ಬುಲೆಟ್ ಪ್ರೂಫ್
ವಿನಯ್ ಖಾನ್
vinaykhan078@gmail.com
ಜಾತಿಯ ಹೆಸರಲ್ಲಿ, ಕುಲದ ಹೆಸರಲ್ಲಿ, ಹಿಂದೂ ವಿರೋಧಿ, ಹಿಂದೂ ಸಂಸ್ಕೃತಿ ವಿರೋಧಿ ವಿಚಾರಗಳಲ್ಲಿ, ಮತ್ತಷ್ಟೂ ತಮ್ಮ ತಮ್ಮ ಹಳಸಲು ವಿಚಾರಗಳನ್ನು ಜನರಲ್ಲಿ ಬಿತ್ತುವ, ಅದರಲ್ಲೇ ಬೇಳೆ ಬೇಯಿಸಿಕೊಳ್ಳುವ, ಪ್ರಶಸ್ತಿ ಪುರಸ್ಕಾರದ ಪುಸಲಾತಿ ಗಾಗಿ ರಾಜಕಾರಣಿಗಳ ನೋವು ನಲಿವಿಗೆ ಪೆನ್ನಾಗುವ ಇವರುಗಳಿಗೆ ಸಮಾಜದ ಕಳಕಳಿ ಏನಾದರೂ ಇದೆಯೇ?
ಒಂದು ಕಾಲವಿತ್ತು, ಸಾಹಿತ್ಯವಲಯದಲ್ಲಿ ಅವರವರೇ ಹಿರಿಯರು, ಖ್ಯಾತರು, ನಿಷ್ಣಾತರು. ಅವರು ಬರೆದಿದ್ದೆಲ್ಲ ಸಾಹಿತ್ಯ, ಹೇಳಿದ್ದೆಲ್ಲ ಕವಿತೆ, ಗೀಚಿದ್ದೆಲ್ಲ ಕಥೆ-ಕಾದಂಬರಿ, ಏನನ್ನೋ ಬರೆದರೆ ವಿಮರ್ಷೆ, ತೋಚಿದ್ದೆಲ್ಲ ಚಿಂತನೆ, ಬಾಯಿ ಬಿಟ್ಟರೆ ವಾಗ್ಮಿ, ಅವರ ಚಮಚಗಳಿಂದಲೇ ಬಹುಪರಾಕ್, ಅವರು ಸೃಷ್ಟಿಸಿದ್ದ ಕ್ಕೆಲ್ಲ ಪ್ರಶಸ್ತಿ. ಹಾಗೆಂದು ಕಾಲ ಇನ್ನೂ ಬದಲಾಗಿಲ್ಲ. ಅವರ ಕುಡಿಗಳು ಇನ್ನೂ ಜೀವಂತವಾಗಿಯೇ ಇವೆ.
ಬೇರುಬಿಟ್ಟುಕೊಂಡು ಕುಳಿತ ಆ ವರ್ಗದ ಚಿಗುರು ಚಿವುಟಿದಂತೆಲ್ಲ ಮತ್ತೆ ಎಲ್ಲೆಲ್ಲೋ ಮೊಳೆತು, ತಮ್ಮ ಇರುವನ್ನು ತೋರಿಸಿ ಕೊಳ್ಳುತ್ತಲೇ ಇವೆ. ಅಸಂಬದ್ಧ ಸಮಯದಲ್ಲಿ ಅಸಂಬದ್ಧ ಹೇಳಿಕೆಗಳನ್ನು ಕೊಟ್ಟು ಉಪದ್ರವಗಳನ್ನು ಇಡುತ್ತಿರುತ್ತವೆ. ಕನ್ನಡ ಸಾಹಿತ್ಯಲೋಕದಲ್ಲಿ ಇವರ ಝಂಡಾ ಹಿಡಿದು ಬಂದವರೆಲ್ಲ ಮಾಡಿದ್ದೆಲ್ಲವೂ ಐತಿಹಾಸಿಕವೇ, ಒಳ್ಳೆಯದೇ. ಆದರೆ ಅದನ್ನೇ ಬೇರೆ ಯಾರಾದರೂ ಮಾಡಿದರೆ ಉಚ್ಚೆಯಲ್ಲಿ ಮೀನು ಹಿಡಿಯೋ ಕೆಲಸದಲ್ಲಿ ನಿರತರಾಗಿ, ಒಂದೊಂದೆ ರಗಳೆ, ಕೊಂಕು ಗಳನ್ನು ಅದುಮಿಟ್ಟುಕೊಳ್ಳಲಾಗದೇ ಆಗಾಗ ಕೆಮ್ಮಿಕೊಳ್ಳುತ್ತಿರುತ್ತಾರೆ.
