ನಂಜನಗೂಡು ಪ್ರದ್ಯುಮ್ನ
ಶ್ರೀಮಂತರ ಮನೆಯಲ್ಲಿ ಹುಟ್ಟಿದವರು ಎಂದಾಕ್ಷಣ ಅವರಿಗೇನು ಬಿಡಿ, ಮೈತುಂಬ ಕೊಬ್ಬು, ದುರಹಂಕಾರ ಎಂದು ಕೊಂಡು ಬಿಡುತ್ತೇವೆ. ಆದರೆ, ಈ ವ್ಯಕ್ತಿ ಹಾಗಲ್ಲ. ಸರಳ, ಸ್ವಚ್ಛಂದ, ಸುಂದರ ಮನಸ್ಸಿನ ಸಾಕಾರ ಮೂರ್ತಿ, ಇವರ ಬದುಕು ನಮಗೆಲ್ಲ ಸ್ಫೂರ್ತಿ.
ಸಾವಿರಾರು ಕೋಟಿ ಒಡೆಯರಾಗಿದ್ದರೂ ಸಾಮಾನ್ಯರಲ್ಲಿ ಸಾಮಾನ್ಯರಂತೆ ಜೀವನ ಸಾಗಿಸುತ್ತಿರುವ ಸಮಾನ್ಯ ವ್ಯಕ್ತಿತ್ವ ರತನ್ ಟಾಟಾ. ತನಗಿಂತ ತನ್ನ ದೇಶ ಹಾಗೂ ದೇಶದ ಪ್ರಜೆಗಳ ಬಗ್ಗೆ ಚಿಂತಿಸುವ ಮನಸ್ಸು. ಟಾಟಾ ಸಂಸ್ಥೆಯ ಶೇ.೬೫ಕ್ಕಿಂತಲೂ ಹೆಚ್ಚಿನ ಶೇರ್ ಟಾಟಾ ಚಾರಿಟೆಬಲ್ ಟ್ರಸ್ಟ್ಗೆ ಸೇರುತ್ತದೆ ಎಂದರೆ ಅವರ ಔದಾರ್ಯ ಅರ್ಥ ಮಾಡಿ ಕೊಳ್ಳಬಹುದು.
ದೇಶಕ್ಕೆ ಯಾವುದೇ ಸಂಕಷ್ಟ ಎದುರಾದರೂ ದೇಶದೊಂದಿಗೆ ನಿಲ್ಲುವವರಲ್ಲಿ ಮೊದಲ ಸಾಲಿನಲ್ಲಿ ಟಾಟಾ ಇರುತ್ತಾರೆ. ಹಣದ ವಿಚಾರದಲ್ಲಿ ರತನ್ ಟಾಟಾ ದೇಶದ ಟಾಪ್ ಶ್ರೀಮಂತರಲ್ಲದೇ ಇರಬಹದು, ಆದರೆ ಹೃದಯ ಶ್ರೀಮಂತಿಕೆಯಲ್ಲಿ ಇವರೇ ಕುಬೇರ. ಅವರಿಗಿಂದು ಹುಟ್ಟುಹಬ್ಬ, ಅವರ ಆಯುರಾರೋಗ್ಯಕ್ಕೆ ನಮ್ಮದೊಂದು ಪ್ರಾರ್ಥನೆ ಯಿರಲಿ.
ಏರ್ ಇಂಡಿಯಾ
ಭಾರತದ ಹೆಸರಾಂತ, ಫ್ಲೈಯಿಂಗ್ ಪ್ಯಾಲೆಸ್ ಎಂದೇ ಖ್ಯಾತಿ ಪಡೆದಿದ್ದ ಏರ್ ಇಂಡಿಯಾ ವಿಮಾನ ಸಂಸ್ಥೆ 70 ಸಾವಿರ ಕೋಟಿ ರುಪಾಯಿ ನಷ್ಟದಲ್ಲಿದ್ದ ಸಂದರ್ಭದಲ್ಲಿ ಸಂಸ್ಥೆಯನ್ನು ಮಾರಾಟ ಮಾಡುತ್ತೇವೆ ಎಂದರೂ ಖರೀದಿಗೆ ಯಾರು ಮುಂದೆ
ಬರಲಿಲ್ಲ. ಆ ಸಂದರ್ಭದಲ್ಲಿ ಮುಂದೆ ಬಂದದ್ದು ಇದೇ ಟಾಟಾ ಸಂಸ್ಥೆ. ರತನ್ ಟಾಟಾ ಅವರು 18 ಸಾವಿರ ಕೋಟಿ ರುಪಾಯಿ ಗಳನ್ನು ನೀಡಿ ೨೦೨೧ರಲ್ಲಿ ನಷ್ಟದಲ್ಲಿದ್ದ, ಒಂದು ಕಾಲದಲ್ಲಿ ದೇಶದ ಹೆಮ್ಮೆಯ ವಿಮಾನ ಸಂಸ್ಥೆಯಾಗಿದ್ದ ಏರ್ ಇಂಡಿಯಾ ವನ್ನು ಖರೀದಿ ಮಾಡಿತು.
