Wednesday, 11th December 2024

ಜನರ ಪ್ರೀತಿಗೆ ಆಭಾರಿ,ಆದರೆ ಹೈಕಮಾಂಡ್ ಸೂಚಿಸಿದ ಕ್ಷೇತ್ರದಲ್ಲಿ ನನ್ನ ಸ್ಪರ್ಧೆ : ಕೊತ್ತೂರು ಮಂಜುನಾಥ್

ಸುಧಾಕರ್ ಸೇರಿದಂತೆ ಸ್ವತಃ ಸಿ.ಎಂ.ಬಸವರಾಜ ಮೊಮ್ಮಾಯಿ ಅವರೇ ಬಿಜೆಪಿಗೆ ಕರೆದದ್ದು ನಿಜ

ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರ ವಿಧಾನ ಸಭಾ ಕ್ಷೇತ್ರದ ಜನತೆ ನಿತ್ಯವೂ ಪ್ರೀತಿಯಿಂದ ಇಲ್ಲಿ ಸ್ಪರ್ಧೆ ಮಾಡಿ ಎಂದು ಕರೆಯು ತ್ತಿದ್ದಾರೆ. ಅವರ ಪ್ರೀತಿಗೆ ನಾನು ಆಭಾರಿ. ಆದರೆ ಪಕ್ಷದ ಹೈಕಮಾಂಡ್ ಈವರೆಗೆ ನನಗೆ ಇಲ್ಲಿ ಸ್ಪರ್ಧೆ ಮಾಡಿ ಎಂದು ಸೂಚನೆ ಕೊಟ್ಟಿಲ್ಲ.ಅವರು ಆದೇಶ ನೀಡಿದ ಕಡೆ ಖಂಡಿತವಾಗಿ ಸ್ಪರ್ಧೆ ಮಾಡುತ್ತೇನೆ ಎಂದು ಮುಳಬಾಗಿಲು ಕ್ಷೇತ್ರದ ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಸ್ಪಷ್ಟಪಡಿಸಿದರು.

ನಗರ ಹೊರವಲಯ ಶ್ರೀಕೃಷ್ಣ ಕನ್ವೆನ್ಷನ್ ಹಾಲ್ ಬಳಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಬಿಜೆಗೆ ಸೇರುವ ಆಫರ್ ಇತ್ತು ನಾನು ಸಚಿವ ಸುಧಾಕರ್ ಒಳ್ಳೆಯ ಸ್ನೇಹಿತರಾಗಿದ್ದದ್ದು ನಿಜ.ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಚುನಾ ವಣೆಗೂ ಮುನ್ನ ಸಚಿವ ಮುನಿರತ್ನಂ,ಸುಧಾಕರ್, ಮಾಲೂರು ಮಂಜುನಾಥ್ ಇತರರೆಲ್ಲಾ ಕೂಡಿ ಬಿಜೆಪಿಗೆ ಸೇರುವಂತೆ ಆಫರ್ ನೀಡಿದ್ದು ನಿಜ.ಸ್ವತಃ ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ಕೂಡ ಈ ಬಗ್ಗೆ ಮಾತನಾಡಿದ್ದರು. ಆದರೆ ನಾನೂ ಒಬ್ಬರಿಗೆ ಮಾತುಕೊಟ್ಟಾಗಿದೆ.ನಾನು ಬಿಜೆಪಿ ಸೇರಲಾರೆ ಎಂದು ನಿರಾಕರಿಸಿದೆ.ಚುನಾವಣೆಯಲ್ಲಿ ಅನಿಲ್‌ಕುಮಾರ್ ಗೆದ್ದರು. ಆನಂತರ ಸುಧಾಕರ್ ಮತ್ತು ನನಗೆ ಮಾತುಕತೆ ನಿಂತು ಹೋಯಿತು ಎಂದರು.

