Friday, 13th December 2024

ರಾಗಿ ಬೆಳೆಗೆ ಉಪಯುಕ್ತವಾಗುವ ಮಹತ್ವದ ಉತ್ಪಾದನಾ ತಾಂತ್ರಿಕತೆಗಳು

ಆಲೂರು ಸಿರಿ

ಡಾ.ಅಶೋಕ್ ಆಲೂರು

alurashok@gmail.com

ರಾಗಿಯ ಬಗ್ಗೆ ಈ ಅಂಕಣದ ಆರಂಭದಲ್ಲೇ ಬರೆದಿದ್ದೆ. ಮೊಗೆದಷ್ಟೂ ಮುಗಿಯದ ರಾಗಿಯ ಕಣಜ ಕರ್ನಾಟಕ ಹೇಗೋ ಹಾಗೆಯೇ ಬರೆದಷ್ಟೂ ಮುಗಿ ಯದ ಮಹತ್ವ ಸಿರಿಧಾನ್ಯಗಳಲ್ಲೊಂದಾದ ಈ ರಾಗಿಯದ್ದು. ಈ ಹಿನ್ನೆಲೆಯಲ್ಲಿ ರಾಗಿಯ ಬಗ್ಗೆ ಇನ್ನಂದಿಷ್ಟನ್ನು ನಿಮ್ಮೊಂದಿಗೆ ಹಂಚಿ ಕೊಳ್ಳುತ್ತಿರುವ; ಅದರಲ್ಲೂ ರಾಗಿ ಬೆಳೆಯ ಉತ್ಪಾದನಾ ತಂತ್ರಿಕತೆಯ ಬಗ್ಗೆ. ಇದರಿಂದ ರಾಜ್ಯದ ಇನ್ನಷ್ಟು ಯುವಕರು ಈ ಬೆಳೆಯತ್ತ ಆಕರ್ಷಿತರಾಗಿ, ರಾಗಿಯ ಬೆಳೆಯ ಕ್ಷೇತ್ರ ವಿಸ್ತಾರಗೊಳ್ಳಬಹುದೆಂಬ ಆಶಯ ನಮ್ಮದು.

ಸಾಂಪ್ರದಾಯಿಕವಾಗಿ ಇದು ಶುಷ್ಕ ಮತ್ತು ಅರೆ ಶುಷ್ಕ ಹವಾಗುಣದ ಬೆಳೆ. ಏಷ್ಯಾದ ರಾಷ್ಟ್ರಗಳಾದ ಚೀನಾ, ಮಂಗೊಲಿಯಾ, ಭಾರತ, ಪಾಕಿಸ್ತಾನ, ಶ್ರೀಲಂಕಾಗಳಲ್ಲಿ ವಿಶ್ವದ ರಾಗಿ ಉತ್ಪಾದನೆಯ ಶೇ.೫೫ರಷ್ಟನ್ನು ಬೆಳೆಯ ಲಾಗುತ್ತದೆ. ಉಳಿದಂತೆ, ಶೇ.೨೫ರಷ್ಟು ಆಫ್ರಿಕನ್ ದೇಶಗಳಾದ ನೈಜೀರಿಯಾ, ಇಥಿಯೊಪಿಯಾ, ಮಾಲಿ, ತಾಂಜೇ ನಿಯಾ, ಉಗಾಂಡಾ, ಸೆನೆಗಲಗಳಲ್ಲಿ ಉತ್ಪಾದನೆಯಾಗುತ್ತದೆ. ಹಿಂದಿನ ಸೊವಿಯತ್ ಒಕ್ಕೂಟದಲ್ಲಿ ಮುಖ್ಯವಾಗಿ ಉಕ್ರೆನ್ ಮತ್ತು ಕಝಾಕಿಸ್ತಾನ್ ಪ್ರದೇಶಗಳು ರಾಗಿಯ ಕಣಜವೆಂದೇ ಪ್ರಸಿದ್ಧವಾಗಿದ್ದವು.

ಬೆಲಾರಸ್ ಗಣರಾಜ್ಯದಲ್ಲೂ ಹುಲ್ಲಿಗಾಗಿ ರಾಗಿ ಬೆಳೆಯಲಾಗುತ್ತದೆ. ಇಥಿಯೋಪಿಯ ಮೂಲದ ಈ ವಾರ್ಷಿಕ ಬೆಳೆಯನ್ನು ಸುಮಾರು ೪ ಸಾವಿರ ವರ್ಷಗಳ ಹಿಂದೆ ಭಾರತಕ್ಕೆ ತರಲಾಯಿತು ಎಂಬುದು ಎಲ್ಲರಿಗೂ ತಿಳಿದ ವಿಚಾರ. ಕರ್ನಾಟಕದಲ್ಲಿ ಅತೀ ಹೆಚ್ಚು ರಾಗಿ ಬೆಳೆಯುವ ಜಿ ತುಮಕೂರು. ತುಮಕೂರನ್ನು ಹೊರತುಪಡಿಸಿದರೆ ಮಂಡ್ಯ, ಮೈಸೂರು, ಬೆಂಗಳೂರು ಗ್ರಾಮಾಂತರ ಮತ್ತಿತರ ಜಿಗಳಲ್ಲಿ ಬೆಳೆಯ ಲಾಗುತ್ತದೆ.

