ತುಮಕೂರು: ಪರಿಶಿಷ್ಠ ವರ್ಗಕ್ಕೆ ಸೇರುವ ನಾಯಕರು ಇತಿಹಾಸ ಸೃಷ್ಟಿಸುವ ಶಕ್ತಿ ಇರುವವರು ಆದರೆ, ಒಗ್ಗಟ್ಟಿನಿಂದ ಇದ್ದರೆ ಮಾತ್ರ ರಾಜಕೀಯವಾಗಿ ಬೆಳೆಯಲು ಸಾಧ್ಯ ಸಮಾಜ ಮುಂದೆ ಬರಬೇಕಾದರೆ ನಾವುಗಳು ನಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಅಗತ್ಯವಿದೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ, ಮಾಜಿ ಶಾಸಕ ಕೆ.ಎನ್.ರಾಜಣ್ಣ ಅಭಿಪ್ರಾಯಪಟ್ಟರು.
ನಗರದ ಗಾಜಿನ ಮನೆಯಲ್ಲಿ ಏರ್ಪಡಿಸಿದ್ದ ಮದಕರಿ ನಾಯಕ ಜಯಂತೋತ್ಸವದಲ್ಲಿ ಮಾತನಾಡಿ, ಮದಕರಿ ನಾಯಕರು ಶೂರರಾಗಿದ್ದರು, ವೀರರಗಿದ್ದರು ಹಾಗೂ ಅಪಾರ ದೇಶಪ್ರೇಮಿಯಾಗಿದ್ದರು.
ಎಲ್ಲ ಸಮಾಜದ ಜನರನ್ನೂ ಸಹ ಒಂದೇ ರೀತಿಯಲ್ಲಿ ನೋಡುತ್ತಿದ್ದರು ಎಲ್ಲ ಸಮಾಜ ಗಳ ಅಭಿವೃದ್ದಿಗೂ ಶ್ರಮಿಸುತ್ತಿದ್ದರು ಎಂದರು. ಪರಿಶಿಷ್ಟ ವರ್ಗಕ್ಕೆ ಸೇರುವ ನಾಯಕರು ಸ್ವಾಭಿಮಾನದಿಂದ ಬದುಕು ನಡೆಸಬೇಕಾದರೆ, ಆರ್ಥಿಕವಾಗಿ ಸದೃಡರಾಗ ಬೇಕಾದರೆ ಮೊದಲು ಶಿಕ್ಷಣ ಪಡೆಯಬೇಕು, ಈ ಹಿನ್ನೆಯಲ್ಲಿ ನಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು ಎಂದರು.
ನಮ್ಮಲ್ಲಿ ಪರಸ್ಪರ ಕಾಲೆಳೆಯುವವರ ಸಂಖ್ಯೆ ಹೆಚ್ಚಾಗಿದೆ ಅದು ತಪ್ಪಬೇಕು ಆಗ ಮಾತ್ರ ನಮ್ಮ ಸಮಾಜ ಮುಂದೆ ಬರಲು ಸಾಧ್ಯವಾಗಲಿದೆ. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಮೂಲಕ ಅವರನ್ನು ಸಮಾಜದ ಆಸ್ತಿ ಮಾಡಬೇಕಾದರೆ, ಸಮಾಜಗಳ ಜೊತೆಯಲ್ಲಿ ಅನೋನ್ಯತೆಯಿಂದ ಇರಬೇಕು, ನಾಯಕ ಜನಾಂಗ ಸಮಸ್ಯೆಗಳು ಬಂದಾಗ ಎದೆ ಕೊಟ್ಟು ಹೋರಾಡುವಂತ ಹವರು, ಅವರು ಎಂದು ಸಮಸ್ಯೆಗೆ ಬೆನ್ನು ಕೊಟ್ಟವರಲ್ಲ ಎಂದರು.
