Saturday, 14th December 2024

ಉದ್ಯೋಗಕ್ಕೆ ಶೈಕ್ಷಣಿಕ ಶಿಕ್ಷಣದ ಜೊತೆಗೆ ಕೌಶಲ್ಯ ಶಿಕ್ಷಣ ಅವಶ್ಯಕತೆ : ಟೂಡಾ ಶಶಿಧರ್

ಶಿಕ್ಷಣದಲ್ಲಿ ಜಾತಿ-ಧರ್ಮ-ರಾಜಕಾರಣವನ್ನು ಮಿಶ್ರಣ ಮಾಡಬಾರದು

ತಿಪಟೂರು: ಯುವಜನತೆಗೆ ಕೇವಲ ವಿದ್ಯೆಯನ್ನು ಮಾತ್ರ ನೀಡಿದರೆ ಸಾಲದು. ವಿದ್ಯೆಯೊಂದಿಗೆ ಕೌಶಲ್ಯ ತರಬೇತಿ ನೀಡಿದರೆ ಮಾತ್ರ ಅವರ ಉದ್ಯೋಗಕ್ಕೆ, ದುಡಿಮೆಗೆ ಅನುಕೂಲವಾಗುತ್ತದೆ ಯುವಕರ ಅನುಕೂಲಕ್ಕಾಗಿ ಕೌಶಲ್ಯ ತರಬೇತಿ ಕೇಂದ್ರವನ್ನು ತರುತ್ತಿದ್ದು ಇದು ತಿಪಟೂರಿನ ಯುವಕರಿಗೆ ತಮ್ಮ ಕೌಶಲ್ಯವನ್ನು ಹೆಚ್ಚಿಸುವ ಮತ್ತು ಲಾಭದಾಯಕವಾಗಿ ಉದ್ಯೋಗ ಪಡೆಯುವಲ್ಲಿ ಒಂದು ವೇದಿಕೆ ಆಗಲಿದೆ ಎಂದು ನನಗೆ ವಿಶ್ವಾಸವಿದೆ ಎಂದು ಕಾಂಗ್ರೆಸ್ ಮುಖಂಡ ಹಾಗೂ ಜನಸ್ಪಂದನ ಟ್ರಸ್ಟ್ ಅಧ್ಯಕ್ಷ ಟೂಡಾ ಶಶಿಧರ್ ತಿಳಿಸಿದರು.

ನಗರದ ಬಯಲು ರಂಗಮAದಿರದಲ್ಲಿ ಭಾನುವಾರ ಜನಸ್ಪಂದನ ಟ್ರಸ್ಟ್, ಉನ್ನತಿ ಸಂಸ್ಥೆ, ಅರ್ಟಿಸ್ಟ್ ಫಾರ್ ಹರ್ ಹಾಗೂ ಕ್ಯೂಸ್ ಸಂಸ್ಥೆಗಳ ಸಹಯೋಗದಲ್ಲಿ ತಿಪಟೂರಿನ ಯುª ಜನತೆಗೆ ಆರಂಭಿಸಿದ ಕೌಶಲ್ಯ ತರಭೇತಿ ಕೇಂದ್ರದ ಆರಂಭ ಹಾಗೂ ಬಹಿರಂಗ ಸಭೆ ಉದ್ದೇಶಿಸಿ ಮಾತನಾಡಿದ ಅವರು ಕೇವಲ ಶೈಕ್ಷಣಿಕ ಶಿಕ್ಷಣದಿಂದ ಉದ್ಯೋಗ ಸಿಗುವುದಿಲ್ಲ. ಸ್ವರ್ಥಾತ್ಮಕ ಯುಗದಲ್ಲಿ, ಕೆಲಸ ಮಾಡಲು ಮತ್ತು ಹಣ ಸಂಪಾದಿಸಲು ಒಬ್ಬರು ಹೆಚ್ಚು ಕೌಶಲ್ಯವನ್ನು ಹೊಂದಿರಬೇಕು. ಇದಕ್ಕೆ ವಿವಿಧ ವಿಭಾಗಗಳಲ್ಲಿ ಪ್ರೇರಣೆ ಮತ್ತು ತರಬೇತಿ ಯ ಅಗತ್ಯವಿದೆ. ಶಿಕ್ಷಣದಲ್ಲಿ ಜಾತಿ, ಧರ್ಮ, ರಾಜಕಾರಣೆ ಬೆರೆಸುವ ಬದಲು ಯುವಕರಿಗೆ ಅಗತ್ಯವಿರುವ ಕೌಶಲ್ಯ ತರಬೇತಿ ನೀಡುವ ಅಗತ್ಯವಿದೆ. ಈ ನಿಟ್ಟಿನಲ್ಲಿ ನಮ್ಮ ಜನಸ್ಪಂದನ ಟ್ರಸ್ಟ್ ಕೆಲಸ ಮಾಡುತ್ತಿದ್ದು ಶಿಕ್ಷಣ, ಆರೋಗ್ಯ ಮತ್ತು ಉದ್ಯೋಗಕ್ಕೆ ಆಧ್ಯತೆ ನೀಡುತ್ತಿದೆ ಎಂದರು.