ಸ್ಥಳೀಯರಿಗೆ ಬೆಲೆ
ರಾಜಕೀಯದಲ್ಲಿ ಯಾವುದೇ ಹೊಸ ಕ್ಷೇತ್ರಕ್ಕೆ ತಾನೇ ತಾನಾಗಿ ನಾಯಕನಾದವನು ಹೋಗಬಾರದು.ಅಲ್ಲಿನ ಜನತೆ ಇಷ್ಟ ಪಟ್ಟು ಕರೆದಾಗ ಮಾತ್ರ ಹೋಗಬೇಕು.ಅಂತಹದನ್ನು ನಿರಾಕರಿಸದೆ ಸ್ವಾಗತ ಮಾಡಬೇಕು. ಚಿಕ್ಕಬಳ್ಳಾಪುರ ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಕಟ್ಟಿಬೆಳೆಸಿರುವ,ದುಡಿದಿರುವ ಸ್ಥಳೀಯ ನಾಯಕರಾದ ಯಲುವಹಳ್ಳಿ ರಮೇಶ್,ವಿನಯ್‌ಶ್ಯಾಮ್,ನಂದಿ ಆಂಜಿನಪ್ಪ,ಗAಗರೆಕಾಲುವೆ ನಾರಾಯಣಸ್ವಾಮಿ,ಕೇಶವರೆಡ್ಡಿ ಇನ್ನಿತರೆ ನಾಯಕರಿದ್ದಾರೆ.ಅವರಿಗೂ ಅವಕಾಶ ಬೇಕಲ್ಲ,ನಾನೇ ಬೇಕೆಂದರೆ ಯಾರೆಲ್ಲಾ ಜಿಲ್ಲಾ ಕೇಂದ್ರದ ನಾಯಕರು ಮುಖಂಡರಿದ್ದಾರೋ ಅವರು ಒಮ್ಮತಕ್ಕೆ ಬರಬೇಕು. ಹೈಕಮಾಂಡ್‌ಗೆ ಈ ವಿಚಾರ ತಿಳಿಸಿ ನಾನೇ ನಿಲ್ಲುವುದು ಸೂಕ್ತ ಎಂದು ಸಂದೇಶ ಕೊಡಿಸಿದರೆ ಆಗ ನಾನು ಇಲ್ಲ ಸ್ಪರ್ಧಿಸಲಾರೆ ಎನ್ನಲಾ ಗುವುದಿಲ್ಲ. ಅದನ್ನು ಬಿಟ್ಟು ಕಲೈನಗರ್ ಸಿನಿಮಾದಲ್ಲಿ ವಡಿವೇಲು ಪೋಲೀಸರ ಬಳಿ ಬಂದು ನಾನೂ ರೌಡಿ ನನ್ನನ್ನು ಬಂಧಿಸಿ ಕರೆದು ಕೊಂಡು ಹೋಗಿ, ಇಲ್ಲವೆಂದರೆ ಮಾನ ಹೋಗುತ್ತೆ ಎಂದು ಬೇಡಿಕೊಂಡ ಹಾಗೆ ನಡೆದುಕೊಳ್ಳಲಾರೆ, ಅಪಹಾಸ್ಯಕ್ಕೆ ಒಳಗಾಗಲಾರೆ. ಈ ತಿಂಗಳ ಒಳಗೆ ಜಿಲ್ಲೆಯ ಹಾಲಿ ಮಾಜಿ ಶಾಸಕರನ್ನು ಊಟಕ್ಕೆ ಕರೆಯುತ್ತಿದ್ದೇನೆ.ಅಲ್ಲಿ ಅವರೆಲ್ಲರ ಅಭಿಪ್ರಾಯ ಪಡೆದು ಮುಂದಿನ ತೀರ್ಮಾನ ಮಾಡುತ್ತೇನೆ ಎಂದು ತಿಳಿಸಿದರು.

