Saturday, 23rd November 2024

ನರಿಬುದ್ದಿಯ ಪಾಕಿಸ್ತಾ‌ನ್ ಬರ್ಬಾದ್

ವೀಕೆಂಡ್ ವಿತ್ ಮೋಹನ್

camohanbn@gmail.com

ಜಾಗತಿಕ ಮಟ್ಟದಲ್ಲಿ ಪಾಕಿಸ್ತಾನವೆಂದೊಡನೆ ನೆನಪಾಗುವುದು ಉಗ್ರವಾದ, ಭಯೋತ್ಪಾದಕರ ಪೋಷಣೆ, ಯುದ್ಧ, ನರಿ ಬುದ್ದಿ, ಬೆನ್ನಿಗೆ ಚೂರಿ ಹಾಕುವ ಬುದ್ಧಿ, ತನ್ನ ಹುಟ್ಟಿನಿಂದಲೂ ‘ಹೊಟ್ಟೆಗೆ ಊಟವಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂವು’ ಎಂಬಂತೆ ಅಭಿವೃದ್ಧಿಯ ಕಡೆ ಗಮನ ನೀಡದೆ ಭಾರತದ ವಿನಾಶವನ್ನೇ ಬಯಸಿದ ಪಾಕಿಸ್ತಾನದ ಇಂದಿನ ಪರಿಸ್ಥಿತಿ ಚಿಂತಾಜನಕವಾಗಿದೆ.

ತನ್ನ ಪ್ರಜೆಗಳಿಗೆ ಎರಡು ಹೊತ್ತಿನ ಊಟವನ್ನು ನೀಡಲಾಗದ ಪರಿಸ್ಥಿತಿಗೆ ಪಾಕಿಸ್ತಾನ ತಲುಪಿದೆ. ಮತಾಂಧತೆಯ ಅಮಲಿನ ಉಗ್ರರನ್ನು ಪೋಷಿಸಿ ಭಾರತದ ಮೇಲೆ ದಾಳಿ ನಡೆಸುವ ಕೆಲಸವನ್ನು ಬಿಟ್ಟು ಪಾಕಿಸ್ತಾನದ ಸೇನೆ ಹಾಗೂ ರಾಜಕೀಯ ಪಕ್ಷಗಳು ಬೇರೇನನ್ನೂ ಮಾಡಿಲ್ಲ. ನರಿ ಬುದ್ದಿ ಚೀನಾದೊಂದಿಗೆ ಸ್ನೇಹ ಬೆಳೆಸಿದ್ದ ಪಾಕಿಸ್ತಾನಕ್ಕೆ ಸಿಕ್ಕಿರುವುದು ದಿವಾಳಿತನವೆಂಬ ಉಡುಗೊರೆ. ಪಾಕಿಸ್ತಾನದಲ್ಲುಂಟಾದಂತಹ ಪ್ರವಾಹ ಪರಿಸ್ಥಿತಿ ಯನ್ನು ನಿರ್ವಹಿಸಲಾಗದೆ ಜನರನ್ನು ಬೀದಿಗಳಲ್ಲಿ ಸಾಯುವಂತೆ ಮಾಡಿದೆ. ಪಾಕಿಸ್ತಾನದ ಜನರಿಗೆ ಕುಡಿಯಲು ಹಾಲು ಸಿಗುತ್ತಿಲ್ಲ, ಗೋಧಿ ಹಿಟ್ಟಿಗೆ
ಹಾಹಾಕಾರವೆದ್ದಿದೆ.

