Wednesday, 11th December 2024

ದಿ.ಧಾನಪ್ಪ ಬಗಲಿ ಯುವ ಸಾಹಿತಿಗಳಿಗೆ ಸ್ಫೂರ್ತಿ

ಇಂಡಿ: ಗಡಿ ಭಾಗದಲ್ಲಿ ದಿ.ಧಾನಪ್ಪ ಬಗಲಿ ಸಾಹಿತ್ಯಕ್ಷೇತ್ರದಲ್ಲಿ ಸಾಕಷ್ಟು ತೊಡಗಿ ಯುವ ಸಾಹಿತಿಗಳಿಗೆ ಸ್ಫೂರ್ತಿಯಾಗಿದ್ದರು. ಅವರ ಸೌಜನ್ಯಗುಣ, ಸರಳ ನಡೆ, ನುಡಿ ಎಲ್ಲರಿಗೂ ಪ್ರೇರಣೆಯಾಗಲಿ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.

ಸಾಹಿತ್ಯ ಮತ್ತು ಸಂಸ್ಕೃತಿಕ ವೇದಿಕೆ ವಿಜಯಪೂರ ತಾಲೂಕಾ ಶಾಖೆ ಇಂಡಿ , ಚೌಡಿಹಾಳ ಗ್ರಾಮದ ಗುರುಬಸವ ಶಿಕ್ಷಣ ಸಂಕುಲ ಗಳ ಹಾಗೂ ಧಾನಿ ಈರನಗೌಡ ದಾ ಬಗಲಿ ಇವರ ಜಂಟಿ ಸಹಯೋಗದಲ್ಲಿ ಉಪನ್ಯಾಸ ಹಾಗೂ ಸಾಹಿತಿ ದಿ. ಧಾನಪ್ಪ ಬಗಲಿ ಇವರ ಕುರಿತು ಸ್ಮರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಈ ದೇಶ ಭಾಷೆಗಳ ಆಧಾರದ ಮೇಲೆ ರಚನೆಯಾಗಿದ್ದು ಕರ್ನಾಟಕ ,ಮಹಾರಾಷ್ಟç ರಾಜ್ಯಗಳ ಜೊತೆ ಅವಿನಾಭಾವ ಸಂಭAದವಿದೆ. ಲಿಂಬೆ ನಾಡಿನಲ್ಲಿ ಅತ್ಯೆಂತ ಸಣ್ಣ ಚೌವುಡಿಹಾಳ ಗ್ರಾಮದಲ್ಲಿ ತಾಯಿ ಲಲೀತಾ ದಶವಂತ ಬಣ್ಣದ ಬದುಕಿನಲ್ಲಿ ನಿರಂತರ ಸಾಗಿ ನಾಟಕ ಅಭಿನಯದ ಮೂಲಕ ತಮ್ಮ ಅಪಾರ ಸೇವೆಯನ್ನು ಪರಿಗಣಿಸಿದ ಸರಕಾರ ರಾಜ್ಯೋತ್ಸವ ನೀಡಿ ಗೌರವಿಸಿರುವು ದರಿಂದ್ದ ಇಡೀ ಜಿಲ್ಲೆ.ತಾಲೂಕು ಗ್ರಾಮಕ್ಕೆ ಸಂದಗೌರವ ಎಂದು ಪ್ರಶಂಸಿದರು.

ಇಂದು ಎರಡು ರಾಜ್ಯಗಳ ಮಧ್ಯ ತಗಾದೆ ನಡೆದಿರುವುದು ವಿಪರ್ಯಾಸ. ಅಖಂಡ ಪರಿ ಕಲ್ಪನೆ ಇದ್ದಾಗ ದೇಶ ಅಭಿವೃದ್ದಿ ಯಾಗುತ್ತದೆ. ಗಡಿ ಅಭಿವೃದ್ದಿ ಬೋರ್ಡನಿಂದ ಹೇಳಿ ಕೊಳ್ಳುವಷ್ಟು ಕೆಲಸಗಳು ಆಗಿಲ್ಲ ಆದ್ಯತೆಯ ಮೇರೆಗೆ ಸರಕಾರಗಳು ಕೆಲಸ ಮಾಡಬೇಕು. ಗಡಿ ಭಾಗದಲ್ಲಿ ಸಾಹಿತಿಕ ,ಸಂಸ್ಕೃತಿ ವೈಭವ ಸದಾ ನಡೆಲಿ ಎಂದು ಶಾಸಕ ಪಾಟೀಲ ಹಾರೈಸಿದರು.

ಮಂಜುನಾಥ ಜುನಗೊಂಡ ಮಾತನಾಡಿ ಬದುಕು ಕಲಿಸಿದ ರಸಖುಷಿ ಮಾತು ಮತಿಸಿದ ಮಹಾಕವಿ ಎಂಬ ವಿಷಯ ಮೇಲೆ ಉಪನ್ಯಾಸ ನೀಡಿ ಶೂದ್ರ ಶಂಬುಕ ಕುರಿತ ಕುವೇಂಪು ಬರೇದ ಕಥಾಮಾಲಿಕೆ ತಿಳಿಸಿ ನಂತರ ದ.ರಾ.ಬೇದ್ರೆಯವರ ಹಾಗೂ ರಾಷ್ಟç ಕವಿ ಕುವೇಂಪು ಇಬ್ಬರ ಸಾಮಿಪ್ಯ ಮನವರಿಗೆ ಮಾಡಿದ ಅವರು ಓನನ್ನ ಚೇತನ, ನೀ ಹಿಂಗ ನೋಡಬೇಡ ನನ್ನ ಎಂಬ ಕವನ ಗಳನ್ನು ರಾಗ,ಲಯ ಬದ್ದ ಹಾಡಿ ಅದರ ಅರ್ಥ ತಿಳಿಸಿ ಹಾಗೂ ಹಲಸಂಗಿ ಗೆಳೆಯರಾದ ಮಧುರ ಚೆನ್ನ, ಸಿಂಪಿಲಿ0ಗಣ್ಣ, ಧೂಲಾ ಸಾಹೇಬ ಸಾಹಿತ್ಯೆ ಕ್ಷೇತ್ರಕ್ಕೆ ನೀಡಿದ ಕೊಡುಗೆ ಬಗ್ಗೆ ಉಪನ್ಯಾಸ ನೀಡಿದರು.