ತವರು ಕ್ಷೇತ್ರ
ಮುಳಬಾಗಿಲು ನನ್ನ ತವರು ಕ್ಷೇತ್ರವಾಗಿದ್ದು ಅದನ್ನು ಬಿಡುವ ಮಾತೇ ಇಲ್ಲ.ಫೆಬ್ರವರಿ ೨೮ಕ್ಕೆ ಹೈಕೋರ್ಟಿನಲ್ಲಿ ನನ್ನ ಜಾತಿ ಸಂಬAಧ ವಿಚಾರದ ಕೇಸು ವಿಚಾರಣೆಗೆ ಬರಲಿದೆ.ಅದನ್ನು ನೋಡಿಕೊಂಡು ಚಿಕ್ಕಬಳ್ಳಾಪುರಕ್ಕೆ ಬರಬೇಕೋ ಬೇಡವೋ ಎಂಬ ಬಗ್ಗೆ ಸ್ಪಷ್ಟನಿಲುವು ತೆಗೆದುಕೊಳ್ಳುತ್ತೇನೆ.ಅಲ್ಲಿಯವರೆಗೆ ಬೇರೇನೂ ಹೇಳುವುದಿಲ್ಲ.ಅಷ್ಟಕ್ಕೂ ನನಗೆ ಇಲ್ಲಿ ಬಂದು ಸ್ಪರ್ಧೆ ಮಾಡುವ ಇಚ್ಚೆಯಿಲ್ಲ.ಒಂದು ವೇಳೆ ಹೈಕಮಾಂಡ್ ಹೇಳಿದರೆ ಆಗ ನನ್ನವೂ ಕೆಲವು ಕಂಡೀಷನ್ ಇವೆ ಅವನ್ನು ಅವರ ಗಮನಕ್ಕೆ ತಂದು ಎಲ್ಲಕ್ಕೂ ಒಪ್ಪಿದರೆ ಆಗ ನೋಡೋಣ ಎಂದು ಹೇಳುವ ಮೂಲಕ ಮತ್ತೆ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಮಾತನಾಡಿದರು.

ಗೊಂದಲ ಮೂಡಿಸಲು ಇಷ್ಟವಿಲ್ಲ
ಕಷ್ಟಪಟ್ಟು ಬರಲು ನನಗೆ ಇಷ್ಟವಿಲ್ಲ.ಸಾವಿರಾರು ಮಂದಿ ಇಷ್ಟ ಪಟ್ಟು ಕರೆದಾಗ ಬರಲೇ ಬೇಕಾಗುತ್ತದೆ.ಬಂದ ಮೇಲೆ ಸೋಲು ಗೆಲುವು ಯಾವುದಾದರೂ ಆಗಲೇ ಬೇಕಲ್ಲ.ಇಂದು ಸೋತವರು ಮುಂದೆ ಗೆಲುವು ಸಾಧಿಸಿಯೇ ತೀರುತ್ತಾರೆ. ನಾನು ಬಂದರೆ ಸೋಲುತ್ತೇನೆ ಎಂದೇ ಬರಬೇಕು.ಗೆದ್ದೇ ಗೆಲ್ಲುತ್ತೇನೆ ಎಂದು ಬರಬಾರದು. ಜನತೆ ಯಾರನ್ನು ಗೆಲ್ಲಿಸಬೇಕು, ಸೋಲಿಸಬೇಕು ಎಂದು ತೀರ್ಮಾನಿಸುತ್ತಾರೆ.ಈ ತಿಂಗಳಾAತ್ಯಕ್ಕೆ ಯಾವುದೋ ಒಂದು ತೀರ್ಮಾನ ಮಾಡಿಯೇ ತೀರುತ್ತೇನೆ.ಈ ವಿಚಾರದಲ್ಲಿ ಜನರನ್ನು ಗೊಂದಗೊಳಿಸಲು ನನಗೆ ಇಷ್ಟವಿಲ್ಲ ಎಂದು ಮಾಧ್ಯಮದವರ ಪ್ರಶ್ನೆಗಳಿಗೆ ಉತ್ತರಿಸಿದರು.