Friday, 13th December 2024

ಫೇಸ್ ಬುಕ್, ಇನ್ ಸ್ಟಾಗ್ರಾಂನಿಂದ ಚಂದಾದಾರಿಕೆ ಮಾಸಿಕ ಶುಲ್ಕ ಸೇವೆ ಶೀಘ್ರ ಆರಂಭ

ಮೆಟಾ ಕೂಡ ಟ್ವಿಟ್ಟರ್ ಮಾದರಿಯಲ್ಲಿ ಫೇಸ್ ಬುಕ್, ಇನ್ ಸ್ಟಾಗ್ರಾಂನ ಚಂದಾದಾರಿಕೆ ಮಾಸಿಕ ಶುಲ್ಕ ಸೇವೆ ಯನ್ನು ಪ್ರಾರಂಭಿಸುವುದಾಗಿ ಘೋಷಿಸಿದೆ.
ಮೆಟಾ ಮಾಲೀಕ ಮಾರ್ಕ್ ಜುಕರ್ಬರ್ಗ್ ಫೇಸ್ಬುಕ್ನಲ್ಲಿ ಪೋಸ್ಟ್ ಮೂಲಕ ಈ ವಾರ ನಾವು ಮೆಟಾ ವೆರಿಫೈಡ್ ಅನ್ನು ಪ್ರಾರಂಭಿಸುತ್ತಿದ್ದೇವೆ. ಒಂದು ರೀತಿಯ ಚಂದಾದಾರಿಕೆ ಸೇವೆ ಇದೆ. ಇದು ಬಳಕೆದಾರರಿಗೆ ತಮ್ಮ ಖಾತೆಯನ್ನು ಸರ್ಕಾರಿ ಗುರುತಿನ ಚೀಟಿಯೊಂದಿಗೆ ಪರಿಶೀಲಿಸಲು ಅನುವು ಮಾಡಿ ಕೊಡುತ್ತದೆ.

ಬ್ಲೂ ಬ್ಯಾಡ್ಜ್ ಹೊಂದಿದವರು ನಕಲಿ ಖಾತೆಗಳಿಂದ ರಕ್ಷಣೆ ಪಡೆಯುತ್ತಾರಲ್ಲದೇ, ನೇರವಾಗಿ ಗ್ರಾಹಕ ಸೇವೆಗಳನ್ನು ಪಡೆಯಬಹುದು. ತಮ್ಮ ಸೇವೆಗಳ ವಿಶ್ವಾಸಾರ್ಹತೆ ಹಾಗೂ ಭದ್ರತೆ ಹೆಚ್ಚಿಸುವ ಸಲುವಾಗಿ ಈ ಚಂದಾದಾರಿಗೆ ಪರಿಚಯಿಸಿದಾಗಿ ಮೆಟಾ ಹೇಳಿದೆ.

ಬಳಕೆದಾರರು ವೆಬ್ ಆಧಾರಿತ ಪರಿಶೀಲನೆಗಾಗಿ ತಿಂಗಳಿಗೆ $11.99 (ರೂ. 992.36) ಮತ್ತು ಆಯಪಲ್ ಹಾಗೂ ಆ0ಡ್ರಾಯ್ಡ್ ಬಳಕೆದಾರರು ಸೇವೆಗಾಗಿ ತಿಂಗಳಿಗೆ $14.99 (ರೂ. 1240.65) ಪಾವತಿಸಬೇಕಾಗುತ್ತದೆ. ಮೆಟಾ ವೆರಿಫೈಡ್ ಚಂದಾದಾರಿಕೆ ಸೇವೆಯನ್ನು ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ನಲ್ಲಿ ಪ್ರಾರಂಭಿಸಲಾಗುವುದು.