*

ಲಲೀತಾ ದಶವಂತ ಬಾಲ್ಯದಿಂದ ನಾನು ಬಲ್ಲೆ. ಅಕ್ಷರ ಗೋತ್ತಿಲ್ಲದ ಒಬ್ಬ ಮಹಿಳೆ ಬಣ್ಣದ ಬದುಕಿನಲ್ಲಿ ರಾತ್ರಿ ಗೌಡತಿ, ಮಹಾರಾಣಿ, ರಾಜಕುಮಾರಿ ,ಭಿಕ್ಷಕಿ, ಅನೇಕ ದುಖ;ದ ಸನ್ನಿವೇಶ ಪಾತ್ರ ಅಭಿನಿಸುತ್ತಾ ಮುಂಜಾನೆ ನೀಜ ಬದುಕಿಗೆ ಬಂದಾಗ ಊಹಿಸಲು ಅಸಾಧ್ಯೆ ಇಷ್ಟೋಂದು ಎತ್ತರಕ್ಕೆ ಬೆಳೆಯುತ್ತಾರೆ ಎಂಬುದು ದೈವಲೀಲೆ. ಹೇಳಿ ಕೇಳಿ ಬಡವರ್ಗಕ್ಕೆ ಸೇರಿದ ಇವರು ವಯಸ್ಸು ಕ್ಷೀಣಿಸುತ್ತಾ ಬಂದಿದೆ .ಸರಕಾರ ಇಂತಹವರಿಗೆ ಸಹಾಯ ಸಹಕಾರ ಮಾಡಲಿ, ಶಾಸಕ ಯಶವಂತರಾಯಗೌಡ ಪಾಟೀಲ ಇವರು ಈ ಭಾಗದ ಬಡಜನರ ಸಾಂಸ್ಕೃತಿಕ, ಸಾಹಿತಿಕ ಕ್ಷೇತ್ರವನ್ನು ಶ್ರೀಮಂತಗೋಳಿಸುವಲ್ಲಿ ಸಾಕಷ್ಟು ಶ್ರಮಿಸುತ್ತಿದ್ದಾರೆ. ಬರುವ ಅಧಿವೇಶನದಲ್ಲಿ ಧ್ವನಿ ಎತ್ತಲಿ ಎಂದು ಮನವಿ ಮಾಡಿಕೊಂಡರು.
ಗ್ರಾ.ಪಂ ಉಪಾಧ್ಯಕ್ಷ ಕಾಮಣ್ಣಾ ದಶವಂತ

*
ಗುರುಬಸವ ಶಿಕ್ಷಣ ಸಂಸ್ಥೆ ಆಡಳಿತಾಧಿಕಾರಿ ಎ.ಎಸ್ ಪಾಟೀಲ, ಸಾ.ಸಂ ವೇದಿಕೆ ಅಧ್ಯಕ್ಷ ಡಾ.ಕಾಂತು ಇಂಡಿ ಮಾತನಾಡಿದರು.
ಗ್ರಾ.ಪಂ ಉಪಾಧ್ಯಕ್ಷ ಕಾಮಣ್ಣಾ ದಶವಂತ, ಸದಾನಂದ ಬಡಿಗೇರ, ಪತ್ರಕರ್ತರಾದ ಉಮೇಶ ಬಳಬಟ್ಟಿ , ರಾಜು ಕುಲಕರ್ಣಿ, ಜಾವೀದ ಮೋಮಿನ್, ಹಚ್ಚಪ್ಪ ತಳವಾರ, ಎಸ್.ಎಸ್ ಕೆಂಗನಾಳ,ಬಿ.ಎಸ್ ಖ್ಯಾದಿ, ಸನ್ಮಾನಿತರು ರಾಜ್ಯೋತ್ಸವ ಪ್ರಶಸ್ತೀ ವಿಚೇತೆ ಲಲಿತಾಬಾಯಿ ದಶವಂತ, ಎಂ.ಪಿ ಬಿರಾದಾರ, ಜಿ.ಜಿ ಬರಡೋಲ, ಎಚ್.ಎಂ ಬಿರಾದಾರ, ಶರಣಬಸಪ್ಪ ಕಾಬಳೆ ವೇದಿಕೆ ಯಲ್ಲಿದ್ದರು. ಉಪನ್ಯಾಸಕ ಎಸ್ .ಎಂ ಬಿರಾದಾರ ನಿರೂಪಿಸಿ, ಶಿಕ್ಷಕ ಜಿ.ಜಿ ಬರಡೋಲ ಸ್ವಾಗತಿಸಿ, ಎಸ್.ಎಸ್ ಕೆಂಗನಾಳ ವಂದಿಸಿದರು.