Friday, 13th December 2024

ಉದ್ಯಮಿ ರಾಹೀ ಅಂಬಾನಿ – ಮಹಿಳಾ ಸಬಲೀಕರಣದ ಚಾಂಪಿಯನ್

ಅಮೆಜಾ಼ನ್‌ನಲ್ಲಿ ತಮ್ಮ ಬ್ರಾಂಡ್ ಅನ್ನು ಹೊಸ ಎತ್ತರಕ್ಕೆ ಕೊಂಡೊಯ್ದ ಆರೋಗ್ಯಸೇವಾ ಉದ್ಯಮಿ ರಾಹೀ ಅಂಬಾನಿ ಅವರನ್ನು ಭೇಟಿ ಮಾಡಿ
ಶ್ರೇಷ್ಠ ಸಮಾಜಗಳು ಅಡೆತಡೆಗಳನ್ನು ಮುರಿಯುವ ಮತ್ತು ಸ್ಟೀರಿಯೋಟೈಪ್‌ಗಳನ್ನು ನಿರಾಕರಿಸುವ ಸದೃಢ ಮಹಿಳೆಯರಿಂದ ನಿರ್ಮಾಣವಾಗುತ್ತವೆ ಮತ್ತು ಅಂತಹ ಮಹಿಳೆಯರು ಮಹತ್ತರವಾದ ಎತ್ತರಗಳನ್ನು ಸಾಧಿಸಲು ಕಟಿಬದ್ಧರಾಗಿರುತ್ತಾರೆ. ಈ ವರ್ಷದ ಅಂತಾರಾಷ್ಟ್ರೀಯ ಮಹಿಳಾ ದಿನದ ವಿಷಯ, “ಎಂಬ್ರೇಸ್‌ಈಕ್ವಿಟಿ (ಸಮಾನತೆಯನ್ನು ಅಪ್ಪಿಕೊಳ್ಳಿ)’ ಎಂದಿದ್ದು ಅಮೆಜಾ಼ನ್ ಇಂಡಿಯಾದ #ಶಿಈಸ್‌ಅಮೆಜಾ಼ನ್ ಎರಡನೆಯ ಆವೃತ್ತಿಯ ಅಭಿಯಾನವು ಸ್ಫೂರ್ತಿ ತುಂಬುವ, ಮುನ್ನಡೆಸುವ ಮತ್ತು ಆವಿಷ್ಕರಿಸುವ ಮಹಿಳೆಯರನ್ನು ಎತ್ತಿ ತೋರಿಸುತ್ತದೆ.

ಟರ‍್ರಾವಿಟಾದ ಸಂಸ್ಥಾಪಕಿ ರಾಹೀ ಅಂಬಾನೀ ಆರೋಗ್ಯಸೇವೆಯನ್ನು ಜೀವನಶೈಲಿಯಾಗಿಸುವ ದೂರದೃಷ್ಟಿಯಿಂದ ಉದ್ಯಮ ಪ್ರಾರಂಭಿಸಿರುವ ಅಂತಹ ಮಹಿಳೆಯರಲ್ಲಿ ಒಬ್ಬರು. ಅವರು ಆರೋಗ್ಯಕರ ಜೀವನಶೈಲಿಯನ್ನು ಪ್ರತಿಪಾದಿಸುವುದೇ ಅಲ್ಲದೆ ಮಹಿಳಾ ಸಬಲೀಕರಣದ ಚಾಂಪಿಯನ್ ಆಗಿದ್ದಾರೆ. ಟರ‍್ರಾವಿಟಾದ ಶೇ.೬೦ರಷ್ಟು ಉದ್ಯೋಗಿಗಳು ಮಹಿಳೆಯರಾಗಿದ್ದು ಅವರ ಜವಾಬ್ದಾರಿಗಳು ವಿಜ್ಞಾನಿಗಳಿಂದ ಗ್ರಾಫಿಕ್ ಕಲಾವಿದರವರೆಗೆ ಲಾಜಿಸ್ಟಿಕ್ಸ್ ಪರಿಣಿತರವರೆಗೆ ಒಳಗೊಂಡಿದೆ. ಸ್ವತಃ ಉದ್ಯಮ ಮಾಲೀಕರಾಗಿರುವ ರಾಹೀ ಇತರೆ ಮಹಿಳೆಯರ ಸಬಲೀಕರಣಕ್ಕೆ ಶ್ರಮಿಸುತ್ತಿದ್ದಾರೆ.

