Saturday, 14th December 2024

ಮಹಿಳಾ ಸಬಲೀಕರಣವಾದರೆ ಮಾತ್ರ ದೇಶದ ಅಭಿವೃದ್ದಿ ಸಾಧ್ಯ: ರಾಜ್ಯ ಉಪಾಧ್ಯಕ್ಷ ವೆಂಕಟರೋಣಪ್ಪ

ಚಿಕ್ಕಬಳ್ಳಾಪುರ : ದೇಶದ ಪ್ರಗತಿಯಲ್ಲಿ ಮಹಿಳೆಯರ ಪಾತ್ರ ಪ್ರಧಾನವಾಗಿದೆ.ಹಳ್ಳಿಯಿಂದ ದಿಲ್ಲಿಯವರೆಗೆ ಇರುವ ಸಮಸ್ತ ಮಹಿಳಾ ಸಮುದಾಯದ ಸಬಲೀಕರಣಕ್ಕೆ ಆಧ್ಯತೆ ನೀಡಿದಾಗ ಮಾತ್ರವೇ ದೇಶವು ಅಭಿವೃದ್ದಿಯತ್ತ ಸಾಗಲಿದೆ ಎಂದು ಹಳ್ಳಿಮಕ್ಕಳ ಸಂಘದ ರಾಜ್ಯ ಉಪಾಧ್ಯಕ್ಷ ವೆಂಕಟ ರೋಣಪ್ಪ ತಿಳಿಸಿದರು.

ನಗರದ ಹಳೇಪೇಟೆ ಬೀದಿಯಲ್ಲಿರುವ ರೈತಸಂಘದ ಕಚೇರಿಯಲ್ಲಿ ನಡೆದ ಮಹಿಳಾ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿ ದರು.

ಭಾರತ ದೇಶದ ಬಹುಸಂಖ್ಯಾತರಾಗಿರುವ ಮಹಿಳಾ ವರ್ಗವನ್ನು ಆಳುವ ವ್ಯವಸ್ಥೆ ಮತ ಬ್ಯಾಂಕ್ ಆಗಿ ಬಳಸಿಕೊಂಡಿದೆಯೇ ವಿನಃ ಅವರ ಪುರೋಭಿವೃದ್ದಿಗೆ, ಅಂಬೇಡ್ಕರ್ ಸಂವಿಧಾನದಲ್ಲಿ ಒದಗಿಸಿರುವ ಮೀಸಲಾತಿ ಮೂಲಕ ಮೇಲೆತ್ತಲು ಪ್ರಾಮಾಣಿಕ ಪ್ರಯತ್ನ ಮಾಡಿಲ್ಲದಿರುವುದು ದುರಂತವಾಗಿದೆ ಎಂದು ವಿಷಾಧಿಸಿದರು.

ಮಹಿಳಾ ಶಕ್ತಿಯು ಮತದಾನ ಎಂಬ ಅಸ್ತçವನ್ನು ಬಳಸಿಕೊಂಡು ಅರ್ಹರನ್ನು ಚುನಾಯಿಸುವ ಮೂಲಕ ತಮ್ಮ ಅಸ್ತಿತ್ವಕ್ಕೆ ಬುನಾದಿ ಹಾಕಿಕೊಳ್ಳಬೇಕು.

ಮೇಲಾಗಿ ಮಹಿಳಾ ಮೀಸಲು ಕ್ಷೇತ್ರದಲ್ಲಿ ಪ್ರಜ್ಞಾವಂತರನ್ನು ನೇಮಿಸಿ ಆಮೂಲಕ ಪ್ರತಿನಿಧೀ ಕರಣಕ್ಕೆ ಗೌರವ ಸಲ್ಲಿಸಬೇಕು. ಯಾವುದೇ ಕಾರಣಕ್ಕೂ ಚುನಾವಣೆ ಸಮಯದಲ್ಲಿ ಆಮಿಷಗಳಿಗೆ ಒಳಗಾಗಿ ಉಡುಗೊರೆ ಸ್ವೀಕರಿಸಿ, ಅವರ ಋಣಕ್ಕೆ ಕಟ್ಟುಬಿದ್ದು ಮತವನ್ನು ಮಾರಿಕೊಳ್ಳ ಬೇಡಿ ಎಂದು ಕರೆ ನೀಡಿದರು.

ರಾಜ್ಯಾಧ್ಯಕ್ಷ ಬಾಬಣ್ಣ ಮಾತನಾಡಿ ಹಳ್ಳಿ ಮಕ್ಕಳ ಸಂಘವು ಜಿಲ್ಲೆಯಲ್ಲಿ ಸಕ್ರಿಯವಾಗಿದ್ದು ಮಹಿಳೆಯ ಹಕ್ಕುಗಳ ಬಗ್ಗೆ ನಿರಂತರವಾಗಿ ಹೋರಾಟ ಮಾಡುತ್ತಾ ಬಂದಿದೆ.ಗ್ರಾಮೀಣ ಪ್ರದೇಶದ ಮಹಿಳಾ ವರ್ಗ, ಅದರಲ್ಲೂ ದುಡಿಯುವ ವರ್ಗವನ್ನು ಮೇಲೆತ್ತುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತಾ ಬರಲಾಗಿದೆ.ಈ ಬಾರಿ ಚುನಾವಣೆಯಲ್ಲಿ ಮಹಿಳಾ ವರ್ಗ ಪ್ರಧಾನ ವಹಿಸಲಿದ್ದು ಅವರಿಗೆ ಅರಿವು ಮೂಡಿಸುವ ಸಮುವಾಗಿ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಜಿಲ್ಲಾಧ್ಯಕ್ಷ ನರಸಿಂಹಪ್ಪ,ಬಿ.ಎನ್.ರವಿಕುಮಾರ್,ಜಮ್ಮನಕಟ್ಟೆ,ಸಿ.ನಾರಾಯಣಸ್ವಾಮಿ,ವಹಿದಾ,ಮ0ಜಮ್ಮ,ಗ0ಗರತ್ನಮ್ಮ, ಮತ್ತಿತರರು ಇದ್ದರು.