Wednesday, 11th December 2024

ಮೊಬಿಲ್ 1TM ಇಂಜಿನ್ ಆಯಿಲ್ ನೀಡುವುದು ಚಾಂಪಿಯನ್ ಶಿಪ್ ಗೆಲುವಿನ ಸಾಮರ್ಥ್ಯ

ನವದೆಹಲಿ: ಎಕ್ಸಾನ್‌ಮೊಬಿಲ್ ಇಂದು ತನ್ನ ಅತ್ಯುತ್ತಮವಾದ ಸಂಪೂರ್ಣ ಸಿಂಥೆಟಿಕ್ ಇಂಜಿನ್ ಆಯಿಲ್, ಮೊಬಿಲ್ 1 ಟ್ರಿಪಲ್ ಆಕ್ಷನ್ ಪವರ್+ ಅನ್ನು ಅನಾವರಣಗೊಳಿಸುತ್ತಿದ್ದು, ಇದನ್ನು ವಿಶೇಷವಾಗಿ ಸೂತ್ರೀಕರಿಸಲ್ಪಟ್ಟಿರುವುದರಿಂದ ಕಾರ್ ಮಾಲೀಕರು ಅತ್ಯುತ್ತಮ ಇಂಜಿನ್ ಸಾಮರ್ಥ್ಯ, ರಕ್ಷಣೆ ಮತ್ತು ಸ್ವಚ್ಛತೆಯೊಂದಿಗೆ ಮಿತವ್ಯಯಕಾರಿ ಇಂಧನದ ಹೆಚ್ಚುವರಿ ಪ್ರಯೋಜನಗಳನ್ನು ನೀಡುವ ಮೂಲಕ ತಮ್ಮ ವಾಹನಗಳ ಪವರ್ ಅನ್ ಲಾಕ್ ಮಾಡಲು ನೆರವಾಗುತ್ತದೆ.

“ನಾವು ಮೊಬಿಲ್ 1 ಇಂಜಿನ್ ಆಯಿಲ್ ಅನ್ನು ವಿಶ್ವದ ಯಾವುದೇ ಕೆಲವು ಕಠಿಣ, ಅತ್ಯಂತ ವಿಪರೀತದ ಹಾಗೂ ವಾಸ್ತವ ಜೀವನದ ಸ್ಥಿತಿಗಳನ್ನು ಪ್ರತಿ ಫಲಿಸುವಂತಹ ಪ್ರಯೋಗಾಲಯ, ರಸ್ತೆ ಮತ್ತು ಟ್ರ್ಯಾಕ್ ಗಳಲ್ಲಿ ಪರೀಕ್ಷಿಸಿದ್ದೇವೆ,” ಎಂದು ಎಕ್ಸಾನ್‌ಮೊಬಿಲ್ ಲೂಬ್ರಿಕೆಂಟ್ಸ್ ಪ್ರೈ ಲಿ ನ ಸಿಇಓ, ವಿಪಿನ್ ರಾಣಾ ಹೇಳಿದ್ದಾರೆ.

“ಫಾರ್ಮುಲಾ ಒನ್ ಮೊಬಿಲ್ 1 ಇಂಜಿನ್ ಆಯಿಲ್ ಗಳಿಗೆ ಅತ್ಯುತ್ತಮವಾದ ಪರೀಕ್ಷಾ ತಾಣವಾಗಿದ್ದು, ಇದು ರೇಸ್ ಕಾರ್ ಗಳ ಚಲಿಸುವ ಎಲ್ಲಾ ಭಾಗಗಳಲ್ಲಿನ ಘರ್ಷಣೆ ಹಾಗೂ ಸವೆತವನ್ನು ಕಡಿಮೆ ಮಾಡಲು ನೆರವಾಗುತ್ತದೆ. ಮ್ಯಾಕ್ಸ್ ವರ್ಸ್ಟಾಪನ್ ಮತ್ತು ಸೆರ್ಗಿಯೋ ಪೆರೆಜ್ ಗೆ, ಅವರ ಕಾರ್ ಗಳಲ್ಲಿ ಇದು ಹೆಚ್ಚಿನ ಆತ್ಮವಿಶ್ವಾಸ ನೀಡುತ್ತದೆ, ಕೈಗಳಲ್ಲಿ ಹೆಚ್ಚುವರಿ ಶಕ್ತಿಯಿದ್ದಂತೆ ಮತ್ತು ಪೋಡಿಯಂ ತಲುಪಲು ಹೆಚ್ಚು ಅವಕಾಶಗಳನ್ನು ನೀಡಿ ದಂತೆ ಭಾವಿಸುತ್ತಾರೆ. ಫಾರ್ಮುಲಾ ಒನ್ ನಿಂದ ಸ್ಫೂರ್ತಿ ಪಡೆದಿರುವ ನಾವು ಕಾರ್ ಮಾಲೀಕರು ವಾಹನಗಳಲ್ಲಿ ಪವರ್ ಅನ್ ಲಾಕ್ ಮಾಡಲು ನೆರವಾಗುವಂತೆ ವಿಶೇಷವಾಗಿ ಸೂತ್ರೀಕರಿಸಲ್ಪಟ್ಟ ಮೊಬಿಲ್ 1 ಇಂಜಿನ್ ಆಯಿಲ್ ನ ಹೊಸ ಶ್ರೇಣಿಯನ್ನು ತರುತ್ತಿದ್ದೇವೆ,” ಎಂದೂ ಹೇಳಿದ್ದಾರೆ.

