Saturday, 14th December 2024

ಮಾಜಿ ಶಾಸಕ ಗಂಗಹನುಮಯ್ಯ, ಮಾರುತಿ ಗಂಗಹನುಮಯ್ಯನವರಿಗೆ ಟಿಕೆಟ್ ನೀಡುವಂತೆ ಒತ್ತಾಯ

ಕೊರಟಗೆರೆ: ಪಟ್ಟಣದ ನವೀನ್ ಕಂಫರ್ಟ್ ನಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಕೊರಟಗೆರೆ ವಿಧಾನಸಭಾ ಕ್ಷೇತ್ರಕ್ಕೆ ಮಾಜಿ ಶಾಸಕ ಗಂಗಹನುಮಯ್ಯನವರನ್ನು ಅಥವಾ   ಎಸ್ .ಸಿ ಮೊರ್ಚಾದ ಮಾರುತಿ ಗಂಗಹನುಮಯ್ಯರವರನ್ನು ಅಭ್ಯರ್ಥಿ ಯನ್ನಾಗಿ ಆಯ್ಕೆ ಮಾಡಲು ಮನವಿ ಮಾಡಿಕೊಂಡರು.
ನಂತರ ಮಾದಿಗ ಜಾಗೃತಿ ಸಮಿತಿ ರಾಜ್ಯಾಧ್ಯಕ್ಷ ಶಿವಣ್ಣ ಮಾತನಾಡಿ  ಗಂಗಹನುಮಯ್ಯ ನವರು ಹಾಗೂ ಅವರ ಕುಟುಂಬದವರು 2006ರಿಂದಲೂ ಸಕ್ರಿಯವಾಗಿ ಭಾರತೀಯ ಜನತಾ ಪಕ್ಷವನ್ನು ಸಂಘಟಿಸುತ್ತಾ ಬಂದಿದ್ದು ಹಾಗೂ ಎಲ್ಲಾ ಜನಾಂಗದ ಹಾಗೂ ಎಲ್ಲಾ ವರ್ಗಗಳು ಮೆಚ್ಚುವಂತಹ  ಕೆಲಸವನ್ನು ಮಧುಗಿರಿಯಲ್ಲಿ 2 ಬಾರಿ ಶಾಸಕರಿದ್ದಾಗ ಅದನ್ನು ಮಾಡಿ ತೋರಿಸಿ ಕೊಟ್ಟಿದ್ದಾರೆ.
ಹೀಗೆ ಎಲ್ಲ ವರ್ಗ ಮತ್ತು ಜನರು ಮೆಚ್ಚುವಂತಹ ವ್ಯಕ್ತಿತ್ವವುಳ್ಳ ವ್ಯಕ್ತಿತ್ವ ಗಂಗಹನು ಮಯ್ಯನವರ ಕುಟುಂಬದ್ದು. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕೊರಟಗೆರೆ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಗಂಗಹನುಮಯ್ಯನವರ ಕುಟುಂಬದ ಯಾರೊಬ್ಬರಿ ಗಾದರೂ ಭಾಜಪ ಪಕ್ಷ ಪರಿಗಣಿಸಿ ಈ ಭಾರಿ ಟಿಕೆಟ್ ನೀಡಿದ್ದೆ ಆದರೆ  ಗೆಲುವಿನ ಗುರಿ ತಲುಪಬಹುದು.
