ಕಲಬುರಗಿ: ಇಲ್ಲಿನ ಗುಲಬರ್ಗಾ ವಿವಿಯ ಕನ್ನಡ ಅಧ್ಯಯನ ಸಂಸ್ಥೆಯ ಹರಿಹರ ಸಭಾಂಗಣದಲ್ಲಿ ಮಹಾಕವಿ ಕುವೆಂಪು ರಚಿಸಿದ, ಎಂ.ವಿ. ಪ್ರತಿಭಾ ಅವರು ನಿರ್ದೇಶನದ ಮಹಾರಾತ್ರಿ ನಾಟಕವನ್ನು ಸಾಗರದ ಸ್ಪಂದನ ತಂಡ ಪ್ರದರ್ಶನ ನೀಡಿತು.
ಗೌತಮ ಬುದ್ಧನು ಮನೆ ಬಿಟ್ಟು ಹೋಗುವ ಸಂದರ್ಭವನ್ನು ಕುವೆಂಪು ಅವರು ಮಹಾರಾತ್ರಿ ನಾಟಕದಲ್ಲಿ ಚಿತ್ರಿಸಿದ್ದಾರೆ. ಅದನ್ನು ಮನೋಜ್ಞವಾಗಿ ಸ್ಪಂದನ ತಂಡ ಪ್ರದರ್ಶಿಸಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರೊ. ವಿಕ್ರಮ ವಿಸಾಜಿ ಅವರು ನಾಟಕ ತಂಡದ ಅಭಿನಯವನ್ನು ಪ್ರಶಂಸಿದರು. ಪ್ರೊ. ಲಕ್ಷ್ಮಣ ರಾಜನಾಳಕರ ಅವರು ಸಿದ್ಧಾರ್ಥನ ಮನಸ್ಥಿತಿಯನ್ನು ನಾಟಕದ ಮೂಲಕ ಸ್ವಂದನ ತಂಡ ಚೆನ್ನಾಗಿ ಅಭಿನಯಿಸಿದರೆಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ. ಎಚ್.ಟಿ. ಪೋತೆ ಅವರು ಮಾತನಾಡಿ, ಬುದ್ಧ ಮತ್ತು ಆತನ ಧಮ್ಮಕ್ಕು ಮಹಾ ರಾತ್ರಿ ನಾಟಕದಲ್ಲಿ ಬರುವ ಪ್ರಸಂಗಗಳಿಗೂ ಭಿನ್ನತೆ ಇವೆ ಎಂದರು. ಸ್ಪಂದನ ತಂಡ ಉತ್ತಮ ಪ್ರದರ್ಶನ ನೀಡದೆ ಎಲ್ಲರಿಗೂ ಶುಭವಾಗಲಿ ಎಂದು ಹಾರೈಸಿದರು.