ಒಂದು ಕೆಜಿ ಗೋದಿ ಹಿಟ್ಟಿನ ಬೆಲೆ ೧೬೦/- ರುಪಾಯಿ ತಲುಪಿದೆ, ಒಂದು ಲೀಟರ್ ಹಾಲಿನ ಬೆಲೆ ೧೭೦/- ಕ್ಕೇರಿದೆ. ಪಾಕಿಸ್ತಾನದ ರಸ್ತೆಗಳಲ್ಲಿ ಜನ ಊಟವಿಲ್ಲದೆ ಸಾಯುತ್ತಿರುವ ದೃಶ್ಯ ಸಾಮಾನ್ಯ ವಾಗಿದೆ. ಊಟ ಸಿಗದ ಕಾರಣ ರಸ್ತೆಯಲ್ಲಿ ಚಲಿಸುತ್ತಿರುವ ವಾಹನಗಳ ಮುಂದೆ ಮಲಗಿ ಆತ್ಮಹತ್ಯೆಗೆ ಪ್ರಯತ್ನಿಸುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಪಾಕಿಸ್ತಾನವು ಭಾರತದೊಂದಿಗಿ ದ್ದಿದ್ದರೆ ಈ ರೀತಿಯ ಹೀನಾಯ ಪರಿಸ್ಥಿತಿ ಬರುತ್ತಿರಲಿಲ್ಲವೆಂಬುದನ್ನು ಅಲ್ಲಿನ ಜನ ಬಹಿರಂಗವಾಗಿ ಮಾಧ್ಯಮಗಳ ಮುಂದೆ ಹೇಳುತ್ತಿದ್ದಾರೆ.

ಒಸಾಮಾ ಬಿನ್ ಲಾಡೆನ್, ದಾವೂದ್ ಇಬ್ರಾಹಿಂ, ಮಸೂದ್ ಅಜರ್‌ನಂತಹ ಭಯೋತ್ಪಾದಕರಿಗೆ ಆಶ್ರಯ ನೀಡಿದ ಪಾಕಿಸ್ತಾನ, ತನ್ನ ಸಾಮಾನ್ಯ ಪ್ರಜೆಗಳಿಗೆ ಆಶ್ರಯ ನೀಡಲಾಗದೆ ವಿಲವಿಲವೆಂದು ಒzಡುತ್ತಿದೆ. ಭಾರತದ ಮೇಲಿನ ದ್ವೇಷಕ್ಕಾಗಿ ಚೀನಾದೊಂದಿಗೆ ಸ್ನೇಹ ಬಯಸಿದ ಪಾಕಿಸ್ತಾನಕ್ಕೆ,
ಚೀನಾದಿಂದ ಬರುತ್ತಿದ್ದಂತಹ ಭಿಕ್ಷೆಯೂ ನಿಂತುಹೋಗಿದೆ. ಪಾಕಿಸ್ತಾನದ ವಿದೇಶಿ ವಿನಿಮಯ ಕೇವಲ ಐದು ಬಿಲಿಯನ್ ಅಮೆರಿಕನ್ ಡಾಲರಿಗೆ ಕುಸಿದಿದೆ, ಅಂದರೆ ಸುಮಾರು ೪೦,೦೦೦ ಕೋಟಿ ರುಪಾಯಿಗಳು. ಈ ಮೊತ್ತ ಪಾಕಿಸ್ತಾನದ ಒಂದು ತಿಂಗಳ ಆಮದಿಗೆ ಮಾತ್ರ ಸಾಕಾಗುತ್ತದೆ, ಇನೋಸಿಸ್ ಮತ್ತು ವಿಪ್ರೋ ಕಂಪೆನಿಗಳ ವಾರ್ಷಿಕ ವ್ಯವಹಾರ ಇದಕ್ಕಿಂತಲೂ ಹೆಚ್ಚಿದೆ.

ಪಾಕಿಸ್ತಾನದ ಒಟ್ಟಾರೆ ಆಮದಿನ ಸಾಲ ೨೬ ಬಿಲಿಯನ್ ಅಮೆರಿಕನ್ ಡಾಲರಿಗೆ ತಲುಪಿದೆ, ಭಾರತೀಯ ರುಪಾಯಿಗಳಲ್ಲಿ 200000 ಕೋಟಿ ತಲುಪಿದೆ. ಪಾಕಿಸ್ತಾನದ ಒಟ್ಟಾರೆ ಆಮದಿನ ಸಾಲದ ಮೊತ್ತದಲ್ಲಿ ಚೀನಾ ದೇಶದ್ದೇ ಸಿಂಹ ಪಾಲು, ಶ್ರೀಲಂಕಾ ದೇಶಕ್ಕೆ ಸಾಲವನ್ನು ನೀಡಿ ಅವರ ನೆಲೆಗಳ ಮೇಲೆ ಹಕ್ಕು ಸ್ಥಾಪಿಸಿದಂತೆ ಪಾಕಿಸ್ತಾನದ ನೆಲೆಗಳ ಮೇಲೂ ಚೀನಾ ತನ್ನ ಹಕ್ಕು ಸ್ಥಾಪಿಸಿದೆ. ಭಾರತದ ಮೇಲೆ ಸದಾ ಕತ್ತಿ ಮಸಿಯುವ ಚೀನಾ ದೇಶಕ್ಕೆ ಪಾಕಿಸ್ತಾನವೆಂಬ ಅಸ್ತ್ರ ಸಿಕ್ಕೊಡನೆ, ಬಿಲಿಯನ್ ಗಟ್ಟಲೆ ಸಾಲದ ಹಣವನ್ನು ನೀಡಿತ್ತು.

ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಬಿಲಿಯನ್ ಗಟ್ಟಲೆ ಹಣ ಖರ್ಚು ಮಾಡಿ ಆರ್ಥಿಕ ಕಾರಿಡಾರ್ ನಿರ್ಮಾಣ ಮಾಡಿದೆ. ಇಂದಿಗೂ ಸಹ ಪಾಕಿಸ್ತಾನದ ಉಗ್ರರನ್ನು ಜಾಗತಿಕ ಉಗ್ರರ ಪಟ್ಟಿಗೆ ಸೇರಿಸಲು ಚೀನಾ ಒಪ್ಪಿಗೆ ಸೂಚಿಸುವುದಿಲ್ಲ. ಶ್ರೀಲಂಕಾ ದೇಶಕ್ಕೆ ಹಣ ನೀಡಿ ಅಲ್ಲಿ ಅರಾಜಕತೆ ಸೃಷ್ಟಿಸಿ ದೇಶವನ್ನು ದೀವಾಳಿ ಮಾಡಿದ ಚೀನಾ ಅದೇ ಮಾದರಿಯಲ್ಲಿ ಪಾಕಿಸ್ತಾನವನ್ನು ದೀವಾಳಿ ಮಾಡುವತ್ತ ಸಾಗಿದೆ. ’ಕರಾಚಿ’ ಬಂದರಿನಲ್ಲಿ ಆಹಾರದ ಸರಕುಗಳನ್ನು ಹೊತ್ತ ಸಾವಿರಾರು ’ಕಂಟೇನರ್’ಗಳು ಹಡಗುಗಳಲ್ಲಿ ಕೆಳಗಿಳಿಸಲಾಗದೆ ಕೊಳೆಯುತ್ತಿವೆ.

ಅಂತಾರಾಷ್ಟ್ರೀಯ ಬ್ಯಾಂಕುಗಳು ಪಾಕಿಸ್ತಾನಕ್ಕೆ ಸಾಲ ನೀಡಲು ಸಾಧ್ಯವಿಲ್ಲದ ಕಾರಣ ಈ ಹಡಗುಗಳು ಬಂದರಿನಲ್ಲಿಯೇ ಉಳಿದಿವೆ. ಪಾಕಿಸ್ತಾನದ
ವಿದೇಶಿ ವಿನಿಮಯ ಹೆಚ್ಚಾಗದ ಹೊರತು ಈ ಹಡಗುಗಳಿಗೆ ಹಣ ನೀಡಲು ಬ್ಯಾಂಕುಗಳು ಒಪ್ಪುವುದಿಲ್ಲ, ಮುಂದಿನ ದಿನಗಳಲ್ಲಿ ಪಾಕಿಸ್ತಾನದ ಜನ ಈ ಹಡಗುಗಳಿಗೆ ಮುತ್ತಿಗೆ ಹಾಕಿ ಸಂಘರ್ಷ ಸೃಷ್ಟಿಸಿದರೆ ಆಶ್ಚರ್ಯ ಪಡಬೇಕಿಲ್ಲ. ಆಹಾರದ ಕೊರತೆಯ ಜೊತೆಗೆ ಪಾಕಿಸ್ತಾನದಲ್ಲಿ ವಿದ್ಯುಚ್ಛಕ್ತಿಯ ಕೊರತೆ ಎದುರಾಗಿದೆ, ಪಾಕಿಸ್ತಾನದ ‘ಮಾಲ್’ಗಳನ್ನು ರಾತ್ರಿ ೮.೩೦ ರ ಒಳಗೆ ಮುಚ್ಚಲು ಆದೇಶಿಸಲಾಗಿದೆ.

