Saturday, 14th December 2024

ಅಲ್ಪಸಂಖ್ಯಾತರನ್ನು ಓಲೈಸುವ ಕಾಂಗ್ರೆಸ್ ಪಕ್ಷ ರಾಜ್ಯಕ್ಕೆ ಬೇಕಾಗಿಲ್ಲ: ಸಚಿವ ಅಶೋಕ್ ವ್ಯಂಗ್ಯ

ತುಮಕೂರು: ಅಲ್ಪಸಂಖ್ಯಾತರನ್ನು ಓಲೈಸುವ ಕಾಂಗ್ರೆಸ್ ಪಕ್ಷ ರಾಜ್ಯಕ್ಕೆ ಬೇಕಾಗಿಲ್ಲ ಎಂದು ಕಂದಾಯ ಸಚಿವ ಆರ್. ಅಶೋಕ್ ವ್ಯಂಗ್ಯವಾಡಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಗುಜರಾತ್ ಚುನಾವಣೆಯ ನಂತರ ರಾಜ್ಯದಲ್ಲಿ ಕಾಂಗ್ರೆಸ್ ಗಂಟು ಮೂಟೆ ಕಟ್ಟುವ ಪರಿಸ್ಥಿತಿಗೆ ಬಂದಿದ್ದು ಇನ್ನು ಅವರು ರಾಜ್ಯಕ್ಕೆ ಯಾವ ಕೊಡುಗೆ ನೀಡಿದ್ದಾರೆ ಇನ್ನು ಅವರ ಅವಧಿಯಲ್ಲಿ ಟಿಪ್ಪು ಭಾಗ್ಯ ನೀಡಿದ್ದು ಇನ್ನೂ ಟಿಪ್ಪು ಜಯಂತಿ ಆಚರಣೆ ವೇಳೆ ಕೊಲೆಗಳು ಆಗಿದ್ದು ಅವರ ಭಾಗ್ಯನಾ? ಎಂದು ಕಿಡಿಕಾರಿದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟಿಪ್ಪು ಸುಲ್ತಾನ್ ಎಂದರೆ ಪ್ರಾಣ ಬಿಡುತ್ತಾರೆ. ಅಲ್ಪಸಂಖ್ಯಾತರ ಮೇಲೆ ಅಷ್ಟೊಂದು ಪ್ರೀತಿ ಹೊಂದಿದ್ದಾರೆ. ಪಿ ಎಫ್ ಐ ಮೇಲೆ 1500ಕ್ಕೂ ಹೆಚ್ಚು ಕಾರ್ಯಕರ್ತರನ್ನ ಅವರು ಬೀದಿಗೆ ಬಿಟ್ಟಿದ್ದು ಅವರನ್ನು ನಮ್ಮ ಸರಕಾರ ಬ್ಯಾನ್ ಮಾಡಿದೆ ಆದರೆ ಕಾಂಗ್ರೆಸ್ ಸರಕಾರ ಅವರೆಲ್ಲರನ್ನ ಗಲಾಟೆ ಮಾಡಲೆಂದೆ ಲೈಸೆನ್ಸ್ ಕೊಟ್ಟು ನಿಲ್ಲಿಸಿದೆ ಎಂದರು
ಗುಜರಾತ್ ನಲ್ಲಿ ಕಾಂಗ್ರೆಸ್ ಪಕ್ಷ ವಿರೋಧಪಕ್ಷದ ಸ್ಥಾನವು ಪಡೆದುಕೊಳ್ಳುವುದಕ್ಕೆ ಯೋಗ್ಯತೆ ಇಲ್ಲದಂತಾಗಿದೆ ಅದೇ ರೀತಿ ರಾಜ್ಯ ದಲ್ಲೂ ಸಹ ಕಾಂಗ್ರೆಸ್ ಪಕ್ಷ ಶೇಕಡ 20ರಷ್ಟು ಸಹ ಸ್ಥಾನ ಗೆಲ್ಲದೆ ರಾಜ್ಯದಲ್ಲೂ ಕಾಂಗ್ರೆಸ್ ಪಕ್ಷ ತೊಳೆದು ಹೋಗಲಿದೆ. ಗುಜರಾತ್ ನಲ್ಲಿ ಅಮ್ ಆದ್ಮಿ ಪಾರ್ಟಿ ಹೇಗೆ ಸರ್ಫ್ ಹಾಗೂ ನಿರ್ಮಾ ಪುಡಿ ಹಾಕಿ ಕಾಂಗ್ರೆಸ್ನನ್ನು ತೊಳೆದು ಹಾಕಿದ್ದಾರೋ ಅದೇ ರೀತಿ ರಾಜ್ಯ ದಲ್ಲೂ ಸಹ ಅಮ್ ಆದ್ಮಿ ಪಕ್ಷವೇ ಕಾಂಗ್ರೆಸ್ ಪಕ್ಷವನ್ನು ತೊಳೆಯಲಿದೆ ಎಂದರು.
ಇದೇ ತಿಂಗಳಿನಿಂದ ಪ್ರತಿ 15 ದಿನಕ್ಕೊಮ್ಮೆ ಪ್ರಧಾನಿ ನರೇಂದ್ರ ಮೋದಿ ರವರು ಭೇಟಿ ನೀಡಲಿದ್ದು ಇದರೊಂದಿಗೆ ತಿಂಗಳಿಗೆ ನಾಲ್ಕು ಬಾರಿ ಅಮಿತ್ ಶಾ   ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. ಆ ಸಂದರ್ಭದಲ್ಲಿ ರಾಜ್ಯದಲ್ಲಿ ಚುನಾವಣೆಗೆ ಸಂಬಂಧಿಸಿದಂತೆ ಯಾವ ರೀತಿಯ ಸ್ಟ್ರಾಟಜೀ ಮಾಡಬೇಕು ಎಂದು ತೀರ್ಮಾನವನ್ನು ರಾಷ್ಟ್ರ ಹಾಗೂ ರಾಜ್ಯದ ನಾಯಕರು ಕೈಗೊಳ್ಳಲಿದ್ದಾರೆ ಎಂದರು.