ಒಂದರ್ಥದಲ್ಲಿ ಹೇಳಬೇಕೆಂದರೆ, ಕನ್ನಡ ಸಾಹಿತ್ಯ ಲೋಕ ತಮ್ಮಿಂದಲೇ ಉಳಿದಿದೆಯೇನೋ ಅನ್ನುವ ಥರ ಬಿಂಬಿಸಿಕೊಂಡಿ
ದ್ದಾರೆ, ಕೊಳ್ಳುತ್ತಲಿದ್ದಾರೆ. ಇಂಥವರ ಸಂತತಿ ಸಾವಿರ. ಮುಂದೆಯೂ ಹೀಗೆಯೇ ತಮ್ಮನ್ನು ತಾವೇ ಬಿಂಬಿಸಿಕೊಂಡು ‘ಪೊಟ್ರೇ’ ಮಾಡುವುದರಲ್ಲೇ ಯಾವಾಗಲೂ ನಿರತರಾಗಿರುತ್ತಾರೆ. ಸಮಾಧಾನ ಏನು ಗೊತ್ತಾ? ಹಿಂದೆ ಇವರನ್ನು ಪ್ರಶ್ನೆ ಮಾಡುವವರೇ ಇರಲಿಲ್ಲ. ಈಗ ಪ್ರಶ್ನಿಸೋ ವರ್ಗವೊಂದು ಹುಟ್ಟಿಕೊಂಡಿದೆ.
ಇವರ ಬರೆಯೋ ದೆಲ್ಲ ಸಾಹಿತ್ಯನಾ? ಇವರು ರಚಿಸಿದ ಕಥೆ- ಕಾದಂಬರಿ-ಮಹಾ ಕಾವ್ಯಗಳಿಂದ ಜನ ಮಾಧ್ಯಮದಲ್ಲಿ ಕಿಂಚಿತ್ತಾದರೂ ಬದಲಾವಣೆ ಬಂದಿದೆಯಾ? ಇವರು ಬರೆಯೋ ಪುಸ್ತಕಗಳು ಮಾರಾಟವಾಗುತ್ತವಾ? (ಎಷ್ಟಮಟ್ಟಿಗೆ ಅನ್ನೋದು ಪ್ರಕಟ ಮಾಡಿದವರಿಗೇ ಗೊತ್ತಿರಬಹುದು) ತಮ್ಮನ್ನು ತಾವೇ ಬುದ್ಧಿಜೀವಿ ಚಿಂತಕ ಎಂದು ಹೇಳುವ ಇವರುಗಳು ಅದಕ್ಕೆ ನಿಜಕ್ಕೂ ಅರ್ಹರಾಗಿ ಇದ್ದಾರೆಯೇ? ಇಷ್ಟು ವರ್ಷ ಇವರುಗಳು ಮಾಡಿಕೊಂಡು ಬಂದ ಅಟ್ರಾಸಿಟಿಗಳಿಂದ ಏನೆಲ್ಲ ಅನಾಹುತಗಳಾಗಿವೆ? ಎಂಬೆಲ್ಲ ಪ್ರಶ್ನೆಗಳು ಈಗ ಪ್ರತಿ ಧ್ವನಿಸಲಾರಂಭಿಸಿವೆ.
ಎಂತೆಂಥಾ ಹಿರಿ-ಕಿರಿಯ ಸಾಹಿತಿಗಳು ಇವರ ಅಟ್ರಾಸಿಟಿಗಳಿಗೆ ಬಲಿಯಾಗಿದ್ದಾರೆ. ಎಸ್.ಎಲ್.ಭೈರಪ್ಪ ಅಂತಹ ಮಹಾನ್
ಕಾದಂಬರಿಕಾರರನ್ನೂ ತೆರೆಮರೆಗೆ ಸರಿಸುವ ಕೆಲಸ ಮಾಡಿದ್ದೂ ಇಂಥವರೇ! ಇವರ ಝಂಡಾದ ಕೆಳಗೆ ಬರಲೊಪ್ಪದಿದ್ದವ ರನ್ನು ಹೊರಗಟ್ಟಿ, ಅಂಥವರ ಮೇಲೆ ಇನ್ನಿಲ್ಲದ ಆರೋಪಗಳನ್ನು ಹೊರಸಿ, ಅವರನ್ನು ಮೂಲೆಬದಿ ತಳ್ಳುವವರೂ ಇವರೆ, ಇದರ ಬಗ್ಗೆ ಜನರಿಗೂ ಗೊತ್ತೇ ಇದೆ.