ಒಂದು ಉದ್ಯಮ ಕಟ್ಟುವುದು ಕಷ್ಟದ ಕೆಲಸ, ಮತ್ತು ಒಳ್ಳೆಯ ಉದ್ಯಮ ನಿರ್ಮಿಸಲು ಯಾವುದೇ ಶಾರ್ಟ್ಕಟ್ ಅಥವಾ ಪೂರ್ವಾಗ್ರಹಗಳಿಲ್ಲ. ಆದಾಗ್ಯೂ, ಪ್ರತಿ ಉದ್ಯಮಿಯೂ ಎಲ್ಲೋ ಒಂದು ಕಡೆ ಪ್ರಾರಂಭಿಸಬೇಕು ಮತ್ತು ಸಮಾಜದಲ್ಲಿ ಸಕಾರಾತ್ಮಕ ವ್ಯತ್ಯಾಸವನ್ನು ತರಬೇಕು. ಎಂದು ಮತ್ತು ಎಲ್ಲಿ ನೀವು ನಿಮ್ಮ ಪ್ರಯಾಣ ಪ್ರಾರಂಭಿಸುತ್ತೀರಿ ಎನ್ನುವುದು ಮುಖ್ಯವಲ್ಲ. ರಾಹೀ ಅದನ್ನೇ ಸಾಬೀತುಪಡಿಸಿದ್ದಾರೆ! ಅವರು ನಿಯಮಗಳನ್ನು ನಿರಾಕರಿಸಿದರು, ರಿಸ್ಕ್ ತೆಗೆದುಕೊಂಡರು, ಅಡೆತಡೆಗಳನ್ನು ಎದುರಿಸಿದರು ಮತ್ತು ಯಶಸ್ಸಿನ ತುತ್ತತುದಿ ಏರಿದರು. ಲಂಡನ್ ಸ್ಕೂಲ್ ಆಫ್ ಇಕನಾಮಿಕ್ಸ್ ಪದವೀಧರರಾದ ನಂತರ ಆರೋಗ್ಯ ಮತ್ತು ಪೌಷ್ಠಿಕಾಂಶ ಸಂಶೋಧನೆ ಕೈಗೊಂಡರು, ಅದು ಅವರಿಗೆ ಸರಾಸರಿ ಭಾರತೀಯರಲ್ಲಿ ಅಪಾರವಾದ ಪೌಷ್ಠಿಕತೆಯ ಅಂತರವಿರುವುದು ಕಂಡುಬ೦ದಿತು ಮತ್ತು ಇದರಿಂದಲೇ ಅವರಿಗೆ ಟರ‍್ರಾವಿಟಾ ಸೃಷ್ಟಿಸಲು ಸ್ಫೂರ್ತಿ ಬಂದಿತು.

ಈಗ ಕಲ್ಪಿಸಿಕೊಳ್ಳುವುದು ಕಷ್ಟ, ಆದರೆ ರಾಹೀ ಅವರ ಇ-ಕಾಮರ್ಸ್ ಉದ್ಯಮವನ್ನು ಪ್ರಾರಂಭಿಸಿದಾಗ ಜನರು ಸಂಶಯ ವ್ಯಕ್ತಪಡಿಸಿದರು. ಭಾರತೀಯರ ದೇಹಕ್ಕೆ ವಿನ್ಯಾಸಗೊಳಿಸಿದ ಆರೋಗ್ಯ ಪೂರಕ ಉತ್ಪನ್ನ ಸರಣಿಯ ಪರಿಕಲ್ಪನೆ ಮಾರಾಟ ಮಾಡುವುದು ಹೊಸ ವಿಭಾಗವಾಗಿತ್ತು. ಆದಾಗ್ಯೂ, ಅವರು ಬಿಡುಗಡೆಗೆ ಅಗತ್ಯವಾದ ಹಣಕಾಸು ಕ್ರೋಢೀಕರಿಸಿದರು ಮತ್ತು ಉದ್ಯಮ ಬೆಳೆಯಿತು.

ಇಲ್ಲಿಯವರೆಗೂ ಈ ಪ್ರಯಾಣದ ಕುರಿತು ಅವರು, “ನೀವು ಸದೃಢತೆ ಮತ್ತು ಫೋಕಸ್ಡ್ ಆಗಿದ್ರೆ ನೀವು ಯಶಸ್ವಿಯಾಗುತ್ತೀರಿ ಮತ್ತು ಕೆಲಸದಲ್ಲಿ ಹಾಗೂ ಸಮಾಜದಲ್ಲಿ ನಿಮ್ಮ ಕೊಡುಗೆಗೆ ಸಂತೋಷ ಮತ್ತು ಹೆಮ್ಮೆ ಪಡುತ್ತೀರಿ. ಮಹಿಳಾ ಉದ್ಯಮಿಗಳಾಗಿ ನಾವು ನಮ್ಮನ್ನೇ ಮತ್ತು ನಮ್ಮ ನಿರ್ಧಾರಗಳನ್ನು ಆಗಾಗ್ಗೆ ಪ್ರಶ್ನಿಸಿಕೊಳ್ಳಲು ಬಯಸುತ್ತೇವೆ. ಆದರೆ ನನಗೆ ನನ್ನ ನಿರ್ಧಾರ ಕೈಗೊಳ್ಳುವಾಗ ಆಲೋಚಿಸುತ್ತಿದ್ದರಿಂದ ಹೆಚ್ಚು ಯಶಸ್ವಿ ಉದ್ಯಮದತ್ತ ಕೊಂಡಿಯ್ಯಿತು. ಉದ್ಯಮಿಗಳಾಗಿ ಮುಖ್ಯವಾದುದು ಏನೆಂದರೆ ಪುರುಷ ಅಥವಾ ಮಹಿಳೆಯಾಗಿರಲಿ, ಅವರ ಧ್ಯೇಯಕ್ಕೆ ಬದ್ಧರಾಗಿರಬೇಕು. ಉತ್ಪನ್ನ ಅಥವಾ ಸೇವೆ ಗ್ರಾಹಕರ ಸಮಸ್ಯೆಗಳನ್ನು ನಿವಾರಿಸಬೇಕು” ಎಂದರು.

ರಾಹೀ ಅಂಬಾನಿ ದೇಶಾದ್ಯಂತ ಮಹಿಳೆಯರ ನೇತೃತ್ವದ ಉದ್ಯಮಗಳನ್ನು ಸಬಲೀಕರಿಸಲು ಉದ್ದೇಶ ಹೊಂದಿರುವ ಅಮೆಜಾ಼ನ್‌ನ ಸಹೇಲಿಯೊಂದಿಗೆ ಸಹಯೋಗ ಹೊಂದಿರುವ ಸಾವಿರಾರು ಮಹಿಳಾ ನೇತೃತ್ವದ ಉದ್ಯಮಗಳಲ್ಲಿ ಒಬ್ಬರಾಗಿದ್ದಾರೆ. ಅಮೆಜಾ಼ನ್‌ನ ಸಹೇಲಿಯೊಂದಿಗೆ ತಮ್ಮ ಅನುಭವ ಕುರಿತು ಮಾತನಾಡಿದ ಅವರು, “ಅಮೆಜಾ಼ನ್ ಇಂಡಿಯಾ ಟರ‍್ರಾವಿಟಾದ ಯಶೋಗಾಥೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ ಮತ್ತು ನಮ್ಮ ಉದ್ಯಮಕ್ಕೆ ಅಪಾರ ಉತ್ತೇಜನ ನೀಡಿದೆ. ಸಹೇಲಿಯ ಮೂಲಕ ನಾವು ತ್ವರಿತ ಪ್ರಾರಂಭಕ್ಕೆ ವೈಯಕ್ತಿಕಗೊಳಿಸಿದ ವಿಶಿಷ್ಟ ಅವಕಾಶ ದೊರೆಯುತ್ತದೆ, ನಮ್ಮ ಲಿಸ್ಟಿಂಗ್‌ಗಳನ್ನು ಉತ್ತಮಪಡಿಸಲು ನೆರವಾಗುವ ಅಕೌಂಟ್ ಮ್ಯಾನೇಜರ್ ಅವರೊಂದಿಗೆ ಒನ್-ಆನ್-ಒನ್ ಕೆಲಸ ಮಾಡಬಹುದು, ಮಾರ್ಕೆಟಿಂಗ್ ಬೆಂಬಲ ದೊರೆಯುತ್ತದೆ ಮತ್ತು ಅಂತಿಮವಾಗಿ ಸ್ಥಿರವಾದ ತಿಂಗಳಿAದ ತಿಂಗಳ ಪ್ರಗತಿ ಇರುತ್ತದೆ ಮತ್ತು ಶೇ.೫೦ಕ್ಕಿಂತ ಹೆಚ್ಚು ಗ್ರಾಹಕರ ಉಳಿವಿನ ಪ್ರಮಾಣವಿದ್ದು ಇದು ನಮ್ಮ ತಂಡದ ಕಠಿಣ ಪರಿಶ್ರಮಕ್ಕೆ ತಕ್ಕ ಬೆಲೆ ತಂದಿದೆ” ಎಂದರು.

