ಪಕ್ಷಿ – ರಕ್ಷ
ಎಲ್.ಪಿ.ಕುಲಕರ್ಣಿ
kulkarnilp007@gmail.com
ಆಕಾಶದಲ್ಲಿ ಹಾರಾಡುವ ಈ ಹದ್ದುಗಳ ದೃಷ್ಟಿ ತುಂಬಾ ತೀಕ್ಷ್ಣವಾಗಿರುತ್ತದೆಂದು ಸಾಬೀತಾಗಿದೆ. 8 ಮೆಗಾ ಪಿಕ್ಸಲ್ ಕ್ಲ್ಯಾರಿಟಿ ಯಿಂದ ಕೂಡಿರುವ ಈ ಹದ್ದುಗಳ ಕಣ್ಣುಗಳು, ಮನುಷ್ಯನ ದೃಷ್ಟಿ ಸಾಮರ್ಥ್ಯಕ್ಕಿಂತ ದೂರದಲ್ಲಿರುವ ವಸ್ತು ವನ್ನು ಗುರುತಿಸ ಬಲ್ಲವು. ಆಕಾಶದಲ್ಲಿ ಹಾರಿಬರುವ ಇಂತಹ ಡ್ರೋನ್ಗಳನ್ನು ಹದ್ದು ಗುರುತಿಸಿ ಅವುಗಳಿಗೆ ಅಳವಡಿಸಿದ ವೈಜ್ಞಾನಿಕ ಉಪಕರಣ ಗಳಿಂದ ಭೂಮಿಗೆ ಹಿಡಿದುತರುತ್ತವೆ.
ಅದು, 2015 ರ ಸೆಪ್ಟಂಬರ್. 63000 ಪ್ರೇಕ್ಷಕರನ್ನೊಳಗೊಂಡ ಕೆಂಟುಕಿ ವಿಶ್ವವಿದ್ಯಾಲಯದ ಫುಟ್ಬಾಲ್ ಕ್ರೀಡಾಂಗಣದಲ್ಲಿ ಫುಟ್ಬಾಲ್ ಪಂದ್ಯ ನಡೆದಿತ್ತು. ಆಟದ ಮಧ್ಯದಲ್ಲಿ ಎಲ್ಲಿಂದಲೋ ಹಾರಿ ಬಂದ ಡ್ರೋನ್ ಒಂದು ಅಲ್ಲಿನ ಕಂಬಕ್ಕೆ ಬಡಿದಿತ್ತು. ಇದೇ ತಿಂಗಳು ನ್ಯೂಯಾರ್ಕ್ ಸಿಟಿಯಲ್ಲಿ ನಡೆಯುತ್ತಿದ್ದ ಯುಎಸ್ ಓಪನ್ ಟೆನ್ನಿಸ್ ಪಂದ್ಯಾವಳಿಯ ಮಧ್ಯದಲ್ಲಿ ಶಿಕ್ಷಕ ನೊಬ್ಬನು ಡ್ರೋನ್ ಹಾರಿಸಿದ್ದರ ಪರಿಣಾಮವಾಗಿ ಆತನನ್ನು ಬಂಧಿಸ ಲಾಗಿತ್ತು.
