ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಸಂವಿಧಾನ ದಿನ ಆಚರಣೆ
ಕಲಬುರಗಿ: ನಮ್ಮದು ವಿಶ್ವದ ಅತ್ಯುತ್ತಮ ಸಂವಿಧಾನಗಳಲ್ಲಿ ಒಂದಾಗಿದೆ ಎಂದು ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಗೌರ ವಾನ್ವಿತ ನ್ಯಾಯಮೂರ್ತಿ ಆರ್ ದೇವದಾಸ್ ಅವರು ಅಭಿಪ್ರಾಯಪಟ್ಟರು.
ಕಲಬುರಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ನಡೆದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. “ಸ್ಥಿರತೆ ಮತ್ತು ನಮ್ಯತೆ (ಸರಳ) ನಮ್ಮ ಸಂವಿಧಾನದ ಪ್ರಮುಖ ಲಕ್ಷಣಗಳಾಗಿವೆ. ವಿರೋಧಾಭಾಸ ಗಳಾಗಿದ್ದರೂ, ನಮ್ಮ ಸಂವಿಧಾನವು ತಿದ್ದುಪಡಿಗೆ ಅವಕಾಶವನ್ನು ಒದಗಿಸುತ್ತದೆ ಮತ್ತು ಜನರು ಇಷ್ಟಪಡದಿದ್ದರೂ ಸಹ ಅವರು ಅದನ್ನು ಅನುಸರಿಸಬೇಕಗುತ್ತದೆ ಎಂದರು
ನಮ್ಮನ್ನು ನಿಯಂತ್ರಿಸುವ ಕಾನೂನನ್ನು ನಾವೆಲ್ಲರೂ ತಿಳಿದಿರಬೇಕು. ಭಾರತವು ಅತ್ಯಂತ ವೈವಿಧ್ಯಮಯ ದೇಶಗಳಲ್ಲಿ ಒಂದಾಗಿದೆ. ಇಲ್ಲಿ ಸಾಮಾಜಿಕ-ಸಾಂಸ್ಕೃತಿಕ, ಲಿಂಗ ಮತ್ತು ಆರ್ಥಿಕ ವ್ಯತ್ಯಾಸವು ಬಹಳ ಸ್ಪಷ್ಟವಾಗಿವೆ. ನಮ್ಮ ಸಂವಿಧಾನ ರಚನಾಕಾರರು ಈ ವೈವಿಧ್ಯತೆಗಳನ್ನು ಪರಿಹರಿಸುವ ಸಮಸ್ಯೆಯನ್ನು ಎದುರಿಸಿದರು. ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದರೂ ಸಹ ಎಲ್ಲಾ ನಾಗರಿಕರಿಗೂ ಸಮಾನ ಅವಕಾಶ ಕಲ್ಪಿಸಲು ನಾವು ಹೋರಾಟ ಮಾಡುತ್ತಿದ್ದೇವೆ. 1950ರ ದಶಕದಲ್ಲಿ ಪರಿಸ್ಥಿತಿ ಇನ್ನೂ ತುಂಬಾ ಕೆಟ್ಟದಾಗಿತ್ತು. ಬಡತನ, ಜಾತೀಯತೆ, ಲಿಂಗ ತಾರತಮ್ಯಗಳು ಗ್ರಾಮೀಣ ಮತ್ತು ಬುಡಕಟ್ಟು ಪ್ರದೇಶ ಗಳಲ್ಲಿ ಜ್ವಲಂತ ಸಮಸ್ಯೆಗಳಾಗಿವೆ.
ಸಮಾನತೆ ಮತ್ತು ಮೀಸಲಾತಿ ಕುರಿತು ಮಾತನಾಡಿದ ಅವರು, “ನಮ್ಮ ಸಂವಿಧಾನದ 14ನೇ ವಿಧಿಯು ಭಾರತದ ಎಲ್ಲಾ ನಾಗರಿಕರಿಗೆ ಸ್ಥಾನಮಾನ ಮತ್ತು ಅವಕಾಶದ ಸಮಾನತೆ ಯನ್ನು ಒದಗಿಸುತ್ತದೆ. ಎಲ್ಲರಗೂ ಸಮಾನ ಅವಕಾಶವನ್ನು ನೀಡಲು ನಾವು ಸಮನಾದ ವ್ಯವಸ್ಥೆಯನ್ನು ರೂಪಿಸಬೇಕಗುತ್ತದೆೆ, ಆದ್ದರಿಂದ ಮೀಸಲಾತಿ ಅಗತ್ಯವಿದೆ. ಹಾಗಾದರೆ ಸಮಾನತೆಯ ಪರಿಕಲ್ಪನೆ ಏನು? ಅರ್ಹತೆಯ ಪರಿಕಲ್ಪನೆಯೊಂದಿಗೆ ಬಂದರೆ ಇದು ದೈಹಿಕವಾಗಿ ವಿಕಲಾಂಗ ಮಗುವಿಗೆ ಸಾಮಾನ್ಯ ಮತ್ತು ಆರೋಗ್ಯವಂತ ಮಕ್ಕಳಿಗಿಂತ ವಿಶೇಷ ಗಮನ ಮತ್ತು ಸಹಾಯದ ಅಗತ್ಯವಿದ್ದಂತೆ.
ಸಮಾಜದ ಕೆಲವು ವರ್ಗಗಳು ಶೈಕ್ಷಣಿಕ ಅವಕಾಶಗಳಿಂದ ವಂಚಿತರಾಗಿದ್ದರು. ಅವರಿಗೆ ಸಾಮಾಜಿಕ ಅನಾನುಕೂಲತೆ ಇತ್ತು. ಮೀಸಲಾತಿ ಸಮಾನತೆಯನ್ನು ತರುವ ಸಾಧನವಾಗಿದೆ. ಇದು ವಿನಾಯಿತಿಯ ನಿಯಮವಲ್ಲ, ವಂಚಿತ, ದೀನ ದಲಿತರಿಗೆ ಸಹಾಯ ಮಾಡಲು ಇರುವ ದೃಢವಾದ ಕ್ರಮವಾಗಿದೆ. ಆದ್ದರಿಂದ ನಮ್ಮ ಸಂವಿಧಾನವು ಮೀಸಲಾತಿಯನ್ನು ಇದಗಿಸುವ ನಿಬಂಧನೆಗಳನ್ನ ಒಳಗೊಂಡಿವೆ ಎಂದರು.
ರಾಷ್ಟ್ರ ನಿರ್ಮಾಣದಲ್ಲಿ ವಿದ್ಯಾರ್ಥಿಗಳ ಪಾತ್ರ ಮತ್ತು ಅವರ ಜವಾಬ್ದಾರಿಯ ಕುರಿತು ಮಾತನಾಡಿದ ಅವರು, “ನಾವು ಬಾಲ್ಯದ ಮುಗ್ಧತೆ ಮತ್ತು ದೇಶಭಕ್ತಿಯ ಭಾವನೆಯನ್ನು ಬೆಳೆಸಿಕೊಂಡರೆ, ಸದೃಢ ರಾಷ್ಟ್ರವನ್ನು ನಿರ್ಮಿಸಬಹುದು. ನಾವು ಇದನ್ನು ಜಪಾನ್ನಿಂದ ಕಲಿಯಬೇಕಾಗಿದೆ. ನಮ್ಮ ಭಿನ್ನಾಭಿಪ್ರಾಯಕ್ಕಿಂತ ದೇಶದ ಅಭಿವೃದ್ಧಿಗೆ ಮತ್ತು ಹಿತಕ್ಕೆ ಹೆಚ್ಚಿನ ಪ್ರಾಮುಖ್ಯತೆ ಯನ್ನು ನೀಡಬೇಕು. ನಮ್ಮ ಯುವಕರು ಸಣ್ಣಪುಟ್ಟ ಬಿನ್ನಭಿಪ್ರಾಯಗಳಿಗೆ ಹಾಗು ಸಮಸ್ಯೆಗಳಿಗೆ ಗಮನಕೊಡದೆ ದೇಶದ ಹೀತಕ್ಕಾಗಿ ಮನಸ್ಸು ಮಾಡಿದರೆ ನಾವು ನಮ್ಮ ರಾಷ್ಟçವನ್ನು ಉನ್ನತಮಟ್ಟಕ್ಕೆ ಕೊಂಡೊಯ್ಯಬಹುದಾಗಿದೆ. ಅಲ್ಲದೆ ಇದನ್ನು ಒಂದು ಆದರ್ಶ ರಾಷ್ಟ್ರವನ್ನಾಗಿ ಮಾಡಬಹುದಾಗಿದೆ” ಎಂದರು.
ಸಿಯುಕೆ ಕುಲಸಚಿವರಾದ ಪ್ರೊ.ಬಸವರಾಜ ಪಿ ಡೋಣೂರ ಅಧ್ಯಕ್ಷತೆ ವಹಿಸಿ ಮಾತನಾಡಿ, ಭಾರತದ ಪ್ರಜೆಗಳಾದ ನಾವು ನಮ್ಮ ದೇಶವನ್ನು ಪ್ರೀತಿಸಬೇಕು. ನಮ್ಮ ಸಂವಿಧಾನವು ಆಧುನಿಕ ಭಾರತದ ಮೊನಾಲಿಸಾ ಆಗಿದೆ. ಇದು ಶಾಸ್ತ್ರೀಯ ಮತ್ತು ಸರ್ವ ಶ್ರೇಷ್ಟವಾಗಿದೆ. ನಾವು ಪರಸ್ಪರ ಭಿನ್ನಾಭಿಪ್ರಾಯ ಹೊಂದಿರಬಹುದು ಆದರೆ ನಾವು ಒಟ್ಟಿಗೆ ವಾಸಿಸುತ್ತೇವೆ, ಅದಕ್ಕೆ ನಮ್ಮ ಸಂವಿಧಾನವೇ ಕಾರಣ. ನಾವು ನಮ್ಮ ದೇಶವನ್ನು ಪ್ರೀತಿಸುವುದಾದರೆ ನಮ್ಮ ರಾಷ್ಟ್ರ ಮತ್ತು ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ಏನನ್ನೂ ಮಾಡಬಾರದು. ಸಂವಿಧಾನದಲ್ಲಿ ಯಾವುದೇ ದೋಷವಿಲ್ಲ, ಅದನ್ನು ಅರ್ಥೈಸುವ, ಕಾರ್ಯಗತ ಗೊಳಿಸುವ ಮತ್ತು ಅನುಸರಿಸುವ ನಮ್ಮಲಿಯೆ ದೋಷಗಳಿವೆ. ಅವುಗಳನ್ನು ನಾವು ಪರಿಹರಿಸಿಕೊಳ್ಳಬೇಕು ಎಂದು ಹೇಳಿದರು.
ಇದಕ್ಕೂ ಮುನ್ನ ಕಾರ್ಯಕ್ರಮದ ಸಂಯೋಜಕ ಡಾ.ಬಸವರಾಜ ಕುಬಕಡ್ಡಿ ಅವರು ಗಣ್ಯರನ್ನು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು ಸಂವಿಧಾನವು ಅತ್ಯುನ್ನತ ದಾಖಲೆಯಾಗಿದೆ ಮತ್ತು ಅದನ್ನು ಪಾಲಿಸುವುದು ಮತ್ತು ಗೌರವಿಸುವುದು ನಮ್ಮ ಮೂಲಭೂತ ಕರ್ತವ್ಯವಾಗಿದೆ ಎಂದು ಅವರು ಹೇಳಿದರು.
ಡಾ.ಜಯದೇವಿ ಜಂಗಮಶೆಟ್ಟಿ ಮತ್ತು ತಂಡದವರು ರಾಷ್ಟ್ರಗೀತೆ ಹಾಗೂ ನಾಡಗೀತೆ ಹಾಡಿದರು. ಡಾ.ಅನಂತ್ ಚಿಂಚೂರೆ ಕಾರ್ಯಕ್ರಮ ನಿರೂಪಿಸಿದರು, ಶ್ರೀ ಪವನ್ ಕುಮಾರ್ ವಂದಿಸಿದರು. ಕುಮಾರಿ ನಿಕಿತಾ ಮಹಿಳಾ ಸಬಲೀಕರಣದ ಕುರಿತು ಹಾಡನ್ನು ಹಾಡಿದರು. ಈ ಸಂದರ್ಭದಲ್ಲಿ ಪ್ರೊ.ಚನ್ನವೀರ ಆರ್.ಎಂ, ಪ್ರೊ.ಆರ್.ಎಸ್. ಹೆಗಡಿ, ಎಲ್ಲಾ ನಿಕಾಯಗಳ ಡೀನ್ರು, ಮುಖ್ಯಸ್ಥರು, ಅಧ್ಯಾಪಕರು, ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.