ಕೊಲ್ಹಾರ: ಪಟ್ಟಣದ ವಿಶ್ವಭಾರತಿ ವಿದ್ಯಾವರ್ಧಕ ಸಂಘದ ಯಲ್ಲಮ್ಮದೇವಿ ಸಿಬಿಎಸ್ಈ ಶಾಲೆಯಲ್ಲಿ ವಿದ್ಯಾರ್ಥಿಗಳಿಂದ ಮಾತಾಪಿತರ ಪಾದಪೂಜೆ, ಮಾದರಿ ವಸ್ತುಗಳ ಪ್ರದರ್ಶನ ಕಾರ್ಯಕ್ರಮ ಜರುಗಿತು.
ವಿದ್ಯಾರ್ಥಿಗಳು ತಮ್ಮ ಮಾತಾಪಿತರ ಪಾದಪೂಜೆ ಮಾಡುವ ಮೂಲಕ ಸನಾತನ ಸಂಸ್ಕೃತಿ ಯ ಪರಿಪಾಲನೆ ಮಾಡಿದರು ಹಾಗೂ ತಾವು ತಯಾರಿಸಿದ ವಸ್ತುಗಳನ್ನು ಪ್ರಧರ್ಶಿಸಿ ಅತಿಥಿಗಳಿಗೆ ವಿವರಣೆ ನೀಡಿದರು.
ಸಾನಿದ್ಯ ವಹಿಸಿದ್ದ ದಿಗಂಬರೇಶ್ವರ ಮಠದ ಕಲ್ಲಿನಾಥ ದೇವರು ಮಾತನಾಡುತ್ತಾ ಮಾತಾಪಿ ತರ ಆರಾಧನೆ ಸನಾತನ ಸಂಸ್ಕೃತಿಯ ಪರಂಪರೆಯಾಗಿದೆ ಎಂದು ಹೇಳಿದರು.
ಶಾಲೆಯ ವತಿಯಿಂದ ಹಮ್ಮಿಕೊಂಡಿರುವುದು ವಸ್ತು ಪ್ರದರ್ಶನ ಮಕ್ಕಳ ಪ್ರತಿಭೆ ಅನಾ ವರಣಕ್ಕೊಂದು ಉತ್ತಮ ವೇದಿಕೆಯಾಗಿದೆ, ಸ್ಪರ್ಧಾತ್ಮಕ ಯುಗದಲ್ಲಿ ಕೇವಲ ಅಕ್ಷರ ಅಭ್ಯಾಸ ಇದ್ದರೆ ಸಾಲದು, ಮಕ್ಕಳಿಗೆ ಸಂಸ್ಕೃತಿ, ಆಚಾರ, ವಿಚಾರ ಸನಾತನ ಧರ್ಮದ ಅರಿವು ಮೂಡಿಸಬೇಕಾಗಿದೆ ಎಂದು ಹೇಳಿದರು.
ವಿಶ್ವಭಾರತಿ ವಿದ್ಯಾವರ್ಧಕ ಸಂಸ್ಥೆಯ ಅಧ್ಯಕ್ಷ ಮಲ್ಲಿಕಾರ್ಜುನ್ ಬೆಳ್ಳುಬ್ಬಿ, ವ್ಯವಸ್ಥಾಪಕರಾದ ಬಿ.ಎಸ್ ನಿಂಬಾಳ್ಕರ್ ಸಹಿತಿ ಅನೇಕರು ಉಪಸ್ಥಿತರಿದ್ದರು.
Read E-Paper click here