Saturday, 14th December 2024

ಮಾದನಹಿಪ್ಪರಗಿ ಮೂಲಭೂತ ಸೌಕರ್ಯಗಳಿಗೆ ಆಗ್ರಹಿಸಿ ರಸ್ತಾ ರೋಖೊ

ಆಳಂದ: ಮಾದನಹಿಪ್ಪರಗಿ ವಲಯದ ವಿವಿಧ ಹಳ್ಳಿಗಳ ಮೂಲಭೂತ ಸೌಕರ್ಯಗಳಿಗೆ ಆಗ್ರಹಿಸಿ ಸ್ವಾಮಿ ವಿವೇಕಾನಂದ ವೃತ್ತ ದಲ್ಲಿಂದು ರಸ್ತಾ ರೋಖೊ ಪ್ರತಿಭಟನೆಯನ್ನು ಮಾದನಹಿಪ್ಪರಗಿ ಬ್ಲಾಕ್ ಕಾಂಗ್ರೇಸ್ ಸಮಿತಿಯವರು ಹಾಗೂ ವಿವಿಧ ಗ್ರಾಮಸ್ಥರು ಸೇರಿ ನಡೆಸಿದರು.

ಮಾದನಹಿಪ್ಪರಗಿಯಿಂದ ನಿಂಬಾಳ, ಆಳಂದ, ಮೈಂದರಗಿ, ದುಧನಿ, ಝಳಕಿ, ಖೇಡಉಮರ್ಗಾ, ನಿಂಗದಳ್ಳಿ, ರಸ್ತೆಗಳು ಸಂಪೂರ್ಣವಾಗಿ ಹದಗೆಟ್ಟಿವೆ,  ದರ್ಗಾ ಶಿರೂರದಿಂದ ಕೇರೂರ ನಿಂಗದಳ್ಳಿ, ರಸ್ತೆಗಳು ಕೂಡಾ ರಸ್ತೆ ಕೆಟ್ಟು ಹೋಗಿರುವ ಕಾರಣ ವಾಹನಗಳು ಓಡಾಡುತ್ತಿಲ್ಲ. ರೈತರ ಪಂಪಸೆಟಗಳಿಗೆ ೬ ಗಂಟೆ ೩ಪೇಸ್ ವಿದ್ಯುತ್ ಸರಬರಾಜು ಮಾಡಬೇಕು, ಗ್ರಾಮೀಣ ಭಾಗಗಳಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು, ಮಾದನಹಿಪ್ಪರಗಿ ನಿಂಬಾಳ, ಹಡಲಗಿ, ಯಳಸಂಗಿ, ಮಾಡ್ಯಾಳ ಮುಖಾಂತರ ಆಳಂದ ಕಡೆ ಹೋಗುವ ಮಿನಿ ಬಸ್ಸುಗಳು ಪುನಃ ಆರಂಭಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಪ್ರತಿಭಟನೆಯನ್ನುದ್ದೇಶಿಸಿ ಕೆಎಂಎಫ್ ಅಧ್ಯಕ್ಷ ಮತ್ತು ಕಾಂಗ್ರೇಸ ಮುಖಂಡ ಆರ್.ಕೆ. ಪಾಟೀಲ ಅವರು  ಮಾತನಾಡಿ, ತಾಲೂಕಿನ ಇಲಾಖೆಗಳ ಅಧಿಕಾರಿಗಳು ಶಾಸಕರು ಮತ್ತು ಅವರ ಮಗನ  ಕೈಗೊಂಬೆಯಾಗಿದ್ದಾರೆ ಕೆಲಸ ಮಾಡುತ್ತಿದ್ದಾರೆಂದು ಆರೋಪಿಸಿದರು. ರೈತರ ಮತ್ತು ಸಾರ್ವಜನಿಕರ ಸಮಸ್ಯೆಗಳನ್ನು ಅಧಿಕಾರಿಗಳು ಕಿವಿಗೆ ಹಾಕಿಕೊಳ್ಳುತ್ತ್ತಿಲ್ಲ ಎಂದ ಅವರು ನಿಂಬಾಳ ಮತ್ತು ಚಲಗೇರಾ ಗ್ರಾಮಗಳಿಂದ ಸುಮಾರು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಮಾದನಹಿಪ್ಪರಗಿಗೆ ವಿದ್ಯಾ ಭ್ಯಾಸಕ್ಕಾಗಿ 8 ಕಿ.ಮೀ. ದೂರವನ್ನು ಕಾಲ್ನಡಿಗೆಯಲ್ಲಿ ಬರುತ್ತಿದ್ದಾರೆ. ಇದರ ಬಗ್ಗೆ ಸಾಕಷ್ಟು ಭಾರೀ ಸಂಬಂಧಪಟ್ಟ ಡಿಪೋ ಮ್ಯಾನೇಜರಗೆ ಮನವಿ ಕೊಟ್ಟರು ಪ್ರಯೋಜನವಾಗಿಲ್ಲ. ರೈತರು ತಾವು ಬೆಳೆದ ಬೆಳೆಯನ್ನು ನಗರಗಳಿಗೆ ಮಾರಾಟಕ್ಕೆ ಒಯ್ಯಲು ರಸ್ತೆಗಳೇ ಇಲ್ಲದ ಕಾರಣ ಬಹಳ ಕಷ್ಟಪಡುತ್ತಿದ್ದಾರೆ. ಅಧಿಕಾರಿಗಳಿಗೆ 15 ದಿನ ಒಳಗೆ ನಮ್ಮ ಬೇಡಿಕೆಗಳನ್ನು ಈಡೇರಿಸದೇ ಇದ್ದರೆ ಕಲಬರಗಿಯ ಲೋಕೋಪಯೋಗಿ ಕಚೇರಿಗೆ ಮುತ್ತಿಗೆ ಹಾಕಲಾಗುವು ದೆಂದು ಎಚ್ಚರಿಕೆ ನೀಡಿದರು.