ಈ ಹಿಂದೆ ಏರ್ ಏಶಿಯಾ ಹಾಗೂ ವಿಸ್ತಾರ ವಿಮಾನ ಸಂಸ್ಥೆಗಳನ್ನು ಮತ್ತೊಂದು ಹಂತಕ್ಕೆ ತೆಗೆದುಕೊಂಡ ಹೋದ ಉದಾಹರಣೆ ನಮ್ಮ ಕಣ್ಣ ಮುಂದಿದೆ.
ಅವಮಾನಿಸಿದವರ ಮುಂದೆ ಬೆಳೆದರು
೧೯೯೮ರಲ್ಲಿ ಟಾಟಾ ಮೋಟರ್ಸ್ ಸಂಸ್ಥೆಯಿಂದ ಪರಿಚಯಿಸಲಾದ ಟಾಟಾ ಇಂಡಿಕಾ ಕಾರ್ ಅಷ್ಟರ ಮಟ್ಟಿಗೆ ಜನಪ್ರಿಯತೆ
ಪಡೆದು ಕೊಳ್ಳಲಿಲ್ಲ. ಹೀಗಾಗಿ ಕೇವಲ ಒಂದೇ ವರ್ಷದಲ್ಲಿ ಈ ವಾಹನವನ್ನು ಬೇರಾವುದಾದರೂ ಸಂಸ್ಥೆಗೆ ಮಾರಾಟ ಮಾಡುವ ನಿರ್ಧಾರವನ್ನು ಸಂಸ್ಥೆ ಹಾಗೂ ರತನ್ ಟಾಟಾ ತೀರ್ಮಾನಿಸಿದರು. ಆ ಸಂದರ್ಭದಲ್ಲಿ ಅಮೇರಿಕಾದ ಫೋರ್ಡ್ ಸಂಸ್ಥೆ ಮುಂದಾ ಯಿತು. ೧೯೯೯ರಲ್ಲಿ ಈ ಬಗ್ಗೆ ಎರಡು ಸಂಸ್ಥೆ ಗಳ ಮಧ್ಯೆ ವ್ಯವಹಾರದ ಮಾತಕತೆ ಪ್ರಾರಂಭವಾಯಿತಾದರೂ ಫೋರ್ಡ್ ಸಂಸ್ಥೆಯ ಅಧಿಕಾರಿಗಳ ದರ್ಪ ಹೆಚ್ಚಾಯಿತು.