ಇದ್ದರೂ, ಇಂತಹ ಅನೇಕ ಅಟ್ರೋಸಿಟಿಗಳು ಇನ್ನೂ ನಡೆಯುತ್ತಿವೆ. ೨೦೨೧ರ ಕೊನೆಯಲ್ಲಿ ಕಸಾಪ ಚುನಾವಣೆಯಲ್ಲಿ
ಗೆದ್ದು, ಅಧ್ಯಕ್ಷರಾಗಿದ್ದ ಮಹೇಶ್ ಜೋಶಿ ಅವರು ‘ರಾಜಧಾನಿ ಬೆಂಗಳೂರಿನಲ್ಲಿ ‘ಅ’ಕಾರ ಮತ್ತು ‘ಹ’ಕಾರ ವ್ಯತ್ಯಾಸ ತಿಳಿದ, ಶುದ್ಧ ಕನ್ನಡ ಗೊತ್ತಿರುವವರ ಸಂಖ್ಯೆ ಶೇ.೨೬ ರಷ್ಟು ಮಾತ್ರ. ನಮ್ಮಲ್ಲಿ ಪ್ರದೇಶಗಳಿಗೆ ಅನುಗುಣವಾಗಿ ಉಚ್ಛಾರ ಬದಲಾ ಗುತ್ತದೆ. ಆದರೆ ಶುದ್ಧ ಮತ್ತು ಸ್ಪಷ್ಟ ಕನ್ನಡವನ್ನು ನಾವು ಉಳಿಸಿ ಬೆಳೆಸಬೇಕು.
ಇಡೀ ಜಗತ್ತಿನಲ್ಲಿ ಸಂಸ್ಕೃತ ಮತ್ತು ಕನ್ನಡ ಭಾಷೆಗಳು ಮಾತ್ರ ಶುದ್ಧ ಎಂಬ ಕೀರ್ತಿಗೆ ಪಾತ್ರವಾಗಿವೆ. ನಾವು ಅದರ ವೈಶಿಷ್ಟ್ಯವನ್ನು ಕಾಪಾಡಬೇಕಿದೆ.’ ಎಂದು ಹೇಳಿದಾಗ ಬಿಲದಿಂದ ಎದ್ದು ಬಂದಿದ್ದ ಇಂಥವರು, ಗ್ರಾಮ್ಯ ಭಾಷೆ, ಗ್ರಾಂಥಿಕ ಭಾಷೆ…ಹಾಗೆ ಹೀಗೆ ಅಂತ ಬಾಯಿಬಡಕೊಂಡು, ಅದಕ್ಕೆ ಜಾತಿಯ ಲೇಪನವನ್ನೂ ಮಾಡಿ, ‘ಕನ್ನಡ ಅಂದ್ರೆ ಹೀಗೆ. ನಾನ್ ಹೀಗೇ ಮಾತಾಡೋದು’ ಅಂತ ತೊಡೆತಟ್ಟಿದ್ದರು. ಎಷ್ಟೋ ನಿರೂಪಕ, ನಟ, ಕನ್ನಡಪರ ಸಂಘಟನೆ ಹೋರಾಟದ ವೇಷಧಾರಿಗಳೂ ‘ಅಕ್ಕಿ ಆರುತಲಿತ್ತು’ ಎಂದು ಮೇಲೆ ನೋಡಿ ಬಾಯಿ ತೆರೆದುಕೊಂಡಿದ್ದಾಗ ಬಿದ್ದ ಹಿಕ್ಕೆಯನ್ನು ಚಪ್ಪರಿಸಿ
ಅಬ್ಬೆಬ್ಬೆ ದಬ್ಬೆಬ್ಬೆ ಎನ್ನುವವವರೇ.