ಅಮೆಜಾ಼ನ್ ಸಹೇಲಿ ನವೆಂಬರ್ ೨೦೧೭ರಲ್ಲಿ ಪ್ರಾರಂಭವಾದ ಪ್ರಮುಖ ಕಾರ್ಯಕ್ರಮವಾಗಿದ್ದು ದೇಶಾದ್ಯಂತ ಮಹಿಳಾ ಉದ್ಯಮಿಗಳನ್ನು ಅಮೆಜಾ಼ನ್.ಇನ್ ಮಾರುಕಟ್ಟೆಯಲ್ಲಿ ಅವರ ಉತ್ಪನ್ನಗಳ ಮಾರಾಟಕ್ಕೆ ಅವರ ಉತ್ಪನ್ನಗಳ ಸಬಲೀಕರಣ ಮತ್ತು ಸನ್ನದ್ಧಗೊಳಿಸುವ ಗುರಿ ಹೊಂದಿದ್ದು ಸೇವಾ(SಇWಂ) ಮತ್ತು ಇಂಪಲ್ಸ್ ಸೋಷಿಯಲ್ ಎಂಟರ್‌ಪ್ರೆöÊಸ್ ಪ್ರಾರಂಭಿಸಿದ್ದು ಅಮೆಜಾ಼ನ್ ಸಹೇಲಿ ಅಮೆಜಾ಼ನ್.ಇನ್‌ನಲ್ಲಿ ಮಹಿಳಾ ಉದ್ಯಮಿಗಳಿಗೆ ಕೌಶಲ್ಯಗಳು ಮತ್ತು ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸಿಕೊಳ್ಳಲು ನೆರವಾಗಲು ವಿಶೇಷವಾದ ತರಬೇತಿ ಮತ್ತು ಕೌಶಲ್ಯ ಅಭಿವೃದ್ಧಿ ಕಾರ್ಯಾಗಾರಗಳನ್ನು ನಡೆಸುತ್ತದೆ.

ಅಮೆಜಾ಼ನ್ ಸಹೇಲಿ ತನ್ನ ಪಾಲುದಾರರ ಜಾಲದ ಮೂಲಕ ೧.೮ ಮಿಲಿಯನ್+ ಮಹಿಳಾ ಉದ್ಯಮಿಗಳನ್ನು ಡಿಜಿಟೈಸ್ ಮಾಡಲು ೧೦ ವಿಭಾಗಗಳಲ್ಲಿ ಉಡುಪು, ಆಭರಣ, ದಿನಸಿ ಇತ್ಯಾದಿ ೧.೫ ಲಕ್ಷ ಉತ್ಪನ್ನಗಳ ಮೂಲಕ ಸನ್ನದ್ಧವಾಗಿದೆ. ಈ ಕಾರ್ಯಕ್ರಮವು ೬೦+ಎನ್‌ಜಿಒ, ಸರ್ಕಾರಿ ಸಂಸ್ಥೆಗಳಾದ ನ್ಯಾಷನಲ್ ಅರ್ಬನ್ ಲೈವ್ಲಿಹುಡ್ ಮಿಷನ್, ಸೇವಾ ರೀಡ್ ಇಂಡಿಯಾ ಇತ್ಯಾದಿಗಳೊಂದಿಗೆ ಸಹಯೋಗ ಹೊಂದಿದ್ದು ಮಹಿಳಾ ಉದ್ಯಮಿಗಳಿಗೆ ಡಿಜಿಟೈಸ್ ಮಾಡಲು ನೆರವಾಗುತ್ತದೆ.

ಅಮೆಜಾ಼ನ್ ಇಂಡಿಯಾ ವೈವಿಧ್ಯಮಯ, ಸಮಾನ ಮತ್ತು ಎಲ್ಲರನ್ನೂ ಒಳಗೊಳ್ಳುವ(ಡಿಇಐ) ಕಾರ್ಯಪಡೆ ರೂಪಿಸಲು ಬದ್ಧವಾಗಿದೆ ಮತ್ತು ಸಮಾಜದ ಎಲ್ಲ ವರ್ಗಗಳ ವ್ಯಕ್ತಿಗಳ ಸಬಲೀಕರಣ ಮಾಡುತ್ತದೆ. ತನ್ನ ವಿವಿಧ ಕಾರ್ಯ ನಿರ್ವಹಣೆಯ ಕಾರ್ಯಕ್ರಮಗಳ ಮೂಲಕ ಅಮೆಜಾ಼ನ್ ಇಂಡಿಯಾ ಹಲವು ಮಹಿಳೆಯರನ್ನು ಅವರ ಉದ್ಯಮಶೀಲತೆಯ ಸಾಮರ್ಥ್ಯ ಅನಾವರಣ ಮಾಡಿಕೊಳ್ಳಲು ಮತ್ತು ಅವರ ದಿಗಂತಗಳನ್ನು ವಿಸ್ತರಿಸಲು ಅವಕಾಶಗಳನ್ನು ಸೃಷ್ಟಿಸಲು ನೆರವಾಗುವುದನ್ನು ಮುಂದುವರಿಸುತ್ತಿದೆ.