2021 ರ ಆಗಸ್ಟನ್ನಲ್ಲಿ ಭಾರತದ ಕಲನೂರಿನ ಸುತ್ತಲ ಪ್ರದೇಶಗಳಲ್ಲಿ ಈ ಡ್ರೋನ್ಗಳು ಹಾರಾಟ ನಡೆಸಿ ಸ್ಫೋಟಗೊಂಡಿದ್ದ ಸುದ್ದಿ ಅಲ್ಲಿನ ಜನರ ನಿದ್ದೆಗೆಡಿಸಿತ್ತು. 2022 ರ ಆರಂಭ ದಲ್ಲಿ ಅಬುದಾಬಿಯ ಸಮೀಪ ಇರುವ ತೈಲ ಸಂಗ್ರಹಾರಗಳ ಮೇಲೆ ಹಾರಿ ಬಂದ ಡ್ರೋನ್ ಗಳು ಸ್ಫೋಟಗೊಂಡ ಪರಿಣಾಮವಾಗಿ ೬ ಜನ ಸ್ಥಳದ ಮೃತರಾಗಿ ಅದೆಷ್ಟೋ ಜನ ಗಾಯ ಗೊಂಡಿದ್ದರು. ಇದೇ ವರ್ಷ ಫೆಬ್ರವರಿಯಲ್ಲಿ ಜಮ್ಮು-ಕಾಶ್ಮೀರ ರಾಷ್ಟ್ರೀಯ ಗಡಿ ರೇಖೆಯ ಸಮೀಪ ಲಷ್ಕರ್-ಐ-ತೈಯಬಾ ಉಗ್ರಸಂಘಟನೆ ಡ್ರೋನ್ ದಾಳಿ ಮಡೆಸಿದ್ದನ್ನು ಅಲ್ಲಿನ ಪೊಲೀಸರು ಪತ್ತೆ ಹಚ್ಚಿದ್ದರು. ಇಂತಹ ಘಟನೆಗಳನ್ನು ಹೇಳುತ್ತಾ ಹೊರಟರೆ ಒಂದೆ ಎರಡೇ, ಹೀಗೆ ಇತ್ತೀಚೆಗೆ ಈ ಡ್ರೋನ್ಗಳ ಮೂಲಕ ಬಾಂಬ್ಗಳನ್ನು ಸಾಗಿಸಿ ವಿಧ್ವಂಸಕ ಕೃತ್ಯಗಳನ್ನು ಎಸಗಲು ಉಗ್ರರು ಸಜ್ಜಾಗಿದ್ದಾರೆ.
ನೆರೆಯ ಅಪಾಯಕಾರಿ ರಾಷ್ಟ್ರಗಳಾದ ಪಾಕಿಸ್ತಾನ, ಚೀನಾ ಇವುಗಳು ನಮ್ಮ ದೇಶದ ಪಂಜಾಬ್ ಮತ್ತು ಜಮ್ಮು-ಕಾಶ್ಮೀರಗಳ ಮೇಲೆ ಡ್ರೋನ್ಗಳ ದಾಳಿ ನಡೆಸುತ್ತಿರುವುದು ಅತಿಯಾಗಿದೆ. ಇಂತಹ ಕುಕೃತ್ಯಗಳಿಗೆ ಕಡಿವಾಣ ಹಾಕಲು ಭಾರತೀಯ ಸೇನೆ ವೈರಿ ಪಡೆಯ ಡ್ರೋನ್ಗಳನ್ನು ಪತ್ತೆ ಹಚ್ಚಿ ಹೊಡೆದುರುಳಿಸಲು ಹದ್ದು, ರಣಹದ್ದುಗಳನ್ನು ಬಳಸಲು ಸಜ್ಜಾಗಿದೆ. ವಿಶೇಷವಾಗಿ
ನಮ್ಮ ಸೇನೆ ಹದ್ದುಗಳಿಗೆ ಈ ನಿಟ್ಟಿನಲ್ಲಿ ತರಬೇತಿಯನ್ನೂ ಸಹ ಕೊಡುತ್ತಿದೆ. ವೈರಿ ರಾಷ್ಟ್ರಗಳಿಂದ ಹಾರಿಬರುವ ಈ ಡ್ರೋನ್ ಗಳನ್ನು ತರಬೇತಿ ಪಡೆದ ಈ ಹದ್ದುಗಳು ನಿಯಂತ್ರಿಸಲಿವೆ. ಧ್ವಂಸಗೊಳಿಸಲಿವೆ.
ಪಾಕಿಸ್ತಾನದ ಡ್ರೋನ್ಗಳು ಇತ್ತೀಚೆಗೆ ಭಾರತದ ಜಮ್ಮು-ಕಾಶ್ಮೀರ ಮತ್ತು ಪಂಜಾಬ್ಗಳಿಗೆ ಅಕ್ರಮವಾಗಿ ಮದ್ದು-ಗುಂಡುಗಳು, ಬಂದೂಕುಗಳು, ನಗದು ರವಾನೆಯಂತಹ ಅಪಾಯಕಾರಿ ಕಾರ್ಯದಲ್ಲಿ ತೊಡಗಿವೆ. ದೇಶದ ಗಡಿ ಭಾಗಗಳನ್ನು ಇಂತಹ ಡ್ರೋನ್
ಗಳು ಆಗಾಗ ಪತ್ತೆಯಾಗುತ್ತಿರುವ ಸುದ್ದಿಗಳು ಕೇಳಿ ಬರುತ್ತಲೇ ಇವೆ. ಕಾರಣ ಈಗ ಗಡಿ ಪ್ರದೇಶಗಳಲ್ಲಿ ಶತ್ರುಗಳ ಡ್ರೋನ್ ದಾಳಿ ಗಳನ್ನು ನಿಯಂತ್ರಿಸಿ, ಅವರನ್ನು ಮಟ್ಟ ಹಾಕಲು ಪಕ್ಷಿಗಳ ಬಳಕೆಗೆ ಒತ್ತು ಕೊಡಲಾಗಿದೆ.
