Saturday, 14th December 2024

ಕಠಿಣ ಪರಿಶ್ರಮವೇ ಸಾಧನೆಯನ್ನು ಗುರುತಿಸುವ ಮಾನದಂಡ : ಕುಲಪತಿ ಡಾ. ಬಾಲಸುಬ್ರಹ್ಮಣ್ಯ

ಚಿಕ್ಕಬಳ್ಳಾಪುರ : ವಿದ್ಯಾರ್ಥಿಗಳು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಗಟ್ಟಿಯಾಗಿ ಬೇರೂರಿ ಸಾಧನೆಯ ಹೆಜ್ಜೆ ಗುರುತುಗಳನ್ನು ಮೂಡಿಸಿ ಮುನ್ನಡೆಯುವುದೇ ಓದಿದ ವಿದ್ಯಾ ಸಂಸ್ಥೆಗೆ ನೀಡುವ ಬಹುದೊಡ್ಡ ಕೊಡುಗೆಯಾಗಿದೆ. ಕಠಿಣ ಪರಿಶ್ರಮವೇ ಸಾಧನೆಯನ್ನು ಗುರುತಿಸುವ ಮಾನದಂಡವಾಗಿದ್ದು ಇದಕ್ಕೆ ಅಡ್ಡದಾರಿಗಳಿಲ್ಲ ಎಂದು ದಯಾನಂದ ಸಾಗರ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಕೆ.ಎನ್.ಬಾಲಸುಬ್ರಹ್ಮಣ್ಯ ಮೂರ್ತಿ ತಿಳಿಸಿದರು.

ನಗರ ಹೊರವಲಯ ನಾಗಾರ್ಜುನ ತಾಂತ್ರಿಕ ಕಾಲೇಜು ಸಭಾಂಗಣದಲ್ಲಿ ಗುರುವಾರ ನಡೆದ ನೂತನ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತ ನಾಡಿದರು.

ತಾಂತ್ರಿಕ ಶಿಕ್ಷಣವನ್ನು ಅರಸಿ ಬಂದಿರುವ ಪ್ರತಿಯೊಬ್ಬ ವಿದ್ಯಾರ್ಥಿಯೂ ಕೂಡ ಹೊಸ ಶಿಕ್ಷಣ ನೀತಿಗೆ ಪ್ರವೇಶ ಮಾಡುತ್ತಿದ್ದೇನೆ ಎನ್ನುವ ಸತ್ಯವನ್ನು ಅರಗಿಸಿಕೊಂಡು ಅದಕ್ಕೆ ಬೇಕಾದ ಮಾನಸಿಕತೆಯನ್ನು ಬೆಳೆಸಿಕೊಳ್ಳಬೇಕು.ಪಿಯುಸಿ ಶಿಕ್ಷಣ ಕ್ರಮಕ್ಕೆ ಹೊರತಾದ ಹೊಸ ಲೋಕದರ್ಶನ ಇಲ್ಲಿ ನಿಮಗೆ ಕಾಣಸಿಗುವುದರಿಂದ ಯಾರೂ ಕೂಡ ವಿಚಲಿತ ರಾಗದೆ, ಹೊಸ ಶಿಕ್ಷಣ ಮತ್ತು ಬೋಧನಾ ಕ್ರಮಕ್ಕೆ ಹೊಂದಿಕೊಳ್ಳಬೇಕು.

ಏಕೆಂದರೆ ತಾಂತ್ರಿಕ ಶಿಕ್ಷಣ ಕ್ಷೇತ್ರವು ಇಂದು ಅಗಾಧವಾದ ಸಾಧ್ಯತೆಗಳನ್ನು ನಿಮ್ಮ ಮುಂದೆ ತೆರೆದಿಟ್ಟಿದೆ.ನೂತನ ಶಿಕ್ಷಣ ನೀತಿಯು ಇದಕ್ಕೂ ಹೆಚ್ಚಿನ ಸಾಧ್ಯತೆಗಳನ್ನು, ಬಹುಶಿಸ್ತೀಯ ಅಧ್ಯಯನ ಮಾದರಿಗಳನ್ನು ಪರಿಚಯಿಸಿದೆ.ಹೀಗಾಗಿ ಪಿಯುಸಿ ಮಾದರಿ ಯನ್ನು ಬಿಟ್ಟು ತಾಂತ್ರಿಕ ಶಿಕ್ಷಣದ ಮಾದರಿಗೆ ಪೋಷಕರು ವಿದ್ಯಾರ್ಥಿಗಳು ಒಗ್ಗಿಕೊಳ್ಳಬೇಕಿದೆ ಎಂದರು.

ತಾಂತ್ರಿಕ ಶಿಕ್ಷಣ ಕ್ಷೇತ್ರವು ಇಂದು ಸಾಕಷ್ಟು ಅಭಿವೃದ್ದಿ ಹೊಂದಿರುವ ಹಾಗೆ ಜ್ಞಾನ ಭಂಡಾರವನ್ನೇ ಉಣಬಡಿಸುವ ಸಾಮಾಜಿಕ ಮಾಧ್ಯಮಗಳು ಅಂಗೈಯಲ್ಲಿ ಸಿಗುವ ಅರಗಿಣಿಯಂತಿ ಕಾಣುತ್ತಿವೆ.ವಿದ್ಯಾಥಿಗಳು ತಮ್ಮ  ಶಿಕ್ಷಣದ ನಡುವೆ ತಲೆದೋರುವ ಸಮಸ್ಯೆಗಳ ಪರಿಹಾರದ  ಮಾರ್ಗವಾಗಿ ಅವುಗಳನ್ನು ಎಷ್ಟು ಬೇಕೋ ಅಷ್ಟು ಮಾತ್ರ ಬಳಸಿಕೊಂಡರೆ ಭವಿಷ್ಯ ಬೆಳಗುತ್ತದೆ. ಇಲ್ಲವಾದಲ್ಲಿ ಅಪಾಯವನ್ನು ಮೈಮೇಲೆ ಎಳೆದುಕೊಂಡAತಾಗುತ್ತದೆ.ಈ ಬಗ್ಗೆ ಪೋಷಕರೂ ಎಚ್ಚರ ವಹಿಸುವುದು ಅಗತ್ಯ ಎಂದು ಕಿವಿಮಾತು ಹೇಳಿದರು.

ತಾಂತ್ರಿಕ ಶಿಕ್ಷಣ ಪಡೆದವರ ಮೇಲೆ ದೇಶಕಟ್ಟುವ ಬಹುದೊಡ್ಡ ಜವಾಬ್ದಾರಿಯನ್ನು ಸಮಾಜ ಹೊರಿಸಿದೆ ಎಂಬ ಎಚ್ಚರ ಸದಾ ಕಾಡಬೇಕು.ಉತ್ತಮ ನಡತೆ ವಿದ್ಯಾರ್ಥಿ ಜೀವನಕ್ಕೆ ಭೂಷಣ.ಅವು ಆತನನ್ನು ಎತ್ತರಕ್ಕೆ ಕೊ೦ಡೊಯ್ಯುವ ಸಾಮಾರ್ಥ್ಯ ಹೊಂದಿವೆ.ಪ್ರಯತ್ನ ಪಟ್ಟರೆ ಸಾಧನೆ ಕಷ್ಟವೆನಿಸದು.ಪರೀಕ್ಷೆಗಳ ಸೋಲೆಂಬುದು ಅಲ್ಪವಿರಾಮವೇ ವಿನಃ ಬೇರಲ್ಲ.ಓದಿನ ಬಗೆಗಿನ ಏಕಾಗ್ರತೆ,ಪಠ್ಯಪುಸ್ತಕ ಓದುವ ಸಂಸ್ಕೃತಿ,ಪರಸ್ಪರ ಚರ್ಚೆ,ಪ್ರಾಮಾಣಿಕ ಪ್ರಯತ್ನ ಇವೆಲ್ಲವುಗಳ ಮೊತ್ತವೇ ಫಲಿತಾಂಶ ಎಂಬುದನ್ನು ಎಂಬುದನ್ನು ವಿದ್ಯಾರ್ಥಿಗಳು ಮರೆಯಬಾರದು ಎಂದರು.

ತಾಂತ್ರಿಕ ಶಿಕ್ಷಣ ಪಡೆಯುವ ಪ್ರತಿಯೊಬ್ಬ ವಿದ್ಯಾರ್ಥಿಲೂ ತನ್ನ ಗುರಿಯನ್ನು ಸ್ಪಷ್ಟಪಡಿಸಿಕೊಳ್ಳುವುದು ಮುಖ್ಯ.ನಾನು ಪದವಿ ಮುಗಿಸಿ ಉದ್ಯೋಗಕ್ಕೆ ಅಲೆಯುವ ಪಧವೀಧರ ಆಗಬೇಕೋ ಇಲ್ಲವೇ ಉಧ್ಯಮಪತಿಯಾಗಿ ರೂಪುಗೊಳ್ಳಬೇಕೋ ಎಂದು ನಿಮ್ಮನ್ನು ನೀವೇ ಪರೀಕ್ಷೆ ಮಾಡಿಕೊಳ್ಳಿ, ನಮ್ಮ ಚಿಂತನೆಗಳೇ ನಮ್ಮ ಬದುಕನ್ನು ನಿರ್ಧರಿಸುತ್ತವೆ.ಮುನ್ನಡೆಸುತ್ತವೆ ಗುರಿ ಮುಟ್ಟಿಸುತ್ತವೆ.ಭರವಸೆಯಿರಲಿ ಅಧಿಕಾರ ಎಂದಿಗೂ ಶಾಶ್ವತವಲ್ಲ.ಈ ಬಗ್ಗೆ ವ್ಯಾಮೋಹ ಬೇಡ.ಇಂದಿನ ಪೋಷಕರು ತಾವು ಏನು ಆಗಿರಲು ಸಾಧ್ಯವಿಲ್ಲವೋ ತಮ್ಮ ಮಕ್ಕಳಲ್ಲಿ ಆದಾಗಲು ಬಯಸುತ್ತಾರೆ.ಇಂಜನಿಯರಿAಗ್ ಕ್ಷೇತ್ರದಲ್ಲಿ ವೈಫಲ್ಯ ಕಡಿಮೆ.ಯಶಸ್ಸೇ ಹೆಚ್ಚು. ನಿಮಗೆಲ್ಲಾ ಶುಭವಾಗಲಿ ಎಂದು ಹಾರೈಸಿದರು.

ಪ್ರಾಂಶುಪಾಲ ಡಾ. ರವಿಶಂಕರ್ ಮಾತನಾಡಿ ವಿದ್ಯಾರ್ಥಿಗಳಿಗೆ ಸಾಧನೆಯ ಹಸಿವಿರಬೇಕು.ತಾಂತ್ರಿಕ ಶಿಕ್ಷಣ ಪದವೀಧರರು ಉದ್ಯೋಗ ಬೇಡುವವರಾಗದೆ ಉದ್ಯೋಗ ನೀಡುವವರಾಗಬೇಕು.ಹೊಸದನ್ನು ಚಿಂತಿಸಿ, ಸ0ಶೋಧಿಸಿ, ಅದರ0ತೆ ಬದುಕು ಕಟ್ಟಿಕೊಳ್ಳಿ. ನಾಗಾರ್ಜುನ ಕಾಲೇಜು ವಿಫುಲ ಅವಕಾಶಗಳನ್ನು ನಿಮಗೆ ಒದಗಿಸಿದೆ ಎಂದರು.

ಆಡಳಿತಾಧಿಕಾರಿ ಭಾನು ಚೈತನ್ಯ ಶರ್ಮ ಮಾತನಾಡಿ ವಿದ್ಯಾರ್ಥಿಗಳಿಗೆ ನಿಮ್ಮ ಶಕ್ತಿಯ ಬಗ್ಗೆ ಅರಿವಿರಬೇಕು.ಸಾಧನೆಯ ಹಂಬಲವಿರಬೇಕು. ಸ0ತೋಷದಿ0ದ ಕಲಿಕೆಯಲ್ಲಿ ತೊಡಗುವ ಮನಸ್ಸು ಮಾಡಿ.ಉತ್ತಮ ನೆನಪುಗಳು ಸದಾ ನಿಮ್ಮ ಬೆನ್ನಿಗಿರಲಿ. ಇದನ್ನು ಸಾಕಾರ ಮಾಡುವ ಶಕ್ತಿಯನ್ನು ನಾಗಾರ್ಜುನ ಶಿಕ್ಷಣ ಸಂಸ್ಥೆ ಪ್ರಾಮಾಣಿಕವಾಗಿ ತುಂಬಲಿದೆ.ನAಬಿಕೆಯಿಟ್ಟು ಇಲ್ಲಿಗೆ ಬಂದಿರುವ ಪ್ರತಿಯೊಬ್ಬರಿಗೂ ಶುಭವಾಗಲಿ ಎಂದು ಹಾರೈಸಿದರು.

ಈ ವೇಳೆ ಆಡಳಿತಾಧಿಕಾರಿ ಗೋಪಾಲಕೃಷ್ಣ, ಹಣಕಾಸು ಅಧಿಕಾರಿ ಭಾಸ್ಕರ್‌ರೆಡ್ಡಿ, ಡಾ. ಹರೀಶ್, ಡಾ.ನಂಜುAಡಪ್ಪ,ಅನಿಲ್ ಕೊಣ್ಣೂರು ಮತ್ತಿತರರು ಇದ್ದರು.