ಕರ್ನಾಟಕವನ್ನು ಹೊರತು ಪಡಿಸಿದರೆ ಭಾರತದಲ್ಲಿ ತಮಿಳುನಾಡು, ಆಂದ್ರಪ್ರದೇಶ, ಮಹಾರಾಷ್ಟ್ರಗಳಲ್ಲಿ ಇದರ ಕೃಷಿ ಇದೆ. ನಮ್ಮ ರಾಜ್ಯದಲ್ಲಂತೂ ಪ್ರಮುಖ ಖುಷ್ಕಿ ಬೆಳೆಯಾಗಿ ಪರಿಗಣಿತ ರಾಗಿ, ಕಡಿಮೆ ತೇವಾಂಶದಲ್ಲಿ ಬೆಳೆಯಬಲ್ಲುದು. ಮಾತ್ರವಲ್ಲ, ಅನಾವೃಷ್ಟಿಯ ನಂತರ ಬೇಗನೆ ಹುಲುಸಾಗಿ ಬೆಳೆಯುವ ಸಾಮರ್ಥ್ಯವನ್ನು ಹೊಂದಿದೆ. ಕಡಿಮೆ ಕೀಟ, ರೋಗ ಬಾಧೆ ಮತ್ತು ಕಡಿಮೆ ಬೇಸಾಯ ವೆಚ್ಚ ಇವುಗಳು ರಾಗಿ ಬೆಳೆಯ ಮುಖ್ಯ ಗುಣಗಳು.

ನಮ್ಮ ರಾಜ್ಯದಲ್ಲಿ ರಾಗಿಯನ್ನು ಸುಮಾರು ೭.೦೫ ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯುತ್ತಿದ್ದು, ೧೧.೮೮ ಲಕ್ಷಟನ್ ಉತ್ಪಾದನೆಯಿದೆ. ಪ್ರತಿ ಹೆಕ್ಟೇರಿಗೆ ೧,೬೮೫ ಕಿ.ಗ್ರಾಂ ಸರಾಸರಿ ಉತ್ಪಾದಕತೆಯನ್ನು ಹೊಂದಿದೆ. ಕರ್ನಾಟಕದ ಪ್ರಮುಖ ರಾಗಿ ಬೆಳೆಯುವ ಜಿಲ್ಲೆಗಳೆಂದರೆ, ತುಮಕೂರು, ಹಾಸನ, ರಾಮ ನಗರ, ಮೈಸೂರು, ಮಂಡ್ಯ, ಕೋಲಾರ, ಬೆಂಗಳೂರು ಗ್ರಾಮೀಣ,ಚಿಕ್ಕಬಳ್ಳಾಪುರ ಮತ್ತು ಚಿತ್ರದುರ್ಗ. ‘ಎಲುಸಿನ ಕೊರಕಾನ’(Eleusina CoraCona) ಎಂಬ ವೈಜ್ಞಾನಿಕ ಹೆಸರಿನಿಂದ ಗುರುತಿಸಲಾಗುವ ಈ ಶ್ರೀಮಂತ ಧಾನ್ಯ, ಕಪ್ಪು ಮಿಶ್ರಿತ ಕೆಂಪು ಇಲ್ಲವೇ ಕಂದು ಬಣ್ಣದಲ್ಲಿರುವ ಆಹಾರ ಧಾನ್ಯ. ಹಾಗೆ ನೀಡಿದರೆ ಇದು ಸಿರಿಧಾನ್ಯವೂ ಹೌದು, ಕಿರುಧಾನ್ಯವೂ ಹೌದು. ಹೀಗಾಗಿ ಇದನ್ನು ಪಿಂಗರ್ ಮಿಟ್ ಎಂದೂ ಕರೆಯಲಾಗುತ್ತದೆ.

ಹವಾಮಾನಕ್ಕೆ ಅನುಗುಣವಾಗಿ ಭೂಮಿಯನ್ನು ಹಸನುಗೊಳಿಸಿ ಬಿತ್ತಿದಲ್ಲಿ ರಾಗಿಯ ಪಸಲು ನಾಲ್ಕರಿಂದ ಆರು ತಿಂಗಳಿಗೊಮ್ಮೆ ಸಿಗುತ್ತದೆ. ಹೀಗಾಗಿ ವಾರ್ಷಿಕ ಬೆಳೆಯಾಗಿದ್ದರೂ ವರ್ಷಕ್ಕೆ ಎರಡು -ಸಲನ್ನು ಆರಾಮಾಗಿ ಕಾಣಬಹುದು. ಈಗಾಗಲೇ ಹೇಳಿದಂತೆ ಇದು ಉಷಲಯ ಮತ್ತು ಉಪ ಉಷ್ಣ ವಲಯದ ಬೆಳೆ. ಮಳೆಯಾಶ್ರಿತ ಮತ್ತು ನೀರಾವರಿ ಬೆಳೆಯಾಗಿಯೂ ಬೆಳೆಯಬಹುದು. ಸುಮಾರು ೧೦೦ ಸೆಂ.ಮೀ. ಮಳೆಯ ಪ್ರದೇಶದಲ್ಲಿಯೂ ಉತ್ತಮವಾಗಿ ಬೆಳೆಯುವ ಸಾಮರ್ಥ್ಯವನ್ನು ಇದು ಹೊಂದಿದೆ. ಹೂ ಬಿಡುವ ಹಂತವು ಇದರ ಇಳುವರಿಯ ನಿರ್ಣಾಯಕ ಹಂತವಾಗಿದ್ದು ಈ ಸಮಯ ದಲ್ಲಿ ತೇವಾಂಶದ ಒತ್ತಡವನ್ನು ತಪ್ಪಿಸಲು ಸರಿಯಾದ ಸಮಯಕ್ಕೆ ಬಿತ್ತನೆಮಾಡುವುದು ಸೂಕ್ತ.

ಮುಂಗಾರು ಬೆಳೆಯಾದಲ್ಲಿ ಜೂನ್ – ಜುಲೈ ತಿಂಗಳಿನಲ್ಲಿ, ತಡವಾದ ಮುಂಗಾರು ಬೆಳೆಯಾಗಿ ಪರಿಗಣಿಸಿದಲ್ಲಿ ಜುಲೈ – ಆಗಸ್ಟ್ ಬಿತ್ತನೆಗೆ ಸೂಕ್ತ ಸಮಯ. ಇದಲ್ಲದೇ ಚಳಿಗಾಲ (ಸೆಪ್ಟೆಂಬರ್ – ಅಕ್ಟೋಬರ್), ಬೇಸಿಗೆ (ಡಿಸೆಂಬರ್ – ಜನವರಿ) ಬೆಳೆಯನ್ನಾಗಿಯೂ ರಾಗಿಯ ಬಿತ್ತನೆ ಮಾಡಬಹುದು. ಕೆಂಪು
ಹಾಗೂ ಮರಳು ಮಿಶ್ರಿತ ಮಣ್ಣು ಇದಕ್ಕೆ ಸೂಕ್ತ. ರಾಗಿಯು ಸುಮಾರು ೪.೫-೭.೫ ರಸಸಾರ ಇರುವ ಮಣ್ಣಿನಲ್ಲಿ ಬೆಳೆಯುವ ಸಾಮರ್ಥ್ಯವನ್ನು ಹೊಂದಿ ದ್ದು ಹೆಚ್ಚಿನ ಆಮ್ಲದ ಪ್ರಮಾಣಕ್ಕೂ ಹೊಂದಿಕೊಳ್ಳಬಹುದು. ಭೂಮಿಯನ್ನು ೨ ರಿಂದ ೩ ಬಾರಿ ಚೆನ್ನಾಗಿ ಉಳುಮೆ ಮಾಡಿ, ಒಂದು ಬಾರಿ ಕುಂಟೆ ಹೊಡೆದು ಸರಿಯಾದ ಹದಕ್ಕೆ ಬಂದ ನಂತರ ಬಿತ್ತನೆ ಮಾಡುವುದು ಸೂಕ್ತ. ಇನ್ನು ತಳಿಗಳ ವಿಚಾರಕ್ಕೆ ಬಂದರೆ, ಹೆಚ್ಚಿನ ನಮ್ಮಲ್ಲಿ ಬಹಳಷ್ಟು
ಸಾಂಪ್ರ ದಾಯಿಕ ತಳಿಗಳು ಕಣ್ಮರೆಯಾಗಿವೆ. ಇದೀಗ ಬಳಕೆಯಲ್ಲಿರುವ ಕೆಲವನ್ನು ಅದರ, ವಿಶೇಷತೆಗಳೊಂದಿಗೆ ಪಟ್ಟಿ ಮಾಡಲಾಗಿದೆ.

ಇಂಡಾ- ೮ ತಳಿ ೧೨೦-೧೨೫ಬೆಳೆ ಕಾಲಾವಧಿಯನ್ನು ಹೊಂದಿರುವ ಈ ತಳಿ, ಮಧ್ಯಮ ಎತ್ತರದ ತಳಿ ಮತ್ತು ನೆಲಕ್ಕೆ ಬೀಳುವುದಿಲ್ಲ. ಇನ್ನು ಎಂ.ಆರ್.೧ ಎಂಬುದು ಮುಂಚಿತವಾಗಿ ಬಿತ್ತನೆ ಮಾಡಲು ಸೂಕ್ತವಾದ ತಳಿ. ಉದ್ದವಾದ ಇಲುಕುಗಳನ್ನು ಹೊಂದಿರುತ್ತದೆ. ಇದಲ್ಲದೇ ಎಂ.ಆರ್-೬ ಮುಂಗಾರಿನಲ್ಲಿ ಬೆಳೆಯಲು ಸೂಕ್ತವಾದ ತಳಿ. ಧಾನ್ಯದ ಇಳುವರಿ ಜತೆಗೆ ಹೆಚ್ಚು ಹುಲ್ಲನ್ನು ಒದಗಿಸುತ್ತದೆ. ಉದ್ದವಾದ ಇಲುಕುಗಳನ್ನು ಹೊಂದಿರುತ್ತದೆ. ಇವು ಮೂರೂ ದೀರ್ಘಾವಧಿಯ ತಳಿಗಳು. ಮಧ್ಯಮಾವಧಿ ತಳಿಗಳ ವಿಚಾರಕ್ಕೆ ಬಂದರೆ, ಕೆ.ಎಂ. ಆರ್.೩೦೧, ಮುಂಗಾರು ಹಾಗೂ ಹಿಂಗಾರಿಗೆ ಸೂಕ್ತವಾಗಿದೆ.

ಅಗಲ ಹಾಗೂ ದಪ್ಪವಾದ ಇಲುಕುಗಳನ್ನು ಹೊಂದಿರುತ್ತದೆ. ಜಿ.ಪಿ.ಯು.೨೮ ಎಂಬುದು ಮುಂಗಾರಿಗೆ ಸೂಕ್ತ ತಳಿಯಾಗಿದ್ದು, ಕುತ್ತಿಗೆ ಬೆಂಕಿ ರೋಗ ತಡೆದುಕೊಳ್ಳುವ ಶಕ್ತಿ ಹೊಂದಿದೆ. ಮಧ್ಯಮ ಗಾತ್ರದ ತೆನೆಯನ್ನು ಹೊಂದಿರುತ್ತದೆ. ಜಿ.ಪಿ.ಯು.೬೬ ತಳಿ, ಮುಂಗಾರು ಮತ್ತು ಬೇಸಿಗೆಗೂ ಸೂಕ್ತವಾದದ್ದು. ಬೆಂಕಿ ರೋಗ ನಿರೋಧಕ ಶಕ್ತಿ ಹೊಂದಿದೆ. ಹೆಚ್ಚು ಹುಲ್ಲನ್ನು ಒದಗಿಸುವುದು ಇದರ ವಿಶೇಷ. ಎಂ.ಎಲ್.೩೬೫ ಸಹ ಈ ಸಾಲಿಗೇ ಸೇರುತ್ತದೆ.

ಇಂಡಾ-.೫ ತಳಿ ತಡವಾದ ಮುಂಗಾರಿಗೆ ಮತ್ತು ಬೇಸಿಗೆ ಸೂಕ್ತವಾದದ್ದು, ಎತ್ತರವಾಗಿ ಬೆಳೆಯುವುದರಿಂದ ಧಾನ್ಯದ ಇಳುವರಿಯ ಜತೆಗೆ ಹೆಚ್ಚು ಹುಲ್ಲನ್ನು ಒದಗಿಸುತ್ತದೆ. ದರ ಹೊರತಾಗಿ ಅಲ್ಪಾವಧಿ (ತಡವಾದ ಮುಂಗಾರು) ತಳಿಗಳಲ್ಲಿ ಮುಖ್ಯವಾದುದು ಜಿಪಿಯು ೪೫ ಎಲ್ಲ ಕಾಲಕ್ಕೂ
ಹೊಂದುತ್ತದಲ್ಲದೇ, ೯೫-೧೦೦ ದಿನಗಳ ಬೆಳೆ ಕಾಲಾವಧಿಯನ್ನು ಹೊಂದಿರುತ್ತದೆ. ಇದರ ಇಲುಕುಗಳ ತುದಿ ಒಳಭಾಗಕ್ಕೆ ಬಾಗಿರುತ್ತದೆ. ಬೆಂಕಿ ರೋಗಕ್ಕೆ ನಿರೋಧಕ ಶಕ್ತಿ ಹೊಂದಿದೆ. ಇದಲ್ಲದೇ ಇದರಲ್ಲಿ ಜಿಪಿಯು ೪೮, ಜಿ.ಪಿ.ಯು. ೨೬, ಇಂಡಾ- ೯, ಕೆಎಂಆರ್ ೨೦೪, ಕೆಎಂಆರ್ ೩೪೦, ಕೆ.ಎಂ.ಆರ್. ೬೩೦,
ಇಂಡಾ- ೭, ಇಂಡಾ- ೯ ಹಾಗೂ ಕೆ.ಎಂ.ಆರ್. ೩೦೧ತಳಿಗಳು ಅಲ್ಪವಧಿಯ ತಳಿಗಳಾಗಿ ಪ್ರಸಿದ್ಧ.

ನೀರಾವರಿ ಜಮೀನಿಗೆ ೨ ಕಿ.ಗ್ರಾಂ ಹಾಗೂ ಖುಷ್ಕಿಗೆ ೫ ಕಿ.ಗ್ರಾಂ ಬಿತ್ತನೆ ಬೀಜ ಅಗತ್ಯ. ಜೈವಿಕ ಗೊಬ್ಬರಗಳಾದ ಅಝೋಸ್ಪೈರಿಲಂ ೧೫೦ ಗ್ರಾಂ ಮತ್ತು ಪಾಸ್ಪೋ ಬ್ಯಾಕ್ಟೀರಿಯಾ ೧೫೦ ಗ್ರಾಂ ಅನ್ನು ಒಂದು ಎಕರೆಗೆ ಬೇಕಾದ ಬೀಜದೊಂದಿಗೆ (೫ ಕಿ.ಗ್ರಾಂ ಬೀಜಕ್ಕೆ) ಉಪಚಾರ ಮಾಡಿ ಬಿತ್ತನೆಗೆ ಉಪಯೋ ಗಿಸಬೇಕು. ರಾಗಿಯನ್ನು ಸಾಮಾನ್ಯವಾಗಿ ಬೆಳೆಯ ಸ್ವರೂಪ, ಮಣ್ಣಿನ ಗುಣಲಕ್ಷಣ, ಹವಾಮಾನ ಮತ್ತು ನೀರಿನ ಲಭ್ಯತೆಯ ಅನುಗುಣವಾಗಿ ನಾನಾ ವಿಧಾನಗಳಲ್ಲಿ ಬೆಳೆಯಬಹುದು.

ನೇರ ಬಿತ್ತನೆ ಅಥವಾ ಚೆಲ್ಲುವ ಪzತಿಯಲ್ಲಿ ರಾಗಿಯನ್ನು ಹದಗೊಳಿಸಿದ ಮಣ್ಣಿನಲ್ಲಿ ನೇರವಾಗಿ ಚೆಲ್ಲಲಾಗುತ್ತದೆ. ಬಿತ್ತನೆಯ ರಾಗಿಯನ್ನು ಮರಳು ಅಥವಾ ಇತರೆ ಜಡ ವಸ್ತುವಿನೊಂದಿಗೆ ಬೆರೆಸಿ ಬಿತ್ತನೆ ಮಾಡಿದಲ್ಲಿ ಬೀಜದ ಪ್ರಸಾರ, ಸಮನಾಗಿ ಹರಡಲು ಸಹಕಾರಿಯಾಗುತ್ತದೆ. ಈ ಪzತಿಯಲ್ಲಿ ಬೀಜದ ಪ್ರಮಾಣ ಶಿಫಾರಸಿಗಿಂತ ಹೆಚ್ಚಾಗಿ ಉಪಯೋಗಿಸಬೇಕಾಗುತ್ತದೆ ಹಾಗೂ ಅಂತರ ಬೇಸಾಯ ಮಾಡಲು ಹಾಗೂ ಕಳೆ ನಿಯಂತ್ರಿಸಲು ಅನನುಕೂಲ  ವಾಗುತ್ತದೆ. ಸಾಲು ಬಿತ್ತನೆ ವಿಧಾನದಲ್ಲಿ ೨೨.೫ ರಿಂದ ೩೦ ಸೆಂ.ಮೀ. (೧೨ ಅಂಗುಲ) ಅಂತರದ ಸಾಲುಗಳಲ್ಲಿ ೮ ರಿಂದ ೧೦ ಸೆಂ.ಮೀ. ಅಂತರದಲ್ಲಿ ಬೀಜ ಬಿತ್ತನೆ ಮಾಡುವುದು ಅಥವಾ ಕೂರಿಗೆಯನ್ನು ಉಪಯೋಗಿಸಿ ಬಿತ್ತನೆ ಮಾಡುವುದರಿಂದ ಸಾಲಿನಲ್ಲಿ ಬೀಜUಳು ಸಮನಾಗಿ ಬಿತ್ತನೆಯಾಗುತ್ತವೆ.

ಇದಲ್ಲದೇ ಪzತಿಯಲ್ಲಿ ಸಸಿಮಡಿಯಲ್ಲಿ ಬೆಳೆಸಿದ ೩ ರಿಂದ ೪ ವಾರದ ಪೈರುಗಳನ್ನು ೨೫ ಸೆಂ.ಮೀ ಅಂತರದ ಸಾಲುಗಳಲ್ಲಿ ೧೦ ಸೆಂ.ಮೀ. ಅಂತರದಲ್ಲಿ ೨-೩ ಪೈರುಗಳನ್ನು ನಾಟಿ ಮಾಡಬೇಕು. ಸಸಿ ಮಡಿ ತಯಾರಿಕೆಗೆ ಒಂದು ಎಕರೆಗೆ ಬೇಕಾಗುವ ಸಸಿಗಳಿಗೆ ೧.೫ ಗುಂಟೆ ಪ್ರದೇಶದಲ್ಲಿ ೨೫ ಅಡಿ ಉದ್ದ, ೪ ಅಡಿ ಅಗಲ ಮತ್ತು ೪ ಅಂಗುಲ ಎತ್ತರದ ೧೫ ಮಡಿಗಳನ್ನು ತಯಾರು ಮಾಡಿ ೩ ಅಂಗುಲ ಅಂತರದ ಸಾಲಿನಲ್ಲಿ ಬಿತ್ತಬೇಕು. ೫೦ ಕಿ. ಗ್ರಾಂ. ಕೊಟ್ಟಿಗೆ
ಗೊಬ್ಬರ, ೭.೫ ಕಿ.ಗ್ರಾಂ ಅಮೋನಿಯಂ ಸಲೇಟ್, ೧೫ ಕಿ.ಗ್ರಾಂ. ಸೂಪರ್ ಪಾಸೇಟ್ ಮತ್ತು ೭.೫ ಕಿ.ಗ್ರಾಂ ಮ್ಯೂರಿಯೇಟ್ ಆಫ್ ಪೊಟ್ಯಾಷ್ ರಸ ಗೊಬ್ಬರ ಗಳ ಜತೆಗೆ ೭೫೦ ಗ್ರಾಂ ಸತುವಿನ ಸಲೇಟನ್ನು ಬಿತ್ತನೆಗೆ ಮುಂಚೆ ಸಸಿಮಡಿಗಳಿಗೆ ಸಮನಾಗಿ ಬೆರೆಸಲು ಶಿಫಾರಸು ಮಾಡಲಾಗಿದೆ.