ಅದು ಹೋಗಲಿ, ಪಠ್ಯ ಪುಸ್ತಕ ಪುನಾರಚನೆ ವಿಷಯದಲ್ಲೂ ಇದೇ ವರಾತ. ರಾಜ್ಯಾದ್ಯಾಂತ/ ಸಾಮಾಜಿಕ ಜಾಲತಾಣಗಳಲ್ಲಿ ಬೊಬ್ಬೆಹೊಡೆದದದೇನು? ತಾವುಗಳು ಬರೆದಿರುವ ಕಥೆ, ಕವನಗಳನ್ನೂ ವಾಪಸ್ ತಗೆದುಕೊಂಡದ್ದೇನು? ರೋಹಿತ್ ಚಕ್ರತೀರ್ಥ, ಸಚಿವ ನಾಗೇಶ್, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸಮೇತ ಹಲವರನ್ನು ಹೀನಾಮಾನ ನಿಂದಿಸಿ ದವರೆಷ್ಟು? ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪಠ್ಯದ ಪ್ರತಿಯನ್ನೂ ಹರಿದು ಹಾಕಿ, ‘ಇರಿಯ ಸಾಇತಿ’ಗಳ ಗ್ಯಾಂಗ್‌ಗೆ ಬೆಂಬಲ ಘೋಷಿಸಿದರು. ಅದೂ ಹೆಡಗೆವಾರರ ಭಾಷಣವನ್ನು ಪಠ್ಯದಲ್ಲಿ ಸೇರಿಸಿದರು ಎನ್ನುವುದಕ್ಕಿಂತ ತಾವು
‘ಹೀರೋ’ ಮಾಡಿಟ್ಟಿದ್ದ ಮುಸ್ಲಿಂ ದೊರೆಯ ವೈಭವೀಕರಣಕ್ಕೆ ಬ್ರೇಕ್ ಬಿದ್ದಿದ್ದು ಇವರಿಗೆಲ್ಲ ಎಲ್ಲೆಲ್ಲೋ ಮೆಣಸಿನಕಾಯಿ ತಿಕ್ಕಿದಂತಾಗಿತ್ತು.
ಇಷ್ಟುವರ್ಷಗಳಿಂದ ಅವರು ಹೇಳಿಕೊಂಡು ಬಂದ ಸುಳ್ಳುಗಳನ್ನು ಹೀಗೆ ಏಕಾಏಕಿ ತೆರೆದು ತೋರಿಸಿಬಿಟ್ಟರೆ?! ಆ ಉರಿ ಇಂದಿಗೂ ಕಡಿಮೆಯಾಗಿಲ್ಲ, ‘ಟಿಪ್ಪು ನಿಜ ಕನಿಸಿಗೆ ತುಪ್ಪ ಸುರಿಯುವ’ವರೆಗೂ ಮುಂದುವರಿದಿದೆ. ಬಸವಣ್ಣ, ಅಂಬೇಡ್ಕರ್, ಕನಕದಾಸ, ಕುವೆಂಪುರಂತಹ ಸಾರ್ವಕಾಲಿಕರನ್ನು ತಮ್ಮ ಠಸ್ಸೆ ಆಗಿಸಿಕೊಂಡು, ಅವರ ವಿಚಾರಗಳನ್ನು misinterpret ಮಾಡಿ, ಕಾರ್ಯಕ್ರಮಗಳಿಗೆ ಫೋಟೋ ಬಳಸಿ, ಅವರ ವಿಚಾರಗಳಿಗೆ ತಮ್ಮನ್ನೇ ಉತ್ತರಾಧಿಕಾರಿ ಗಳಾಗಿ ಘೋಷಿಸಿ ಕೊಂಡರು.
ಆದರೆ ಆರೆಸ್ಸೆಸ್ಸಿನವರು, ಇವರಿಂದ ಬಲಪಂಥೀಯ ಅನ್ನಿಸಿಕೊಂಡವರು ಇಂತಹ ಸಾರ್ವಕಾಲಿಕರ ವಿಚಾರಗಳನ್ನು
ಬಳಸಿದರೆ, ಅದರ ವಿರುದ್ಧ ಮುಗಿಬೀಳುವುದು, ಹೋರಾಟದ ಹೆಸರಲ್ಲಿ ಹಾರಾಡುವುದಷ್ಟೇ. ಅದರ ಭಾಗವಾಗಿಯೇ ಮೊನ್ನೆ ಮೊನ್ನೆ ತಾನೆ ತೀರ್ಥಹಳ್ಳಿಯಲ್ಲಿ ‘ಕುವೆಂಪು ಸಾಹಿತ್ಯದಲ್ಲಿ ರಾಷ್ಟ್ರೀಯತೆ’ ಎಂಬ ವಿಷಯದ ಮೇಲೆ ಘೋಷ್ಠಿ ಏರ್ಪಟ್ಟಾಗಲೂ
ಗೋ ಬ್ಯಾಕ್ ಚಳವಳಿಗಳನ್ನು ಮಾಡಿ, ಸಾಮಾಜಿಕ ಜಾಲತಾಣಗಳಲ್ಲಿ ಹಾರಾಡಿದ್ದು. ಅಷ್ಟಾದರೂ ಆ ಕಾರ್ಯಕ್ರಮ ಯಾವುದೇ ಅಡೆತಡೆಗಳಿಲ್ಲದೇ ನೆರೆವೇರಿತು ಎಂಬುದು ಬೇರೆ ಪ್ರಶ್ನೆ.
