ಭಾರತದ ಸ್ವಾಮ್ಯದ ಎಲೆಕ್ಟ್ರಿಕ್ SUV, Nexon EV, EV ಮೂಲಕ ‘ವೇಗದ’ K2K ಡ್ರೈವ್ ಅನ್ನು ರೆಕಾರ್ಡ್ ಮಾಡಲು ಸಿದ್ಧವಾಗಿದೆ
Nexon EV ಕಾಶ್ಮೀರದಿಂದ ಕನ್ಯಾಕುಮಾರಿ ಸವಾಲನ್ನು ಕೈಗೆತ್ತಿಕೊಳ್ಳುತ್ತದೆ
ಬೆಂಗಳೂರು: ಭಾರತದ ಪ್ರಮುಖ ಆಟೋಮೊಬೈಲ್ ತಯಾರಕರು ಮತ್ತು ಭಾರತದ EV ವಿಕಾಸದ ಪ್ರವರ್ತಕರಾದ ಟಾಟಾ ಮೋಟಾರ್ಸ್ ಇಂದು ತನ್ನ ಎಲೆಕ್ಟ್ರಿಕ್ SUV – NEXON EV, ಶ್ರೀನಗರದಿಂದ ಕನ್ಯಾಕುಮಾರಿಯವರೆಗೆ ಕಠಿಣ ಪ್ರಯಾಣವನ್ನು ಪ್ರಾರಂಭಿಸಲಿದೆ ಎಂದು ಘೋಷಿಸಿತು.
EV ಯಿಂದ ಅತ್ಯಂತ ವೇಗದ K2K ಡ್ರೈವ್‌ನ ದಾಖಲೆಯನ್ನು ಸೃಷ್ಟಿಸಲು NEXON EV ಫೆಬ್ರವರಿ 25 ರಿಂದ 4 ದಿನಗಳಲ್ಲಿ 4000 ಕಿಮೀಗಳನ್ನು ನಾನ್-ಸ್ಟಾಪ್ ಡ್ರೈವ್‌ನಲ್ಲಿ (ವಾಹನವನ್ನು ಚಾರ್ಜ್ ಮಾಡಲು ಮಾತ್ರ ನಿಲ್ಲಿಸಲಾಗುತ್ತದೆ) ಚಲಿಸುತ್ತದೆ. ಒತ್ತಡ ರಹಿತ ಅನುಭವಕ್ಕಾಗಿ ಟಾಟಾ ಮೋಟಾರ್ಸ್ NEXON EV ಯ ವ್ಯಾಪ್ತಿಯನ್ನು 453 ಕಿಮೀಗಳಿಗೆ ಹೆಚ್ಚಿಸಿದ್ದರೆ, ಟಾಟಾ ಪವರ್ ದೇಶದಾದ್ಯಂತ ಹೆದ್ದಾರಿ ಚಾರ್ಜಿಂಗ್ ಮೂಲಸೌಕರ್ಯವನ್ನು ವ್ಯವಸ್ಥಿತವಾಗಿ ಹೆಚ್ಚಿಸುವ ಮೂಲಕ ಸಾರ್ವಜನಿಕ ಚಾರ್ಜಿಂಗ್ ಅನ್ನು ಸರ್ವವ್ಯಾಪಿ ಮತ್ತು ಸುಲಭವಾಗಿ ಪ್ರವೇಶಿಸುವಂತೆ ಮಾಡಿದೆ.
ಈ ಪ್ರಯಾಣದಲ್ಲಿ, Nexon EV ಕಠಿಣ ಹವಾಮಾನ ಪರಿಸ್ಥಿತಿಗಳು ಮತ್ತು ಭಾರತೀಯ ಉಪಖಂಡದ ವಿವಿಧ ರೀತಿಯ ಕಷ್ಟಕರವಾದ ಭೂಪ್ರದೇಶಗಳ ಮೂಲಕ ಸಾಗುತ್ತದೆ. ಈ ಪರಿಶ್ರಮವು ಹೆಚ್ಚಿನ ವೇಗದ ಮತ್ತು ದೂರದ ಪ್ರಯಾಣವನ್ನು ನಿರ್ವಹಿಸುವಲ್ಲಿ Nexon EV ಯ ಸಾಮರ್ಥ್ಯವನ್ನು ಪ್ರದರ್ಶಿಸುವ ಮತ್ತು ದೇಶದ ಉದ್ದ ಮತ್ತು ಅಗಲದ ಮೂಲಕ ಸಾರ್ವಜನಿಕ ಚಾರ್ಜಿಂಗ್ ನೆಟ್‌ವರ್ಕ್‌ನ ಲಭ್ಯತೆಯನ್ನು ಎತ್ತಿ ತೋರಿಸುವ ಗುರಿಯನ್ನು ಹೊಂದಿದೆ.
