಂಡು, ಅವರನ್ನು ಹೇಡಿಯಂತೆ ಬಿಂಬಿಸಿದ ಎಡಚರರು ಯುದ್ಧ ಮಾಡಲು ಧೈರ್ಯವಿಲ್ಲದೆ ಸಾಮಾನ್ಯ ಸೈನಿಕನ ಸೋಗಿನಲ್ಲಿ ರಾಜ್ಯ ಬಿಟ್ಟು ಹೋಗಲು ಅಣಿಯಾದ ಪುಕ್ಕಲು ಸುಲ್ತಾನನನ್ನು ಹುಲಿಯಂತೆ ಬಿಂಬಿಸಿದರು.

ಎಡಚರರದ್ದು ಮೌಖಿಕ ಭಯೋತ್ಪಾದನೆಯಲ್ಲಿ ಎತ್ತಿದ ಕೈ, ತಾವು ಬಳಸುವ ಭಾಷೆ, ಸಾಹಿತ್ಯದ ಮೂಲಕ ಇತಿಹಾಸದ ನೈಜ ಘಟನೆಗಳನ್ನೇ ಉಲ್ಟಾ ಪಲ್ಟಾ ಮಾಡುವ ಕುತಂತ್ರಿ ಬುದ್ಧಿ ಇವರಿಗೆ ಹುಟ್ಟಿನಿಂದಲೂ ಕರಗತವಾಗಿ ಬಂದದ್ದು. ರಾಜಕೀಯದಿಂದ ಇವರನ್ನು ಜನ ಒದ್ದು ಓಡಿಸಿದ್ದರೂ ಸಹ, ಸಮಾಜದಲ್ಲಿ ಒಂದು ವ್ಯವಸ್ಥಿತ ಜಾಲದ ಮೂಲಕ ಆಗಾಗ ಎದ್ದು ಬರುತ್ತಿರುತ್ತಾರೆ.
ಬೆಂಗಳೂರಿನ ’ಟೌನ್ ಹಾಲ್’ ಮುಂಭಾಗವನ್ನು ತಮ್ಮ ಸುಳ್ಳು ಹೋರಾಟವನ್ನು ಪ್ರತಿನಿಽಸುವ ಕೇಂದ್ರವನ್ನಾಗಿಸಿಕೊಂಡಿದ್ದ ಎಡಚರಿಗೆ ಈಗ ಅಲ್ಲಿಯೂ ಜಾಗವಿಲ್ಲದಂತಾಗಿದೆ.

ಆಧುನಿಕತೆಯ ಹೆಸರಿನಲ್ಲಿ ಭಾರತೀಯ ಸಂಸ್ಕೃತಿಯನ್ನು ಹಾಳುಗೆಡವುವಲ್ಲಿ ಒಂದಷ್ಟು ದಶಕಗಳ ಕಾಲ ಎಡಚರು ಯಶಸ್ವಿ ಯಾಗಿದ್ದರು. ಇವರ ತಂತ್ರಗಾರಿಕೆ ಎಷ್ಟು ಸರಳವೆಂದರೆ, ಜನರಿಗೆ ಪ್ರತಿನಿತ್ಯ ತಲುಪುವ ಕೆಲವು ಸಂವಹನ ಮಾಧ್ಯಮ ಗಳಲ್ಲಿ ಗಟ್ಟಿಯಾಗಿ ಬೇರೂರುತ್ತಾರೆ. ಒಂದು ದಶಕದಿಂದ ಇವರ ಗ್ರಹಚಾರ ಕೆಟ್ಟಿದೆ, ಕಟ್ಟಿಕೊಂಡಿದ್ದ ಸುಳ್ಳಿನ ಕೋಟೆಗಳು ಒಂದೊಂದಾಗಿ ಉದುರುತ್ತಿವೆ. ಅಲ್ಪ ಸ್ವಲ್ಪ ಉಳಿದಿರುವ ಆಯಕಟ್ಟಿನ ಸ್ಥಳಗಳನ್ನು ಉಳಿಸಿಕೊಳ್ಳಲು ಶತಾಯ ಗತಾಯ ಪ್ರಯತ್ನ ಮಾಡುತ್ತಿದ್ದಾರೆ.

4ನೇ ಆಂಗ್ಲೋ ಮೈಸೂರು ಯುದ್ಧದಲ್ಲಿ ಟಿಪ್ಪು ಹೇಡಿಯಂತೆ ತಲೆಮರೆಸಿಕೊಂಡು ಹೋಗುತ್ತಿರುವಾಗ, ಮೈಸೂರಿನ ಯದು ವಂಶದ ನಿಷ್ಠಾವಂತ ಸೈನಿಕರಾದ ‘ಉರಿಗೌಡ’ ಟಿಪ್ಪುವಿನ ಎದೆಗೆ ಗುಂಡಿಡುತ್ತಾನೆ, ’ನಂಜೇಗೌಡ’ ಟಿಪ್ಪುವಿನ ಬೆನ್ನಿಗೆ ಗುಂಡಿಡು ತ್ತಾನೆ. ಹಿಂದೂ ಧರ್ಮಕ್ಕೆ ನೀನೆ ಶತ್ರುವೆಂದು ಹೇಳುತ್ತಾ, ಟಿಪ್ಪುವಿನ ಇಸ್ಲಾಂ ರಾಜ್ಯದ ಕನಸು ನನಸಾಗುವುದಿಲ್ಲವೆಂದು ಹೇಳಿ ಟಿಪ್ಪುವಿನ ಜಿಹಾದಿಗೆ ಅಂತಿಮ ಮೊಳೆ ಹೊಡೆಯುತ್ತಾರೆ. ಎಡಚರ ಇತಿಹಾಸದಲ್ಲಿ ಈ ಇಬ್ಬರು ವೀರ ಒಕ್ಕಲಿಗರ ಹೆಸರನ್ನು ಉಲ್ಲೇಖಿಸಲೇ ಇಲ್ಲ, ‘ಅದ್ದಂಡ’ರ ಹೊಸ ನಾಟಕ ಪ್ರದರ್ಶನ ವಾದ ಮೇಲೆ ಇಬ್ಬರನ್ನೂ ಕಾಲ್ಪನಿಕ ಪಾತ್ರಗಳೆಂದು ಹೇಳುವ ಮೂಲಕ ಎಡಚರು ಮತ್ತೊಮ್ಮೆ ಚಾಳಿ ಮುಂದುವರಿಸಿದ್ದಾರೆ.

ಟಿಪ್ಪುವಿಗೆ ಮೈಸೂರು ಹುಲಿ ಎಂಬ ಬಿರುದನ್ನು ನೀಡುವಾಗ ಕಾಣಿಸದ ಕಾಲ್ಪನಿಕತೆ, ಈಗ ಇವರಿಗೆ ಎದ್ದು ಕಾಣಿಸುತ್ತಿದೆ. ಮುಸ್ಲಿಂ
ತುಷ್ಟೀಕರಿಸಲು ಪುಕ್ಕಲು ರಾಜನನ್ನು ಹುಲಿಯೆಂಬಂತೆ ಬಿಂಬಿಸುವಲ್ಲಿ ಎಡಚರು ಯಶಸ್ವಿಯಾಗಿದ್ದರು.