ಆದರೆ, ಇವರ ಬಣ್ಣವೂ ರಾಜ್ಯದ ಜನರ ಮುಂದೆ ಬೆತ್ತಲಾಯಿತು. ಇಷ್ಟೊಂದೆಲ್ಲ ಬರೆಯುವುದಕ್ಕೆ ಕಾರಣವೂ ಇದೆ.
ಹಲವಾರು ಅಧ್ವಾನಗಳಾಗಿ, ಕರೋನ ಕಾರಣದಿಂದ, ಸರಕಾರದ ನಿರ್ಲಕ್ಷ್ಯದಿಂದ ಮೂರು ವರ್ಷಗಳಿಂದ ಮುಂದೆ ಹೋಗುತ್ತಲೇ ಇದ್ದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಇದೇ ಜನವರಿ ೬, ೭, ೮ ರಂದು ಹಾವೇರಿಯಲ್ಲಿ ನಡೆಯುತ್ತಿದೆ.
ಅದರಲ್ಲೂ ಕೊಂಕು ಹುಡುಕಿದ ‘ಸಾಇತಿಗಳು’, ಅದಕ್ಕೆ ಕೋಮುವಾದದ ಬಣ್ಣ ಹಚ್ಚಿ, ಸಮ್ಮೇಳನವನ್ನೇ ಧಿಕ್ಕರಿಸಿ, ಪರ್ಯಾಯವಾಗಿ ಜನಸಾಹಿತ್ಯ ಸಮ್ಮೇಳನವನ್ನು ಬೆಂಗಳೂರಿನಲ್ಲಿ ನಡೆಸಲು ಪ್ಲಾನ್ ಮಾಡುತ್ತಿದ್ದಾರೆ. ಸಮ್ಮೇಳನದಲ್ಲಿ ಮುಸಲ್ಮಾನ್ ಸಾಹಿತಿಗಳಿಗೆ ಜಾಸ್ತಿ ಮನ್ನಣೆ ದೊರೆಕಿಲ್ಲವಂತೆ. ಸರಿ ಒಪ್ಪೋಣ, ಮೊನ್ನೆ ಮೊನ್ನೆ ತಾನೇ ಕೇಂದ್ರ ಸಾಹಿತ್ಯ
ಅಕಾಡೆಮಿಯ ಪ್ರಶಸ್ತಿ ಪುರಸ್ಕೃತರಾದ ದಾದಾ ಪೀರ್ ಜೈಮನ್ ಅವರಿಗೆ ಸನ್ಮಾನವನ್ನೋ, ಅಭಿನಂದನೆಯನ್ನೋ ಸಲ್ಲಿಸಬಹುದಾಗಿತ್ತು.
ಹೋಗ್ಲಿ ಸೌಜನ್ಯಕ್ಕಾದರೂ ಯುವ ಪ್ರತಿಭೆ ಅಂತ ಗುರುತಿಸಿ ಕರೆಬಹುದಾಗಿತ್ತು, ಇವರು ಕರೆದಿರಲಿಲ್ಲ. ಆದರೆ, ಈಗ ಎಬ್ಬಿಸಿರುವ ಗುಲ್ಲಲ್ಲಿ ದಾದಾಪೀರ್ ಅವರ ಬಗ್ಗೆ ಮಾತಾಡಿದ್ದಾಗಲೀ, ಹೆಸರಿಸಿದ್ದಾಗಲಿ ಆಗಲೇ ಇಲ್ಲ. ಬರೀ ತಾವು, ತಮ್ಮ ಪಟಾಲಂ ಪರವಾಗಿಯೇ ಲಾಬಿ. ಶಾಮಿಯಾನ, ಪೆಂಡಾಲಗಳದ್ದೇ ಕಿರಿಕ್ಕು. ತಮ್ಮತಮ್ಮಲ್ಲೇ ಪ್ರಶಸ್ತಿಗಳನ್ನು ಹಂಚಿಕೊಂಡು,
ದೇಶಕ್ಕಾಗಿ ಮಡಿದ ಸೈನಿಕರಲ್ಲೂ ಜಾತಿಯನ್ನು ಹುಡುಕುವ ಈ ‘ಪರ್ಯಾಯ ಜನ ಸಾಹಿತಿ’ ಜೆಎನ್‌ಯುನ ಮಾಜಿ ಪ್ರಾಧ್ಯಪಕ.