ಲೋಕೋಪಯೋಗಿಯ ಎಇಇ ಶಶಿಧರ ಪಾಟೀಲ, ಮನವಿ ಪತ್ರ ಸ್ವೀಕರಿಸಿದರು. ಸ್ಥಳೀಯ ಉಪತಹಶೀಲ್ದಾರ ರವೀಂದ್ರ ಶೇರಿಕಾರ, ಪಿಎಸ್‌ಐ ದಿನೇಶ ಟಿ,  ಜೆಇ ಶರಣಯ್ಯ ಹಿರೇಮಠ, ಜೆಸ್ಕಾಂ ಜೆಇ ಪರಮೇಶ್ವರ ಬಡಿಗೇರಾ ಹಾಜರಿದ್ದರು. ಸುಮಾರು ಮೂರು ಗಂಟೆಗಳ ಕಾಲ ಸೋಲಾಪುರ, ಆಳಂದ, ಅಪಜಲಪುರ, ಕಲಬರಗಿ ಕಡೆ ಹೋಗುವ ಎಲ್ಲಾ ಮಾರ್ಗಗಳು ಬಂದ್ ಆಗಿದ್ದರಿಂದ ಪ್ರಯಾಣಿಕರು ಪರದಾಡಿದ್ದರು.

ಪ್ರತಿಭಟನೆ ಉದ್ದೇಶಿಸಿ ಜಿ.ಪಂ ಮಾಜಿ ಸದಸ್ಯ ಸಿದ್ಧರಾಮ ಪ್ಯಾಟಿ, ಚಂದ್ರಕಾಂತ ನಿಂಗದಳ್ಳಿ, ಮಲ್ಲಿನಾಥ ಪಾಟೀಲ, ಲಕ್ಷ್ಮಣ  ತಳಕೇರಿ, ಹಿರಗಪ್ಪ ದೊಡಮನಿ, ಬಿ.ಜಿ.ಪಾಟೀಲ, ರಾಹುಲ ಪಾಟೀಲ, ಸಿದ್ದರಾಮ ಅರಳಿಮಾರ,ನಿಲೇಶ ತೋಳನೂರ, ಶಿವಲಿಂಗಪ್ಪ ಇಂಗಳೆ, ಪ್ರಕಾಶ ಮಾನೆ ಮಾತನಾಡಿದರು.

ಮುಖಂಡರಾದ ಮಲ್ಲಯ್ಯ ಸ್ವಾಮಿ, ಶರಣಬಸಪ್ಪ ವಾಗೆ, ಸತೀಶ ಬನಸೆಟ್ಟಿ, ಸಂತೋಷ ಪಾಟೀಲ, ಮಹಾಂತೇಶ ಪಾಟೀಲ, ಬೀರಣ್ಣ ಕಡಗಂಚಿ, ಮಹಿಬೂಬ್ ಫಣಿಬಂದ್, ಸಿದ್ದು ವೇದಸೆಟ್ಟಿ, ಮಲ್ಲಿನಾಥ ಯಳಮೇಲಿ, ಜಳಕಿ, ಮದಗುಣಕಿ, ಚಲಗೇರಾ, ನಿಂಬಾಳ ಹಡಲಗಿ, ಪಂಡಿತ ಕದರಗಿ, ಖೇಡಉಮರಗಾ, ದರ್ಗಾಶಿರೂರ, ನಿಂಗದಳ್ಳಿ ಗ್ರಾಮಸ್ಥರು ಪ್ರತಿಭಟನೆ ಭಾಗವಹಿಸಿದ್ದರು.