Saturday, 14th December 2024

500 ಕೋಟಿ ಮೌಲ್ಯದ ನಿಷೇಧಿತ ಎಂಡಿ ಡ್ರಗ್ ವಶ

ಅಹಮದಾಬಾದ್: ಗುಜರಾತ್ ಭಯೋತ್ಪಾದನಾ ನಿಗ್ರಹ ದಳವು ವಡೋದರಾದ ಹೊರವಲಯದಲ್ಲಿರುವ ಉತ್ಪಾದನಾ ಘಟಕದ ಮೇಲೆ ದಾಳಿ ನಡೆಸಿದ್ದು, ಸುಮಾರು 500 ಕೋಟಿ ರೂಪಾಯಿ ಮೌಲ್ಯದ ನಿಷೇಧಿತ ಎಂಡಿ ಡ್ರಗ್ನ ಬೃಹತ್ ಸಂಗ್ರಹವನ್ನು ವಶಪಡಿಸಿ ಕೊಂಡಿದೆ.
ಪ್ರಾಥಮಿಕ ತನಿಖೆಯಲ್ಲಿ ಆರೋಪಿಗಳು ಕಾನೂನುಬದ್ಧವಾಗಿ ರಾಸಾಯನಿಕಗಳನ್ನು ತಯಾರಿಸುವ ನೆಪದಲ್ಲಿ ಎಂಡಿ ಡ್ರಗ್, ಮಾದಕ ವಸ್ತುವನ್ನು ತಯಾರಿಸುತ್ತಿದ್ದರು. ಯಾರೆಲ್ಲ ಇವರ ಸಂಪರ್ಕದಲ್ಲಿದ್ದಾರೆ ಎನ್ನುವ ಕುರಿತು ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ವರ್ಷದ ಆಗಸ್ಟ್ನಲ್ಲಿ ಎಟಿಎಸ್ ವಡೋದರಾ ನಗರದ ಸಮೀಪವಿರುವ ಗೋದಾಮಿ ನಿಂದ ಸುಮಾರು 1,000 ಕೋಟಿ ರೂಪಾಯಿ ಮೌಲ್ಯದ 200 ಕಿಲೋಗ್ರಾಂಗೂ ಹೆಚ್ಚು ಪಾರ್ಟಿ ಡ್ರಗ್ ಮೆಫೆಡ್ರೋನ್ ಅನ್ನು ವಶಪಡಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದರು.