Saturday, 14th December 2024

ಡಿ.07, 08 ಶ್ರೀಯಲ್ಲಮ್ಮದೇವಿಯ ಜಾತ್ರಾ ಮಹೋತ್ಸವ

ಇಂಡಿ: ತಾಲೂಕಿನ ಕೋಟ್ನಾಳ ಗ್ರಾಮದಲ್ಲಿ ಇದೆ ಡಿ.೭ ರಂದು ಬುಧವಾರ ಹಾಗೂ ಡಿ,೦೮ರಂದು ಗುರುವಾರ ಎರಡು ದಿನಗಳ ಪರ್ಯಂತರ ಶ್ರೀಯಲ್ಲಮ್ಮದೇವಿಯ ಜಾತ್ರಾಮಹೋತ್ಸವ ಜರುಗಲಿದೆ.

ಡಿ. ೭ ಬುಧವಾರ ರಾತ್ರಿ ೧೦-೦೦ ಗಂಟೆಯಿ0ದ ಗ್ರಾಮದ ಭಕ್ತಾದಿಗಳ ಮನೆ ಮನೆಗೆ ಮಹಾ ತಾಯಿ ಯಲ್ಲಮ್ಮ ದೇವಿ ಭೇಟಿ ನೀಡುವಳು , ಅದೇ ದಿನ ರಾತ್ರಿ ೧-೦೦ ಗಂಟೆಗೆ ವಿಶೇಷ ಅಗ್ನಿಕುಂಡಕ್ಕೆ ಪೂಜ್ಯ ಅಗ್ನಿಪುಟುವ ಮಾಡುವುದು. ನಂತರ ಸಂಗೀತಾ ಬಸನಾಳ ಜೋಗಮ್ಮಾ ಹಾಗೂ ವಿವಿಧ ಗ್ರಾಮಗಳಿಂದ ಆಗಮಿಸಿದ ಜೋಗಮ್ಮ ಇವರಿಂದ ಚೌಡಕಿ ಪದಗಳು.

ಡಿ.೦೮ರಂದು ಗುರುವಾರ ಬೆಳಿಗ್ಗೆ ೧೧-೦೦ ಗಂಟೆಗೆ ಪುರಪ್ರವೇಶ ಗ್ರಾಮಸ್ಥರಿಂದ ಮಹಾ ತಾಯಿ ಯಲ್ಲಮ್ಮನಿಗೆ ಪಡಿಪಧಾರ್ಥ ಸಮರ್ಪಣೆ. ನಂತರ ೩-೩೦ ಗಂಟೆಗೆ ಅಗ್ನಿಪ್ರವೇಶ ಜರುಗುವುದು. ನಂತರ ಅನ್ನಪ್ರಸಾದ ವಿರತಣೆ.

ನಂತರ ರಾತ್ರಿ ೮-೩೦ ಗಂಟೆಗೆ ಶ್ರೀಬಸವೇಶ್ವರ ನಾಟ್ಯ ಸಂಘ ಸಾ|| ಬಂಡಗಣಿ ತಾ||ಜಮಖಂಡಿ ಜಿ|| ವಿಜಯಪೂರ ಇವರು ಅರ್ಪಿಸುವ ಗರತಿಗೆ ಬಂದ ಗಂಡಾAತರ ಅರ್ಥಾತ್ ಛಲ ತೀರಿಸದ ಹೆಣ್ಣು ನಾಟಕ ಉದ್ಘಾಟನೆ ಈ ಕಾರ್ಯಕ್ರಮಕ್ಕೆ ಜನಪ್ರತಿನಿಧಿ ಗಳು, ಗಣ್ಯರು ಹಿರಿಯರು ಉಪಸ್ಥಿತರಿರುವವರು ಆದ್ದರಿಂದ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಜಾತ್ರಾಮಹೋತ್ಸವಕ್ಕೆ ಆಗಮಿಸಿ ಶ್ರೀಮಾತೆ ಯಲ್ಲಮ್ಮದೇವಿಯ ಕೃಪಾರ್ಶೀವಾದ ಪಡೇದು ಪುನಿತರಾಗಬೇಕು ಎಂದು ಕೊಟ್ನಾಳ ಗ್ರಾಮದ ಜಾತ್ರಾಕಮೀಟಿ ಹಾಗೂ ಗ್ರಾಮಸ್ಥರು ಪ್ರಕಟಣೆಗೆ ತಿಳಿಸಿದ್ದಾರೆ.