Saturday, 14th December 2024

ಧರ್ಮಣ್ಣ ದೊಡ್ಡಮನಿ ಗುಣಮುಖರಾಗಲೆಂದು ಮರಗಮ್ಮ ದೇವಿಗೆ ವಿಶೇಷ ಪೂಜೆ

ಜೇವರ್ಗಿ: ಬೆಂಗಳೂರು ಮಣಿಪಾಲ್ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ಪಡೆಯುತ್ತಿರುವ ರಾಜ್ಯ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶ್ರೀ ಧರ್ಮಣ್ಣ ದೊಡ್ಡ ಮನಿ ಅವರು ಬೇಗನೆ ಗುಣಮುಖರಾಗಲೆಂದು ಮರಗಮ್ಮ ದೇವಿಗೆ ಬಿಜೆಪಿ ಹಿರಿಯ ನಾಯಕರು ವಿಶೇಷ ಪೂಜೆ ಸಲ್ಲಿಸಿದರು.

ಪಟ್ಟಣದ ಹೊರವಲಯದ ಶ್ರೀ ಮರಗಮ್ಮ ದೇವಿಯ ದೇವಸ್ತಾನದಲ್ಲಿ ಬಿಜೆಪಿ ಮುಖಂಡರು ವಿಶೆಷ ಪೂಜೆಯನ್ನು ಸಲ್ಲಿಸಿದರು.

ರಾಜ್ಯ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶ್ರೀ ಧರ್ಮಣ್ಣ ದೊಡ್ಡ ಮನಿ ಯವರಿಗೆ ಹೆಚ್ಚಿನ ಚಿಕಿತ್ಸೆಯನ್ನು ನೀಡುವ ಸಲುವಾಗಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರಗೆ ದಾಕಲಿಸಲಾಗಿದೆ. ಅವರು ಬೇಗನೆ ಗುಣಮುಕರಾಗಲಿ ಎಂದು ಬುದವಾರ ಶ್ರೀ ಮರಗಮ್ಮ ದೇವಿಯ ದೇವಸ್ತಾನದಲ್ಲಿ ವಿಶೆಷ ಪೂಜೆಯನ್ನು ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಬಿಜೆಪಿ ಹಿರಿಯ ಮುಖಂಡರಾದ ಮಂಜುನಾಥ್ ಗೌಡ ಯಲಗೂಡ, ಬಿಜೆಪಿ ಕಲಬುರಗಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಶಿವರಾಜ್ ಪಾಟೀಲ್ ರದ್ದೇವಡಗಿ, ಅಶೋಕ್ ಸಾಹುಕಾರ್ ಗೋಗಿ, ಜಿ. ಪಂ. ಮಾಜಿ ಸದಸ್ಯ ಮರೆಪ್ಪ ಬಡಿಗೇರ, ಮರೆಪ್ಪ ಕಂಡಾಳಕರ್, ಶಾಂತಕುಮಾರ ಜಮಖಂಡಿ, ವೇಂಕಟೆಶ ಇಜೇರಿ, ಮಲ್ಲಶೆಟ್ಟಪ್ಪ ಗೌಡ ಹಿರೇಗೌಡರ, ಬಾಗಪ್ಪ ಯಲಗೋಡ, ಭೀಮಾಶಂಕರ ಕುರುಡೇಕರ, ಮಾನಪ್ಪ ಗೋಗಿ, ಅನಿಲ್ ದೊಡ್ಡಮನಿ, ಪದ್ಮಣ್ಣ ಪೂಜಾರಿ ಸೆರಿದಂತೆ ಅನೇಕರು ಉಪಸ್ಥಿತರಿದ್ದರು.