ಯುವಶಕ್ತಿ ದೇಶದ ಸಂಪತ್ತು. ಆದರೆ ದೇಶದ ಆರ್ಥಿಕತೆಯನ್ನು ಹೆಚ್ಚಿಸಲು ಈ ಯುವಜನರನ್ನು ಸದ್ಭಳಕೆ ಮಾಡಿಕೊಳ್ಳಲು ವಿಫಲರಾಗಿದ್ದೇವೆ. ಸರಕಾರದ ಹಲವಾರು ಯೋಜನೆಗಳಲ್ಲಿ ಸಾವಿರಾರು ಕೋಟಿ ಹಣವನ್ನು ಜನಸಾಮಾನ್ಯರು ಉಪಯೋಗಿಸು ತ್ತಿಲ್ಲ. ಕೇವಲ ಕೆಲವೇ ವ್ಯಕ್ತಿಗಳು ಅದರ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ. ಹಾಗಾಗಿ ಯುವಕ-ಯುವತಿಯರಿಗೆ ಕೌಶಲ್ಯ ತರಬೇತಿ ನೀಡುವುದರ ಜೊತೆಗೆ ಸ್ವಂತ ದುಡಿಮೆಗೆ ಮಾರ್ಗ, ಅದಕ್ಕೆ ಸರಕಾರದಿಂದ ಸಿಗುವ ನೆರವು ಎಲ್ಲದರ ಬಗ್ಗೆಯೂ ತಿಳು ವಳಿಕೆ ನೀಡಲಾಗುವುದು ಎಂದು ತಿಳಿಸಿದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕವಿತಾರೆಡ್ಡಿ ಮಾತನಾಡಿ, ದೇಶದ ಆರ್ಥಿಕತೆಗೆ ಹೆಣ್ಣು ಮಕ್ಕಳ ಕೊಡುಗೆ ಅಪಾರ. ಕೌಶಲ್ಯಾ ಭಿವೃದ್ಧಿ ಬಗ್ಗೆ ರಾಜ್ಯ ಹಾಗೂ ಕೇಂದ್ರ ಸರಕಾರದ ಹಲವಾರು ಯೋಜನೆಗಳಿದ್ದರೂ ಅದರ ವಿಕೇಂದ್ರೀಕರಣ ಆಗಿಲ್ಲ. ತಾಲೂಕು ಹೋಬಳಿ ಮಟ್ಟದಲ್ಲಿ ಈ ಯೋಜನೆಗಳು ತಲುಪಿದಾಗ ದೇಶದ ಪ್ರಗತಿ ಸಾಧ್ಯ. ಯುವಜನತೆ ಉದ್ಯೋಗ ಕೌಶಲ್ಯ ರೂಡಿಸಿಕೊಳ್ಳು ವುದರ ಜೊತೆಗೆ ಜೀವನ ಕೌಶಲ್ಯವನ್ನೂ ಕಲಿಯಬೇಕಿದೆ. ಯುವಜನತೆ ಶಿಸ್ತು, ಸಮಯಪಾಲನೆ ಮತ್ತು ಗುರಿ ಇಟ್ಟುಕೊಂಡು ಮುಂದೆ ಸಾಗಿದರೆ ಗುರಿಮುಟ್ಟಲು ಸಾಧ್ಯ ಎಂದರು.