ಅಷ್ಟಕ್ಕೂ ಪುರುಷೋತ್ತಮ್ ಬಿಳಿಮಲೆ ಈ ನಿವೃತ್ತ ಬುದ್ಧಿಜೀವಿ ಇನ್ನೂ ದಿಲ್ಲಿಯಲ್ಲೇ ಠಿಕಾಣಿ ಹೂಡಿ ಕುಳಿತದ್ದೇಕೋ? ಇಂತವರ ತಲೇಲಿ ತುಂಬಿಕೊಂಡಿರುವ ಸಾಹಿತ್ಯದ ಸರಕು, ಪೆಂಡಾಲಿನ ಬಟ್ಟೆಯಷ್ಟೇ ಕೊಳಕೆಂಬುದನ್ನು ಮತ್ತೆ ಹೇಳಬೇಕಿಲ್ಲ. ಕನ್ನಡದ
ಉಳಿವಿನ ಬಗ್ಗೆ, ಹೊಸ ವಿಚಾರಗಳ ಬಗ್ಗೆ, ಕನ್ನಡದಲ್ಲಿ ಹೊಸ ಹೊಸ ಓದುಗರನ್ನು-ಲೇಖಕರನ್ನು ಹುಟ್ಟುಹಾಕುವ ಬಗ್ಗೆ, ಮುಪ್ಪಡರಿ ಕುಳಿತಿರುವ ಹಿರಿಯ ಸಾಹಿತಿಗಳ ಆರ್ಥಿಕ ನೆರವಿನ ಬಗ್ಗೆ ಕಿಂಚಿತ್ ಚಿಂತನೆಗಳು ಈ ಪೆಂಡಾಲಿಗನ ನೇತೃತ್ವದ
ಪರ್ಯಾಯ ಸಮ್ಮೇಳನದಲ್ಲಿ ಇರುತ್ತವಾ? ಪರ್ಯಾಯ ಜನ ಸಾಹಿತ್ಯ ಸಮ್ಮೇಳನದ ಬಗ್ಗೆ ಕತೆ ಹೊಡೆಯವ ಇವರು, ಕೊನೆಯ ಯಾವ ಸಮ್ಮೇಳನಗಳಲ್ಲಿ ಎಷ್ಟು ಅಲ್ಪಸಂಖ್ಯಾತರ ಹರಿವಿತ್ತು ಎಂಬ ಲೆಕ್ಕ ಕೊಡಬಲ್ಲರೇ? ಪರ್ಯಾಯ ಸಮ್ಮೇಳನದ ಬೆನ್ನಿಗೆ ನಿಂತ ಬರಗೂರು ರಾಮಚಂದ್ರಪ್ಪ ಅಧ್ಯಕ್ಷರಾಗಿದ್ದ ರಾಯಚೂರಿನ ಸಮ್ಮೇಳನದಲ್ಲಿ ಇದ್ದಿದ್ದು ಕೇವಲ ಏಳೇ ಅಲ್ಪಸಂಖ್ಯಾತರು, ವಿಜಯ ಪುರದಲ್ಲಿ ನಡೆದಿದ್ದ ಸಮ್ಮೇಳನಕ್ಕೂ ಅವಕಾಶ ಕಲ್ಪಿಸಿದ್ದು ಐವರಿಗೆ ಮಾತ್ರ.
