ವೀಕೆಂಡ್ ವಿತ್ ಮೋಹನ್
camohanbn@gmail.com
ಆಡಳಿತ ಪಕ್ಷವಾಗಿ ಯಶಸ್ಸು ಕಾಣದ ಕಾಂಗ್ರೆಸ್, ಪ್ರತಿಪಕ್ಷವಾಗಿಯೂ ವಿಫಲವಾಗಿದ್ದು, ಜವಾಬ್ದಾರಿಯುತವಾಗಿ ತನ್ನ ಕಾರ್ಯ ನಿರ್ವಹಿಸಿಲ್ಲ. ಒಂದು ಪ್ರತಿಪಕ್ಷವಾಗಿ ಜನರ ಮುಂದೆ 2014 ರಿಂದಲೂ ಸುಳ್ಳುಗಳನ್ನೇ ಹೇಳಿಕೊಂಡು ಬಂದಿರುವ ಕಾಂಗ್ರೆಸಿಗೆ ಮತದಾರ ಸತತವಾಗಿ ಸೋಲುಣಿಸುತ್ತಿದ್ದಾನೆ. ಹೇಳಿದ ಸುಳ್ಳನ್ನೇ ಸಾವಿರ ಬಾರಿ ಹೇಳಿದರೆ ಜನ ನಂಬುತ್ತಾರೆಂಬ ನೆಹರು ಕಾಲದ ಭ್ರಮೆಯಲ್ಲಿ ಕಾಂಗ್ರೆಸ್ ಇಂದಿಗೂ ಬದುಕುತ್ತಿದೆ. ಹೇಳಿದ ಸುಳ್ಳುಗಳನ್ನು ಕ್ಷಣಾರ್ದದಲ್ಲಿ ಬೆತ್ತಲು ಮಾಡುವ ಸಾಮರ್ಥ್ಯವಿರುವ ತಂತ್ರ ಜ್ಞಾನ ಯುಗದಲ್ಲಿ ತಾವಿದ್ದೇವೆಂಬ ಸತ್ಯ ಅವರಿಗೆ ತಿಳಿಯುತ್ತಿಲ್ಲ.
ಮೋದಿಯವರನ್ನು ಸೋಲಿಸಲೇಬೇಕೆಂಬ ಹತಾಶೆಗೆ ಬಿದ್ದಿರುವ ಕಾಂಗ್ರೆಸ್, ಮಾಧ್ಯಮ ಗಳ ಮೂಲಕ ಜನರಿಗೆ ಸುಳ್ಳುಗಳನ್ನು ಹಬ್ಬಿಸುವ ಕೆಲಸ ಮಾಡಿ ಸೋಲುತ್ತಿದೆ. ಸಾಮಾ ಜಿಕ ಜಾಲತಾಣಗಳಲ್ಲಿ ಸುಳ್ಳುಗಳನ್ನು ಹಬ್ಬಿಸಲು ಹೋಗಿ ಕೈ ಸುಟ್ಟುಕೊಂಡಿದೆ, ಕರ್ನಾ ಟಕದಲ್ಲಿರುವ ‘ನಂದಿ’ ಬ್ರಾಂಡ್ ಪತ್ರಿಕೆಯೊಂದು ಆ ಪಕ್ಷದ ಪೋಸ್ಟರ್ ರೀತಿಯಲ್ಲಿ ಸುದ್ದಿಗಳನ್ನು ಪ್ರಸಾರ ಮಾಡುತ್ತಿರು ತ್ತದೆ.