ಸ್ವೀಡನ್‌ನಿAದ ಆಗಮಿಸಿ ಮಾತನಾಡಿದ ಜಾಗತಿಕ ಉತ್ಪನ್ನ ವ್ಯವಸ್ಥಾಪಕ ಪ್ರವೀಣ್ ಮಾಯ್ಕರ್ ಯುವಜನತೆ ಕೈಶಲ್ಯ ತರಭೇತಿ ಪಡೆದುಕೊಂಡು ತಮ್ಮಲ್ಲಿರುವ ಸಮಯ, ಶಕ್ತಿ ಹಾಗೂ ಲಭ್ಯ ಸಂಪನ್ಮೂಲಗಳನ್ನು ಬಳಸಿಕೊಂಡು ದೈರ್ಯದಿಂದ ಮುಂದೆ ಬAದಾಗ ಮಾತ್ರ ತಾವೂ ಅಭಿವೃದ್ಧಿಹೊಂದಬಹುದು, ದೇಶವು ಪ್ರಗತಿಯತ್ತ ಸಾಗುತ್ತದೆ, ಇಂದು ಪ್ರತಿಕ್ಷಣ ಬದಲಾಗುತ್ತಿರುವ ತಂತ್ರಜ್ಞಾನಕ್ಕೆ ತಕ್ಕಂತೆ ನಾವು ಸಹ ನಮ್ಮ ಕೌಶಲ್ಯಗಳನ್ನು ಬೆಳೆಸಿಕೊಳ್ಳುವ ಅಗತ್ಯ ಇದೆ. ಈ ನಿಟ್ಟಿನಲ್ಲಿ ಇಂದಿನ ಯುವ ಜನತೆ ಕೌಶಲ್ಯಗಳನ್ನು ಹೇಗೆ ಪಡೆದುಕೊಳ್ಳಬೇಕು ಮತ್ತು ವೃತ್ತಿ ಜೀವನದಲ್ಲಿ ಹೇಗೆ ಅಳವಡಿಸಿಕೊಳ್ಳಬೇಕು ಎಂಬುದನ್ನು ತಿಳಿದು ಕೊಳ್ಳಬೇಕು ಎಂದರು.

ಶ್ರೀ ಸಿದ್ಧರಾಮೇಶ್ವರ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲರಾದ ಭರತ್ ಹೆಚ್. ಪಿ ಮಾತನಾಡಿ, ಉದ್ಯೋಗ ನೀಡುವ ವಿಷಯ ದಲ್ಲಿ ಯುವಕರಿಂದ ಕೌಶಲ್ಯಗಳನ್ನು ನಿರೀಕ್ಷಿಸುವ ಉದ್ದಿಮೆಗಳ ದೃಷ್ಟಿಕೋನ ಏನೆಂಬುದನ್ನು ನಾವು ಮೊದಲಿಗೆ ಅರ್ಥೈಸಿ ಕೊಳ್ಳಬೇಕು ಎಂದು ತಿಳಿಸಿದರು.