ಸೇನೆ ಇಲ್ಲವೇ ಪೊಲೀಸ್ ತನ್ನ ಕಾರ್ಯಾಚರಣೆಯ ಭಾಗವಾಗಿ ನಾಯಿಯಂತಹ ಸೂಕ್ಷ್ಮಗ್ರಾಹಿ ಪ್ರಾಣಿಗಳಿಗೆ ತರಬೇತಿ ನೀಡಿ ಅವುಗಳನ್ನು ಸಜ್ಜುಗೊಳಿಸುವುದು ಇದೇ ಮೊದಲೇನಲ್ಲ. 2016 ರಿಂದ ಡಚ್ ಪೊಲೀಸರು ಡ್ರೋನ್ ಗಳನ್ನು ಕೆಳಗಿಳಿಸಲು ತರಬೇತಿ ನೀಡಲಾದ ಹದ್ದುಗಳನ್ನು ಬಳಸುತ್ತಿದ್ದಾರೆ. ಲ್ಯಾಬ್ಮೆಟ್ ವರದಿಯ ಪ್ರಕಾರ, ಡಚ್ ಪೊಲೀಸರು ವೈರಿ ಪಡೆಯ ಡ್ರೋನ್ ಗಳ ಬೇಟೆಗಾಗಿ ಗಾರ್ಡ್ಸ್ ಫ್ರಮ್ ಎಬೋವ್ ತರಬೇತಿ ತಂಡದ ಸಹಭಾಗಿತ್ವದಲ್ಲಿ, ಹಾರುವ ಡ್ರೋನ್ಗಳ ಬೇಟೆ ಗುರುತಿಸಿ, ಅವುಗಳನ್ನು ನಿಷ್ಕ್ರೀಯಗೊಳಿಸಲು ಹದ್ದುಗಳಿಗೆ ತರಬೇತಿ ನೀಡಿದರು. ತರಬೇತಿ ಪಡೆದ ಈ ಹದ್ದುಗಳು ಅಪಾಯಕಾರಿ ಸಂದರ್ಭ ಗಳನ್ನು ಚುರುಕಾಗಿ ನಿರ್ವಹಿಸಿವೆ.
ಅಲ್ಲದೇ, ಲಂಡನ್ನಿನ ಮೆಟ್ರೊಪೊಲಿಟನ್ ಪೊಲೀಸರೂ ಕೂಡ ಶತ್ರು ಡ್ರೋನ್ಗಳ ಪತ್ತೆಗೆ ತರಬೇತಿ ಪಡೆದ ಹದ್ದುಗಳನ್ನು ಬಳಸುತ್ತಿದ್ದಾರೆ. ಉತ್ತರ ಪ್ರದೇಶದ ಮೀರತ್ನಲ್ಲಿ ರಿಮೌಂಟ್ ವೆಟರ್ನರಿ ಕಾ ಕೇಂದ್ರವು ಆಕಾಶದಲ್ಲಿ ಕ್ವಾಡ್ ಕಾಪ್ಟರ್ಗಳನ್ನು ಹೊಡೆದುರುಳಿಸಲು ಬ್ಲ್ಯಾಕ್ ಹದ್ದುಗಳು ಮತ್ತು ಗಿಡುಗಗಳಿಗೆ ತರಬೇತಿ ನೀಡುತ್ತಿದೆ. ಕ್ವಾಡ್ ಕಾಪ್ಟರ್ ಒಂದು ರೀತಿಯ
ಹೆಲಿಕಾಪ್ಟರ್ ಆಗಿದ್ದು ಅದಕ್ಕೆ ನಾಲ್ಕು ರೋಟರ್ ಗಳಿರುತ್ತವೆ. ಸದ್ಯ, ಪುಟ್ಟ ಮಾನವರಹಿತ ವೈಮಾನಿಕ ವಾಹನಗಳಿಗೆ (ಯುಎವಿ) ಜನಪ್ರಿಯ ವಿನ್ಯಾಸವಾಗಿದ್ದು ಇದನ್ನು ಡ್ರೋನ್ಗಳು ಎಂದು ಕರೆಯಲಾಗುತ್ತಿದೆ.
