Wednesday, 11th December 2024

300 ಕೋವಿಡ್ ಸೋಂಕು ಪ್ರಕರಣ ಪತ್ತೆ

ನವದೆಹಲಿ: ಸಂಪೂರ್ಣ ಕ್ಷೀಣವಾಗಿದ್ದ ಮಾರಕ ಕೋವಿಡ್ ಸೋಂಕು 97 ದಿನಗಳ ಬಳಿಕ ಮತ್ತೆ ಭಾರತದಲ್ಲಿ ಸುದ್ದಿಗೆ ಗ್ರಾಸವಾಗಿದ್ದು, ಕಳೆದ 24 ಗಂಟೆಗಳಲ್ಲಿ 300ಕ್ಕೂ ಅಧಿಕ ಸೋಂಕು ಪ್ರಕರಣಗಳು ವರದಿಯಾಗಿವೆ.
ದೈನಂದಿನ ಕೋವಿಡ್ ಅಂಕಿ-ಅಂಶಗಳ ಪ್ರಕಾರ ಕಳೆದ 24 ಗಂಟೆಗಳ ಅವಧಿಯಲ್ಲಿ ದೇಶಾದ್ಯಂತ 334 ಹೊಸ ಸೋಂಕು ಪ್ರಕರಣಗಳು ವರದಿಯಾಗಿವೆ. ಆ ಮೂಲಕ ದೇಶದಲ್ಲಿನ ಸಕ್ರಿಯ ಪ್ರಕರಣಗಳ ಸಂಖ್ಯೆ 2,686ಕ್ಕೆ ಏರಿಕೆ ಯಾಗಿದೆ ಎಂದು ತಿಳಿದುಬಂದಿದೆ.
ಇದೇ ಅವಧಿಯಲ್ಲಿ ಮೂರು ಕೋವಿಡ್ ಸಾವುಗಳು ದಾಖಲಾಗಿದ್ದು, 2 ಮಹಾರಾಷ್ಟ್ರದಲ್ಲಿ ಮತ್ತು ಒಂದು ಕೇರಳ ದಲ್ಲಿ ವರದಿಯಾಗಿದೆ. ಆ ಮೂಲಕ ಕೋವಿಡ್ ಗೆ ಬಲಿಯಾದವರ ಸಂಖ್ಯೆ 5,30,775ಕ್ಕೆ ಏರಿಕೆಯಾಗಿದೆ.
ದೇಶದಲ್ಲಿನ ಒಟ್ಟಾರೆ ಸೋಂಕಿತರ ಸಂಖ್ಯೆ 4,46,87,496ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.