ಹಲವು ನಗರಗಳಲ್ಲಿ ಹೋಟೆಲುಗಳನ್ನು ಮುಚ್ಚಲು ಆದೇಶಿಸಲಾಗಿದೆ, ಇದರಿಂದಾಗಿ ಪ್ರತಿನಿತ್ಯ ಶೇ.೩೦% ವಿದ್ಯುತ್ ಉಳಿಸಬಹುದೆಂಬ ಅಂದಾಜಿ ನಲ್ಲಿದೆ ಪಾಕಿಸ್ತಾನ. ತನ್ನ ದೇಶದ ಅಭಿವೃದ್ಧಿಯ ಕಡೆ ಗಮನ ಹರಿಸದ ಪಾಕಿಸ್ತಾನ ಕೇವಲ ಉಗ್ರರ ಪೋಷಣೆಯ ತೊಡಗಿತ್ತು. ಪಾಕಿಸ್ತಾನ ದಲ್ಲಿ ಕ್ರಿಕೆಟ್ ಆಡಲು ಅಂತಾರಾಷ್ಟ್ರೀಯ ತಂಡಗಳು ಹೆದರುತ್ತವೆ. ಇತ್ತೀಚಿಗೆ ‘ನ್ಯೂ ಜಿಲ್ಯಾಂಡ’ ಕ್ರಿಕೆಟ್ ತಂಡ ಪಾಕಿಸ್ತಾನದಲ್ಲಿ ತನ್ನ ಆಟ ಮುಗಿದ ಎರಡೇ ಗಂಟೆಯಲ್ಲಿ ಮಧ್ಯರಾತ್ರಿಯಲ್ಲಿ ಜಾಗ ಕಾಲಿ ಮಾಡಿ ರಾತ್ರೋರಾತ್ರಿ ಭಾರತಕ್ಕೆ ಬಂದಿಳಿದಿತ್ತು. ತನ್ನ ಪ್ರಜೆಗಳಿಗೆ ಅನ್ನ ನೀಡಲು ಸಾಧ್ಯವಿಲ್ಲದ ಪಾಕಿಸ್ತಾನ ತನ್ನ ಸೇನೆಯ ಮೇಲೆ ೨೦೨೦-೨೧ ರಲ್ಲಿ ಸುಮಾರು 90000 ಕೋಟಿ ರುಪಾಯಿ ಹಣವನ್ನು ಖರ್ಚು ಮಾಡಿತ್ತು. ಚೀನಾ ಹಾಗೂ ಅಮೆರಿಕ ದೇಶಗಳು ಸಹಾಯದ ನೆಪದಲ್ಲಿ ಹತ್ತಾರು ವರ್ಷಗಳ ಕಾಲ ತಾವು ಬಳಸಿದ ಯುದ್ಧ ಸಲಕರಣೆಗಳನ್ನು ಪಾಕಿಸ್ತಾನಕ್ಕೆ ನೀಡುತ್ತವೆ.

ಅತ್ತ ತಾಲಿಬಾನಿಗಳು ಪಾಕಿಸ್ತಾನದ ನೆಲದಲ್ಲಿ ಭಯೋತ್ಪಾದಕ ದಾಳಿಗಳನ್ನು ನೆಯೆಸುತ್ತಿದ್ದಾರೆ, ತಾವೇ ಸಾಕಿದ ತಾಲಿಬಾನಿಗಳು ಪಾಕಿಸ್ತಾನದ ಬುಡಕ್ಕೆ ಬೆಂಕಿ ಹಚ್ಚುತ್ತಿದ್ದಾರೆ. ತಾನು ಮುಳುಗಿಹೋಗುವ ಸ್ಥಿತಿಯಲ್ಲಿದ್ದರೂ ಸಹ ಪಾಕಿಸ್ತಾನಕ್ಕೆ ಕಾಶ್ಮೀರದ ಮೇಲಿನ ಮೋಹ ತೊಲಗಿಲ್ಲ, ಭಾರತ ದೊಡನೆ ಇದುವರೆಗೂ ಮಾಡಿದ ಮೂರು ಯುದ್ಧಗಳು ಸಾಕು ಶಾಂತಿಯಿಂದ ಮಾತುಕತೆಯ ಮೂಲಕ ಸಮಸ್ಯೆಯನ್ನು ಬಗೆಹರಿಸಿ ಕೊಳ್ಳೋಣ ವೆಂದು ಪಾಕಿಸ್ತಾನದ ಪ್ರಧಾನಿ ‘ಶೆಹಜಾಬ್ ಶರೀಫ್’ ಹೇಳಿದ್ದರೂ ಸಹ, ಕಾಶ್ಮೀರದಲ್ಲಿ ಪುನಃ ಸಂವಿಧಾನದ ೩೭೦ ನೇ ವಿಽಯನ್ನು ಪುನರ್ಸ್ಥಾಪಿಸಬೇಕೆಂದು ಹೇಳಿದ್ದಾನೆ.

ತನ್ನಲ್ಲಿರುವ ಜನರಿಗೆ ಆಹಾರ ನೀಡಲು ಯೋಗ್ಯತೆಯಿಲ್ಲದ ಪಾಕಿಸ್ತಾನ ಕಾಶ್ಮೀರದಲ್ಲಿನ ಮಾನವ ಹಕ್ಕುಗಳ ಬಗ್ಗೆ ಮಾತನಾಡುತ್ತದೆ, ಹೆಣವೊಂದು ಬಿದ್ದಾಗ ರಣಹದ್ದುಗಳು ಹಾರಿಬರುವಂತೆ ಹೆಣದ ಸುತ್ತಲೂ ಸುತ್ತಿಕೊಳ್ಳುವ ಲೊಡ್ಡೆಗಳ ಪಟಾಲಂ ಪಾಕಿಸ್ತಾನದ ಪ್ರಜೆಗಳ ಮಾನವ ಹಕ್ಕುಗಳ ಉಲ್ಲಂಘನೆಯ ಬಗ್ಗೆ ತುಟಿ ಬಿಚ್ಚುವುದಿಲ್ಲ. ಕೊಲ್ಲಿ ರಾಷ್ಟ್ರಗಳು ಪಾಕಿಸ್ತಾನದ ಸಹಾಯಕ್ಕೆ ನೇರವಾಗಿ ನಿಲ್ಲಲು ತಯಾರಿಲ್ಲ, ಆರ್ಥಿಕ ನೆರವು ನೀಡುವ ಮುನ್ನ ತನ್ನ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸಿ ವರದಿಯನ್ನು ನೀಡಲು ಹೇಳಿದೆ.

ಭಾರತದೊಂದಿಗೆ ಉತ್ತಮ ಬಾಂಧವ್ಯ ಹೊಂದ ಬೇಕೆಂದು ಸುಳ್ಳು ಹೇಳಿಕೊಂಡು ಕಾಶ್ಮೀರದ ಕಣಿವೆಗಳಿಗೆ ನುಸುಳುಕೋರರನ್ನು ನುಗ್ಗಿಸುತ್ತಲೇ ಬಂದಿರುವ ಪಾಕಿಸ್ತಾನದ ಮಾತನ್ನು ನಂಬಬಾರದು. ೨೦೦೪ ರಿಂದ ೨೦೧೪ ರ ನಡುವೆ ಭಾರತದಲ್ಲಿ ತಿಂಗಳಿಗೊಂದರಂತೆ ಭಯೋತ್ಪಾದಕ
ದಾಳಿಗಳು ನಡೆಯುತ್ತಿದ್ದವು, ಬಹುತೇಕ ದಾಳಿಗಳ ಹಿಂದಿನ ರೂವಾರಿ ಪಾಕಿಸ್ತಾನದ ‘ಐಎಸ್‌ಐ’.