ಬಿತ್ತಿದ ಬೀಜಗಳನ್ನು ಪುಡಿ ಮಣ್ಣು ಅಥವಾ ಹಸನಾದ ಕೊಟ್ಟಿಗೆ ಗೊಬ್ಬರದಿಂದ ಮುಚ್ಚಿ ಪ್ರತಿ ದಿನ ಸಾಯಂಕಾಲ ನೀರನ್ನು ಒದಗಿಸಲು ಶಿಫಾರಸು
ಮಾಡಲಾಗಿದೆ. ಬಿತ್ತನೆ ಮಾಡಿದ ೧೦-೧೨ ದಿನಗಳ ನಂತರ ೪ ಕಿ.ಗ್ರಾಂ ಯೂರಿಯಾವನ್ನು ೧೫ ಸಸಿ ಮಡಿಗಳಿಗೆ ಸಮನಾಗಿ ಮೇಲು ಗೊಬ್ಬರವಾಗಿ ಕೊಡಬೇಕು. ಅಲ್ಪಾವದಿ ತಳಿಗಳ ಸಸಿಗಳನ್ನು ೧೮-೨೦ ದಿನಗಳಲ್ಲಿ ಹಾಗೂ ಮಧ್ಯಮ ಮತ್ತು ದೀರ್ಘಾವಧಿ ತಳಿಗಳ ಸಸಿಗಳನ್ನು ೨೦-೨೨ ದಿನಗಳಲ್ಲಿ ೯
ಅಂಗುಲದ ಸಾಲುಗಳಲ್ಲಿ ಮುಖ್ಯ ಭೂಮಿಯಲ್ಲಿ ನಾಟಿ ಮಾಡುವುದು.

ರಾಗಿ ಬೆಳೆಯಲ್ಲಿ ಮಿಶ್ರ ಬೆಳೆಯಾಗಿ ರಾಗಿ+ತೊಗರಿ, ರಾಗಿ+ ಸೋಯಾಅವರೆ, ರಾಗಿ+ಅವರೆಗಳನ್ನು ಬಳಸುವುದು ವಿಹಿತ. ಬಿತ್ತುವ ೧೦ ರಿಂದ ೧೫ ದಿನಗಳ ಮುಂಚಿತವಾಗಿ ಪ್ರತಿ ಎಕರೆಗೆ ೪ ಟನ್ ಕೊಟ್ಟಿಗೆ ಗೊಬ್ಬರ ಅಥವಾ ಕಾಂಪೊಸ್ಟ್ ಅನ್ನು ಮಣ್ಣಿಗೆ ಸೇರಿಸಿ ಉಳುಮೆ ಮಾಡಬೇಕು. ರಸಗೊಬ್ಬರದ ವಿಚಾರಕ್ಕೆ ಬಂದರೆ, ನೀರಾವರಿ/ನಾಟಿ ಪದ್ಧತಿಗೆ ೪೦:೨೦:೨೦ ಸಾ:ರಂ:ಪೊ ಅಲ್ಲದೇ, ಬಿತ್ತನೆ ಸಮಯದಲ್ಲಿ ೫೦ ಕಿ.ಗ್ರಾಂ ಡಿಎಪಿ ೩೫ ಕಿ.ಗ್ರಾಂ ಎಂಒಪಿ, ೫ ಕಿ.ಗ್ರಾಂ ಸತುವಿನ ಸಲೇಟ್ ಮತ್ತು ೪ ಕಿ.ಗ್ರಾಂ ಬೋರಾಕ್ಸ್ ಅನ್ನು ಮಣ್ಣಿಗೆ ಸೇರಿಸಬೇಕು ಹಾಗೂ ಬಿತ್ತಿದ/ನಾಟಿ ಮಾಡಿದ ೩೦ ದಿನUಳ ಮತ್ತು ೪೫ ದಿನಗಳ ನಂತರ ಮೇಲು ಗೊಬ್ಬರವಾಗಿ ೩೫ ಕಿ.ಗ್ರಾಂ ಯೂರಿಯಾವನ್ನು ಮಣ್ಣಿಗೆ ಸೇರಿಸಬೇಕು.

ಖುಷ್ಕಿ ಜಮೀನಾದರೆ (೨೦:೧೫:೧೬ ಸಾ:ರಂ:ಪೊ) ಬಿತ್ತನೆ ಸಮಯದಲ್ಲಿ ೩೫ ಕಿ.ಗ್ರಾಂ ಡಿಎಪಿ, ೩೦ ಕಿ.ಗ್ರಾಂ ಎಂಒಪಿ, ೫ ಕಿ. ಗ್ರಾಂ ಸತುವಿನ ಸಲೇಟ್ ಮತ್ತು ೪ ಕಿ.ಗ್ರಾಂ ಬೋರಾಕ್ಸ್ ಅನ್ನುಮಣ್ಣಿಗೆ ಸೇರಿಸಬೇಕು ಹಾಗೂ ಬಿತ್ತಿದ/ ನಾಟಿ ಮಾಡಿದ ೩೦ ದಿನಗಳಲ್ಲಿ ಮೇಲು ಗೊಬ್ಬರವಾಗಿ ೩೫ ಕಿ.ಗ್ರಾಂ ಯೂರಿಯಾ ವನ್ನು ಮಣ್ಣಿಗೆ ಸೇರಿಸಬೇಕು. ಕಳೆ ನಿಯಂತ್ರಣಕ್ಕೆ ಬಿತ್ತನೆ ಮಾಡಿದ/ನಾಟಿ ಮಾಡಿದ ದಿನ ಅಥವಾ ಮಾರನೆಯ ದಿನ ಎಕರೆಗೆ ೩೦೦ ಗ್ರಾಂ ಐಸೊಪ್ರೋಟು ರಾನ್ ಶೇ. ೭೦ ರ ಪುಡಿ ಅಥವಾ ೬೦೦ ಮಿ.ಲೀ ಬ್ಯುಟಕ್ಲೋರ್ ಶೇ.೫೦ ಇ.ಸಿ. ಅಥವಾ ೧೭೦ ಮಿ.ಲೀ. ಆಕ್ಸಿಪ್ರೋರೊಫಿನ್ ೨೩.೫ ಇ.ಸಿ ಅನ್ನು ೩೦೦ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪರಣೆ ಮಾಡುವುದು.

ನಾಟಿಯಾದ ೧೫ ರಿಂದ ೨೦ ದಿಗಳೊಳಗೆ ಎಕರೆಗೆ ೦.೫ ಕಿ.ಗ್ರಾಂ ೨,೪,ಡಿ-ಸೋಡಿಯಂ ದ್ರಾವನವನ್ನು ಶೇ.೮೦ ಡಬ್ಲೂ.ಪಿ.ಯನ್ನು ೨೦೦ ಲೀ. ನೀರಿನಲ್ಲಿ ಬೆರೆಸಿ ಸಿಂಪರಣೆ ಮಾಡಿ. ರಾಗಿ ತೆನೆಯು ಕಂದು ಬಣ್ಣಕ್ಕೆ ತಿರುಗಿದಾಗ ಕೊಯ್ಲು ಮಾಡಬೇಕು. ಸಾಮಾನ್ಯವಾಗಿ ಕಾಂಡಕೊರಕ ರೋಗ ರಾಗಿಯನ್ನು
ಬಾಽಸುತ್ತದೆ. ಇದು ತಗಿಲಿದಾಗ ಸುಳಿ ಒಣಗುವುದು, ತೆನೆ ಬಾಗುವುದು, ಬಾಗಿದ ಸುಳಿಗಳನ್ನು ಕೈಯಿಂದ ಎಳೆದರೆ ಸುಲಭವಾಗಿ ಬರುತ್ತವೆ. ಇದರ ನಿಯಂತ್ರಣಕ್ಕೆ ಕ್ಲೋರೋಪೈರಿ -ಸ್ ೨೦ ಇ.ಸಿ. ೨ ಮಿ.ಲೀ. ಅನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪರಣೆ ಮಾಡಬೇಕು. ಇದಲ್ಲದೇ ಸಸ್ಯ ಹೇನುಗಳು ಪೀಡೆಯೂ ಸಂಭವವಿದೆ. ರಸ ಹೀರುವುದರಿಂದ ಗರಿಗಳು ಹಳದಿ ಬಣ್ಣಕ್ಕೆ ತಿರುಗಿ ಗರಿಗಳ ಮೇಲೆ ಕಪ್ಪು ಬೂಷ್ಟು ಬೆಳೆದು ಗಿqದ ಬೆಳೆವಣಿಗೆ ಕುಗ್ಗುತ್ತದೆ.

