ಚಿಕ್ಕಬಳ್ಳಾಪುರ :ಅಂಬೇಡ್ಕರ್ ರಚಿಸಿರುವ ಭಾರತೀಯ ಸಂವಿಧಾನವು ಸಮಗ್ರ ಪ್ರಜೆಗಳ ಹಿತ ಕಾಪಾಡುತ್ತಿರುವ ಮಹಾನ್ ಗ್ರಂಥವಾಗಿದೆ. ನಾಗರೀಕರು ಇದನ್ನು ಅರಿತು ಡಿ.೨೬ ರಂದು ಸಂವಿಧಾನ ದಿವಸ ಆಚರಿಸುವ ಅಗತ್ಯವಿದೆ ಎಂದು ದಲಿತ ಸಂಘರ್ಷ ಸಮಿತಿ ಸಂಚಾಲಕ ಸುಧಾವೆಂಕಟೇಶ್ ತಿಳಿಸಿದರು.
ಸಂವಿಧಾನ ದಿನಾಚರಣೆ ಅಂಗವಾಗಿ ನಗರದ ಜೈಭೀಮ್ ವಿದ್ಯಾರ್ಥಿ ನಿಲಯದ ಆವರಣ ದಲ್ಲಿರುವ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿದರು.
ಜ್ಞಾನ ಸೂರ್ಯ ಅಂಬೇಡ್ಕರ್ ಒಬ್ಬರೇ ಅಪಾರ ಶ್ರಮವಹಿಸಿ ರಚಿಸಿರುವ ಭಾರತೀಯ ಸಂವಿಧಾನಕ್ಕೆ ವಿಶ್ವಮಾನ್ಯತೆಯಿದೆ.ಇದರ ಆಧಾರದ ಮೇಲೆ ದೇಶವಾಸಿಗಳ ಬದುಕು ನಿಭೀತಿಯಿಂದ ಸಾಗಿದೆ.ಇದನ್ನು ಅರಿಯುವ ಕೆಲಸವನ್ನು ಪ್ರತಿಯೊಬ್ಬರೂ ಮಾಡಿ ದಾಗ ಮಾತ್ರವೇ ಇದರ ಕಿಮ್ಮತ್ತು ತಿಳಿಯಲು ಸಾಧ್ಯ. ಸಂವಿಧಾನ ರಚನಾ ಸಭೆಯಲ್ಲಿ ಹತ್ತಾರು ಮಂದಿ ಇದ್ದರೂ ಅಂಬೇಡ್ಕರ್ ಒಬ್ಬರೇ ಅವಿರತವಾಗಿ ಶ್ರಮಿಸಿ ದೇಶಕ್ಕೆ ಸಮರ್ಪಣೆ ಮಾಡಿ ದ್ದಾರೆ. ಇದನ್ನು ಅರಿಯದ ಮತಾಂಧರು ಅಂಬೇಡ್ಕರ್ ಒಬ್ಬರೇ ಸಂವಿಧಾನ ಬರೆದಿಲ್ಲ. ವೇದಕಾಲದಿಂದಲೂ ಪ್ರಜಾಪ್ರಭುತ್ವದ ಮೌಲ್ಯಗಳು ಇದ್ದವು ಎನ್ನುತ್ತಿರುವುದು ನಾಚಿಕೆಗೇಡಿನ ಸಂಗತಿ ಯಾಗಿದೆ ಎಂದರು.
ಪ್ರಸ್ತುತ ಸನ್ನಿವೇಶದಲ್ಲಿ ಭಾರತೀಯ ಸಂವಿಧಾನವು ಹಲವು ಸವಾಲುಗಳನ್ನು ಎದುರಿಸುವ ಮೂಲಕ ಅಪಾಯದ ಸ್ಥಿತಿಯಲ್ಲಿದೆ. ಪ್ರಜಾಪ್ರಭುತ್ವವನ್
ದೇಶಕ್ಕೆ ಅತ್ಯುತ್ತಮ ಸಂವಿಧಾನ ನೀಡಿರುವ ಅಂಬೇಡ್ಕರ್ ಹುಟ್ಟಿನ ಕಾರಣಕ್ಕಾಗಿ, ಜಾತಿಯ ಕಾರಣಕ್ಕಾಗಿ ಎದುರಿಸಿದಷ್ಟು ಅಪಮಾನ, ಶೋಷಣೆಯನ್ನು ಬಹುಶಃ ಯಾವ ದೇಶದ ಸಂವಿಧಾನ ಕತೃಗಳೂ ಎದುರಿಸಿಲ್ಲ.