ಮೊಬಿಲ್ 1 30 ವರ್ಷಗಳಿಗಿಂತ ಹಿಂದಿನಿಂದ ಫಾರ್ಮುಲಾ ಒನ್ ನಲ್ಲಿ ಮಾದರಿ ಬ್ರ್ಯಾಂಡ್ ಆಗಿದ್ದು, ನಮ್ಮ ಪಾಲುದಾರಿಕೆ ಎಕ್ಸಾನ್‌ಮೊಬಿಲ್ ನ ವಿಶ್ವದರ್ಜೆಯ ಅನುಭವವನ್ನು ತರಲು ವಿಶಿಷ್ಟ ಅವಕಾಶವನ್ನು ನೀಡಿದೆ,” ಎಂದು ಅರೇಕಲ್ ರೆಡ್ ಬುಲ್ ರೇಸಿಂಗ್ ನ ತಂಡದ ಮುಖ್ಯಸ್ಥ ಕ್ರಿಶ್ಚಿಯನ್ ಹಾರ್ನರ್ ಹೇಳಿದ್ದಾರೆ.

“ನಮ್ಮ ವಿಶ್ವ ಚಾಂಪಿಯನ್ ಶಿಪ್ ಗೆಲುವು ಅತ್ಯುತ್ತಮ ಮಟ್ಟದಲ್ಲಿ ಸಮರ್ಪಣಾ ಮನೋಭಾವದ ನೂರಾರು ವೃತ್ತಿಪರರ ಕಾರ್ಯಕ್ಷಮತೆ ಹಾಗೂ ರೇಸ್ ಕಾರ್ ನ ಸಾಮರ್ಥ್ಯವನ್ನು ನಿರಂತರವಾಗಿ ಸುಧಾರಿಸುವ ತಂಡದ ಸಾಮರ್ಥ್ಯದ ಪ್ರಯತ್ನವಾಗಿದೆ,” ಎಂದು ಅವರು ಹೇಳಿದ್ದಾರೆ.

ಮೊಬಿಲ್ 1 ಟ್ರಿಪಲ್ ಆಕ್ಷನ್ ಪವರ್+ ಈಗ ಪ್ರತಿಷ್ಠಿತ ಆಟೋಮೋಟಿವ್ ರೀಟೇಲರ್ ಗಳು ಹಾಗೂ ವರ್ಕ್ ಶಾಪ್ ಗಳಲ್ಲಿ ಲಭ್ಯ.

ಮೋಟಾರ್ ಸ್ಪೋರ್ಟ್ಸ್ ನಲ್ಲಿ ಮೊಬಿಲ್ 1™ ಕುರಿತು, ಆಯಿಲ್ ಗಳು ಮತ್ತು ಲೂಬ್ರಿಕೆಂಟ್ ಗಳ ನಮ್ಮ ಶ್ರೇಣಿಯಲ್ಲಿ ತಂತ್ರಜ್ಞಾನವನ್ನು ಸುಧಾರಿಸಲು, ರೇಸಿಂಗಮೊಬಿಲ್ 1 ಬ್ರ್ಯಾಂಡ್ ಗೆ ಅತ್ಯುತ್ತಮ ಪರೀಕ್ಷಾ ತಾಣವನ್ನು ನೀಡುತ್ತದೆ. ಪ್ರತೀ ರೇಸ್ ಅವಧಿಯಲ್ಲಿ, ನಮ್ಮ ಆಧುನಿಕ ಉತ್ಪನ್ನಗಳು ರೇಸ್ ಕಾರ್ ಗಳ ಸಾಮರ್ಥ್ಯ ಹಾಗೂ ಪರಿಣಾಮವನ್ನು ಸುಧಾರಿಸಲು ನೆರವಾಗಲು ಕೆಲಸ ಮಾಡುತ್ತಿದೆ. ಮೊಬಿಲ್ 1 ಇಂಜಿನ್ ಆಯಿಲ್ ಗಳು ವಿಶ್ವದ ಅತ್ಯಂತ ಬೇಡಿಕೆಯ ಹಾಗೂ ಜನಪ್ರಿಯ ಮೋಟಾರ್ ಸ್ಪೋರ್ಟ್ಸ್ ಸರಣಿಗಳಲ್ಲಿ ಸ್ಪರ್ಧಿಸುವ ವಿಶ್ವದ ಅನೇಕ ಪ್ರಮುಖ ರೇಸ್ ತಂಡಗಳಿಗೆ ಆಯ್ಕೆಯ ಲೂಬ್ರಿಕೆಂಟ್ ಆಗಿ ಕೆಲಸ ಮಾಡುತ್ತಿದೆ. ಈ ಪಾಲುದಾರಿಕೆಯ ಮೂಲಕ ನಾವು ಪಡೆಯುವ ಜ್ಞಾನ ನಮ್ಮ ವಿಜ್ಞಾನಿಗಳು ಹಾಗೂ ಇಂಜಿನಿಯರ್ ಗಳು ತಂತ್ರಜ್ಞಾನ ಗಳನ್ನು ಅಭಿವೃದ್ಧಿಪಡಿಸಲು ಮತ್ತು ಸೀಮೆಗಳನ್ನು ನಿರಂತರವಾಗಿ ಮೀರಲು ಸಮಗ್ರ ಭಾಗವಾಗಿದೆ.