ಇದರ ನಿಯಂತ್ರಣಕ್ಕೆ ಡೈಮಿಥೋಯೇಟ್ ೩೦ ಇ.ಸಿ. ೧.೭.ಮಿ.ಲೀ ಅನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪರಣೆ ವಡಬೇಕು. ಗೊಣ್ಣೆ ಹುಳುವಿನ ಮರಿ ಹುಳುಗಳು ಬೇರನ್ನು ತಿನ್ನುವುದರಿಂದ ತೆಂಡೆಗಳು ಒಣಗುತ್ತವೆ. ಕೈಯಿಂದ ಎಳೆದರೆ ಸುಲಭವಾಗಿ ಭೂಮಿಯಿಂದ ಬುಡ ಹೊರ ಬರುತ್ತದೆ. ಇದರ ನಿಯಂತ್ರಣಕ್ಕೆ ಏಪ್ರಿಲ್-ಮೇ ತಿಂಗಳ ಮಳೆಯ ನಂತರ ದುಂಬಿಗಳು ಸಾಯಂಕಾಲ ಸಮಯದಲ್ಲಿ ಭೂಮಿಯಿಂದ ಹೊರಬರುತ್ತವೆ. ಅವುಗಳನ್ನು ಹಿಡಿದು ನಾಶಪಡಿಸಬೇಕು. ಬಿತ್ತನೆಗೆ ಮುಂಚೆ (ಜೂನ್ ಜುಲೈ ತಿಂಗಳುUಳಲ್ಲಿ) ಭೂಮಿಯನ್ನು ೪-೫ ಬಾರಿ ಉಳುಮೆ ಮಾಡಿ, ಬಿತ್ತನೆ ಬೀಜ ಕೀಟನಾಶಕ ದೊಂದಿಗೆ ಸಂಪರ್ಕವಾಗದಂತೆ ನೋಡಿಕೊಳ್ಳಬೇಕು. ಬೆಳೆಯಲ್ಲಿ ಬಾಧೆಯಿದ್ದರೆ, ನೀರಿನ ಲಭ್ಯತೆಯಿದ್ದರೆ ಪ್ರತಿ ಚದರ ಅಡಿಗೆ ೦.೩೭ ಮಿ.ಲೀ. ಕ್ಲೋರೋಪೈರಿ-ಸ್ ೨೦ ಇ.ಸಿ ಅನ್ನು ನೀರಿನಲ್ಲಿ ಬೆರೆಸಿ ನೀರು ಹಾಯಿಸಬೇಕು.

ಇದಲ್ಲದೇ ಬೆಂಕಿ ರೋಗ ಮತ್ತು ಇಲುಕು ರೋಗಗಳು ಬಾಧಿಸಬಹುದು, ಎಲೆಗಳ ಮೇಲೆ ಕಂದು ಬಣ್ಣದ ವಜ್ರಾಕಾರದ ಚುಕ್ಕೆಗಳು ಕಾಣಿಸಿಕೊಂಡು ಅವುಗಳು ಒಂದಕ್ಕೊಂದು ಸೇರಿ ಎಲೆಗಳು ಒಣಗುತ್ತವೆ. ಇಲುಕಿನ ಮೇಲೆ ಕಂದು ಚಿಕ್ಕೆ ಕಾಣಿಸಿಕೊಂಡು ತೆನೆ ಇಲುಕು ಒಣಗುತ್ತದೆ. ಇದರ ಹತೋಟಿಗೆ
ಪ್ರತಿ ಲೀಟರ್ ನೀರಿಗೆ ೨ ಗ್ರಾಂ ಮ್ಯಾಂಕೋಜೆಬ್ ೭೫ ಡಬ್ಲ್ಯೂ.ಪಿ. ಅಥವಾ ೧ ಗ್ರಾಂ ಕಾರ್ಬೆಂಡೈಜಿಂ ೫೦ ಡಬ್ಲ್ಯೂ.ಪಿ. ಅಥವಾ ೧ ಮಿ.ಲೀ. ಎಡಿಪೆನ್-ಸ್ ೫೦ ಇ.ಸಿ. ಅಥವಾ ೨.೫ ಗ್ರಾಂ ಜೈನೆಬ್ ೭೫ ಡಬ್ಲ್ಯೂ.ಪಿ. ಅನ್ನು ಸಸಿ ಮಡಿಯಲ್ಲಿ ಬಿತ್ತನೆ ಮಾಡಿದ ೧೫ ದಿನಗಳ ನಂತರ (೫೦ ಲೀ.) ನಾಟಿ ಮಾಡಿದ
೨೦-೪೦ ದಿನಗಳಲ್ಲಿ ಹಾಗೂ ಶೇ. ೫೦ ರಷ್ಟು ತೆನೆ ಬಂದಾಗ ಸಿಂಪರಣೆ ಮಾಡಬೇಕು.

ಕಂದು ಚುಕ್ಕೆ ರೋಗ ಹತೋಟಿಗೆ ಪ್ರತಿ ಲೀಟರ್ ನೀರಿಗೆ ೨ ಗ್ರಾಂ ಕಾರ್ಬೆಡೈಜಿಂ ೫೦ ಡಬ್ಲ್ಯೂ.ಪಿ. ಮತ್ತು ಮ್ಯಾಂಕೋಜೆಬ್ ೬೩ ಡಬ್ಲ್ಯೂ.ಪಿ. ಮಿಶ್ರಣ ವನ್ನು ರೋಗ ಕಂಡು ಬಂದಾಗ ಸಿಂಪರಣೆ ಮಾಡಬೇಕು.

Read E-Paper click here