ಭಾರತೀಯ ಸೇನೆಯಿಂದ ತರಬೇತಿ ಪಡೆದ ಅರ್ಜುನ್ ಹೆಸರಿನ ಬ್ಲ್ಯಾಕ್ ಹದ್ದುಗಳು ಈ ಕ್ವಾಡ್ ಕಾಪ್ಟರ್ಗಳನ್ನು ಕೆಳಗಿಳಿಸಿದ್ದ ಲ್ಲದೇ ಕೆಲವನ್ನು ನಾಶಗೊಳಿಸಿದ್ದೂ ಇದೆ. ಇತ್ತೀಚೆಗೆ ಡ್ರೋನ್ಗಳನ್ನು, ಸೋಟಕಗಳನ್ನು ಪತ್ತೆ ಹಚ್ಚುವ ಕಾರ್ಯಾಚರಣೆಗಳಲ್ಲಿ ವಿಶೇಷ ತರಬೇತಿ ಪಡೆದ ನಾಯಿ ಹಾಗೂ ಹದ್ದು ಎರಡನ್ನೂ ಬಳಸಲಾಗುತ್ತಿದೆ. ಹದ್ದುಗಳಂತಹ ಪಕ್ಷಿಗಳನ್ನೇ ಏಕೆ ಡ್ರೋನ್ಗಳ ಪತ್ತೆಗೆ ಬಳಸುತ್ತಾರೆಂದು ಕೇಳಬಹುದು. ಇದಕ್ಕೆ ಕಾರಣವೂ ಇದೆ.
ದೂರದ ಆಕಾಶದಲ್ಲಿ ಸ್ವಚ್ಛಂದವಾಗಿ ಹಾರಾಡುವ ಈ ಹದ್ದುಗಳ ದೃಷ್ಟಿ ತುಂಬಾ ತೀಕ್ಷ್ಣವಾಗಿರುತ್ತದೆಂದು ವೈಜ್ಞಾನಿಕವಾಗಿ ಸಾಬೀತಾಗಿದೆ. 8 ಮೆಗಾ ಪಿಕ್ಸಲ್ ಕ್ಲ್ಯಾರಿಟಿಯಿಂದ ಕೂಡಿರುವ ಈ ಹದ್ದುಗಳ ಕಣ್ಣುಗಳು, ಮನುಷ್ಯನ ದೃಷ್ಟಿ ಸಾಮರ್ಥ್ಯಕ್ಕಿಂತ 8 ಪಟ್ಟು ಹೆಚ್ಚಿನ ದೂರದಲ್ಲಿರುವ ವಸ್ತುವನ್ನು ಗುರುತಿಸಬಲ್ಲವು. ಅದಕ್ಕೆಂದೇ ಆಕಾಶದಲ್ಲಿ ಹಾರಿಬರುವ ಇಂತಹ ಡ್ರೋನ್
ಗಳನ್ನು ಹದ್ದು ಗುರುತಿಸಿ ಅವುಗಳಿಗೆ ಅಳವಡಿಸಿದ ವೈeನಿಕ ಉಪಕರಣಗಳಿಂದ ಭೂಮಿಗೆ ಹಿಡಿದುತರುತ್ತವೆ.
ಇಲ್ಲವೇ ಸ್ಫೋಟಿಸುತ್ತವೆ. ಹೀಗಾಗೇ ನಮ್ಮ ಹಿರಿಯರು ಚುರುಕಾದ ದೃಷ್ಟಿ ಹೊಂದಿರುವವರನ್ನು ಕಂಡು ‘ಹದ್ದಿನ ಕಣ್ಣು’ ಎಂದಿದ್ದು. ನವೆಂಬರ್-2022 ರಲ್ಲಿ ಉತ್ತರಾಖಂಡದ ಔಲಿಯದಲ್ಲಿ ನಡೆದ ಭಾರತ-ಅಮೆರಿಕ ಸೈನಿಕರ ಜಂಟಿ ಸಮರ ತರಬೇತಿ ಯಾದ ‘ಯುದ್ಧ ಅಭ್ಯಾಸ’ದಲ್ಲಿ ಭಾರತೀಯ ಸೇನೆಯು ಡ್ರೋನ್ಗಳನ್ನು ಹೊಡೆದುರುಳಿಸುವ ‘ಅರ್ಜುನ್’ ಹೆಸರಿನ ಕಪ್ಪು ಬಣ್ಣದ ಹದ್ದನ್ನು ಪ್ರದರ್ಶಿಸಿದ್ದು ವಿಶೇಷವಾಗಿತ್ತು.
