ಯುವಕನನ್ನು ಅಮಾನ್ ಸಕ್ಸೇನಾ ಎಂದು ಗುರುತಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಕ್ಸೇನಾ ಬೆದರಿಕೆಯೊಡ್ಡಿ ಇ-ಮೇಲ್ ಮಾಡಿದ್ದ. ಈ ಆರೋಪದಲ್ಲಿ ಉತ್ತರ ಪ್ರದೇಶದ ಬುದೌನ್ ಜಿಲ್ಲೆಯಲ್ಲಿರುವ ತಂದೆಯ ಮನೆಯಲ್ಲಿದ್ದ ಸಕ್ಸೇನಾನನ್ನು ಗುಜರಾತ್ ಎಟಿಎಸ್ ಅಧಿಕಾರಿಗಳು ಬಂಧಿಸಿದ್ದರು.
ಗುಜರಾತ್ ನ ಭಯೋತ್ಪಾದಕ ನಿಗ್ರಹ ದಳ ಮತ್ತು ಉತ್ತರಪ್ರದೇಶ ಪೊಲೀಸರು ಜಂಟಿ ಯಾಗಿ ದಾಳಿ ನಡೆಸಿ, ಸಕ್ಸೇನಾನನ್ನು ಬಂಧಿಸಲಾಗಿತ್ತು.
ಪ್ರಕರಣದಲ್ಲಿ ಸಕ್ಸೇನಾ ಹಾಗೂ ಗುಜರಾತ್ ಮೂಲದ ಮಹಿಳೆ ಮತ್ತು ಆಕೆಯ ದೆಹಲಿ ಮೂಲದ ಗೆಳೆಯನ ವಿರುದ್ಧ ದೂರು ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.