2008 ರ ಚುನಾವಣೆಯಲ್ಲಿ ಗಂಗಹನುಮಯ್ಯನವರು ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ 33,000 ಮತಗಳನ್ನು ಪಡೆಯಲು ಯಶಸ್ವಿಯಾಗಿದ್ದರು ಅಂದೇ ಜಯಭೇರಿ ಬಾರಿಸಬಹುದಿತ್ತು ಆದರೆ ಜಾತ್ಯತೀತ ಜನತಾದಳದ ಅಭ್ಯರ್ಥಿಯು ಸಹ ಒಂದೇ ಕೋಮಿನವರಾದರಿಂದ ಮತ ವಿಭಜನೆಯಾಗಿ ಪರಾಭವ ಅನುಭವಿಸಬೇಕಾಯಿತು ಮುಂದೆ ಬಂದ 2013ರ ಚುನಾವಣೆಯಲ್ಲಿ ಕಾಣದ ಕೈಗಳ ಕೈವಾಡದಿಂದ ಅವರಿಗೆ ಬಿಜೆಪಿ ಪಕ್ಷದ ಟಿಕೆಟ್ ತಪ್ಪಿಸಿದರು ಅದರ ಪರಿಣಾಮ ಪಕ್ಷವು ಠೇವಣಿ ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಯಿತು ಎಂದು ತಿಳಿಸಿದರು.
ನಂತರ ಕಾರ್ಯಕರ್ತ ಲಕ್ಷ್ಮಿಪತಿ ಮಾತನಾಡಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಲೋಕಸಭೆ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸಂಸದರಾದ ಸನ್ಮಾನ್ಯ ಶ್ರೀ ಜಿ. ಎಸ್ ಬಸವರಾಜ್ ರವರು ಶ್ರೀಯುತರ ಮನೆಗೆ ಧಾವಿಸಿ, ನಮ್ಮನ್ನೆಲ್ಲ ಅಲ್ಲಿಗೆ ಕರೆಸಿ ಮುಂದಿನ ದಿನಮಾನಗಳಲ್ಲಿ ಕೊರಟಗೆರೆ ಕ್ಷೇತ್ರಕ್ಕೆ ಗಂಗಹನುಮಯ್ಯರಿಗೆ ಅಥವಾ ಅವರ  ಕುಟುಂಬದ ಒಬ್ಬರಿಗೆ ಟಿಕೆಟ್ ನೀಡುತ್ತೇವೆ ಎಂದು ತಿಳಿಸಿದ್ದರು ಗಂಗಹನುಮಯ್ಯ ಅಥವಾ ಅವರ ಮಾರುತಿ ಗಂಗಹನುಮಯ್ಯನವರರು ಶಾಸಕರಾಗಬೇಕು.
ಆಗ ಅವರ ಕಾರ್ಯ ವೈಖರಿಯನ್ನು ಕಂಡು ತಾವೆಲ್ಲರೂ ಕೂಡ ಸಂತೋಷಪಡಬೇಕೆಂದು ಎಂದು ನಮ್ಮೆಲ್ಲರ ಸಮ್ಮುಖದಲ್ಲಿ ಪ್ರಮಾಣ ಮಾಡಿದ್ದರು ಅದರಂತೆ ಇಂದು ಆ ಮಾತನ್ನು  ಉಳಿಸಿಕೊಳ್ಳಬೇಕೆಂದು ಭಾರತೀಯ ಜನತಾ ಪಕ್ಷದ ಟಿಕೆಟ್ ಕೊಡಿಸುವ ಜವಾಬ್ದಾರಿ ಸನ್ಮಾನ್ಯ ಸಂಸದ ಬಿ ಎಸ್ ಬಸವರಾಜುರವರದಾಗಿರುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕೆಎಲ್ ನರಸಿಂಹಯ್ಯ ಸಂಘಟನಾ ಜಿಲ್ಲಾ ಕಾರ್ಯದರ್ಶಿ, ಕೃಷ್ಣಪ್ಪ ಡಿಎಸ್4 ಕಾರ್ಯದರ್ಶಿ, ವೆಂಕಟ ಸ್ವಾಮಿ, ಶಿವರಾಜ್, ಕೃಷ್ಣಮೂರ್ತಿ, ದೇವರಾಜ್, ನವೀನ್ ಕುಮಾರ್ ಸೇರಿದಂತೆ ಹಲವರು ಭಾಗಿಯಾಗಿದ್ದರು.