ಗಾಳಿಯಲ್ಲಿ ಗುಂಡು ಹೊಡೆಯುವ ಕಾಂಗ್ರೆಸ್, ಸಂಸತ್ತಿನಲ್ಲಿ ಚರ್ಚೆಗೆ ಸಿದ್ಧವಿರುವುದಿಲ್ಲ, ಕೇಂದ್ರ ಸರಕಾರ ನೀಡುವ ಉತ್ತರ ಕೇಳುವುದಿಲ್ಲ. ಕರ್ನಾಟಕದಲ್ಲೂ ವಿಧಾನಸಭೆಯಲ್ಲಿ ಚರ್ಚಿಸದೆ ಮಾಧ್ಯಮದ ಮುಂದೆ ಬಂದು ಸುಳ್ಳು ಹೇಳುವ ಕೆಲಸ ಮಾಡಿಕೊಂಡು ಬರುತ್ತಿದೆ. ಸತತ ಸೋಲುಗಳಿಂದ ಹತಾಶೆಗೊಂಡಿರುವ ಕಾಂಗ್ರೆಸ್, ಕೇಂದ್ರ ಸರಕಾರ ತೆಗೆದುಕೊಳ್ಳುವ ಪ್ರತಿಯೊಂದು ನಿರ್ಧಾರ ಗಳನ್ನು ನ್ಯಾಯಾಲಯಕ್ಕೆ ಎಳೆದು ತರುವ ಕೆಲಸ ಮಾಡುತ್ತ ಬಂದಿದೆ. ನ್ಯಾಯಾಲಯಗಳು ಸತತವಾಗಿ ಛೀಮಾರಿ ಹಾಕುತ್ತಿದ್ದರೂ ತನ್ನ ಚಾಳಿ ಬಿಡದೇ ತಾನು ಹೇಳಿದ ಸುಳ್ಳುಗಳನ್ನು ನ್ಯಾಯಾಲಯಗಳ ಮೂಲಕ ಜನರಿಗೆ ತಲುಪಿಸುವ ವ್ಯರ್ಥ ಪ್ರಯತ್ನ ಮಾಡಿ ಕೊಂಡು ಬರುತ್ತಿದೆ.
‘ರಫೆಲ್’ ಯುದ್ಧ ವಿಮಾನ ಖರೀದಿ ವಿಚಾರದಲ್ಲಿ ಇಸಲ್ಲದ ಸುಳ್ಳುಗಳನ್ನು ಹಬ್ಬಿಸಿದ್ದ ಕಾಂಗ್ರೆಸ್ ೨೦೧೯ರಲ್ಲಿ ತನ್ನ ಚುನಾವಣಾ ತಂತ್ರಗಾರಿಕೆಯನ್ನಾಗಿ ಮಾಡಿಕೊಂಡಿತ್ತು. ರಾಹುಲ್ ಗಾಂಧಿ ಹೋದಲ್ಲ ರಫೆಲ ಮಂತ್ರ ಜಪಿಸುತ್ತಿದ್ದರು. ಆದರೆ, ತಾನು ಹೇಳುವ ಸುಳ್ಳುಗಳ ಮೇಲೆ ನಿಯಂತ್ರಣ ಕಳೆದುಕೊಂಡಿದ್ದ ರಾಹುಲ್, ದೆಹಲಿಯಂದು ಮೊತ್ತವನ್ನು ಹೇಳಿದರೆ, ಉತ್ತರ ಪ್ರದೇಶದಂದು ಸುಳ್ಳು ಮೊತ್ತವನ್ನು ಹೇಳುತ್ತಿದ್ದರು. ಕೊನೆಗೆ ತಾನು ಹೇಳಿದ ಸುಳ್ಳುಗಳನ್ನು ಜನರು ನಂಬುತ್ತಿಲ್ಲವೆಂದು ಅರ್ಥವಾಗು ತ್ತಿದ್ದಂತೆಯೇ ಕೋರ್ಟ್ ಅನ್ನು ಬಳಸಿಕೊಂಡಿತ್ತು. ಯಶವಂತ್ ಸಿನ್ಹ,ಅರುಣ್ ಶೌರಿ ಹಾಗೂ ಪ್ರಶಾಂತ್ ಭೂಷಣ್ ಸರ್ವೋಚ್ಚ ನ್ಯಾಯಾಲಯದಲ್ಲಿ ರಫೆಲ್ ವಿಚಾರವಾಗಿ ಧಾವೆ ಹೂಡಿದರು. ಭ್ರಷ್ಟಾಚಾರದ ಆರೋಪದಡಿ ವಿಮಾನ ಖರೀದಿಯ ಮೊತ್ತದ ತನಿಖೆ ಮಾಡಬೇಕೆಂದು ಕೋರಿದ್ದರು.
ಇವರ ಧಾವೆಯನ್ನು ಕೈಗೆತ್ತಿಕೊಂಡು ವಿಚಾರಣೆ ನಡೆಸಿದ ನ್ಯಾಯಾಲಯ ಕಾಂಗ್ರೆಸಿನ ಸುಳ್ಳಿಗೆ ಛೀಮಾರಿ ಹಾಕಿತ್ತು. ಕಾಂಗ್ರೆಸ್ಸಿನ ಆರೋಪ ಕಿತ್ತಳೆ ಹಾಗೂ ಮಾವಿನ ಹಣ್ಣನ್ನು ತಾಳೆ ಮಾಡಿದಂತಿದೆಯೆಂದು ನ್ಯಾಯಾಲಯ ತೀರ್ಪು ನೀಡಿತ್ತು. ನೋಟು ಅಮಾನ್ಯೀಕರಣದ ನಿರ್ಣಯದ ವಿಚಾರದಲ್ಲಿ ಕಂಗಾಲಾದ ಕಾಂಗ್ರೆಸ್, ಜನರ ಮುಂದೆ ಕೇಂದ್ರ ಸರಕಾರ ತೆಗೆದುಕೊಂಡಂತಹ ಈ ಐತಿಹಾಸಿಕ ನಿರ್ಧಾರ ತಪ್ಪೆಂದು ಬಿಂಬಿಸುವ ಕೆಲಸಕ್ಕಾಗಿ ಸಿಕ್ಕಂತಹ ಎಲ್ಲ ದಾರಿಗಳನ್ನೂ ಬಳಸಿಕೊಂಡಿತ್ತು. ಭಾವನಾತ್ಮಕವಾಗಿ ಜನರ ಮುಂದೆ ಹಲವು ಸುಳ್ಳುಗಳನ್ನು ಹೇಳಿತ್ತು. ಇವರ ಸುಳ್ಳುಗಳಿಗೆ ಸೊಪ್ಪು ಹಾಕದ ಜನ ಕಾಂಗ್ರೆಸ್ ಅನ್ನು ತಿರಸ್ಕರಿಸಿದರು.
ಇಲ್ಲಿಯೂ ಆ ಪಕ್ಷ ಹುಡುಕಿಕೊಂಡ ದಾರಿ ನ್ಯಾಯಾಲಯದ ಕದ ತಟ್ಟುವುದು. ಭಾರತೀಯ ರಿಸರ್ವ್ ಬ್ಯಾಂಕ್‌ನ ಅನುಮತಿ ಪಡೆಯದೇ ಹಳೆಯ ನೋಟುಗಳನ್ನು ಅಮಾನ್ಯೀಕರಣ ಮಾಡಲಾಯಿತೆಂಬ ಸುಳ್ಳನ್ನು ಕೋರ್ಟಿನ ಮುಂದೆ ಹೇಳಿದ್ದರು. ವಿಚಾರಣೆ ನಡೆಸಿದ ಸರ್ವೋಚ್ಚ ನ್ಯಾಯಾಲಯದ ಐವರು ನ್ಯಾಯಮೂರ್ತಿಗಳ ಪೀಠ ಕಾಂಗ್ರೆಸಿಗೆ ಛೀಮಾರಿ ಹಾಕಿ ಕೇಂದ್ರ
ಸರಕಾರದ ನಿರ್ಧಾರ ಸರಿಯಾಗಿತ್ತೆಂದು ಹೇಳಿತು. ಐವರ ನ್ಯಾಯಮೂರ್ತಿಗಳ ಪೈಕಿ ನಾಲ್ಕು ಜನ ನಿರ್ಧಾರದ ಪರವಾಗಿದ್ದರೆ, ಒಬ್ಬರು ಮಾತ್ರ ನಿರ್ಣಯದ ವಿರುದ್ಧ ಇದ್ದರು. ಭ್ರಷ್ಟಾಚಾರದ ಕೂಪದಲ್ಲಿ ಮಿಂದಿರುವ ಮಾಜಿ ವಿತ್ತಸಚಿವ ಚಿದಂಬರಂ ನ್ಯಾಯಾಲಯದಲ್ಲಿ ದಾವೆ ಹೂಡಿ ನಿರ್ಣಯವನ್ನು ವಾಪಾಸ್ ಪಡೆಯುವಂತೆ ಕೇಳಿದ್ದು ನೋಡಿದರೆ, ಬಹುಶಃ ಕಾಂಗ್ರೆಸಿಗರ ಬಳಿ ಸಾವಿರಾರು ಕೋಟಿಯ ಕಪ್ಪುಹಣ ಹಳೆಯ ನೋಟುಗಳಲ್ಲಿ ಕೊಳೆಯುತ್ತಿರಬಹುದೆಂಬ ಅನುಮಾನ ಕಾಡುತ್ತಿದೆ.
ನೋಟು ಅಮಾನ್ಯೀಕರಣದ ನಂತರ ಭಾರತದೊಳಗಿನ ಭಯೋತ್ಪಾದಕ ಚಟುವಟಿಕೆಗಳಿಗೆ ದೊಡ್ಡ ಮಟ್ಟದಲ್ಲಿ ಕಡಿವಾಣ ಬಿದ್ದಿತು. ಭಾರತಕ್ಕೆ ಭಯೋತ್ಪಾದಕರನ್ನು ಕಳುಹಿಸಿ ಅಶಾಂತಿ ಸೃಷ್ಟಿಸುತ್ತಿದ್ದ ಪಾಕಿಸ್ತಾನ ದೀವಾಳಿಯಾಯಿತು. ‘ಡಿಜಿಟಲ್ ಇಂಡಿಯಾ’ ಬಹುದೊಡ್ಡ ಯಶಸ್ಸು ಕಂಡಿತು. ಇಷ್ಟಾದರೂ ಕಾಂಗ್ರೆಸಿಗೆ ಬುದ್ಧಿ ಬರಲಿಲ್ಲ.
೧೯೮೬ರಲ್ಲಿ ರಾಜೀವ್ ಗಾಂಧಿ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಶಾಬಾನೋ ಪ್ರಕರಣದಲ್ಲಿ ನ್ಯಾಯಾಲಯವು, ವಿಚ್ಛೇದನದ ನಂತರ ಆಕೆಗೆ ಜೀವನ ಪರ್ಯಂತ ಜೀವನಾಂಶ ನೀಡಬೇಕೆಂದು ತೀರ್ಪು ನೀಡಿತ್ತು. ಇದರಿಂದ ವಿಚಲಿತಗೊಂಡ ಮುಸ್ಲಿಂ ಸಮಾ ಜದ ಪುರುಷರು ಕಾಂಗ್ರೆಸಿನ ವಿರುದ್ಧ ಮುಗಿಬಿದ್ದಿದ್ದರು. ಅವರನ್ನು ಓಲೈಸುವ ಸಲುವಾಗಿ ರಾಜೀವ್ ಗಾಂಧಿ, ನ್ಯಾಯಾಲಯದ ತೀರ್ಪಿನ ವಿರುದ್ಧ ಕಾಯ್ದೆಗೆ ತಿದ್ದುಪಡಿ ಮಾಡಿ ಜೀವನಾಂಶವನ್ನು ಕೇವಲ ೯೦ ದಿನಗಳಿಗೆ ಇಳಿಸಿ ಮುಸ್ಲಿಂ ಹೆಣ್ಣುಮಕ್ಕಳ ಬಾಳಿಗೆ ಕೊಳ್ಳಿಯಿಟ್ಟಿದ್ದರು.
ಹಿರಿಯಕ್ಕನ ಚಾಳಿ ಮನೆಮಂದಿಗೆಲ್ಲವೆಂಬಂತೆ ರಾಜೀವ್ ಗಾಂಧಿಯವರ ಹಾದಿಯಲ್ಲಿಯೇ ಕಾಂಗ್ರೆಸ್, ಮೋದಿ ಸರಕಾರ ಜಾರಿಗೆ
ತಂದಂತಹ ತ್ರಿವಳಿ ತಲಾಕ್ ನಿಷೇಧ ಕಾಯಿದೆಯನ್ನು ವಿರೋಧಿಸಿ ಮುಸಲ್ಮಾನರ ಓಲೈಕೆಗಾಗಿ ನ್ಯಾಯಾಲಯದಲ್ಲಿ ತಮ್ಮ ಹಿಂಬಾಲಕರನ್ನು ಬಿಟ್ಟು ದಾವೆ ಹೂಡಿಸಿತು. ಮುಸ್ಲಿಂ ಹೆಣ್ಣುಮಕ್ಕಳ ಜೀವನದಲ್ಲಿ ಮತ್ತೊಮ್ಮೆ ಆಟವಾಡಲು ಪ್ರಯತ್ನಪಟ್ಟ ಕಾಂಗ್ರೆಸ್‌ಗೆ ನ್ಯಾಯಾಲಯ ಮತ್ತೆ ಛೀಮಾರಿ ಹಾಕಿತ್ತು. ಐವರು ನ್ಯಾಯಾಧೀಶರಿದ್ದ ಪೀಠ ೩:೨ ನಂತೆ ತ್ರಿವಳಿ ತಲಾಕ್ ನಿಷೇಧ ಕಾಯಿದೆಯನ್ನು ಎತ್ತಿ ಹಿಡಿದು, ಸಂವಿಧಾನ ಬದ್ಧವಾಗಿ ಈ ಕಾಯಿದೆಯನ್ನು ಜಾರಿಗೆ ತರಲಾಗಿದೆಯೆಂದು ಹೇಳಿತು. ಇನ್ನು ತರಗತಿಗಳಲ್ಲಿ ಹಿಜಾಬ್ ನಿಷೇಧದ ವಿಚಾರದಲ್ಲಿ ನ್ಯಾಯಾಲಯದಲ್ಲಿ ವಾದ ಮಾಡಿದ್ದು ಕಾಂಗ್ರೆಸ್‌ನ ವಕೀಲರು.
ಕರ್ನಾಟಕದ ಉಚ್ಚ ನ್ಯಾಯಾಲಯ ಹಿಜಾಬ್ ನಿಷೇಧದ ಪರವಾಗಿ ತೀರ್ಪು ನೀಡುವ ಮೂಲಕ ಮತ್ತೊಮ್ಮೆ ಕಾಂಗ್ರೆಸಿಗೆ ಮುಖ ಭಂಗ ಮಾಡಿತ್ತು. ಮುಸ್ಲಿಂ ಹೆಣ್ಣು ಮಕ್ಕಳ ವಿದ್ಯಾಭ್ಯಾಸವನ್ನು ಹಾಳುಗೆಡವುವ ಉದ್ದೇಶಹೊಂದಿರುವ ಕಾಂಗ್ರೆಸ್‌ಗೆ, ಮುಸ್ಲಿಂ ಹೆಣ್ಣುಮಕ್ಕಳು ಸಮಾಜದಲ್ಲಿ ಉನ್ನತ ಸ್ಥಾನಕ್ಕೇರುವುದು ಇಷ್ಟವಿಲ್ಲ. ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲು ನೀಡುವ
ವಿಷಯದಲ್ಲಿ ಕೇಂದ್ರ ಸರಕಾರ ತೆಗೆದುಕೊಂಡಂತಹ ನಿರ್ಧಾರವನ್ನು ಬಹುತೇಕರು ಸ್ವಾಗತಿಸಿದರು. ಕಾಂಗ್ರೆಸ್ ಒಲ್ಲದ ಮನಸ್ಸಿ ನಿಂದ ಸ್ವಾಗತಿಸುವಂತೆ ಜನರ ಮುಂದೆ ತೋರಿಸಿಕೊಂಡಿತ್ತು. ಸಂವಿಧಾನಾತ್ಮಕವಾಗಿ ಜಾರಿಗೆ ತಂದಂತಹ ಮೀಸಲು ನಿರ್ಧಾರ ವನ್ನು ಪ್ರಶ್ನಿಸಿ ಸರ್ವೋಚ್ಚ ನ್ಯಾಯಾಲಯದಲ್ಲಿ ದಾವೆ ಹೂಡಿದ್ದವರಿಗೆ ಸೋಲುಂಟಾಯಿತು. ಕೇಂದ್ರ ಸರಕಾರ ಜಾರಿಗೆ ತಂದಿ ರುವ ಮೀಸಲಿಗೂ ಮತ್ತು ಈಗಾಗಲೇ ಜಾರಿಯಲ್ಲಿರುವ ಜಾತಿ ಆಧಾರಿತ ಮೀಸಲಿಗೂ ವ್ಯತ್ಯಾಸವಿದ್ದು, ಈ ಮೀಸಲು ಪದ್ಧತಿ
ಸಂವಿಧಾನ ಬದ್ಧವಾಗಿದೆಯೆಂಬ ತೀರ್ಪನ್ನು ನ್ಯಾಯಾಲಯ ನೀಡಿತು. ಒಂದೆಡೆ ಸ್ವಾಗತಿಸಿದಂತೆ ನಾಟಕವಾಡಿದ ಕಾಂಗ್ರೆಸ್,
ತನ್ನ ನಾಯಕರೊಬ್ಬರ ಮೂಲಕ ನ್ಯಾಯಾಲಯದ ತೀರ್ಪನ್ನು ಪುನರ್‌ಪರಿಶೀಲಿಸುವಂತೆ ಅರ್ಜಿ ಹಾಕಿಸಿದೆ.
ಕೇಂದ್ರ ಸರಕಾರವು ದಲಿತರ ಮೀಸಲನ್ನು ಕಿತ್ತುಕೊಳ್ಳುವ ಪ್ರಯತ್ನ ಮಾಡುತ್ತಿದೆಯೆಂಬ ಸುಳ್ಳನ್ನು ಹಬ್ಬಿಸಲಾಗಿತ್ತು. ನ್ಯಾಯಾ ಲಯದ ತೀರ್ಪಿನ ನಂತರ ಅವರು ಹಬ್ಬಿಸಿದ ಸುಳ್ಳುಗಳ ನೈಜ ಸತ್ಯ ಜನರಿಗೆ ಅರಿವಾಗಿದೆ. ತಾನು ಚುನಾವಣೆಗಳನ್ನು ಸೋತಾಗ ಲೆಲ್ಲ ಇವಿಎಂ ಅನ್ನು ದೂರುವ ಕಾಂಗ್ರೆಸಿಗರು ನೂರಾರು ಜನರ ಮೂಲಕ ನ್ಯಾಯಾಲಯದಲ್ಲಿ ಅದರ ವಿರುದ್ಧ ದಾವೆ ಹೂಡಿ ಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳನ್ನು ಹರಡಿಸಿ ಜನರ ಕಣ್ಣಿಗೆ ಮಂಕು ಬೂದಿ ಎರಚುವ ಕೆಲಸವನ್ನು ಮಾಡುತ್ತಿದೆ.
ತಾನು ಚುನಾವಣೆಯಲ್ಲಿ ಗೆದ್ದ ಕ್ಷೇತ್ರಗಳ ಬಗ್ಗೆ ಕಾಂಗ್ರೆಸ್ ಮಾತನಾಡುವುದಿಲ್ಲ. ಸೋತಾಗ ಮತಯಂತ್ರವನ್ನು ದೂರುತ್ತದೆ. ಇವರ ಹಾವಳಿಯಿಂದ ಬೇಸತ್ತಿರುವ ನ್ಯಾಯಾಲಯ ಪ್ರಚಾರಕ್ಕಾಗಿ ಅರ್ಜಿ ಹಾಕುತ್ತಿರುವವರ ವಿರುದ್ಧ ಹಲವು ಬಾರಿ ಗರಂ ಆಗಿ ಛೀಮಾರಿ ಹಾಕಿ ಕಳುಹಿಸಿದೆ. ಮತ ಯಂತ್ರದ ಸಂಪೂರ್ಣ ಜವಾಬ್ದಾರಿ ಚುನಾವಣಾ ಆಯೋಗ ದಡಿಯಲ್ಲಿ ಬರುವುದರಿಂದ ಅದರ ಬಗ್ಗೆ ನಿರ್ಧಾರ ಕೈಗೊಳ್ಳಬೇಕಿರುವುದು ಆಯೋಗವೇ ಹೊರತು ನ್ಯಾಯಾ ಲಯವೆಲ್ಲವೆಂಬುದನ್ನು ಸ್ಪಷ್ಟವಾಗಿ ಹೇಳಿದೆ. ಇಷ್ಟಾದರೂ ನ್ಯಾಯಾಲದ ತೀರ್ಪುಗಳಿಗೆ ಮನ್ನಣೆ ನೀಡದ ಕಾಂಗ್ರೆಸ್ ಪಕ್ಷ ಪದೇ ಪದೇ ಇವಿಎಂ ಬಗ್ಗೆ ಇಲ್ಲಸಲ್ಲದ ಸುಳ್ಳುಗಳನ್ನು ಹರಡುವ ಪ್ರಯತ್ನವನ್ನು ಮಾಡುತ್ತಲೇ ಇರುತ್ತದೆ.
‘ದಿ ಕಾಶ್ಮೀರ್ ಫೈಲ್ಸ್’ ಚಲನಚಿತ್ರ ಬಿಡುಗಡೆಯ ಸಮಯದಲ್ಲಿ ಮುಂಬೈ ಹೈಕೋರ್ಟ್‌ನಲ್ಲಿ ದಾವೆ ಹೂಡಿದ್ದ ಕಾಂಗ್ರೆಸ್ ಪ್ರೇರಿತ ಅರ್ಜಿದಾರನ ಅರ್ಜಿಯನ್ನು ತಿರಸ್ಕರಿಸಿದ ನ್ಯಾಯಾಲಯ ಚಲನಚಿತ್ರ ಬಿಡುಗಡೆಗೆ ಹಸಿರು ನಿಶಾನೆ ತೋರಿತ್ತು. ಕಾಂಗ್ರೆಸಿನ ಅವಧಿಯಲ್ಲಿ ಕಾಶ್ಮೀರದ ಪಂಡಿತರ ಮೇಲಾದಂತಹ ದೌರ್ಜನ್ಯಗಳನ್ನು ತೋರಿಸಿದರೆ ಸತ್ಯ ಹೊರಬರುತ್ತದೆಯೆಂಬ ಭಯ ಕಾಂಗ್ರೆಸಿಗಗಿತ್ತು. ಭಯೋತ್ಪಾದಕ ಯಾಸಿನ್ ಮಲಿಕ್‌ನನ್ನು ಕಾಂಗ್ರೆಸ್ ಪ್ರಧಾನಿ ಮನಮೋಹನ್ ಸಿಂಗ್ ಭೇಟಿ ಮಾಡಿ ಕಾಶ್ಮೀರಿ ಪಂಡಿತರ ಹತ್ಯೆಗೆ ಪರೋಕ್ಷವಾಗಿ ಕಾಂಗ್ರೆಸ್ ನಿಂತಿತ್ತೆಂಬುದನ್ನು ಜನರಿಗೆ ತಿಳಿಯುವಂತೆ ಮಾಡಿತ್ತು. ಚಿತ್ರದ ಬಿಡುಗಡೆಯನ್ನು
ಶತಾಯ ಗತಾಯ ನಿಲ್ಲಿಸಲೇಬೇಕೆಂಬ ಪ್ರಯತ್ನಕ್ಕೆ ಬಿದ್ದಿದ್ದ ಕಾಂಗ್ರೆಸಿಗೆ ನ್ಯಾಯಾಲಯದ ಮೂಲಕ ದೊಡ್ಡ ಸೋಲುಂಟಾಗಿತ್ತು.
‘ಪ್ರಧಾನಮಂತ್ರಿಗಳ ವಿಶೇಷ ನಿಽ’ಯ ಕುರಿತಂತೆ ದೇಶದಾದ್ಯಂತ ದೊಡ್ಡ ಮಟ್ಟದಲ್ಲಿ ಸುಳ್ಳನ್ನು ಹಬ್ಬಿಸಲು ಪ್ರಯತ್ನಿಸಿದ ಕಾಂಗ್ರೆಸ್ ಪಕ್ಷಕ್ಕೆ ಮತದಾರ ಮಣೆ ಹಾಕಲಿಲ್ಲ. ಈ ಸಂಬಂಧವೂ ನ್ಯಾಯಾಲಯದ ಮೆಟ್ಟಿಲೇರಿರುವ ಕಾಂಗ್ರೆಸ್ ಪಕ್ಷದ ಅರ್ಜಿ ವಿಚಾರಣೆಯನ್ನು ಸರ್ವೋಚ್ಚ ನ್ಯಾಯಾಲಯವು ಇನ್ನು ಕೆಲವೇ ದಿನಗಳಲ್ಲಿ ಕೈಗೆತ್ತಿಕೊಳ್ಳಲಿದೆ. ಅತ್ತ ಸಂವಿಧಾನದ ಪರಿಚ್ಛೇದ ೩೭೦ನೇವಿಧಿಯ ರದ್ದು ವಿರೋಧಿಸಿ, ತಾವು ಅಧಿಕಾರಕ್ಕೆ ಬಂದ ನಂತರ ಕಾಶ್ಮೀರದಲ್ಲಿ ಪುನಃ ೩೭೦ನೇ ಕಲಂ ಅನ್ನು ವಾಪಾಸ್ ತರುವುದಾಗಿ ಚಿದಂಬರಂ ಹೇಳಿದ್ದರು. ನೆಹರು ಕಾಲದಲ್ಲಿ ಮಾಡಿದ ದೊಡ್ಡದೊಂದು ಪ್ರಮಾಧವನ್ನು ತೆಗೆದು ಹಾಕುವ ಮೂಲಕ ಭಾರತದ ಇತರ ರಾಜ್ಯಗಳೊಂದಿಗೆ ಜಮ್ಮು ಮತ್ತು ಕಾಶ್ಮೀರದ ಸಂಬಂಧವನ್ನು ಗಟ್ಟಿ ಮಾಡಿದ ನಿರ್ಧಾರವನ್ನು ಪ್ರಶ್ನಿಸಿ
ಸರ್ವೋಚ್ಛ ನ್ಯಾಯಾಲಯದಲ್ಲಿ ಕಾಂಗ್ರೆಸ್ ಅರ್ಜಿ ಹಾಕಿಸಿದೆ. ಇದರ ವಿಚಾರಣೆಯೂ ಶೀಘ್ರದ ಬರಲಿದ್ದು ಮಗದೊಮ್ಮೆ ಕಾಂಗ್ರೆಸಿಗೆ ಮುಖಭಂಗವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.
ಸುಪ್ರೀಂ ಕೋರ್ಟ್ ನೀಡಿದ ರಾಮ ಮಂದಿರ ತೀರ್ಪನ್ನು ಗೌರವಿಸದ ಕಾಂಗ್ರೆಸ್, ಮುಸಲ್ಮಾನರ ಓಲೈಕೆಯಲ್ಲಿ ತೊಡಗಿತ್ತು. ಮಹಾತ್ಮ ಗಾಂಽಯವರ ಹೆಸರಿಟ್ಟುಕೊಂಡಿರುವ ನೆಹರು ಕುಟುಂಬದ ಕುಡಿಗಳು, ಗಾಂಧೀಜಿಯವರ ಶ್ರೀರಾಮನ ಆದರ್ಶಗಳನ್ನು ಪಾಲಿಸುವುದಿಲ್ಲ. ಬದಲಾಗಿ ವಾಸ್ತವದಲ್ಲಿ ಶ್ರೀರಾಮನ ಅಸ್ತಿತ್ವವೇ ಇಲ್ಲವೆಂದು ನ್ಯಾಯಾಲಯದಲ್ಲಿ ಅಫಿಡವಿಟ್ ಸಲ್ಲಿಸಿತ್ತು. ತನ್ನ ಸುಳ್ಳುಗಳ ಮೂಲಕ ಜನರನ್ನು ಮರಳು ಮಾಡಲು ಸಾಧ್ಯವಿಲ್ಲವೆಂಬುದನ್ನು ಅರಿತಿರುವ ಕಾಂಗ್ರೆಸ್ ನ್ಯಾಯಾಲಯದ ಮೊರೆ ಹೋಗುತ್ತದೆ. ಜನರ ಮುಂದೆ ಕೇಂದ್ರದ ನಿರ್ಣಯಗಳು ಕೋರ್ಟಿನಲ್ಲಿವೆಯೆಂದು ಬಿಂಬಿಸುವ ಯತ್ನವನ್ನು ಕಾಂಗ್ರೆಸ್
ಮಾಡುತ್ತಿದೆ. ಆದರೆ ಅವರ ಸುಳ್ಳು ಅರ್ಜಿಗಳನ್ನು ನ್ಯಾಯಾಲಯಗಳು ತಿರಸ್ಕರಿಸುತ್ತಲೇ ಬಂದಿವೆ. ಎಷ್ಟೇ ತಿರಸ್ಕರಿಸಿದರೂ ಮಾನವಿಲ್ಲದ ಕಾಂಗ್ರೆಸ್ ಪುನಃ ಮತ್ತದೇ ಕೆಲಸವನ್ನು ಮಾಡುತ್ತಲೇ ಇದೆ.
Read E-Paper click here