ಕ್ವೆಸ್ ಕಾರ್ಪೋರೇಷನ್ ಲಿ. ಪ್ರಧಾನ ವ್ಯವಸ್ಥಾಪಕರಾದ ಮನೋಜ್ ಉಣ್ಣಿಕೃಷ್ಣನ್ ಅವರು ಮಾತನಾಡಿ, ಯುವಜನ ಆರ್ಥಿಕ ಸಬಲೀಕರಣದ ಉದ್ದೇಶದೊಂದಿಗೆ ಪ್ರಾರಂಭವಾಗುತ್ತಿರುವ ಯುವಜನ ಸ್ಪಂದನ ತರಬೇತಿ ಕೇಂದ್ರದ ಸಹಭಾಗಿಗಳಾಗಿ ಭಾರತದ ಪ್ರಸಿದ್ಧ ಕ್ವೆಸ್ ಕಂಪನಿಯು ಆರೋಗ್ಯ ವಲಯ ಕೌಶಲ್ಯ ಪರಿಷತ್ತು ಜೊತೆಗೂಡಿ ಭಾಗಿಯಾಗುತ್ತಿರುವುದು ಸಂತೋಷಕರವಾದ ವಿಷಯ. ಸಂಸ್ಥೆಯು ರಾಷ್ಟ್ರಮಟ್ಟದಲ್ಲಿ ನೂರಕ್ಕೂ ಹೆಚ್ಚು ಕೌಶಲ್ಯ ತರಬೇತಿ ಕೇಂದ್ರಗಳನ್ನು ಹೊಂದಿ ಲಕ್ಷಕ್ಕೂ ಹೆಚ್ಚು ಯುವ ಜನರಿಗೆ ಕೌಶಲ್ಯ ತರಬೇತಿಯನ್ನು ನೀಡಿ ಉದ್ಯೋಗಗಳನ್ನು ಒದಗಿಸುತ್ತಿದೆ.

ದಿವಾಕರ್ ಸ್ಪೆಷಾಲಿಟಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಜಿ. ವಿ. ದಿವಾಕರ್ ಅವರು ಮಾತನಾಡಿ, ಈ ಉದ್ಯೋಗ ಕೌಶಲ್ಯ ತರಬೇತಿ ಕೇಂದ್ರದ ಮುಖಾಂತರ ತಿಪಟೂರಿನ ಯುವಕ ಯುವತಿಯರು ಹಲವಾರು ಕೌಶಲ್ಯಗಳನ್ನು ಪಡೆದು ತಮ್ಮದೇ ಆದ ಸಣ್ಣ ಅಥವಾ ದೊಡ್ಡ ಉದ್ಯಮವನ್ನು ಆರಂಭಿಸಿ ಆರ್ಥಿಕವಾಗಿ ಸಬಲರಾಗುವ ಅವಕಾಶ ನಿಮ್ಮ ಮುಂದಿದೆ ಎಂದು ಕಾರ್ಯಕ್ರಮದಲ್ಲಿ ನೆರೆದಿದ್ದ ಯುವ ಜನತೆಗೆ ಸಂದೇಶ ನೀಡಿದರು.

ವ್ಯವಸ್ಥಾಪಕ ನಿರ್ದೇಶಕ ಡಾ. ಜಿ.ವಿ. ದಿವಾಕರ್, ಕ್ವೆಸ್ ಕಾರ್ಪೊರೇಷನ್‌ನ ಪ್ರಧಾನ ವ್ಯವಸ್ಥಾಪಕ ಮನೋಜ್ ಉಣ್ಣಿಕೃಷ್ಣನ್, ಸಿದ್ದರಾಮೇಶ್ವರ ಪಾಲಿಟೆಕ್ನಿಕ್ ಕಾಲೇಜ್ ಪ್ರಾಂಶುಪಾಲ ಹೆಚ್.ಪಿ.ಭರತ್, ಸ್ರಾö್ಟಟಜಿಸ್ಟ್ ಎಂ.ಜೆ.ಶ್ರೀಕಾAತ್, ಕೆಪಿಸಿಸಿ ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ರಾಯಸಂದ್ರ ರವಿ, ಮಾಜಿ ಜಿಪಂ ಸದಸ್ಯ ತ್ರಿಯಾಂಬಕ, ಮಾಜಿ ತಾಪಂ ಅಧ್ಯಕ್ಷ ಪರಮಶಿವಯ್ಯ, ಉನ್ನತಿ ಸಂಸ್ಥೆಯ ನಿರ್ದೇಶಕರಾದ ರಮೇಶ್ ಕುಮಾರ್ ಗ್ರಾಪಂ ಅಧ್ಯಕ್ಷ ಉಮಾಮಹೇಶ್, ಶ್ರೀಕಾಂತ್ ಕೆಳಹಟ್ಟಿ ಮತ್ತು ಅಲ್ಲಾಬಕಾಶ್ ಸೇರಿದಂತೆ ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಸಾವಿರಾರು ಯುವಜನತೆ ಭಾಗವಹಿಸಿದ್ದರು.

