Saturday, 14th December 2024

ಅಕ್ಕೊ ರೀಟೇಲ್ ಆರೋಗ್ಯ ವಿಮಾ ಕ್ಷೇತ್ರಕ್ಕೆ ಪ್ರವೇಶ

ಅಕ್ಕೊ ರೀಟೇಲ್ ಆರೋಗ್ಯ ವಿಮಾ ಕ್ಷೇತ್ರಕ್ಕೆ ಪ್ರವೇಶ ಪಡೆಯುವ ಮೂಲಕ ಈ ವಲಯದಲ್ಲಿ ಸಂಚಲನ
-೧೦ ಲಕ್ಷದಿಂದ ಅನಿಯಮಿತದವರೆಗೆ ವಿಮಾ ರಕ್ಷಣೆಯ ಪ್ಲಾಟಿನಂ ಹೆಲ್ತ್ ಪ್ಲಾನ್‌ಗೆ ಚಾಲನೆ
-ಮುಂದಿನ ಕೆಲ ವರ್ಷಗಳಲ್ಲಿ ಆರೋಗ್ಯವು ಅಕ್ಕೊಗೆ ಅತ್ಯಂತ ದೊಡ್ಡ ವಿಭಾಗಗಳಲ್ಲಿ ಒಂದಾಗಲಿದೆ

ಬೆಂಗಳೂರು: ಅಕ್ಕೊ ತನ್ನ ನ್ಯಾಯಯುತ ಬೆಲೆ, ಅನುಕೂಲ ಮತ್ತು ಉನ್ನತ ಗ್ರಾಹಕ ಅನುಭವಕ್ಕೆ ಆದ್ಯತೆ ನೀಡುವ ಮೂಲಕ ರೀಟೇಲ್ ಆರೋಗ್ಯ ವಿಮಾ ಕ್ಷೇತ್ರಕ್ಕೆ ಪ್ರವೇಶ ಪಡೆದಿದೆ.

ಶೂನ್ಯ ಕಮಿಷನ್, ಶೂನ್ಯ ಕಾಗದಪತ್ರಗಳು ಮತ್ತು ತಕ್ಷಣ ನವೀಕರಣ, ಅದೇ ದಿನ ಕ್ಲೇಮುಗಳ ಸೆಟ್ಲ್ಮೆಂಟ್‌ಗಳು ಮತ್ತು ಕ್ಲೇಮುಗಳ ಮೇಲೆ ಆ್ಯಪ್ ಆಧರಿತ ಅಪ್‌ಡೇಟ್‌ಗಳನ್ನು ನೀಡುವ ಅಕ್ಕೊ ಗ್ರಾಹಕರು ವಿಮೆಯನ್ನು ಅನುಭವಿಸುವ ವಿಧಾನದಲ್ಲಿ ನಿಜಕ್ಕೂ `ಸ್ವಾಗತಾರ್ಹ ಬದಲಾವಣೆ’ ತರುತ್ತಿದೆ.

ಆರೋಗ್ಯ ವಿಮಾ ಕ್ಷೇತ್ರಕ್ಕೆ ಅಕ್ಕೊದ ಪ್ರವೇಶವು ಉದ್ಯಮಕ್ಕೆ ಹೆಚ್ಚು ಆವಿಷ್ಕಾರ ಮತ್ತು ಸ್ಪರ್ಧೆಯನ್ನು ತರಲಿದ್ದು ಅಂತಿಮವಾಗಿ ಗ್ರಾಹಕರಿಗೆ ಹೆಚ್ಚು ಆಯ್ಕೆಗಳು ಮತ್ತು ಉತ್ತಮ ಸೇವೆಯ ಮೂಲಕ ಅನುಕೂಲ ಕಲ್ಪಿಸಲಿದೆ. ತನ್ನ ಗ್ರಾಹಕ-ಪ್ರಥಂ ವಿಧಾನ, ವೈಯಕ್ತಿಕಗೊಳಿಸಿದ ಕೊಡುಗೆ, ಅತ್ಯಾಧುನಿಕ ತಂತ್ರಜ್ಞಾನದ ಬಳಕೆ ಮತ್ತು ಡೇಟಾ ಒಳನೋಟಗಳ ಮೂಲಕ ಅಕ್ಕೊ ನಮ್ಮ ಗ್ರಾಹಕರಿಗೆ ಎಲ್ಲ ರಕ್ಷಣೆಯ ಅಗತ್ಯಗಳಿಗೂ ಒನ್-ಸ್ಟಾಪ್ ತಾಣವಾಗಿದೆ.
ದೊಡ್ಡ ಆರೋಗ್ಯದ ಮಾರುಕಟ್ಟೆಯಲ್ಲಿ ವ್ಯಾಪ್ತಿ ಹೆಚ್ಚಿಸಲು ಮತ್ತು ಕೋವಿಡ್ ನಂತರದಲ್ಲಿ ಆರೋಗ್ಯ ವಿಮೆಗೆ ಬೇಡಿಕೆ ಹೆಚ್ಚಾಗಿರುವುದನ್ನು ಬಳಸಿ ಕೊಳ್ಳಲು ಅಕ್ಕೊ ಅತ್ಯುತ್ತಮ ವಿಶೇಷತೆಗಳನ್ನು ಹೊಂದಿದ ಪ್ಲಾಟಿನಂ ಹೆಲ್ತ್ ಪ್ಲಾನ್ ಬಿಡುಗಡೆ ಮಾಡಿದೆ.

