ತುಮಕೂರು: ಮಂಗಳೂರು ಕುಕ್ಕರ್ ಸ್ಫೋಟ ವಿಷಯದಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿ ಬೇಜವಾಬ್ದಾರಿ ಹೇಳಿಕೆ ನೀಡಿರುವ ಡಿ.ಕೆ.ಶಿವ ಕುಮಾರ್ ವಿರುದ್ಧ ರಾಜ್ಯದ ಜನರೇ ಕ್ರಮ ಜರುಗಿಸುತ್ತಾರೆ, ಕಾಂಗ್ರೆಸ್‌ನವರಿಗೆ ಜನರ ನೆಮ್ಮದಿಗಿಂತಲೂ ಅವರ ಕುರ್ಚಿ ಮುಖ್ಯ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕು ಮಾರ್ ನೀಡಿರುವ ಹೇಳಿಕೆ ನಿರೀಕ್ಷಿತವಾ ಗಿದ್ದು, ಅಲ್ಪಸಂಖ್ಯಾತರ ತುಷ್ಟಿಕರಣದ ಮಾಡುವುದನ್ನು ಕಾಂಗ್ರೆಸ್ ಮೊದಲಿನಿಂದಲೂ ಮಾಡಿಕೊಂಡು ಬಂದಿದೆ ಎಂದರು.
ಡಿಕೆಶಿ ಹಾಗೂ ಕಾಂಗ್ರೆಸ್ ದೇಶದಲ್ಲಿ ಇದನ್ನೇ ಮಾಡಿಕೊಂಡು ಬಂದಿದ್ದಾರೆ, ಅಲ್ಪ ಸಂಖ್ಯಾತರನ್ನು ಓಲೈಸಿಕೊಂಡು ಅವರ ಮತ ಪಡೆಯುವುದೇ ಅವರ ಗುರಿ ಎಂದು ದೂರಿದರು.
ಮಂಗಳೂರಿನಲ್ಲಿ ಸಿಕ್ಕಿಬಿದ್ದರುವ ಆರೋಪ ಈ ಹಿಂದೆಯೂ ಹಲವು ಪ್ರಕರಣದಲ್ಲಿ ಆರೋಪಿಯಾಗಿದ್ದಾರೆ, ಜಾಮೀನಿನ ಮೇಲೆ ಹೊರಗೆ ಬಂದಿದ್ದವನು ಶಿವಮೊಗ್ಗ ಸ್ಫೋಟ ದಲ್ಲಿಯೂ ಭಾಗಿಯಾಗಿದ್ದಾನೆ, ದಾಳಿಯ ಸಂದರ್ಭದಲ್ಲಿ ಅವರ ಮನೆಯಲ್ಲಿ ಬಾಂಬ್ ತಯಾರಿಸುವ ವಸ್ತುಗಳು ಸಿಕ್ಕಿವೆ ಎಂದರು.
ಆರೋಪಿಗೆ ಭಯೋತ್ಪಾದಕರ ಜತೆ ಇರುವ ನಂಟಿನ ಬಗ್ಗೆ ಡಿಜಿಪಿ ಮಾಡಿರುವ ಟ್ವಿಟ್ ಸತ್ಯವಾಗಿದೆ ಅದರ ಬಗ್ಗೆ ಮಾತನಾಡಿರುವ ಡಿ.ಕೆ.ಶಿವಕುಮಾರ್ ಆರೋಪಿಯ ಪರವಾಗಿದ್ದು ಕೀಳುಮಟ್ಟದ ರಾಜಕೀಯಕ್ಕೆ ಮುಂದಾಗಿದ್ದಾರೆ ಎಂದು ಹರಿಹಾಯ್ದರು.