ಜಿಲ್ಲೆಯಾಗದ ತಿಪಟೂರು: ತಿಪಟೂರಿಗೆ ಇಂಜಿನಿಯರಿAಗ್ ಕಾಲೇಜು ಬಂದು ೩೫ ವರ್ಷಗಳು ಕಳೆದರೂ ಉದ್ಯೋಗ, ಕೈಗಾರಿಕೆಯಲ್ಲಿ ಯಾವುದೇ ಅಭಿವೃದ್ಧಿ ಆಗಿಲ್ಲ. ಅತಿ ಹೆಚ್ಚು ತೆರಿಗೆ ಪಾವತಿಸುವ ಎರಡು ತಾಲೂಕುಗಳಾಗಿದ್ದ ದಾವಣಗೆರೆ ಹಾಗೂ ತಿಪಟೂರು ತಾಲೂಕುಗಳಲ್ಲಿ ಉದ್ಯೋಗ-ಕೈಗಾರಿಕೆಗೆ ಆದ್ಯತೆ ನೀಡಿದ ದಾವಣಗೆರೆ ಜಿಲ್ಲೆಯಾಗಿ ಅಭಿವೃದ್ಧಿ ಹೊಂದಿದೆ. ಅಧಿಕಾರ ನಡೆಸಿದ ಪಟ್ಟಭದ್ರ ಹಿತಾಸಕ್ತಿಗಳಿಂದ ಊರಿನ ಬಗ್ಗೆ ಯಾವುದೇ ಅಭಿವೃದ್ಧಿ ಯೋಜನೆ ಹಾಕಿಕೊಳ್ಳದೆ ಕೇವಲ ರಸ್ತೆ, ಕಟ್ಟಡ ನಿರ್ಮಿಸಿದರೆ ಅಭಿವೃದ್ಧಿ ಎಂದು ತಿಳಿದುಕೊಂಡಿದ್ದರ ಫಲವಾಗಿ ತಿಪಟೂರು ಇನ್ನೂ ಜಿಲ್ಲೆಯಾಗದೇ ಉಳಿದಿದೆ ಎಂದು ಟೂಡಾ ಶಶಿಧರ್ ಆರೋಪಿಸಿದರು.

*

ತಿಪಟೂರಿನಲ್ಲಿ ಪ್ರಾರಂಭವಾಗುತ್ತಿರುವ ಯುವಜನ ಸ್ಪಂದನ ಕೌಶಲ್ಯ ತರಬೇತಿ ಕೇಂದ್ರದ ನೆರವಿನೊಂದಿಗೆ ಸ್ಥಳೀಯ ಯುವಜನ ಅಭಿರುಚಿ ಮತ್ತು ಪ್ರತಿಭೆಗೆ ತಕ್ಕಂತೆ ಸಮಾಲೋಚನೆ ನೀಡಿ ಅಗತ್ಯ ತರಬೇತಿಯೊಂದಿಗೆ ಉದ್ಯೋಗವಕಾಶಗಳನ್ನು ಒದಗಿಸುವ ಹಾಗೂ ಮಾಹಿತಿ ನೀಡುವ ಕಾರ್ಯವನ್ನು ನಮ್ಮ ಸಂಸ್ಥೆ ನಿರ್ವಹಿಸಲಿದೆ ಸಾರ್ವಜನಿಕರು ಈ ಕೌಶಲ್ಯ ತರಬೇತಿ ಕೇಂದ್ರದ ಸದುಪಯೋಗವನ್ನು ಪಡೆದುಕೊಳ್ಳಿ.

ಟೂಡಾ ಶಶೀಧರ್ ಕಾಂಗ್ರೇಸ್ ಮುಖಂಡರು