ಒಂದು ಕಡೆ ಭಾರತದ ಸ್ನೇಹ ಬೇಕೆಂದು ಮಾತುಗಳನ್ನಾಡಿ ಮತ್ತೊಂದೆಡೆ ಭಾರತದ ಆಂತರಿಕ ವಿಷಯವಾದ ಕಾಶ್ಮೀರದಲ್ಲಿ ಮೂಗು ತೂರಿಸುವ ಕೆಲಸವನ್ನೇ ಪಾಕಿಸ್ತಾನ ಮಾಡಿಕೊಂಡು ಬಂದಿದೆ. ನವೆಂಬರ್ ೮ – ೨೦೧೬ರಂದು ಭಾರತದಲ್ಲಿ ೫೦೦ ಮತ್ತು ೧೦೦೦ ಮುಖಬೆಲೆಯ ನೋಟು ಗಳು ಅಮಾನೀಕರಣವಾದ ನಂತರ ಪಾಕಿಸ್ತಾನದ ಅಂತ್ಯ ಪ್ರಾರಂಭವಾಯಿತು. ತನ್ನ ನೆಲದಲ್ಲಿ ಭಾರತದ ಕೋಟಾ ನೋಟುಗಳನ್ನು ಮುದ್ರಿಸಿ ಹವಾಲಾ ಮೂಲಕ ಭಾರತದ ವಿವಿದೆಡೆ ನೋಟುಗಳನ್ನು ತಲುಪಿಸುವ ಕೆಲಸ ಮಾಡುತ್ತಿತ್ತು.

ಭಯೋತ್ಪಾದಕ ಕೃತ್ಯಗಳಿಗೆ ಕೋಟ ನೋಟುಗಳಿಂದ ಬಂದ ಹಣವನ್ನು ಬಳಸಿಕೊಂಡು ಭಾರತದಲ್ಲಿ ರಕ್ತದೋಕುಳಿ ನಡೆಸುತ್ತಿತ್ತು. ಕಳೆದ
ಆರು ವರ್ಷಗಳಲ್ಲಿ ಭಾರತದಲ್ಲಿ ಡಿಜಿಟಲ್ ವ್ಯವಹಾರಗಳು ಹೆಚ್ಚಾದ ನಂತರ ಪಾಕಿಸ್ತಾನಕ್ಕೆ ಮತ್ತಷ್ಟು ಸಂಕಷ್ಟ ಎದುರಾಯಿತು. ತನ್ನ ಅಕ್ರಮ ಹಣದಿಂದ ಕಾಶ್ಮೀರದ ಯುವಕರಿಗೆ ಸೈನಿಕರ ಮೇಲೆ ಕಲ್ಲು ತೂರಲು ಪ್ರೇರೇಪಿಸುತ್ತಿದ್ದ ಪಾಕಿಸ್ತಾನಿ ಬೆಂಬಲಿತ ಉಗ್ರ ಸಂಘಟನೆಗಳ ದುಷ್ಕೃತ್ಯಗಳು
ಕೊನೆಗೊಂಡವು. ಜಗತ್ತಿನ ಭೂಪಟದಲ್ಲಿ ಪಾಕಿಸ್ತಾನವೆಂದರೆ ಭಯಪಡುವ ಪರಿಸ್ಥಿತಿಯನ್ನು ತನಗೆ ತಾನೇ ನಿರ್ಮಿಸಿಕೊಂಡ ಪಾಕಿಸ್ತಾನದ ಆರ್ಥಿಕ ದಿವಾಳಿತನಕ್ಕೆ ಸಹಾಯ ಮಾಡಲು ಯಾವ ದೇಶಗಳು ಮುಂದೆ ಬರುತ್ತಿಲ್ಲ.

ಸಮುದ್ರದಲ್ಲಿನ ಒಂದು ತೊಟ್ಟು ನೀರಿನಂತೆ ಪಾಶ್ಚಿಮಾತ್ಯ ದೇಶಗಳು ಕವಡೆ ಕಾಸಿನಷ್ಟು ಹಣ ನೀಡಲು ನಿರ್ಧರಿಸಿವೆ. ಪಾಕಿಸ್ತಾನವನ್ನು ಸ್ವರ್ಗವೆಂದಿದ್ದ ಕರ್ನಾಟಕದ ಪದ್ಮಾವತಿ ‘ರಮ್ಯಾ ದಿವ್ಯ ಸ್ಪಂದನ’ಳಿಗೆ ಅಲ್ಲಿನ ಜನರ ನರಕಯಾತನೆ ಕಾಣಿಸುತ್ತಿಲ್ಲ. ಮತ್ತೊಬ್ಬ ಕನ್ನಡದ ನಟ ಚೇತನ್ ಪಾಕಿಸ್ತಾನದ ಬಗ್ಗೆ ಬಹಳ ಮೆತ್ತಗೆ ಮಾತನಾಡಿದ್ದ, ಈತನೂ ಸಹ ಇಂದು ಪಾಕ್‌ನಲ್ಲಿನ ನರಕ ಸದೃಶ ದೃಶ್ಯಗಳ ಬಗ್ಗೆ ಮಾತನಾಡುತ್ತಿಲ್ಲ.
ಗ್ರೀಸ್ ದೇಶ ತನ್ನ ಪ್ರಜೆಗಳಿಗೆ ಉಚಿತ ಯೋಜನೆಗಳನ್ನು ನೀಡುವ ಮೂಲಕ ಆರ್ಥಿಕವಾಗಿ ದೀವಾಳಿಯಾಗಿತ್ತು. ಯುರೋಪಿಯನ್ ಒಕ್ಕೂಟದ ದೇಶಗಳು ಅದರ ಸಹಾಯಕ್ಕೆ ನಿಂತ ಕಾರಣ ಸಮಸ್ಯೆ ಬಗೆಹರಿದಿತ್ತು.

ಅತ್ತ ದಕ್ಷಿಣ ಅಮೆರಿಕಾ ಖಂಡದ ‘ವೆನಿಜುಲಾ’ ದೇಶ ಕಮ್ಯುನಿಸ್ಟರ ಆಡಳಿತಕ್ಕೆ ಸಿಕ್ಕು ದಿವಾಳಿಯಾಗಿತ್ತು, ಶ್ರೀಲಂಕಾ ದೇಶ ಚೀನಾದ ಸಹವಾಸ
ದಿಂದ ದೀವಾಳಿಯಾಗಿತ್ತು. ಶ್ರೀಲಂಕಾ ದೇಶಕ್ಕೆ ಭಾರತ ನೀಡಿದ ಆರ್ಥಿಕ ಸಹಾಯದ ಫಲವಾಗಿ ಅಲ್ಪ ಸ್ವಲ್ಪ ಚೇತರಿಕೆ ಕಂಡಿದೆ. ಚೀನಾ ದೇಶದ ಬಲೆಗೆ ಬಿದ್ದು ಉzರವಾದಂತಹ ದೇಶಗಳ ಉದಾಹರಣೆ ಇತಿಹಾಸದಲ್ಲಿ ಇಲ್ಲವೇ ಇಲ್ಲ, ಪಾಕಿಸ್ತಾನದ ಸಹಾಯಕ್ಕೆ ನಿಲ್ಲುತ್ತೇನೆಂದು ಹೇಳಿ ಅಲ್ಲಿನ
ರಾಜಕೀಯ ಚಟುವಟಿಕೆಗಳಿಗೆ ಮೂಗುತೂರಿಸಿ ಅಲ್ಲಿನ ಜನ ಬೀದಿಗೆ ಬರುವಂತೆ ಮಾಡುವಲ್ಲಿ ಚೀನಾ ಯಶಸ್ವಿಯಾಗಿದೆ.