ಕಾರ್ ಬಗ್ಗೆ ತಿಳಿಯದ ನೀವು ಕಾರ್ ತಯಾರಿಕೆಗೆ ಏಕೆ ಕೈ ಹಾಕಿದಿರಿ ಎಂದು ಅವಮಾನಿಸಿದರು. ಬೇಸರದಿಂದ ಹಿಂದಿರುಗಿದವರೇ ಆ ಸಂಸ್ಥೆಯೊಂದಿಗಿನ ಒಪ್ಪಂದವನ್ನು ಕ್ಯಾನ್ಸಲ್ ಮಾಡಿದರು. ಆದರೆ ೨೦೦೮ರಲ್ಲಿ ಅದೇ ಫೋರ್ಡ್ ಸಂಸ್ಥೆ ನಷ್ಟದ ಸುಳಿಯಲ್ಲಿ ಸಿಲುಕಿ ತನ್ನ ಪ್ರತಿಷ್ಠಿತ ಸಂಸ್ಥೆಗಳನ್ನು ಮಾರಾಟ ಮಾಡಲು ಮುಂದಾಯಿತು. ಫೋರ್ಡ್ ಸಂಸ್ಥೆ ಮಾರಾಟಕಿಟ್ಟಿದ್ದ ಜನಪ್ರೀಯ ಬ್ರ್ಯಾಂಡ್ಗಳಾದ ಲ್ಯಾಂಡ್ ರೋವರ್ ಹಾಗೂ ಜಾಗ್ವಾರ್ ಕಾರ್ಗಳನ್ನು ಟಾಟಾ ಸಂಸ್ಥೆ ಖರೀದಿ ಮಾಡುವ ಮೂಲಕ
ಅವಮಾನಿಸಿದವರಿಗೆ ಸೆಡ್ಡು ಹೊಡೆದು ನಿಂತರು.
ಇದಲ್ಲವೇ ನಿಜವಾದ ಪ್ರೇಮ
ಅಮೇರಿಕಾದಲ್ಲಿ ವಿದ್ಯಾಭ್ಯಾಸದ ನಂತರ ರತನ್ ಟಾಟಾ ಅವರಿಗೆ ಒಬ್ಬರ ಮೇಲೆ ಪ್ರೇಮಾಂಕುರವಾಯಿತು. ಆದರೆ, ಭಾರತಕ್ಕೆ ಬರಲು ನಿರಾಕರಿಸಿದಳು. ೧೯೬೨ ಭಾರತ ಮತ್ತು ಚೀನಾ ವಿರುದ್ಧ ನಡೆದ ಯುದ್ಧದ ಪರಿಣಾಮ ಇನ್ನಷ್ಟು ಭಯಭೀತರಾದ ಅವರ ಪ್ರೇಯಸಿ ಭಾರತಕ್ಕೆ ಸುತಾರಾಮ್ ಬರವುದಿಲ್ಲ ಎಂದು ಪಟ್ಟು ಹಿಡಿದು ಕೂತರು. ಇತ್ತ ರತನ್ ಅಜ್ಜಿಯ ಆರೋಗ್ಯ ಪರಿಸ್ಥಿತಿ ಗಂಭೀರವಾಗಿದ್ದ ಕಾರಣ ಒಬ್ಬಂಟಿಯಾಗಿ ಭಾರತಕ್ಕೆ ಹಿಂತಿರುಗಿದರು. ಅಂದಿನಿಂದಲೂ ರತನ್ ಟಾಟಾ ಅವಿವಾಹಿತರಾಗಿಯೇ ಉಳಿದುಬಿಟ್ಟರು.
ಲಕ್ಷಾಂತರ ಕುಟುಂಬಗಳಿಗೆ ಆಸರೆ
ಭಾರತೀಯ ರೈಲ್ವೆ ಜಗತ್ತಿನಲ್ಲಿ ಹೆಚ್ಚು ಜನರಿಗೆ ಉದ್ಯೋಗ ಕೊಟ್ಟಿದ್ದು, ಅದೇನೋ ಸರಕಾರದ ಸ್ವಾಯತ್ತತೆ. ಆದರೆ, ಟಾಟಾ ಸಂಸ್ಥೆಯು ಸರಿ ಸುಮಾರು ೯ ಲಕ್ಷದ ೩೫ ಸಾವಿರಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡಿದೆ. ಈ ಮೂಲಕ ಲಕ್ಷಾಂತರ ಕುಟುಂಬ ಗಳ ಮನೆಗಳಲ್ಲಿ ಒಲೆ ಉರಿಯಲು ಟಾಟಾ ಸಂಸ್ಥೆ ಕಾರಣ. ರೇಂಜ್ ರೋವರ್ ಕಾರಿನಲ್ಲಿ ಓಡಾಡೋದೇ ಹೆಮ್ಮೆ ಎಂದು ಬೀಗು ವವರಿರುವಾಗ, ಆ ಕಾರಿನ ಸಂಸ್ಥೆಯ ಯಜಮಾನ ಮಾತ್ರ ಸಾದಾ, ಸೀದ, ಅತೀ ಸರಳ.
Read E-Paper click here