ಕನ್ನಡ ಸಾಹಿತ್ಯ ಸಮ್ಮೇಳನದ ಇತಿಹಾಸದಲ್ಲಿ ೧೫ ಅಲ್ಪಸಂಖ್ಯಾತರಿಗೆ ಅವಕಾಶ ಕೊಟ್ಟಿದ್ದೇ ಈವರೆಗಿನ ದಾಖಲೆ. ಆಗೆಲ್ಲ
ಇವರುಗಳ ಮಾತೇಕೆ ಬರಲಿಲ್ಲ? ಪರ್ಯಾಯ ವ್ಯವಸ್ಥೆಯ ಐಡಿಯಾ ಬರಲಿಲ್ಲ ಏಕೆ? ಆದರೆ, ಈ ಬಾರಿಯ ಸಮ್ಮೇಳನದಲ್ಲಿ ೧೧ ಅಲ್ಪಸಂಖ್ಯಾತರಿಗೆ ಅವಕಾಶ ನೀಡಲಾಗಿದೆ! ಹಳೇ ಸಮ್ಮೇಳನಗಳ ಸರಾಸರಿ ಸಂಖ್ಯೆಯನ್ನು ನೋಡಿದರೆ, ಈ ವರ್ಷದ್ದೇ
ಸ್ವಲ್ಪ ಹೆಚ್ಚು! ಈ ವಿಚಾರಗಳ ಮೇಲಾದರೂ ಬಿಳಿಮಲೆಯವರು ಕಣ್ಣು ಹಾಯಿಸಬೇಕಿತ್ತು.
ಇಷ್ಟೆಲ್ಲ ಸರಿ, ಪರ್ಯಾಯ ಜನ ಸಾಹಿತ್ಯ ಸಮ್ಮೇಳನವು ಬರೀ ಮುಸಲ್ಮಾನರಿಗೋಸ್ಕರ ನಡೆಯುವ ಸಮ್ಮೇಳನವಾಗಿರು ತ್ತದೆಯೇ ಎಂಬುದನ್ನಾದರೂ ಹೇಳಲಿ. ತಮ್ಮ ಪ್ರತಿಭೆ, ಕೆಲಸದಿಂದಷ್ಟೇ ಗುರುತಿಸಿಕೊಂಡಿದ್ದ ಹಿರಿಯ ಬಂಡಾಯ ಹೋರಾಟ ಗಾರದ್ದೆಲ್ಲ ತಮಗೆ ಆದ ನೋವಿನ ಬಗ್ಗೆ, ಅವರ ಸಮಾಜದ ಬಗ್ಗೆ ಕಳಕಳಿಯಿತ್ತು. ಅದೇ ವಿಷಯಗಳು ಅವರ ಸಾಹಿತ್ಯದಲ್ಲಿ ಮಾರ್ದನಿಸುತ್ತಿದ್ದವು, ಜನರ ಮೇಲೆ ಪ್ರಭಾವ ಬೀರುತ್ತಿದ್ದವು.
ಅದಕ್ಕಾಗಿಯೇ ಸಿದ್ದಲಿಂಗಯ್ಯನವರಂಥ ಹಲವು ಹಿರಿಯರ ಸಾಹಿತ್ಯ ಇಂದಿಗೂ ಜನಮಾನಸದಲ್ಲಿದೆ. ಅಷ್ಟೇ ಏಕೆ ದೇವನೂರು ಮಹಾದೇವ ಅವರ ಹಳೆಯ ಕೆಲವು ಪುಸ್ತಕದಲ್ಲೂ (ಇತ್ತೀಚೆಗೆ ಬಲವಂತವಾಗಿ ಗರ್ಭಪಾತ ಆದ ಕೃತಿಗಳನ್ನು ಹೊರತು ಪಡಿಸಿ) ಪ್ರಬುದ್ಧತೆಯ ಸೊಂಪಿರುತ್ತಿತ್ತು! ಆದರೆ ಈಗಿನ ಬಂಡಾಯ ಕವಿಗಳಲ್ಲಿ ಆ ಪ್ರಭಾವ ಇದೆಯೇ? ಬರೀ ಜಾತಿಯ ಹೆಸರಲ್ಲಿ, ಕುಲದ ಹೆಸರಲ್ಲಿ, ಹಿಂದೂ ವಿರೋಧಿ, ಹಿಂದೂ ಸಂಸ್ಕೃತಿ ವಿರೋಧಿ ವಿಚಾರಗಳಲ್ಲಿ, ಮತ್ತಷ್ಟೂ ತಮ್ಮ ತಮ್ಮ ಹಳಸಲು