ನಾಗಮೋಹನದಾಸ್ ವರದಿ ಪೂರ್ಣವಾಗಿ ಅನುಷ್ಠಾನಕ್ಕೆ ಬರುವಂತಾಗಬೇಕು. ಸರ್ಕಾರದಲ್ಲಿ ಖಾಲಿ ಇರುವ ೬ಲಕ್ಷ ಪರಿಶಿಷ್ಠ ಜಾತಿ ಮತ್ತು ವರ್ಗದ ಮೀಸಲು ಹುದ್ದೆಗಳನ್ನು ಕೂಡಲೆ ತುಂಬಬೇಕು, ಹೊರ ಗುತ್ತಿಗೆಯ ಮೂಲಕ ಹುದ್ದೆ ತುಂಬುವುದರಿ0ದ ಪ್ರಯೋಜನವಾಗದು, ನೇರ ನೇಮಕಾತಿ ಮಾಡಬೇಕು ಎಂದು ಒತ್ತಾಯಿಸಿದರು. ಶಾಸಕ ಜ್ಯೋತಿ ಗಣೇಶ್ ಮಾತನಾಡಿ, ಬಿಜೆಪಿ ಸರ್ಕಾರ ನಾಯಕ ಜನಾಂಗಕ್ಕೆ ಮೀಸಲಾತಿ ಪ್ರಮಾಣ ಹೆಚ್ಚಿಸಿದೆ. ಯಡಿಯೂರಪ್ಪನವರು ವಾಲ್ಮೀಕಿ ಜಯಂತಿಯನ್ನು ಸರ್ಕಾರ ದಿಂದ ಆಚರಿಸಲು ಆದೇಶ ನೀಡಿದರೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮೀಸಲಾತಿ ಹೆಚ್ಚಿಸಿದರು ಎಂದರು.
ಮಾಜಿ ಸಚಿವ ಟಿ.ಬಿ.ಜಯಚಂಧ್ರ, ಮಾಜಿ ಶಾಸಕ ಸುರೇಶ್ ಗೌಡ, ಶಿಡ್ಲೆಕೋಣದ ಮಹರ್ಷಿ ವಾಲ್ಮೀಕಿ ಮಹಾಸಂಸ್ಥಾನದ ಪೀಠಾಧ್ಯಕ್ಷ ಸಂಜಯ ಕುಮಾರ್ ಸ್ವಾಮೀಜಿ, ಶಾಂತಲಾ ರಾಜಣ್ಣ, ಸತೀಶ್ ಜಾರಕಿಹೊಳಿ ಇತರರು ಹಾಜರಿದ್ದರು. ಪಾವಗಡ ತಾಲೂಕಿನ ಗೌಡ ತಿಮ್ಮನಹಳ್ಳಿಯ ನಾಟಿ ವೈದ್ಯ ಕಾವಲ್ಲಪ್ಪ, ಸಿಂಗಾಪುರ ವೆಂಕಟೇಶ್, ಪ್ರೋ.ಟಿ.ಪಿ ಬಸವನಗೌಡ, ಶ್ರವಣ ಕುಮಾರ್ ಡಿ.ನಾಯಕ ಅವರಿಗೆ ಮದಕರಿ ನಾಯ್ಕ ಪ್ರಶಸ್ತಿಯನ್ನು ಸಾಹಿತಿ ಅನಸೂಯ ಕೆಂಪನಹಳ್ಳಿ ಅವರಿಗೆ ಒನಕೆ ಓಬವ್ವ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಬೆಳಗಾವಿಯ ಒಂದು ಹಳ್ಳಿಯೂ ಮಹಾರಾಷ್ಟ್ರಕ್ಕೆ ಹೋಗಲ್ಲ: ಸತೀಶ್ ಜಾರಕಿಹೊಳಿ
ಯಾವುದೇ ಕಾಲದಲ್ಲಾದರೂ ಸಹ ನಮ್ಮ ಬೆಳಗಾವಿಯ ಒಂದು ಸಣ್ಣ ಹಳ್ಳಿ ಮಹಾರಾಷ್ಟ್ರಕ್ಕೆ ಹೋಗಲು ಬಿಡುವುದಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೋಳಿ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ೫೦ ವರ್ಷದ ಹಿಂದೆ ಆಗಿದ್ದ ಸರ್ವೆ ಅದಾದ ಮೇಲೆ ಮಹಾರಾಷ್ಟç ಬದಲಾವಣೆ ಯಾಗಿದೆ. ಎಲ್ಲಿ ಮರಾಠಿಗರು ಹೆಚ್ಚಾಗಿದ್ದರೂ ಅಲ್ಲಿ ಕನ್ನಡಿಗರು ಹೆಚ್ಚಾಗಿದ್ದಾರೆ. ಬೆಳಗಾವಿ ರೈಲ್ವೇ ನಿಲ್ದಾಣ ಮುಂಚೆಯ ಸರ್ವೆ ಪ್ರಕಾರ ಮಹಾರಾಷ್ಟçಕ್ಕೆ ಹೋಗಬೇಕು, ಅಲ್ಲಿ ಕನ್ನಡಿಗರ ಸಂಖ್ಯೆ ಹೆಚ್ಚಾಗಿದ್ದು ಅದು ಮುಗಿದುಹೋದ ಅಧ್ಯಯವಾಗಿದೆ ಎಂದರು.