ನವದೆಹಲಿ: ಗೂಗಲ್ ಇಂಡಿಯಾ ವಿವಿಧ ಇಲಾಖೆಗಳ 453 ಉದ್ಯೋಗಿಗಳನ್ನು ವಜಾ ಮಾಡಿದೆ. ಗೂಗಲ್ ತನ್ನ ಉದ್ಯೋಗಿಗಳನ್ನು ವಜಾಗೊಳಿಸಿದ ಬಗ್ಗೆ ಪೋಸ್ಟ್ ಮೂಲಕ ಮಾಹಿತಿ ನೀಡಿದೆ.
ಗೂಗಲ್ ಇಂಡಿಯಾದ ದೇಶದ ಮುಖ್ಯಸ್ಥ ಮತ್ತು ಉಪಾಧ್ಯಕ್ಷ ಸಂಜಯ್ ಗುಪ್ತಾ ಮೇಲ್ ಮೂಲಕ ಮಾಹಿತಿ ನೀಡಿದ್ದಾರೆ.
ಕಳೆದ ತಿಂಗಳು, ಗೂಗಲ್ನ ಮೂಲ ಕಂಪನಿ ಆಲ್ಫಾಬೆಟ್ ಇಂಕ್ ಕಂಪನಿಯು ಜಾಗತಿಕವಾಗಿ ತನ್ನ ಒಟ್ಟು ಉದ್ಯೋಗಿಗಳ ಶೇಕಡಾ 6 ರಷ್ಟು ವಜಾ ಗೊಳಿಸುವುದಾಗಿ ಘೋಷಿಸಿತು. ಒಟ್ಟು 12,000 ಉದ್ಯೋಗಿಗಳು ಕೆಲಸ ಕಳೆದುಕೊಳ್ಳಲಿದ್ದಾರೆ.