ನಿಂಬರ್ಗಾ ಕ್ಲಸ್ಟರ್ ಮಟ್ಟದ ಮಕ್ಕಳ ಕಲಿಕಾ ಮೇಳ
ಆಳಂದ: ನಾಲ್ಕು ಗೋಡೆಗಳ ಮಧ್ಯೆದಲ್ಲಿ ಕೇವಲ ಏಕಮುಖಿ ಪ್ರಕ್ರೀಯೆಯಲ್ಲಿ ಭೋಧನೆ ಮಾಡಿದರೆ, ಅದು ಮಕ್ಕಳಲ್ಲಿ ನಾವಿನ್ಯತೆ ಸೃಷ್ಠಿಸಲಾರದು ಎಂದು ಅಜೀಂ ಪ್ರೇಮಜೀ ಪೌಂಡೇಶನ ಸಂಪನ್ಮೂಲ ವ್ಯಕ್ತಿ ಗುಂಡಪ್ಪ ಕಾಟೇಕರ ಅವರು ತಿಳಿಸಿ ದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಅಜೀಂ ಪೇಮಜೀ ಪೌಂಡೇಶನ ಜಂಟಿಯಾಗಿ ಶನಿವಾರ ನಿಂಬರ್ಗಾ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಿದ ಕ್ಲಸ್ಟರ್ ಮಟ್ಟದ ಮಕ್ಕಳ ಕಲಿಕಾ ಮೇಳದ ಮುಖ್ಯ ಅತಿಥಿಗಳಾಗಿ ಮಾತನಾಡಿ ಮಕ್ಕಳಲ್ಲಿ ಸೂಕ್ತವಾಗಿ ಅಡಗಿರುವ ಪ್ರತಿಭೆಯನ್ನು ಹೊರ ಹಾಕುವುದಕ್ಕೆ ಇದು ಒಂದು ಉತ್ತಮ ವೇದಿಕೆಯಾಗಿದೆ, ಮಾಡುತ್ತ ಕಲಿ ಎನ್ನುವ ತತ್ವದೊಂದಿಗೆ ಬೇಸೆದುಕೊಂಡಿರುವ ಈ ಕಲಿಕಾ ಮೇಳದಲ್ಲಿ ಮಕ್ಕಳು ಪ್ರತಿ ಒಂದು ವಿಷಯ ಕುರಿತು ತಾವೇ ಸ್ವತಹ ಹುಡುಕಾಟ ಮಾಡುವುದರೊಂದಿಗೆ ಅರ್ಥ ಮಾಡಿಕೊಳ್ಳುತ್ತಾ, ವಿಷಯದ ಸಮಗ್ರ ಮತ್ತು ಸ್ಪಷ್ಟವಾದ ಚಿತ್ರಣವನ್ನು ಕಟ್ಟಿ ಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಗ್ರಾಮ ಪಂಚಾಯತ ಅಧ್ಯಕ್ಷ ಸಾತಣ್ಣಾ ಮಟಕಿ ಅವರು ಮಕ್ಕಳ ಕಲಿಕಾ ಮೇಳವನ್ನು ಉದ್ಘಾಟಿಸಿದರು, ಸ್ಥಳೀಯ ಮುಖ್ಯ ಗುರುಳಾದ ಬಸವರಾಜ ಮೈಂದರ್ಗಿ ಸಭೆಯ ಅಧ್ಯಕ್ಷತೆ ವಹಿಸಿದರು. ಸಿಆರ್ಪಿ ಅಶೋಕ ಗಾಯಕವಾಡ, ಸಂಪನ್ಮೂಲ ವ್ಯಕ್ತಿಗಳಾದ ಮೌನೇಶ ಹಾಗೂ ಶಿವಾನಂದ ಮತ್ತು ಗುಂಡಪ್ಪ ಜೋಳದ, ಗುಂಡೇರಾವ ಹಳಿಮನಿ, ಅಣ್ಣಾರಾವ ಬೋರೋಟಿ, ಅಣ್ಣಾರಾವ ಮಂಗಾಣೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಹಿತ್ತಲಶಿರೂರ, ನಿಂಬರ್ಗಾ, ಧಂಗಾಪುರ, ಕುಡುಕಿ, ಬಮ್ಮನಹಳ್ಳಿ ತಾಂಡಾ ಶಾಲೆ ಮಕ್ಕಳು, ಶಿಕ್ಷಕರು ಮೇಳದಲ್ಲಿ ಭಾಗವಹಿಸಿದರು.
*
ಕಲಿಕಾ ಮೇಳದಲ್ಲಿ ಮಕ್ಕಳು ವಿವಿಧ ವಿಷಯಗಳು ಪ್ರಸ್ತುತ ಪಡಿಸುತ್ತಾ, ಆರಂಭದಲ್ಲಿ ಸಂವಿಧಾನದ ಪ್ರಸ್ಥಾವೆನಯನ್ನು ಸ್ವತ ತಾವು ಅರಿತು ಮಾಡಿಕೊಳ್ಳವುದರ ಜೊತೆಗೆ ಇತರರಿಗೂ ಅರ್ಥಹಿಸುವುದರೊಂದಿಗೆ ಅದರಲ್ಲಿನ ಪ್ರಮುಖ ಅಂಶಗಳ ಬಗ್ಗೆ ಸ್ಪಷ್ಟ ತಿಳುವಳಿಕೆ ನೀಡಿದರು.