ನ್ಯಾಚುರಲ್ ಸ್ಕ್ಯಾವೆಂಜರ್ಸ್ ನೈಸರ್ಗಿಕ ಸ್ವಚ್ಛಕಾರಕಗಳು ಎಂದು ಹದ್ದುಗಳನ್ನು ಕರೆಯಲಾಗುತ್ತಿದೆ. ಕಾರಣ, ಸತ್ತ ಜೀವಿಗಳನ್ನು ಇವು ದೂರದಿಂದಲೇ ಗುರುತಿಸಿ ಹೊತ್ತೊಯ್ದು ತಿಂದು ಪರಿಸರವನ್ನು ಸ್ವಚ್ಛವಾಗಿಡುತ್ತವೆ. ಹೊಲಗದ್ದೆಗಳಲ್ಲಿ ಬೆಳೆಗಳನ್ನು
ನಾಶಮಾಡುವ ಕ್ರಿಮಿ ಕೀಟಗಳನ್ನೂ ಸಹ ಈ ಹದ್ದು ತಿಂದು ರೈತನಮಿತ್ರ ಎನಿಸಿದೆ. ಹೀಗೆ ನೇರವಾಗಿ ಇಲ್ಲವೇ ಪರೋಕ್ಷವಾಗಿ ಮನುಷ್ಯನಿಗೆ ಸಹಾಯಮಾಡುತ್ತಿರುವ ಈ ಹದ್ದುಗಳು ನಶಿಸುತ್ತಿವೆ. ಅಂದರೆ, ಭಾರತದಲ್ಲಿ 1990 ರಿಂದ ಇತ್ತೀಚೆಗೆ ಶೇ.90 ರಷ್ಟು ರಣಹದ್ದುಗಳು ಕಡಿಮೆಯಾಗಿವೆ.
ಇದಕ್ಕೆ ಪ್ರಮುಖ ಕಾರಣ ನಾವು ದನಕರುಗಳ ನೋವು ನಿವಾರಕಗಳಾಗಿ ಬಳಸುತ್ತಿರುವ ಡೈಕ್ಲೋಫಿನಾಕ್ ಕೆಮಿಕಲ್ಗಳು. ಸತ್ತ ಜಾನುವಾರಗಳ ದೇಹದಲ್ಲಿ ಈ ಡೈಕ್ಲೋಫಿನಾಕ್ ಅಂಶ ಕಂಡುಬಂದರೆ, ಇದನ್ನು ತಿಂದ ಹದ್ದುಗಳು ಕೇವಲ 72 ಗಂಟೆಗಳಲ್ಲಿ
ಸಾವನ್ನಪ್ಪುತ್ತವೆ ಎಂದು ಹೇಳುತ್ತಿದ್ದಾರೆ ತಜ್ಞರು. ಜಗತ್ತಿನಲ್ಲಿ ೭೩ ವಿಧವಾದ ಹಾಗೂ ಭಾರತದಲ್ಲಿ ೯ ವಿಧವಾದ ರಣಹದ್ದುಗಳು ಕಂಡು ಬರುತ್ತವೆ. ದಕ್ಷಿಣ ಭಾರತದಲ್ಲಿ ರಣಹದ್ದು( ಇವು ೭ ರಿಂದ ೮ ಅಡಿ ಇರುತ್ತವೆ), ಲಾಂಗ್ ಬಿಲ್ಡ್ ವಲ್ಚರ್ (ರಾಮ ನಗರದಲ್ಲಿ ಕಂಡುಬರುತ್ತವೆ), ವೈಟ್ ಬ್ಯಾಕ್ಡ್ ವಲ್ಚರ್ ಹಾಗೂ ಈಜಿಪ್ಟಿಯನ್ ರಣಹದ್ದುಗಳು ಎಂಬ ನಾಲ್ಕು ವಿಧವಾದ ರಣಹದ್ದುಗಳು
ಕಂಡು ಬರುತ್ತವೆ. ಇದರ ಜತೆಗೆ ಇವುಗಳು ವರ್ಷಕ್ಕೆ ಒಂದೇ ಮೊಟ್ಟೆ ಇಡುವುದರಿಂದ ಇವುಗಳ ಸಂತತಿ ನಾಶವಾಗಲು ಕಾರಣ ವಾಗಿದೆ ಎನ್ನುತ್ತಾರೆ ಪ್ರಾಣಿ ಜೀವ ಶಾಸ್ತ್ರಜ್ಞರು.