ವಿಚಾರಗಳನ್ನು ಜನರಲ್ಲಿ ಬಿತ್ತುವ, ಅದರಲ್ಲೇ ಬೇಳೆ ಬೇಯಿಸಿಕೊಳ್ಳುವ, ಪ್ರಶಸ್ತಿ ಪುರಸ್ಕಾರದ ಪುಸಲಾತಿಗಾಗಿ ರಾಜಕಾರಣಿಗಳ ನೋವು ನಲಿವಿಗೆ ಪೆನ್ನಾಗುವ ಇವರುಗಳಿಗೆ ಸಮಾಜದ ಕಳಕಳಿ ಏನಾದರೂ ಇದೆಯೇ? ಅಲ್ಲ ಸ್ವಾಮಿ,
ಕನ್ನಡವನ್ನು ಮೆಟ್ಟಿಲಾಗಿಸಿಕೊಂಡು, ಅದನ್ನು ಏರಿ, ಚೆನ್ನೈನಲ್ಲಿ ಮನೆಮಾಡಿಕೊಂಡಿರುವ ಪ್ರಕಾಶ್ ರೈ ಅವರ ಬೆಂಬಲ ಇದೆ ಅಂತ ಫೇಸ್ ಬುಕ್‌ನಲ್ಲಿ ಪೋಸ್ಟ್ ಹಾಕುವ ಬಿಳಿಮಲೆಯವರು, ಪ್ರಕಾಶ್ ರೈ ಕನ್ನಡ ಸಾಹಿತ್ಯಕ್ಕೆ ಕೊಟ್ಟ ಯಾವುದಾದರೂ ಕೊಡುಗೆಯ ಬಗ್ಗೆಯೂ ಪೋಸ್ಟ್ ಹಾಕಬಲ್ಲರೇ? ಎಲ್ಲ ಕಾರ್ಯಕ್ರಮ, ವಿಷಯಗಳಲ್ಲೂ ಜಾತಿ, ಧರ್ಮಗಳ ಆಧಾರದ ಮೇಲೆ ರಿಸರ್ವೇಷನ್ ಕೊಡುವುದಕ್ಕಾಗುತ್ತದೆಯೇ? ಏನೇನೋ ಗೀಚಿದವರದ್ದೆಲ್ಲ ಸಾಹಿತ್ಯ ಆಗುವುದಾದರೆ, ಕನ್ನಡ ಸಾಹಿತ್ಯ ಇಷ್ಟೊಂದು ಸಂಪದ್ಭರಿತವಾಗುತ್ತಿತ್ತೇ? ಒಬ್ಬ ಲೇಖಕ ಅಥವಾ ಸಾಹಿತಿ ಆಗುವುದಕ್ಕೆ, ಅವನ ಪ್ರತಿಭೆಗಿಂತ ಅವನ ಜಾತಿ, ಧರ್ಮವೇ ಪ್ರಮುಖ ಪಾತ್ರ ವಹಿಸುತ್ತದೆಯೇ? ವಹಿಸಿದ್ದರೆ ಅದಕ್ಕೇನಾದರೂ ನಿದರ್ಶನಗಳುಂಟೇ? ಇಂತಹ ಬುದ್ಧಿ
ಹೊಂದಿದ್ದ ಚೇತನ್ ಅಹಿಂಸ ಮತ್ತನೇಕರ ಬಗ್ಗೆ ಬರೆಯುತ್ತಾ, ವಿಶ್ವೇಶ್ವರ ಭಟ್ಟರು ಇತ್ತೀಚೆಗೆ ಈ ಥರ ಮನಸ್ಥಿತಿಯವರ ‘ಲಂಗೋಟಿಯನ್ನು ಸಾರ್ವಜನಿಕ ವಾಗಿಯೇ ಒಣ ಹಾಕಿದ್ದರು’.
ಆದರೆ, ಇವರುಗಳು ಅದಕ್ಕೂ ತೇಪೆ ಹಚ್ಚಿ ಕೊಂಡು ಮರ್ಯಾದಸ್ಥರಂತೆ ಮತ್ತೆ ಓಡಾಡುತ್ತಿದ್ದಾರೆ. ಶಾಂತಿ ಸಿಗದ ಅರೆಬೆಂದ
ಆತ್ಮಗಳು ಇನ್ನೇನು ಮಾಡಿಯಾವು? ಎಲ್ಲದರಲ್ಲೂ ಠಸ್ಸೆ ಹೊಡೆದುಕೊಳ್ಳಲೇಬೇಕಲ್ಲ! ತಥ್!