Saturday, 23rd November 2024

ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್‌ 577 ಅಂಕ ಕುಸಿತ

ಮುಂಬೈ: ಮುಂಬಯಿ ಷೇರು ಮಾರುಕಟ್ಟೆ ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್‌ ಶುಕ್ರವಾರ  577 ಅಂಕ ಕುಸಿದು 59,761ರ ಮಟ್ಟದಲ್ಲಿ ವಹಿವಾಟು ನಡೆಸುತ್ತಿತ್ತು.

ಎಫ್‌ಎಂಸಿಜಿ ಹೊರತುಪಡಿಸಿ ಉಳಿದೆಲ್ಲ ವಲಯದ ಷೇರುಗಳು ನಷ್ಟದಲ್ಲಿತ್ತು. ಅಮೆರಿಕ ದಲ್ಲಿ ಫೆಡರಲ್‌ ರಿಸರ್ವ್‌ ಬಡ್ಡಿ ದರ ಏರಿಸುವ ಸಾಧ್ಯತೆ ಉಂಟಾಗಿರುವುದು ಷೇರು ಹೂಡಿಕೆದಾರರಲ್ಲಿ ಕಳವಳ ಮೂಡಿಸಿತು.

ಐಟಿ ಕಂಪನಿಗಳು ಮೂರನೇ ತ್ರೈಮಾಸಿಕದ ಆದಾಯದ ಬಗ್ಗೆ ಫಲಿತಾಂಶ ಪ್ರಕಟಿಸುವುದಕ್ಕೆ ಮುನ್ನ ಐಟಿ ಷೇರುಗಳ ಕುಸಿದವು.

ಡಿಸೆಂಬರ್‌ನಲ್ಲಿ ಅಮೆರಿಕದಲ್ಲಿ ಖಾಸಗಿ ವಲಯದ ಕಂಪನಿಗಳಲ್ಲಿ ಉದ್ಯೋಗಿಗಳ ನೇಮಕಾತಿಯಲ್ಲಿ ಹೆಚ್ಚಳ ಉಂಟಾಗಿದೆ. ಇದು ಆರ್ಥಿಕತೆಯ ಚೇತರಿಕೆಯನ್ನು ಬಿಂಬಿಸಿದೆ. ಹೀಗಾಗಿ ಫೆಡರಲ್‌ ರಿಸರ್ವ್‌ ಬಡ್ಡಿ ದರ ಏರಿಸುವ ಸಾಧ್ಯತೆಯೂ ಇದೆ. ಈ ಹಿನ್ನೆಲೆಯಲ್ಲಿ ಏಷ್ಯಾದ ಮಾರುಕಟ್ಟೆಯಲ್ಲಿ ಷೇರು ಮಾರುಕಟ್ಟೆಗಳು ಕುಸಿಯಿತು. ಕಚ್ಚಾ ತೈಲ ದರ ಏರಿಕೆ ಕೂಡ ನಕಾರಾತ್ಮಕ ಪ್ರಭಾವ ಬೀರಿತು.

2022ರಲ್ಲಿ ಐಟಿ ಷೇರುಗಳ ಮೌಲ್ಯದಲ್ಲಿ 22% ಇಳಿಕೆ ದಾಖಲಾಗಿತ್ತು. 2023ರಲ್ಲೂ ಐಟಿ ಷೇರುಗಳು ಹೂಡಿಕೆದಾರರನ್ನು ನಿರುತ್ಸಾಹಗೊಳಿಸುವ ಸಾಧ್ಯತೆ ಇದೆ.

 
Read E-Paper click here