ಇಲ್ಲಿನ ವರ್ಣಾಶ್ರಮ ಪದ್ದತಿ, ಅಮಾನವೀಯ ಜಾತಿ ಪದ್ಧತಿ, ಲಿಂಗತಾರತಮ್ಯ, ಧಾರ್ಮಿಕ ದಬ್ಬಾಳಿಕೆ,ಮೌಢ್ಯ ಎಲ್ಲವನ್ನು ಕಾನೂನಿನ ಮೂಲಕ ನಿವಾರಿಸಿ ಸಮಾನತೆ ಮತ್ತು ಸಹೋದರತೆಯನ್ನು ಸ್ಥಾಪಿಸದ ಹೊರತು ಭಾರತ ಅಖಂಡ ದೇಶವಾಗಿ ಯಶಸ್ವಿಯಾಗಲು ಸಾಧ್ಯವಿಲ್ಲ ಎಂಬ ಅರಿವು ಅಂಬೇಡ್ಕರ್ ಅವರಿಗೆ ಇತ್ತು. ಇದೇ ಕಾರಣಕ್ಕೆ ಭಾರತೀಯ ಸಂವಿಧಾನವು ಮಹಿಳೆ, ದಲಿತ, ಅಲ್ಪಸಂಖ್ಯಾತ, ಹಿ೦ದುಳಿ
ಸಂವಿಧಾನ ದಿನಾಚರಣೆಯನ್ನು ಸಾಮೂಹಿಕವಾಗಿ ಸರಕಾರಿ ಹಂತದಲ್ಲಿ ಆಚರಿಸುವಂತೆ ರಾಜ್ಯ ಕೇಂದ್ರ ಸರಕಾರಗಳು ಆದೇಶ ನೀಡಬೇಕಿತ್ತು.ಇದನ್ನು ಬಿಟ್ಟು ಬಿಜೆಪಿ ಸರಕಾರ ಆರ್‌ಎಸ್‌ಎಸ್ ಅಜೆಂಡಾ ಮನುವಾದಿ ಸಿದ್ಧಾಂತವನ್ನು, ಚಾತುರ್ವರ್ಣ ಪದ್ದತಿ ಜಾರಿಗೊಳಿಸಲು ನರೇಂದ್ರ ಮೋದಿ ಸಿದ್ದತೆ ನಡೆಸಿದ್ದಾರೆ.ನವೆಂಬರ್ ೨೬ರಂದು ಸಂವಿಧಾನ ದಿವಸ ಎಂದೇ ಅಚರಣೆ ಮಾಡ ಬೇಕು. ಇದಕ್ಕೆ ವಿರುದ್ದವಾಗಿ ನಡೆದುಕೊಳ್ಳುವುದು ಅಂಬೇಡ್ಕರ್ ಅವರಿಗೆ ಮಾಡುವ ಅಪಮಾನ ಎಂದು ದಲಿತ ಸಮುದಾಯದ ಭಾವಿಸುತ್ತದೆ ಎಂದರು.
ಈ ವೇಳೆ ವಕೀಲ ನಾಗೇಶ್,ಶ್ರೀನಿವಾಸ್ ಸೇರಿದಂತೆ ದಸಂಸ ಪದಾಧಿಕಾರಿಗಳು ಇದ್ದರು. ಈ ವೇಳೆ ಎಲ್ಲರೂ ಸಂವಿಧಾನದ ಪೀಠೀಕೆಯನ್ನು ಓದಿ ಅದರಂತೆ ನಡೆಯುವ ಪ್ರತಿಜ್ಞೆ ಮಾಡಿದರು.