1976ರಲ್ಲಿ ಒಂದು ಟ್ರಕ್ನಿಂದ ಪ್ರಾರಂಭವಾಗಿ ಭಾರತದ ಅತೀ ದೊಡ್ಡ ಲಾಜಿಸ್ಟಿಕ್ಸ್ ಕಂಪನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ವಿಆರ್ಲ್ ಸಂಸ್ಥೆಯ ಮಾಲೀಕ ವಿಜಯ ಸಂಕೇಶ್ವರ ಅವರ ಸಾಹಸಮಯ ಮತ್ತು ರೋಮಾಂಚನಕಾರಿ ಕಥೆಯನ್ನು ಸಾರುವ ಈ ಚಿತ್ರದಲ್ಲಿ ಡಾ. ವಿಜಯ ಸಂಕೇಶ್ವರ ಮತ್ತು ಅವರ ಮಗ ಡಾ. ಆನಂದ ಸಂಕೇಶ್ವರ ಅವರು ನಡೆದು ಬಂದ ಹಾದಿಯ ಕಥೆ ಇದೆ.
‘ಟ್ರಂಕ್’ ಎಂಬ ಚಿತ್ರವನ್ನು ನಿರ್ದೇಶಿಸಿದ್ದ ರಿಷಿಕಾ ಶರ್ಮ, ‘ವಿಜಯಾನಂದ’ ಚಿತ್ರಕ್ಕೆ ಚಿತ್ರಕಥೆ ಬರೆಯುವುದರ ಜೊತೆಗೆ ನಿರ್ದೇಶನ ಮಾಡಿದ್ದಾರೆ. ಆ ಚಿತ್ರದಲ್ಲಿ ನಾಯಕ ನಾಗಿದ್ದ ನಿಹಾಲ್ ರಜಪೂತ್, ಈ ಚಿತ್ರದಲ್ಲಿ ಡಾ. ವಿಜಯ ಸಂಕೇಶ್ವರ ಅವರ ಪಾತ್ರದಲ್ಲಿ ಅಭಿನಯಿಸಿದ್ದು, ಮೂರು ವಯೋಮಾನ ಮತ್ತು ಶೇಡ್ಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಅನಂತ್ ನಾಗ್, ರವಿಚಂದ್ರನ್, ವಿನಯಾ ಪ್ರಸಾದ್, ಸಿರಿ ಪ್ರಹ್ಲಾದ್, ಅರ್ಚನಾ ಕೊಟ್ಟಿಗೆ, ಪ್ರಕಾಶ್ ಬೆಳವಾಡಿ, ಭರತ್ ಬೋಪಣ್ಣ, ಶೈನ್ ಶೆಟ್ಟಿ, ದಯಾಳ್ ಪದ್ಮನಾಭನ್, ರಮೇಶ್ ಭಟ್ ಮುಂತಾದ ಪ್ರತಿಭಾವಂತ ಕಲಾವಿದರು ವಿಜಯಾನಂದ ಚಿತ್ರದ ಭಾಗಗವಾಗಿದ್ದಾರೆ.
ವಿಆರ್‌ಎಲ್ ಪ್ರೊಡಕ್ಷನ್ಸ್ನಡಿ ಡಾ. ಆನಂದ ಸಂಕೇಶ್ವರ ನಿರ್ಮಿಸಿರುವ ‘ವಿಜಯಾನಂದ’ ಚಿತ್ರಕ್ಕೆ ದಕ್ಷಿಣ ಭಾರತದ ಜನಪ್ರಿಯ ಸಂಗೀತ ನಿರ್ದೇಶಕರಾದ ಗೋಪಿ ಸುಂದರ್ ಸಂಗೀತ ಸಂಯೋಜಿಸಿದ್ದು, ಕೀರ್ತನ್ ಪೂಜಾರಿ ಅವರ ಛಾಯಾಗ್ರಹಣವಿದೆ.