ಈ ರೋಮಾಂಚಕಾರಿ ಯಾತ್ರೆಯ ಕುರಿತು ಪ್ರತಿಕ್ರಿಯಿಸಿದ ಟಾಟಾ ಪ್ಯಾಸೆಂಜರ್ ಎಲೆಕ್ಟ್ರಿಕ್ ಮೊಬಿಲಿಟಿ ಲಿಮಿಟೆಡ್‌ನ ಮಾರ್ಕೆಟಿಂಗ್, ಸೇಲ್ಸ್ ಮತ್ತು ಸರ್ವಿಸ್ ಸ್ಟ್ರಾಟಜಿಯ ಮುಖ್ಯಸ್ಥರಾದ ಶ್ರೀ ವಿವೇಕ್ ಶ್ರೀವತ್ಸ ಅವರು, “ಹೊಸ ವಿಕಸನಗೊಳ್ಳುತ್ತಿರುವ ತಂತ್ರಜ್ಞಾನವಾಗಿರುವುದರಿಂದ, ನೈಜ ಪ್ರಪಂಚದಲ್ಲಿ ಮತ್ತು ನೈಜ ಸಮಯದಲ್ಲಿ EV ಗಳ ಸಾಮರ್ಥ್ಯಗಳು ಮತ್ತು ಸಾಧ್ಯತೆಗಳನ್ನು ಪ್ರದರ್ಶಿಸುವುದು ಬಹು ಮುಖ್ಯವಾಗಿದೆ. Nexon EV ಯೊಂದಿಗೆ ಈ ಮಹತ್ವಾಕಾಂಕ್ಷೆಯ ಪ್ರಯಾಣವನ್ನು ಪ್ರಾರಂಭಿಸುವ ಮೂಲಕ, ಟಾಟಾ ಪವರ್‌ನಲ್ಲಿ ನಮ್ಮ ಪರಿಸರ ವ್ಯವಸ್ಥೆಯ ಪಾಲುದಾರರು ಸ್ಥಾಪಿಸಿರುವ ಹೆಚ್ಚುತ್ತಿರುವ ಚಾರ್ಜಿಂಗ್ ಸ್ಟೇಷನ್‌ಗಳ ಜೊತೆಗೆ NEXON EV ಯ ದೀರ್ಘ ಶ್ರೇಣಿಯ ಪ್ರಯೋಜನಗಳ ನಿರ್ಣಾಯಕ ಪುರಾವೆಯನ್ನು ನೀಡುವ ಮೂಲಕ ಅಸ್ತಿತ್ವದಲ್ಲಿರುವ ಮತ್ತು ನಿರೀಕ್ಷಿತ EV ಮಾಲೀಕರನ್ನು ಪ್ರೇರೇಪಿಸಲು ನಾವು ಬಯಸುತ್ತೇವೆ.
Nexon EV ಯೊಂದಿಗೆ, 453 ಕಿಮೀ ವರ್ಧಿತ ವ್ಯಾಪ್ತಿಯನ್ನು ನೀಡುವ ಈ ರೋಮಾಂಚನಕಾರಿ ಪ್ರಯಾಣವನ್ನು ಪ್ರಾರಂಭಿಸಲು ನಾವು ಉತ್ಸುಕರಾಗಿ ದ್ದೇವೆ, ಇದರಲ್ಲಿ ವಾಹನ ಚಾಲನೆ ಮಾಡುವ ಉತ್ಸಾಹಿಗಳು, EV ವಿಶ್ವಾಸಿಗಳ ತಂಡಗಳೊಂದಿಗೆ ನನ್ನ ಸಹೋದ್ಯೋಗಿಗಳು ಮತ್ತು ನಾನು ಅತಿ ಕನಿಷ್ಠ ಸಮಯದಲ್ಲಿ ಭಾರತದ ಉತ್ತರದಿಂದ ದಕ್ಷಿಣಕ್ಕೆ 4000 ಕಿಮೀಗಳ ಮೂಲಕ ನ್ಯಾವಿಗೇಟ್ ಮಾಡಲಿದ್ದೇವೆ. ನಾವು ದಿನಕ್ಕೆ 1000 ಕಿಲೋಮೀಟರ್‌ಗಳನ್ನು ಚಲಿಸುವ ಗುರಿಯನ್ನು ಹೊಂದಿದ್ದೇವೆ ಮತ್ತು NEXON EV ಇದನ್ನು ಸುಲಭವಾಗಿ ಮತ್ತು ಯ್ತಶಸ್ವಿಯಾಗಿ ಮಾಡುತ್ತದೆ ಖಾತ್ರಿಯಿದೆ. ಈ K2K ಡ್ರೈವ್ ಭಾರತದಲ್ಲಿ EV ಅಳವಡಿಕೆಯನ್ನು ಉತ್ತೇಜಿಸುತ್ತದೆ, ಮತ್ತು ಖರೀದಿದಾರರಿಗೆ ಇದನ್ನು ಮುಖ್ಯವಾಹಿನಿಯ ಆಯ್ಕೆಯಾಗಿಸುತ್ತದೆ ಎಂದು ನನಗೆ ವಿಶ್ವಾಸವಿದೆ. ” ಎಂದರು.
