ರಾಜಕಾರಣಿಗಳ ಹಸ್ತಕ್ಷೇಪದಿಂದ ಮುಕ್ತವಾಗಬೇಕೆಂದು ಸಹಕಾರ ಭಾರತಿಯ ಉದ್ದೇಶ
ತಿಪಟೂರು: ಸಹಕಾರ ಸಂಘಗಳ ಬೆಳವಣಿಗೆ ಆರ್ಹ ಆಡಳಿತ ಮಂಡಳಿಯ ಸದಸ್ಯರನ್ನು ಚುನಾಯಿಸಿ ಆಯ್ಕೆ ಮಾಡುವ ಮೂಲಕ ತಮ್ಮ ಸಂಸ್ಥೆಯನ್ನು ಉನ್ನತ ಮಟ್ಟಕ್ಕೆ ಕೊಂಡೋಯ್ಯಲು ಸಹಕಾರಿ ಮುಖ್ಯ. ಎಂದು ಸಹಕಾರ ಭಾರತಿಯ ಜಿಲ್ಲಾಧ್ಯಕ್ಷ ಸುರೇಶ್ ರಾವ್ ತಿಳಿಸಿದರು.
ಕಲ್ಪತರು ಕಾಲೇಜಿನ ಆಡಿಟೋರಿಯಂನಲ್ಲಿ ಸಹಕಾರ ಭಾರತಿ ವತಿಯಿಂದ ತಿಪಟೂರು ತಾಲೂಕಿನ ಎಲ್ಲ ಪತ್ತಿನ ಸಹಕಾರ ಸಂಘಗಳು ವ್ಯವಸಾಯ ಪತ್ತಿನ ಸಹಕಾರ ಸಂಘಗಳು ಹಾಗೂ ಸೌಹಾರ್ದ ಸಹಕಾರಿಗಳ ಅಧ್ಯಕ್ಷರು ನಿರ್ದೇಶಕರು ಗಳು ಹಾಗೂ ಸಿಬ್ಬಂದಿಗಳಿಗೆ ಒಂದು ದಿನದ ಸಹಕಾರಿ ಕಾರ್ಯಗಾರ ಉದ್ಗಾಟಿಸಿ ಮಾತನಾಡಿದರು.
ಸಹಕಾರ ಸಂಘಗಳಲ್ಲಿ ಸಾಲ ವಿತರಣೆ ಮಾಡುವ ಸಂಧರ್ಭದಲ್ಲಿ ಆಡಳಿತ ಮಂಡಳಿಯ ಸದಸ್ಯರ ಒತ್ತಾಸೆಗೆ ಮಣಿಯದೆ ಮರು ಪಾವತಿ ಮಾಡುವಂತಹ ಅರ್ಹ ಸದಸ್ಯರಿಗೆ ಸಾಲ ನೀಡುವ ಜವಾಬ್ದಾರಿ ಸಂಘದ ಸಿಇಒ ಗಳ ಪಾತ್ರ ಮುಖ್ಯವಾಗಿದೆ ಎಂದರು.
ತಾಲ್ಲೂಕು ಅದ್ಯಕ್ಷ ಕೆ.ಎಮ್ ರಾಜಣ್ಣ ಮಾತನಾಡಿ ಇಡೀ ವಿಶ್ವದಲ್ಲಿರುವ ಎಲ್ಲಾ ದೇಶ ಗಳನ್ನು ಮೂರು ಭಾಗಗಳಾಗಿ ನೋಡ ಲಾಗಿದೆ. ಅಭಿವೃದ್ದಿ ಹೊಂದಿದ ದೇಶ, ಅಭಿವೃದ್ದಿ ಹೊಂದುತ್ತಿರುವ ದೇಶಗಳು, ಹಿಂದುಳಿದ ದೇಶಗಳು ಎಂದು ವಿಭಾಗ ಮಾಡಿ ದೇಶದ ಆರ್ಥಿಕತೆಯಲ್ಲಿ ಸಹಕಾರ ಕ್ಷೇತ್ರ ಬಹು ಮುಖ್ಯ ಪಾತ್ರವಹಿಸಿದೆ. ದೇಶದ ಆರ್ಥೀಕ ಬಜೆಟ್‌ಗಿಂತಲೂ ಹೆಚ್ಚು ಹಣಕಾಸಿನ ವ್ಯವಹಾರ ಸಹಕಾರ ಕ್ಷೇತ್ರದಲ್ಲಿ ನೆಡೆಯುತ್ತಿದೆ ಹಾಗೂ ಗ್ರಾಮಾಂತರ ಪ್ರದೇಶದ ಜನರು ಇಂದು ಸಹಕಾರ ಸಂಸ್ಥೆಗಳ ಮೂಲಕ ವ್ಯವ ಹಾರವನ್ನು ಮಾಡಿ ತಮ್ಮ ದೈನಂದಿನ ಜೀವನವನ್ನು ನೆಡಸಿ ತಮ್ಮ ಆರ್ಥಿಕ ಪರಿಸ್ಥಿತಿ ಯನ್ನು ಉತ್ತಮ ಪಡಿಸಿಕೊಳ್ಳುತ್ತಿ ದ್ದಾರೆ ಎಂದರು.
ಭಾರತೀಯ ರಾಷ್ಟ್ರೀಯ ಉಪಾಧ್ಯಕ್ಷರಾದ ಶ್ರೀ ಬಿ.ಹೆಚ್ ಕೃಷ್ಣ ರೆಡ್ಡಿರವರು ಸಹಕಾರ ಸಂಘಗಳ ಅಧ್ಯಕ್ಷರು ನಿರ್ದೇಶಕರು ಹಾಗೂ ಸಿಬ್ಬಂದಿಗಳ ಜವಾಬ್ದಾರಿಗಳು ಮತ್ತು ಕರ್ತವ್ಯ ಗಳು ಹಾಗೂ ಸಹಕಾರ ಸಂಘಗಳಿಗೆ ಅನ್ವಯವಾಗುವ ಪ್ರಚಲಿತ ಕಾಯ್ದೆಗಳು ವಿಷಯಗಳ ಬಗ್ಗೆ ಸಾಕಾರ ಉಪನ್ಯಾಸ ನೀಡಿದರು.
ತುಮಕೂರು ಸಹಕಾರ ಸಂಘಗಳ ಉಪನಿಬಂಧಕರು ಶ್ರೀ ವೆಂಕಟೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ವಿಜಯ್ ಸಿ.ಪಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿಗಳಾದ ಶ್ರೀ ಆಚಾರ್ಯ ಮಾಲತೇಶ್, ರಾಜ್ಯ ಸಂಘಟನಾ ಕಾರ್ಯದರ್ಶಿಗಳಾದ ಶ್ರೀ ಮಂಜು ನಾಥ, ಜಿಲ್ಲಾ ಸಮಿತಿ ಸದಸ್ಯರಾದ ಶ್ರೀ ನಿಜಗುಣ ಎಂ, ಪ್ರದಾನ ಕಾರ್ಯದರ್ಶಿ ಬೋರವೆಲ್ ಜಗದೀಶ್, ಹೆಡಗರಹಳ್ಳಿ ಮಹೇಶ್, ವಿಶಾಲ ಸೋಮಶೇಖರ್, ಚನ್ನಕೇಶವ್, ಹರ್ಷ, ಸುರೇಶ್, ಹಾಗೂ ತಾಲೂಕು ಸಮಿತಿಯ ಎಲ್ಲ ಸದಸ್ಯರುಗಳು ಕಾರ್ಯಕ್ರಮ ದಲ್ಲಿ ಪಾಲ್ಗೊಂಡಿದ್ದರು. ತಿಪಟೂರು ತಾಲೂಕಿನ ಸುಮಾರು ೬೫ ಸರ್ಕಾರ ಸಂಸ್ಥೆಗಳಿ0ದ ಅಧ್ಯಕ್ಷರು ನಿರ್ದೇಶಕ ರಗಳು ಹಾಗೂ ಮುಖ್ಯ ಕಾರ್ಯನಿರ್ವಾಹಕರು ಭಾಗವಹಿಸಿದ್ದರು.
*
ಗ್ರಾಮಾಂತರ ಪ್ರದೇಶದ ಜನರು ಇಂದು ಸಹಕಾರ ಸಂಸ್ಥೆಗಳ ಮೂಲಕ ವ್ಯವಹಾರವನ್ನು ಮಾಡಿ ತಮ್ಮ ದೈನಂದಿನ ಜೀವನವನ್ನು ನೆಡಸಿ ತಮ್ಮ ಆರ್ಥಿಕ ಪರಿಸ್ಥಿತಿಯನ್ನು ಉತ್ತಮ ಪಡಿಸಿಕೊಳ್ಳುತ್ತಿದ್ದಾರೆ.
ಕೆ.ಎಮ್ ರಾಜಣ್ಣ ಅದ್ಯಕ್ಷರು ಸಹಕಾರ ಭಾರತಿ