Friday, 13th December 2024

ಬಹುಭಾಷಾ ನಟ ಶರತ್‍ಕುಮಾರ್ ಆರೋಗ್ಯದಲ್ಲಿ ಏರುಪೇರು

ಚೆನ್ನೈ: ಬಹುಭಾಷಾ ನಟ ಶರತ್‍ಕುಮಾರ್ ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ಚಿಕಿತ್ಸೆಗಾಗಿ ಚೆನ್ನೈನ ಪ್ರತಿಷ್ಠಿತ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಶರತ್‍ಕುಮಾರ್ ಅವರು ಡಯೇರಿಯಾದಿಂದ ಡಿಹೈ ಡ್ರೇಷನ್‍ನಿಂದ ಬಳಲುತ್ತಿದ್ದು ಅವರಿಗೆ ಚೆನ್ನೈನ ಅಪೊಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಪತ್ನಿ ರಾಧಿಕಾ ಶರತ್‍ ಕುಮಾರ್ ಹಾಗೂ ನಟಿ, ಪುತ್ರಿ ವರಲಕ್ಷ್ಮಿ ಅವರು ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ.

ಶರತ್‍ಕುಮಾರ್ ಅವರು ನಾಡಿಗರ್ ಸಂಘದ ಎಂಬ ರಾಜಕೀಯ ಪಕ್ಷದ ಅಧ್ಯಕ್ಷ ರಾಗಿ ಚುನಾವಣೆ ಎದುರಿಸಿದ್ದಾರೆ. ಅಭಿನಯ ದಿಂದಲೇ ಗಮನ ಸೆಳೆದಿರುವ ಶರತ್‍ಕುಮಾರ್ ಅವರು 130ಕ್ಕೂ ಚಿತ್ರಗಳಲ್ಲಿ ನಟಿಸಿದ್ದು, ಗಾಯಕ ಹಾಗೂ ನಿರ್ಮಾಪಕ, ನಿರೂಪಕರಾ ಗಿಯೂ ಗಮನ ಸೆಳೆದಿದ್ದಾರೆ.

ದರ್ಶನ್ ಅಭಿನಯದ ಸಾರಥಿ’ ಚಿತ್ರದ ಮೂಲಕ ಸ್ಯಾಂಡಲ್‍ವುಡ್‍ಗೆ ಎಂಟ್ರಿ ಕೊಟ್ಟ ಶರತ್‍ಕುಮಾರ್ ಮೈನಾ, ರಾಜಕುಮಾರ, ಜೇಮ್ಸ್, ಸಂತೆಯಲ್ಲಿ ನಿಂತ ಕಬೀರ, ಸೀತಾರಾಮ ಕಲ್ಯಾಣ ಚಿತ್ರಗಳಲ್ಲಿ ನಟಿಸಿದ್ದಾರೆ.