ಹೆಚ್ಚಿನ ಮಾಹಿತಿಗಾಗಿ, ಭೇಟಿ ನೀಡಿ: www.mobil1racing.com.

ಭಾರತದಲ್ಲಿ ಎಕ್ಸಾನ್‌ಮೊಬಿಲ್ ಕುರಿತು ಎಕ್ಸಾನ್‌ಮೊಬಿಲ್ ರವರ ಒಳಹರಿವಿನ ಉದ್ದಿಮೆ ಮೊಬಿಲ್ ಬ್ರ್ಯಾಂಡ್ ನ ಲೂಬ್ರಿಕೆಂಟ್ಸ್ ಮತ್ತು ಸ್ಪೆಶಾಲಿಟೀಸ್ ವಿತರಣೆ, ಮಾರಾಟ ಹಾಗೂ ಮಾರ್ಕೆಟಿಂಗ್ ಗಳನ್ನು ಒಳಗೊಂಡಿದೆ. ರಾಸಾಯನಿಕ ಉದ್ದಿಮೆ ಮಾರುಕಟ್ಟೆ ಅಭಿವೃದ್ಧಿ ಬೆಂಬಲ, ವಿಶ್ಲೇಷಣಾತ್ಮಕ ಮತ್ತು ವರದಿ ಸೇವೆಗಳನ್ನು ನೀಡುತ್ತದೆ. ಇದು ರಾಸಾಯನಿಕ ಉತ್ಪನ್ನ ಅಳವಡಿಕೆ ಬೆಂಬಲ, ಸೇವೆಗಳು ಹಾಗೂ ಉತ್ಪನ್ನ ಪರೀಕ್ಷಾ ಬೆಂಬಲವನ್ನು ಬೆಂಗಳೂರಿನ ತಂತ್ರಜ್ಞಾನ ಕೇಂದ್ರದಲ್ಲಿ ನಡೆಸುತ್ತದೆ. ಹೊರಹರಿವಿನ ಉದ್ದಿಮೆಯು ಇತರ ಎಕ್ಸಾನ್‌ಮೊಬಿಲ್ ಹೊರಹರಿವಿನ ಅಂಗಸಂಸ್ಥೆಗಳಿಗೆ ಸಲಹಾ ಮತ್ತು ಎಲ್ ಎನ್ ಜಿ ಮಾರುಕಟ್ಟೆ ಅಭಿವೃದ್ಧಿ ಬೆಂಬಲ ಸೇವೆಗಳನ್ನು ನೀಡುತ್ತದೆ.

ಜಾಗತಿಕ ವ್ಯಾಪಾರ ಕೇಂದ್ರ/ತಾಂತ್ರಿಕ ಕೇಂದ್ರವು ಎಕ್ಸಾನ್‌ಮೊಬಿಲ್ ಗೆ ಅನೇಕ ಬೆಂಬಲ ಸೇವೆಗಳನ್ನು ನೀಡುತ್ತದೆ. ಜಾಗತಿಕ ಉದ್ದಿಮೆ ಕೇಂದ್ರ/ತಾಂತ್ರಿಕ ಕೇಂದ್ರ ಜಗತ್ತಿನಾದ್ಯಂತ ಎಕ್ಸಾನ್ ಮೊಬಿಲ್ ಕಾರ್ಯವಿಧಾನಗಳಿಗೆ ಬೆಂಬಲ ಸೇವೆಗಳ ಶ್ರೇಣಿಯನ್ನು ನೀಡುತ್ತದೆ. ಎಕ್ಸಾನ್‌ಮೊಬಿಲ್ ಭಾರತದಲ್ಲಿ ಶಿಕ್ಷಣ, ಆರೋಗ್ಯ ಹಾಗೂ ಸಮುದಾಯಕ್ಕೆ ಬೆಂಬಲ ನೀಡುವ ವಿಶಾಲ ಶ್ರೇಣಿಯ ಕಾರ್ಯಕ್ರಮಗಳಿಗೆ ಕೊಡುಗೆ ನೀಡುತ್ತಿದೆ.