Friday, 13th December 2024

ಚಲನಚಿತ್ರ ಕಾಲ್ಪನಿಕವಲ್ಲ ಬದಲಿಗೆ ಸಂಕೇಸ್ವರ ಅವರ ನೈಜ ಜೀವನವನ್ನಾಧರಿಸಿದೆ

ಇಂಡಿ: ವಿಜಯಾನಂದ ಚಲನಚಿತ್ರದಲ್ಲಿ ವಿಜಯ ಸಂಕೇಶ್ವರ ಅವರು ಬಡತನವಿದ್ದರೂ ಸಾಧಿಸುವ ಗುರಿ ಇದ್ದರೆ ಏನು ಬೇಕಾ ದರೂ ಸಾಧಿಸಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಈ ಚಲನಚಿತ್ರ ಕಾಲ್ಪನಿಕವಲ್ಲ ಬದಲಿಗೆ ಸಂಕೇಸ್ವರ ಅವರ ನೈಜ ಜೀವನವನ್ನಾಧರಿಸಿದೆ ಎಂದು ಮಾಜಿ ಶಾಸಕ ಡಾ. ಸಾರ್ವಭೌಮ ಬಗಲಿ ಹೇಳಿದರು.

ಅವರು ಶುಕ್ರವಾರ ಪಟ್ಟಣದ ಮಹಾವೀರ ಚಿತ್ರಮಂದಿರದಲ್ಲಿ ವಿಜಯಾನಂದ ಚಿತ್ರಕ್ಕೆ ಚಾಲನೇ ನೀಡಿ ಮಾತನಾಡಿದರು.

ವಿಜಯ ಸಂಕೇಶ್ವರ ಅವರು ನಾನು ಶಾಸಕನಿದ್ದಾಗ ವಿಧಾನಪರಿಷತ್ ಸದಸ್ಯ ರಾಗಿದ್ದರು. ಅಲ್ಲದೆ ಒಮ್ಮೆ ಸಂಸದರೂ ಆಗಿದ್ದರು ವಾಜಪೇಯಿ ಅವರ ಆಡಳಿತದಲ್ಲಿ ಸಂಕೇಶ್ವರ ಅವರಿಗೆ ಕೇಂದ್ರ ಸಚಿವರಾಗುವಂತೆ ವಾಜಪೇಯಿ ಅವರು ತಿಳಿಸಿದಾಗ, ನಾನು ಸಂಪೂರ್ಣ ರಾಜಕಾರಣಿಯಲ್ಲ. ನಾನು ಸಚಿವ ನಾದರೆ ನಮ್ಮ ಉಧ್ಯಮಗಳನ್ನು ನೋಡಿಕೊಳ್ಳಲು ಆಗಲ್ಲ. ಹೀಗಾಗಿ ಯುವ ಸಂಸದರಾದ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಸಚಿವರನ್ನಾಗಿ ಮಾಡಿ ಎಂದು ಹೇಳಿದ್ದಾರೆ. ನಿಜವಾಗಲೂ ಬಸನಗೌಡರನ್ನು ಮಂತ್ರಿ ಮಾಡಲು ವಿಜಯ ಸಂಕೇಶ್ವರ ಅವರ ಪಾತ್ರ ಹಿರಿದಾಗಿತ್ತು ಎಂದು ತಿಳಿಸಿದ ಅವರು ಸಂಕೇಶ್ವರ ಅವರ ಜೀವನಾಧಾರಿತ ಚಲನಚಿತ್ರವನ್ನು ಯುವ ಜನಾಂಗ ನೋಡಿ ಅವರ ಆದರ್ಶ ಅಳವಡಿಸಿಕೊಳ್ಳಬೇಕೆಂದರು.

ಮಾಜಿ ಶಾಸಕ ರವಿಕಾಂತ ಪಾಟೀಲ ಮಾತನಾಡಿ, ವಿಜಯ ಸಂಕೇಶ್ವರ ಅವರು ಸ್ವತಃ ಚಾಲಕನಾಗಿ, ಪತ್ರಿಕೋಧ್ಯಮಿಯಾಗಿ, ಸಾಕಷ್ಟು ಸಾಧನೆ ಮಾಡಿದ್ದಾರೆ. ಅವರ ಚಿತ್ರವನ್ನು ಇಂದಿನ ಯುವ ಜನಾಂಗ ವೀಕ್ಷಿಸಿ, ಅವರಂತೆ ಸಾಧನೆ ಮಾಡಲು ಪ್ರೇರಣೆ ಯಾಗಲಿದೆ ಎಂದರು. ಚಾಲನೆ ನೀಡಿ ನಂತರ ಚಿತ್ರಮಂದಿರದಲ್ಲಿ ಕುಳಿತು ಚಲನಚಿತ್ರ ವೀಕ್ಷಿಸಿದರು.

ಜಿ.ಎಸ್. ಭಂಕೂರ, ಚನ್ನುಗೌಡ ಪಾಟೀಲ, ಗಿರಮಲ್ಲಗೌಡ ಬಿರಾದಾರ, ಸಿದ್ದು ಮಂಗಳೇವಾಡ, ಸೋಮಶೇಖರ ದೇವರ, ವಿಆರ್‌ಎಲ್ ನ ಚಂದ್ರಶೇಖರ ಇವಣಿ, ಪತ್ರಕರ್ತ ಉಮೇಶ ಬಳಬಟ್ಟಿ, ಸುನೀಲಗೌಡ ಬಿರಾದಾರ, ದಯಾನಂದ ಮೈದರಗಿ, ಅನೀಲಕುಮಾರ ಬಿರಾದಾರ, ರಾಘೂ ಕುಡಿಗನೂರ, ಮಲ್ಲು ಹಾವಿನಾಳಮಠ, ರಾಚು ಬಡಿಗೇರ, ಸತೀಶ ಝಂಪಾ, ಮಹೇಶ ಝಂಪಾ, ಶ್ರೀಧರ ಝಂಪಾ, ಸಿದ್ದಾರ್ಥ ಅರಳಿ, ಸಚಿನ್ ಕುಂಬಾರ, ಮಲ್ಲು ಬುರಕಲೆ, ಸಿದ್ದಾರ್ಥ ವರ್ಧಮಾನ, ಸಂತೋಷ ವರ್ಧಮಾನ, ಆನಂದ ಬಿರಾದಾರ, ಸದ್ದಾಂ ಲಾಳಸಂಗಿ ಸೇರಿದಂತೆ ಮತ್ತಿತರರು ಇದ್ದರು.