Wednesday, 11th December 2024

ನಿರುದ್ಯೋಗಿ ಫಲಾನುಭವಿಗಳಿಗೆ ದ್ವಿಚಕ್ರ ವಾಹನ ವಿತರಣೆ

ಚಿಕ್ಕನಾಯಕನಹಳ್ಳಿ : ಆದಿಜಾಂಬವ ನಿಗಮದ ವತಿಯಿಂದ 20 ನಿರುದ್ಯೋಗಿ ಫಲಾನುಭವಿಗಳಿಗೆ ದ್ವಿಚಕ್ರ ವಾಹನಗಳನ್ನು ವಿತರಿಸಲಾಯಿತು.

ಪಟ್ಟಣದ ಪ್ರವಾಸಿ ಮಂದಿರದ ಆವರಣದಲ್ಲಿ ಸಚಿವ ಜೆ.ಸಿ.ಮಾಧುಸ್ವಾಮಿ ಫಲಾನುಭವಿಗೆ ಕೀ ಹಸ್ತಾಂತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಪರಿಶಿಷ್ಟ ಜಾತಿಯ ನಿರುದ್ಯೋಗಿ ಯುವಕರಿಗೆ ಸ್ವಯಂ ಉದ್ಯೋಗ ಕೈಗೊಳ್ಳುವ ಸಲುವಾಗಿ ದ್ವಿಚಕ್ರ ವಾಹನ ವಿತರಿಸಲಾಗುತ್ತಿದ್ದು ಅರ್ಹ ಫಲಾನುಭವಿ ಗಳು ಸೇವಾಸಿಂಧು ಮೂಲಕ ಅರ್ಜಿ ಸಲ್ಲಿಸಿದ್ದಾರೆ.

ಆಯ್ಕೆ ಪ್ರಕ್ರಿಯೆ ಯನ್ನು ಸಚಿವ ಜೆ.ಸಿ.ಮಾಧುಸ್ವಾಮಿ ಅವರ ಗಮನಕ್ಕೆ ತರಲಾಗಿದೆ. ಪ್ರತಿ ದ್ವಿಚಕ್ರ ವಾಹನಕ್ಕೆ 70 ಸಾವಿರ ರೂ. ನಿಗದಿಗೊಳಿಸಲಾಗಿದ್ದು 50 ಸಾವಿರ ರೂ. ಸಬ್ಸಿಡಿ ಹಾಗು 20 ಸಾವಿರ ರೂ. ಸಾಲ ಸೌಲಭ್ಯ ಇರಲಿದೆ. ಫಲಾನುಭವಿ ತನಗೆ ಅನುಕೂಲವಾಗುವ ಯಾವುದೇ ಕಂಪನಿಯ ದ್ವಿಚಕ್ರ ವಾಹನ ಖರೀದಿಸಬಹುದು ಎಂದು ನಿಗಮದ ತಾಲ್ಲೂಕು ಅಭಿವೃದ್ದಿ ಅಧಿಕಾರಿ ರಾಜಶೇಖರ್ ಮಾಹಿತಿ ನೀಡಿದರು.

ಶ್ರೀನಿವಾಸ ಮೋಟಾರ್ಸ್, ವಿಜಯಶ್ರೀ ಮೋಟಾರ್ಸ್, ಅಕ್ಷಯ್ ಮೋಟಾರ್ಸ್, ಚಿ.ನಾ.ಹಳ್ಳಿ, ಹುಳಿಯಾರಿನ ವಿಘ್ನೇಶ್ ಮೋಟಾರ್ಸ್, ಶಿರಾದ ಗಣೇಶ ಮೋಟಾರ್ಸ್ ಇವರಿಂದ ಖರೀದಿಸಿ ವಿತರಿಸಲಾಯಿತು. ಬಗರ್‌ಹುಕುಂ ಕಮಿಟಿ ಸದಸ್ಯ ನಿರಂಜನಮೂರ್ತಿ, ತಾ.ಬಿಜೆಪಿ ಅಧ್ಯಕ್ಷ ಕೇಶವಮೂರ್ತಿ, ಪುರ ಸಭಾ ಸದಸ್ಯ ಶ್ಯಾಮ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.