ಭಾರತದಲ್ಲಿ ನಾವು ಆರೋಗ್ಯ ವಿಮಾ ಕ್ಷೇತ್ರದಲ್ಲಿ ಮತ್ತು ರಕ್ಷಣೆಯ ಮೊತ್ತದ ವಿಷಯದಲ್ಲಿ ಹೆಚ್ಚು ವ್ಯಾಪಕತೆ ಹೊಂದಿಲ್ಲ. ಎರಡನ್ನೂ ಸುಧಾರಿಸುವ ದೃಷ್ಟಿಯಿಂದ ನಾವು ಸೂಪರ್ ಟಾಪ್-ಅಪ್ ಪ್ಲಾನ್ ಕೂಡಾ ಬಿಡುಗಡೆ ಮಾಡಿದ್ದು ಅದರಲ್ಲಿ ಗ್ರಾಹಕರು ಅವರ ಪ್ರಸ್ತುತದ ವಿಮಾ ಮೊತ್ತವನ್ನು ಬಹಳ ಕಡಿಮೆ ಬೆಲೆಗೆ ೧೦ ಲಕ್ಷ ರೂ.ನಿಂದ ಅನಿಯಮಿತ ಮೊತ್ತಕ್ಕೆ ಟಾಪ್-ಅಪ್ ಮಾಡಿಕೊಳ್ಳಬಹುದು. ಅಕ್ಕೊ ಪ್ಲಾಟಿನಂ ಹೆಲ್ತ್ ಪ್ಲಾನ್ ಭಾರತದಲ್ಲಿ ೭೧೦೦ ಆಸ್ಪತ್ರೆಗಳ ಜಾಲದಲ್ಲಿ ನಗದುರಹಿತ ಕೊಡುಗೆಗಳನ್ನು ನೀಡುತ್ತದೆ ಮತ್ತು ವರ್ಷದ ಪ್ರತಿದಿನವೂ ೨೪/೭ ಸಪೋರ್ಟ್ ನೀಡುತ್ತದೆ.

ಆರೋಗ್ಯ ವಿಮೆಗೆ ಅಕ್ಕೊದ ವಿಧಾನವು ಮೋಟಾರು ವಿಮೆಯಲ್ಲಿ ಮಾಡಿರುವಂತೆಯೇ ಇದ್ದು ಅದರಲ್ಲಿ ಅವರು ಮಧ್ಯವರ್ತಿ ಇಲ್ಲದ ಮತ್ತು ನೇರವಾಗಿ ಒದಗಿಸುವ ಉದ್ಯಮದ ಮುಂಚೂಣಿಯ ಉತ್ಪನ್ನಗಳನ್ನು ಗ್ರಾಹಕರಿಗೆ ಅತ್ಯುತ್ತಮ ದರಗಳಲ್ಲಿ ನೀಡುತ್ತಿದ್ದಾರೆ ಮತ್ತು ವಿಭಾಗ ಮತ್ತು ಬ್ರಾಂಡ್ ಅರಿವು ಸೃಷ್ಟಿಸಲು ಹೂಡಿಕೆ ಮಾಡುತ್ತಿದ್ದಾರೆ. ಕಂಪನಿಯು ಉದ್ಯಮದ ಮುಂಚೂಣಿಯ ಉತ್ಪನ್ನಗಳನ್ನು ಒದಗಿಸುವ ಮೂಲಕ ಮತ್ತು ಗ್ರಾಹಕರಿಗೆ ಸರಿಸಾಟಿ ಇರದ ಮೌಲ್ಯ ತರುವ ಮೂಲಕ ಆರೋಗ್ಯ ವಿಭಾಗದಲ್ಲಿ ಸಂಚಲನ ಸೃಷ್ಟಿಸಲು ಯೋಜಿಸಿದೆ.

ರೀಟೇಲ್ ಆರೋಗ್ಯ ವಿಮಾ ಕ್ಷೇತ್ರಕ್ಕೆ ಅಕ್ಕೊದ ಪ್ರವೇಶ ಪ್ರಕಟಿಸಿದ ಅಕ್ಕೊದ ಚೀಫ್ ಎಕ್ಸಿಕ್ಯೂಟಿವ್ ಆಫೀಸರ್ ಸಂಜೀವ್ ಶ್ರೀನಿವಾಸನ್, “ಆರೋಗ್ಯ ವಿಮೆಯು ಭಾರತದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಉದ್ಯಮವಾಗಿದೆ. ಆರೋಗ್ಯಸೇವೆಯ ವೆಚ್ಚಗಳ ಹೆಚ್ಚಳ ಮತ್ತು ರೋಗತಡೆಯ ಆರೋಗ್ಯ ಸೇವೆಗೆ ಹೆಚ್ಚಿದ ಗಮನದಿಂದ ಆರೋಗ್ಯ ವಿಮಾ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಆದಾಗ್ಯೂ, ಆರೋಗ್ಯ ವಿಮಾ ಕ್ಷೇತ್ರದಲ್ಲಿನ ಅತ್ಯಂತ ದೊಡ್ಡ ಸವಾ ಲೆಂದರೆ ಒದಗಿಸುವ ಉತ್ಪನ್ನಗಳ ಸಂಕೀರ್ಣತೆ ಮತ್ತು ಪಾರದರ್ಶಕತೆಯ ಕೊರತೆ. ನಮ್ಮ ಹೆಲ್ತ್ ಪ್ಲಾನ್‌ಗಳ ಬಿಡುಗಡೆಯ ಮೂಲಕ ನಾವು ಈ ಸಮಸ್ಯೆ ಗಳನ್ನು ನಿವಾರಿಸುವ ಗುರಿ ಹೊಂದಿದ್ದು ಅತ್ಯುತ್ತಮ ವಿಶೇಷತೆಗಳು ಮತ್ತು ಸರಿಸಾಟಿ ಇರದ ಖರೀದಿ ಮತ್ತು ಕ್ಲೇಮುಗಳ ಅನುಭವ ನೀಡುತ್ತೇವೆ” ಎಂದರು.