ಅದರ ಅಂತರ್ಗತ ಸಾಮರ್ಥ್ಯಗಳು ಮತ್ತು ‘ಎಲ್ಲಿಗೆ ಬೇಕಾದರೂ ಹೋಗು’ ಮನೋಭಾವದೊಂದಿಗೆ, Nexon EV ಈ ಅದ್ಭುತ ಪ್ರವಾಸದ ಪರಿಪೂರ್ಣ ಪಾಲುದಾರನಾಗಿದ್ದು, ಇದು ಮಿಂಚಿನ ಕಾರ್ಯಕ್ಷಮತೆಯನ್ನು ಮತ್ತು ಸುಗಮ ಚಾಲನೆಯ ಅನುಭವವನ್ನು ನೀಡುತ್ತದೆ. ಇದು ಹೆಚ್ಚಿನ ಶ್ರೇಣಿ ಮತ್ತು ಪವರ್ ಅನ್ನು ನೀಡುವುದು ಮಾತ್ರವಲ್ಲದೆ ಇದಕ್ಕೆ ವೇಗದ ಚಾರ್ಜಿಂಗ್ ಬೆಂಬಲವಿದ್ದು, ತಡೆಯಿಲ್ಲದ ಬಹು-ದೂರದ ಪ್ರಯಾಣವನ್ನು ಸರಾಗವಾಗಿ ಸುಗಮಗೊಳಿಸುತ್ತದೆ.
ಹೈ ವೋಲ್ಟೇಜ್ ಸ್ಟೇಟ್-ಆಫ್-ದಿ-ಆರ್ಟ್ ಜಿಪ್ಟ್ರಾನ್ ತಂತ್ರಜ್ಞಾನದಿಂದ ಚಾಲಿತವಾದ, Nexon EV ಅನ್ನು ಸೌಕರ್ಯ, ವಿಶ್ವಾಸಾರ್ಹತೆ, ಕಾರ್ಯಕ್ಷಮತೆ, ತಂತ್ರಜ್ಞಾನ ಮತ್ತು ಚಾರ್ಜಿಂಗ್ ಆಧಾರಸ್ತಂಭಗಳ ಮೇಲೆ ನಿರ್ಮಿಸಲಾಗಿದೆ. Ziptron EV ಆರ್ಕಿಟೆಕ್ಚರ್ ವೈವಿಧ್ಯಮಯ ಮತ್ತು ಸವಾಲಿನ ಭಾರತೀಯ ಭೂಪ್ರದೇಶದಲ್ಲಿ 800 ಮಿಲಿಯನ್ ಕಿಮೀಗಳಷ್ಟು ಚಲಿಸಿದೆ ಮತ್ತು ಇದು ಸಾಬೀತಾಗಿದೆ. 453 ಕಿಮೀ ವರ್ಧಿತ ವ್ಯಾಪ್ತಿಯೊಂದಿಗೆ NEXON EV ಯ ವೈಶಿಷ್ಟ್ಯಗಳು ಮತ್ತು ವಿಶೇಷ ಪ್ರಯೋಜನಗಳು ಅಡೆತಡೆಯಿಲ್ಲದ ಅಂತರ ಮತ್ತು ನಗರದೊಳಗಿನ ಪ್ರಯಾಣವನ್ನು ಖಚಿತಪಡಿಸುತ್ತವೆ. ತತ್‌ಕ್ಷಣದ ಟಾರ್ಕ್ ಡೆಲಿವರಿ, i-VBAC ಜೊತೆಗೆ ESP, ಹಿಲ್ ಡಿಸೆಂಟ್ ಕಂಟ್ರೋಲ್, IP 67 ರೇಟೆಡ್ ಬ್ಯಾಟರಿ ಪ್ಯಾಕ್ ಮತ್ತು ಮೋಟಾರ್, ಆಟೋ-ಡಿಮ್ಮಿಂಗ್ IRVM, ಹೈ ಗ್ರೌಂಡ್ ಕ್ಲಿಯರೆನ್ಸ್, ಹೈ-ವಾಟರ್ ವೇಡಿಂಗ್ ಸಾಮರ್ಥ್ಯ, ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಮತ್ತು