೨೦೦೬ರಲ್ಲಿ ಈ ಡೈಕ್ಲೊ-ನಾಕ್ ಔಷಧವನ್ನು ಜಾನುವಾರುಗಳ ಚಿಕಿತ್ಸೆಗೆ ಬಳಸುವುದನ್ನು ಭಾರತದಾದ್ಯಂತ ನಿಷೇಧಿಸಲಾಯಿತು. ಇದರಿಂದಾಗಿ ಸಾವಿನ ಪ್ರಮಾಣ ಕಡಿಮೆ ಆಯಿತಾದರೂ, ಈ ಹಕ್ಕಿಗೆ ಮಾರಕವಾಗಿರುವ ಅಸೆಕ್ಲೊ-ನಾಕ್, ನಿಮೆಸ್ಯುಲಿಡ್,
ಕೆಟೊಪೊ-ನ್ ಮತ್ತು -ನಿಕ್ಸಿನ್ ಎನ್ನುವ ಔಷಧಗಳು ಈಗಲೂ ವ್ಯಾಪಕ ಬಳಕೆಯಲ್ಲಿವೆ. ಇದರಿಂದಾಗಿ ರಣಹದ್ದುಗಳ ಸಂತತಿಗೆ ಅಪಾಯ ಇನ್ನೂ ಕಡಿಮೆ ಆಗಿಲ್ಲ.
ಇದನ್ನೆ ಮನಗಂಡ ಭಾರತ ಸರಕಾರ, ಉತ್ತರ ಪ್ರದೇಶ, ಮಧ್ಯಪ್ರದೇಶ, ತಮಿಳುನಾಡು, ಮಹಾರಾಷ್ಟ್ರ, ಕರ್ನಾಟಕ ರಾಜ್ಯಗಳಲ್ಲಿ ಜಟಾಯು ಯೋಜನೆಯನ್ನು (ವಲ್ಚರ್ ಸೇಫ್ ಝೋನ್) ಕೈಗೊಂಡಿದೆ. ಈ ಯೋಜನೆಯ ಪ್ರಮುಖ ಉದ್ದೇಶ ಅಪಾಯದ ಅಂಚಿನಲ್ಲಿರುವ ಹದ್ದುಗಳ ರಕ್ಷಣೆ ಮತ್ತು ಅವುಗಳ ಸಂತತಿಯನ್ನು ಬೆಳೆಸುವುದು. ನಾಗರಹೊಳೆ ಬಂಡೀಪುರಗಳನ್ನೇ ಮೊದಲು ಮಾಡಿಕೊಂಡು ಪ್ರಪಂಚದ ಎಲ್ಲ ರಕ್ಷಿತ ಅರಣ್ಯ ಪ್ರದೇಶಗಳಲ್ಲಿ ಇಂತಹ ಪಕ್ಷಿಗಳು ಸಂಕಷ್ಟಕ್ಕೆ ಸಿಲುಕಿದಾಗ ಅವುಗಳ ಚಿತ್ರೀಕರಣಗಳನ್ನು ಮಾಡುವುದನ್ನು ನಿಲ್ಲಿಸಿ ಅವುಗಳನ್ನು ರಕ್ಷಿಸಬೇಕು.
ಅಂದಾಗ ಮಾತ್ರ ಹದ್ದುಗಳ ಸಂತತಿಯನ್ನು ಉಳಿಸಬಹುದು. ಇದಕ್ಕೆಂದೇ ಹದ್ದುಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಪ್ರತೀ ವರ್ಷ ಸೆಪ್ಟಂಬರ್ ತಿಂಗಳ ಮೊದಲ ಶನಿವಾರವನ್ನು ‘ವಲ್ಚರ್ ಅವೇರ್ನೆಸ್ ಡೇ’ (ಅಂತಾರಾಷ್ಟ್ರೀಯ ರಣಹದ್ದು ಅರಿವು
ದಿನ) ಆಚರಿಸಲಾಗುತ್ತಿದೆ.