Friday, 13th December 2024

ಏಪ್ರಿಲ್’ನಲ್ಲಿ ಚಾರ್‌ಧಾಮ್‌ ಯಾತ್ರೆ ಆರಂಭ

ಉತ್ತರಾಖಂಡ: ಮುಂಬರುವ ತಿಂಗಳಲ್ಲಿ ಚಾರ್‌ಧಾಮ್‌ ಯಾತ್ರೆ ಶುರುವಾಗಲಿದೆ. ಇದುವರೆಗೆ 2.50 ಲಕ್ಷಕ್ಕೂ ಹೆಚ್ಚು ಭಕ್ತರು ಚಾರ್‌ಧಾಮ್ ಯಾತ್ರೆಗೆ ನೋಂದಾಯಿಸಿಕೊಂಡಿದ್ದಾರೆ ಎಂದು ಉತ್ತರಾಖಂಡ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ಸೋಮವಾರ ತಿಳಿಸಿದೆ.

ಕೇದಾರನಾಥ ಧಾಮಕ್ಕೆ 1.39 ಲಕ್ಷ ನೋಂದಣಿಗಳು ನಡೆದಿವೆ. ಬದರಿನಾಥ ಧಾಮಕ್ಕೆ ಭೇಟಿ ನೀಡಲು 1.14 ಲಕ್ಷ ನೋಂದಣಿಗಳನ್ನು ಮಾಡಲಾಗಿದೆ.

ಗಂಗೋತ್ರಿ-ಯಮನೋತ್ರಿಯ ಬಾಗಿಲುಗಳು ಏಪ್ರಿಲ್ 22 ರಂದು ಯಾತ್ರಾರ್ಥಿಗಳಿಗೆ ತೆರೆಯಲ್ಪಡುತ್ತವೆ. ಕೇದಾರ ನಾಥವು ಏಪ್ರಿಲ್ 25 ರಂದು ಮತ್ತು ಬದರಿನಾಥ್ ಧಾಮ್ ಏಪ್ರಿಲ್ 27 ರಂದು ತೆರೆಯುತ್ತದೆ.

“ಜಿಲ್ಲಾಡಳಿತವು ಕೇದಾರನಾಥ ಧಾಮ ಮತ್ತು ಕೇದಾರನಾಥದ ಪಾದಚಾರಿ ಮಾರ್ಗಗಳಲ್ಲಿ ಹಿಮ ತೆರವು ಗೊಳಿಸಲು ಪ್ರಾರಂಭಿಸಿದೆ”.

ಉತ್ತರಾಖಂಡ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ಈ ಹಿಂದೆ ಚಾರ್‌ಧಾಮ್ ಯಾತ್ರೆಯ ಸಮಯದಲ್ಲಿ ದರ್ಶನಕ್ಕಾಗಿ ಟೋಕನ್‌ಗಳನ್ನು ನೀಡುವು ದಾಗಿ ಹೇಳಿತ್ತು.