ಪಾಕಿಸ್ತಾನದ ಮಾಜಿ ಅಧ್ಯಕ್ಷ ಜುಲಿಕರ್ ಅಲಿ ಭುಟ್ಟೋ ಹೇಳಿದ ಮಾತು ಇಂದು ನೆನಪಾಗುತ್ತಿದೆ, ‘ನಾವು ಹಸಿವಿನಿಂದ ಇದ್ದಾದರೂ ಸರಿ ಅಥವಾ ಹುಲ್ಲನ್ನಾದರೂ ತಿಂದುಕೊಂಡಾದರೂ ಜೀವನ ನಡೆಸುತ್ತೇವೆ, ಆದರೆ ಅಣು ಬಾಂಬನ್ನು ತಯಾರಿಸುವುದನ್ನು ಬಿಡುವುದಿಲ್ಲ’ವೆಂದು ಹೇಳಿದ್ದರು.
ಇಂದು ಪಾಕಿಸ್ತಾನದ ಬಳಿ ಅಣುಬಾಂಬುಗಳಿವೆ, ಆದರೆ ತಿನ್ನಲು ಅನ್ನವಿಲ್ಲ, ಬೆಳಕು ನೀಡಲು ವಿದ್ಯುತ್ತಿಲ್ಲ. ಆರ್ಥಿಕ ದಿವಾಳಿಯಾದಾಗಲೆಲ್ಲ ಪಾಶ್ಚಿಮಾತ್ಯ ದೇಶಗಳ ಬಳಿ ಭಿಕ್ಷೆ ಬೇಡಿ ಬಂದ ಹಣವನ್ನು ಪುನಃ ತನ್ನ ಉಗ್ರ ಚಟುವಟಿಕೆಗಳಿಗೆ ಬಳಸಿಕೊಂಡೇ ಬರುತ್ತಿದೆ. ಈಗಲೂ ಅಷ್ಟೇ ಪಾಕಿಸ್ತಾನದ ಊಸರವಳ್ಳಿ ಮಾತುಗಳನ್ನು ಯಾರೂ ನಂಬುವುದಿಲ್ಲ, ಭಿಕ್ಷೆ ಬೇಡಿ ಬಂದ ಹಣವನ್ನು ಮತ್ತೆ ಭಾರತದ ಬೆನ್ನಿಗೆ ಚೂರಿ ಹಾಕಲು ಬಳಸುತ್ತದೆ.

ಪಾಶ್ಚಿಮಾತ್ಯ ದೇಶಗಳು ಎಚ್ಚರಿಕೆಯಿಂದ ಪಾಕಿಸ್ತಾನಕ್ಕೆ ಹಣ ನೀಡಬೇಕು, ತಾವು ನೀಡಿದ ಹಣ ಮತ್ತೊಮ್ಮೆ ತಮ್ಮ ಮೇಲೆಯೇ ದುಷ್ಕೃತ್ಯಗಳಿಗೆ ಬಳಕೆಯಾಗುತ್ತದೆಯೆಂಬ ಆಘಾತಕಾರಿ ಅಂಶವನ್ನು ನೆನೆಯಬೇಕು. ಬಲೂಚಿಸ್ತಾನ್ ಹೋರಾಟಗಾರರ ಜೊತೆಗೆ ‘ತೆಹರೇತ್ ಈ ತಾಲಿಬಾನ್ ಪಾಕಿಸ್ತಾನ್’ ಸಂಘಟನೆ ಪಾಕಿಸ್ತಾನದ ಒಳಗೆ ತನ್ನ ಚಟುವಟಿಕೆಗಳನ್ನು ಮತ್ತಷ್ಟು ಹೆಚ್ಚಿಸಿದ್ದು, ಕಳೆದ ಒಂದೂವರೆ ವರ್ಷದಿಂದ ಸುಮಾರು ೧೫ ಸಂಘಟನೆಗಳು ಇವರ ಜತೆ ಕೈಜೋಡಿಸಿ ಹಲವು ಕೃತ್ಯಗಳನ್ನು ಪಾಕಿಸ್ತಾನದೊಳಗೆ ನಡೆಸಿವೆ.

ಇಷ್ಟರ ಮೇಲೂ ಪಾಕಿಸ್ತಾನ ಆಕ್ರಮಿತ ಕಾಶ್ಮೀರ ದಲ್ಲಿನ ಕೆಲವರು ಪಾಕಿಸ್ತಾನದ ಪರವಾಗಿ ನಿಂತರೆ ಅವರಂತಹ ನತದೃಷ್ಟರು ಮತ್ತೊಬ್ಬರಿಲ್ಲ. ತನ್ನಲ್ಲಿರುವ ಜನರನ್ನೇ ಸಾಕಲು ಯೋಗ್ಯತೆಯಿಲ್ಲದ ನರಿಬುದ್ಧಿ ಪಾಕಿಸ್ತಾನ ಭಾರತದ ಅವಿಭಾಜ್ಯ ಅಂಗ ಕಾಶ್ಮೀರದ ಬಗ್ಗೆ ಮಾತನಾಡುತ್ತದೆ.