ಕೊಲ್ಹಾರ: ಬಿಜೆಪಿಯ ಆಡಳಿತದಿಂದ ದೇಶಾದ್ಯಂತ ಜನರು ಬೇಸತಿದ್ದಾರೆ ಎಂದು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಕಲ್ಲು ದೇಸಾಯಿ ಹೇಳಿದರು.
ಭಾರತ್ ಜೋಡೊ ಪಾದಯಾತ್ರೆಯ ಅಭೂತಪೂರ್ವ ಯಶಸ್ಸು ಹಾಗೂ ಹುತಾತ್ಮರ ದಿನಾಚರಣೆ ಅಂಗವಾಗಿ ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಸುಳ್ಳು ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ಸರ್ಕಾರದ ವಿರುದ್ಧ ಜನತೆ ರೋಸಿ ಹೋಗಿದ್ದಾರೆ. ಭಾರತ ಜೋಡೊ ಯಾತ್ರೆಗೆ ದೇಶಾದ್ಯಂತ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ದೇಶದ ಜನತೆ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ವ್ಯಕ್ತ ಪಡಿಸಿದ್ದಾರೆ. ಮುಂಬರುವ ದಿನಗಳಲ್ಲಿ ದೇಶಾದ್ಯಂತ ಕಾಂಗ್ರೆಸ್ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿದು ಜನರ ಸೇವೆ ಮಾಡಲಿದೆ ಎಂದು ಹೇಳಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್.ಬಿ ಪಕಾಲಿ ಮಾತನಾಡುತ್ತಾ ಭಾರತ ಜೋಡೊ ಪಾದಯಾತ್ರೆ ಯಶಸ್ಸು ಕಂಡಿದೆ ಮುಂಬರುವ ದಿನಮಾನಗಳಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದರು.
ಪ.ಪಂ ಸದಸ್ಯರಾದ ಸಿ.ಎಸ್ ಗಿಡ್ಡಪ್ಪಗೋಳ, ಶ್ರೀಶೈಲ ಮುಳವಾಡ, ನಿಂಗಪ್ಪ ಗಣಿ, ಶಿವಪ್ಪ ವಾಲೀಕಾರ, ಮುಖಂಡರಾದ ಬಸವರಾಜ ಹುಲ್ಯಾಳ, ನಬಿಸಾಬ ಹೊನ್ಯಾಳ, ಹನೀಪ ಮಕಾನದಾರ, ಗೈಬುಸಾಬ ನದಾಫ, ಗೈಬುಸಾಬ ಕಂಕರಪೀರ, ಡೊಂಗ್ರಿಸಾಬ ಹೊನ್ಯಾಳ, ಇಕ್ಬಾಲ್ ನದಾಫ, ರಿಯಾಜ ಕಂಕರಪೀರ, ಬನಪ್ಪ ಬಾಲಗೊಂಡ, ಅಬ್ಬು ಪಕಾಲಿ, ಕಾಶೀಮ ವಾಲೀಕಾರ, ದಶರಥ ಈಟಿ, ಸುರೇಶ ಗಿಡ್ಡಪ್ಪಗೋಳ, ಮೈನು ಜಾಲಗಾರ, ಯಮನೂರಿ ಮಾಕಾಳಿ ಮುಂತಾದವರು ಇದ್ದರು.