ಆಟೋ ವೆಹಿಕಲ್ ಹೋಲ್ಡ್ ಗಳೊಂದಿಗೆ Nexon EV ದೇಶದಾದ್ಯಂತ ಯಾವುದೇ ರಸ್ತೆ ಪರಿಸ್ಥಿತಿಗಳಲ್ಲಿ ಓಡುವ ಸಾಮರ್ಥ್ಯವನ್ನು ಹೊಂದಿದೆ. ಮಲ್ಟಿ-ಮೋಡ್ ರೀಜೆನ್ ವೈಶಿಷ್ಟ್ಯವು ವಿಶೇಷವಾಗಿ ಬ್ರೇಕಿಂಗ್ ಮೂಲಕ ವಾಹನಕ್ಕೆ ಸ್ವಲ್ಪ ರೇಂಜ್ ಬ್ಯಾಂಕ್ ಅನ್ನು ಸೇರಿಸಲು ಸಹಾಯ ಮಾಡುತ್ತದೆ.
ಇದು DC ಫಾಸ್ಟ್ ಚಾರ್ಜಿಂಗ್, AC ಫಾಸ್ಟ್ ಚಾರ್ಜಿಂಗ್ ಅಥವಾ ಯಾವುದೇ 15 A ಪ್ಲಗ್ ಪಾಯಿಂಟ್‌ನ ನಿಯಮಿತ ಚಾರ್ಜಿಂಗ್‌ನಂತಹ ವಿವಿಧ ಚಾರ್ಜಿಂಗ್ ಆಯ್ಕೆಗಳೊಂದಿಗೆ ಹೊಂದಿಕೊಳ್ಳುತ್ತದೆ, ಹಾಗಾಗಿ ಇದು ಬಳಕೆದಾರರಿಗೆ ದೂರದ ಪ್ರದೇಶಗಳಲ್ಲಿಯೂ ಕಾರ್ಯನಿರ್ವಹಿಸಲು ಅನುವು ಮಾಡಿಕೊಡು ತ್ತದೆ. ಇದರ ಐಷಾರಾಮಿ ಇಂಟೀರಿಯರ್‌ಗಳಾದ ವೆಂಟಿಲೇಟೆಡ್ ಲೆದರ್ ಸೀಟ್‌ಗಳು, ಹಿಂಭಾಗದ ಎಸಿ ವೆಂಟ್‌ಗಳು ಮತ್ತು ಮತ್ತು ಆಕ್ಟಿವ್ ಡಿಸ್‌ಪ್ಲೇ ಮತ್ತು ಹಿಂಭಾಗದ ಎಸಿ ವೆಂಟ್‌ಗಳೊಂದಿಗೆ ಅಲಂಕೃತ ಕಂಟ್ರೋಲ್ ನಾಬ್ ಅಂತಹ ಸವಾಲಿನ ಡ್ರೈವ್‌ಗಳನ್ನು ಸುಗಮ ಮತ್ತು ಆರಾಮದಾಯಕವಾಗಿಸುತ್ತದೆ.
ನಮ್ಮ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳ ಮೂಲಕ ಈ ರೋಮಾಂಚನಕಾರಿ ಪ್ರಯಾಣವನ್ನು ಅನುಸರಿಸಿ: Twitter ನಲ್ಲಿ @TataMotorsEV ಮತ್ತು Instagram ನಲ್ಲಿ @TataMotorsEvolveToElectric.
Nexon EV ಕುರಿತ ಹೆಚ್ಚಿನ ಮಾಹಿತಿಗಾಗಿ, ನಿಮ್ಮ ಹತ್ತಿರದ ಡೀಲರ್‌ಶಿಪ್‌ಗೆ ಕರೆ ಮಾಡಿ ಅಥವಾ https://nexonev.tatamotors.com ಗೆ ಭೇಟಿ ನೀಡಿ.