Wednesday, 11th December 2024

ಆಹಾರ ಧಾನ್ಯಗಳ ಶುಚಿತ್ವದ ಬಗ್ಗೆ ಗಮನಹರಿಸಿ

ಮಧುಗಿರಿ: ನಾಗರೀಕರಿಗೆ ವಿತರಿಸುವ ಪಡಿತರ ಆಹಾರ ಧಾನ್ಯಗಳ ಶುಚಿತ್ವದ ಬಗ್ಗೆ ಗಮನಹರಿಸಿ ಎಂದು ತಹಶಿಲ್ದಾರ್ ಸಿಗ್ಬತ್ ಉಲ್ಲಾರವರು ತಿಳಿಸಿದರು.

ಪಟ್ಟಣದ ಎಪಿಎಂಸಿ ಆವರಣದಲ್ಲಿರುವ ಕರ್ನಾಟಕ ಆಹಾರ ನಾಗರಿಕ ಸರಬರಾಜು ನಿಗಮದ ಉಗ್ರಾಣಕ್ಕೆ ತಹಶಿಲ್ದಾರ್ ಸಿಗ್ಬತ್ ಉಲ್ಲ ರವರು ದಿಢೀರ್ ಭೇಟಿ ನೀಡಿ ದಾಸ್ತಾನು ವಿವರಗಳನ್ನು ಪರಿಶೀಲನೆ ನಡೆಸಿದರು.

ಈ ವೇಳೆ ಉಗ್ರಾಣದಿಂದ ನ್ಯಾಯಬೆಲೆ ಅಂಗಡಿ ಗಳಿಗೆ ಸರಬರಾಜು ಮಾಡುವ ಪಡಿತರ ಆಹಾರ ಧಾನ್ಯಗಳ ಪ್ರಮಾಣ ಹಾಗೂ ದಾಸ್ತಾನು ವಿವರಗಳ ಜೊತೆಗೆ ಪಡಿತರ ಆಹಾರ ಸಾಗಿಸುವ ವಾಹನಗಳ ಬಗ್ಗೆ ಪರಿಶೀಲಿಸಿ ಮಾತ ನಾಡಿದ ಅವರು ಆಹಾರ ಇಲಾಖೆಯ ಶಿರಸ್ತೆದಾರರು ಉಗ್ರಾಣಕ್ಕೆ ಆಗಾಗ ಭೇಟಿ ನೀಡಿ ತಪಾಸಣೆ ಮಾಡುವ ಮೂಲಕ ಉಗ್ರಾಣ ಹಾಗೂ ಪಡಿತರ ಆಹಾರ ಧಾನ್ಯಗಳ ಶುಚಿತ್ವದ ಬಗ್ಗೆ ಗಮನಹರಿಸಬೇಕು ಎಂದು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಿ ಉಗ್ರಾಣದ ನಿರ್ವಹಣೆ ಉತ್ತಮವಾಗಿ ನಿಭಾಯಿಸಿ ದಾಗ ಮಾತ್ರ ಆಹಾರ ಧಾನ್ಯಗಳ ಉತ್ತಮ ಗುಣಮಟ್ಟ ಕಾಪಾಡಬಹುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಆಹಾರ ನಿರೀಕ್ಷಕ ಹರೀಶ್ ಕುಮಾರ್, ಉಗ್ರಾಣ ವ್ಯವಸ್ಥಾಪಕ ಮುನಿರಾಜು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು