Saturday, 14th December 2024

ಹಲೋ ಉಜ್ಜೀವನ್ ಆ್ಯಪ್‌ಗೆ ಪ್ರತಿಷ್ಠಿತ ೧೩ನೇ ಏಜಿಸ್ ಗ್ರಹಾಂ ಬೆಲ್ ಪುರಸ್ಕಾರ

ಬೆಂಗಳೂರು: ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ತನ್ನ ಹಲೋ ಉಜ್ಜೀವನ್ ಆ್ಯಪ್ ೧೩ನೇ ಏಜಿಸ್ ಗ್ರಹಾಂ ಬೆಲ್ ಅವಾರ್ಡ್ಸ್(ಎಜಿಬಿಎ) ಪುರಸ್ಕಾರದ ಗೆಲುವನ್ನು “ಕನ್ಸೂಮರ್ ಟೆಕ್‌ನಲ್ಲಿ ಆವಿಷ್ಕಾರ’ ವಿಭಾಗದಲ್ಲಿ ಪ್ರಕಟಿಸಲು ಹೆಮ್ಮೆ ಪಡುತ್ತದೆ. ಈ ಬಹುಮಾನಗಳ ಹದಿಮೂರನೇ ಆವೃತ್ತಿಯು ಏಜಿಸ್ ಸ್ಕೂಲ್ ಆಫ್ ಡೇಟಾ ಸೈನ್ಸ್ನ ಉಪಕ್ರಮವಾಗಿದ್ದು ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ; ನೀತಿ ಆಯೋಗ ಮತ್ತು ಸ್ಕಿಲ್ ಇಂಡಿಯಾದ ಬೆಂಬಲ ಪಡೆದಿದ್ದು ಭಾರತದಲ್ಲಿ ಆವಿಷ್ಕಾರದ ಸಂಸ್ಕೃತಿಯನ್ನು ಉತ್ತೇಜಿಸಲಿವೆ.

ಹಲೋ ಉಜ್ಜೀವನ್ ಭಾರತದ ಮೊದಲ ಮೊಬೈಲ್ ಬ್ಯಾಂಕಿAಗ್ ಆ್ಯಪ್ ಆಗಿದ್ದು ಅದು ಬ್ಯಾಂಕ್‌ನ ಮಾತು, ದೃಶ್ಯ ಮತ್ತು ಸ್ಥಳೀಯ ಭಾಷೆಗಳ ವಿಶೇಷತೆಗಳು ಸೀಮಿತವಾದ ಓದು ಮತ್ತು ಬರಹದ ಸಾಮರ್ಥ್ಯಗಳುಳ್ಳ ಬ್ಯಾಂಕ್‌ನ ಮೈಕ್ರೊಬ್ಯಾಂಕಿAಗ್ ಮತ್ತು ಗ್ರಾಮೀಣ ಗ್ರಾಹಕರಿಗೆ ಬ್ಯಾಂಕಿ0ಗ್ ಸೇವೆಗಳ ಆ್ಯಪ್‌ನ ಲಭ್ಯತೆ ನೀಡುವ ಮೂಲಕ ಗ್ರಾಹಕರಿಗೆ ಅನುಕೂಲಕರವಾಗಿ ಮತ್ತು ಸುರಕ್ಷಿತವಾಗಿ ಅವರ ಆಯ್ಕೆಯ ಭಾಷೆಯಲ್ಲಿ ವಹಿವಾಟು ನಡೆಸಲು ಸನ್ನದ್ಧವಾಗಿಸುತ್ತದೆ.

ಈ ಗೆಲುವಿನ ಕುರಿತು ಉಜ್ಜೀವನ್ ಎಸ್‌ಎಫ್‌ಬಿಯ ಎಂ.ಡಿ. ಮತ್ತು ಸಿಇಒ ಇಟ್ಟಿರ ಡೇವಿಸ್,”ಈ ಗೆಲುವು ನಮ್ಮ ಬ್ಯಾಂಕ್ ಗ್ರಾಹಕರಿಗೆ ಆವಿಷ್ಕಾರಕ ಆದರೆ ಸರಳ ಪರಿಹಾರಗಳನ್ನು ಒದಗಿಸುವ ನಮ್ಮ ಪ್ರಯತ್ನಗಳ ಫಲಿತಾಂಶವಾಗಿದೆ. ಇದು ನಮ್ಮ ಸಾಮೂಹಿಕ ಮಾರುಕಟ್ಟೆಯ ವ್ಯಾಪ್ತಿಯ ಭಾಗವಾದ ಡಿಜಿಟಲ್ ಮತ್ತು ಹಣಕಾಸು ಸೇರ್ಪಡೆಗೆ ಪೂರಕವಾಗಿದೆ. ಹಲೋ ಉಜ್ಜೀವನ್ ನಮ್ಮ ಗ್ರಾಹಕರಿಗೆ ಡಿಜಿಟಲ್ ಬ್ಯಾಂಕಿ0ಗ್ ಪ್ಲಾಟ್‌ಫಾರಂ ಅಳವಡಿಸಿಕೊಳ್ಳಲು ಮೊದಲ ಹೆಜ್ಜೆ ಇರಿಸಲು ಸನ್ನದ್ಧವಾಗಿಸುತ್ತದೆ. ಈ ಪ್ಲಾಟ್‌ಫಾರಂಗೆ ಮತ್ತಷ್ಟು ಸೇವೆಗಳ ಸೇರ್ಪಡೆಯ ಮೂಲಕ ಅವರು ಅಪಾರವಾಗಿ ಅನುಕೂಲ ಹೊಂದುತ್ತಾರೆ ಎಂಬ ಭರವಸೆ ನಮ್ಮದಾಗಿದ್ದು ಅವರಿಗೆ ನಾವು ಪ್ರಸ್ತುತ ಒದಗಿಸುವ ಸಮಗ್ರ ಅನುಕೂಲಗಳಿಂದ ಪ್ರಯೋಜನ ಹೊಂದಲು ಸನ್ನದ್ಧವಾಗಿಸುತ್ತದೆ” ಎಂದರು.

‘ಹಲೋ ಉಜ್ಜೀವನ್’ ಬ್ಯಾಂಕ್‌ನ ಮೈಕ್ರೊ ಬ್ಯಾಂಕಿ0ಗ್ ಮತ್ತು ಗ್ರಾಮೀಣ ಗ್ರಾಹಕರು ಹಾಗೂ ಉದ್ಯೋಗಿಗಳಿಗೆ ಕೈಗೊಂಡ ಸೈಕೋಗ್ರಾಫಿಕ್ ಸಂಶೋಧನೆಯ ಫಲಿತಾಂಶವಾಗಿದೆ. ಗ್ರಾಹಕರು ಮತ್ತು ಉದ್ಯೋಗಿಗಳು ಮೊಬೈಲ್‌ನಲ್ಲಿ ವಿರಾಮ ಮತ್ತು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರಂ ಗಳನ್ನು ಬಳಸಬಹುದು ಅವುಗಳನ್ನು ಭಾರತೀಯ ಜನ ಸಮುದಾಯದ ವರ್ತನೆಯ ಗುಣಗಳಿಗೆ ಅನುಗುಣವಾಗಿ ವಿನ್ಯಾಸಗೊಳಿಸಲಾಗಿದೆ.

ಬ್ಯಾಂಕಿ0ಗ್, ಇ-ಕಾಮರ್ಸ್ ಮತ್ತು ಆರೋಗ್ಯಸೇವಾ ಪ್ಲಾಟ್‌ಫಾರಂಗಳು ಪಾಶ್ಚಿಮಾತ್ಯ ವಿನ್ಯಾಸದ ತತ್ವಗಳನ್ನು ಆಧರಿಸಿ ನಿರ್ಮಿಸಲಾಗಿದ್ದು ಅವು ಭಾರತೀಯ ಜನಸಂಖ್ಯೆಯ ಬಹುತೇಕ ಮಂದಿಗೆ ಅಪರಿಚಿತವಾಗಿವೆ. ಮೊದಲ ಬಾರಿಗೆ ಇಂಟರ್‌ನೆಟ್ ವಿಶ್ವ ಪ್ರವೇಶಿಸುವ ಮೊಬೈಲ್ ಬಳಕೆದಾರರು ಅವರ ಉಳಿತಾಯ ಕಳೆದುಕೊಳ್ಳಬಹುದಾದ ತಪ್ಪುಗಳನ್ನು ಮಾಡುವ ಕುರಿತು ಭಯ ಪಡುತ್ತಾರೆ. ಪ್ರಸ್ತುತದ ಅಗತ್ಯವೆಂದರೆ ಅವರ ಪ್ರಸ್ತುತ ಸಾಮಾಜಿಕ ಮಾಧ್ಯಮ ವರ್ತನೆಯನ್ನು ಹೋಲುವ ಬ್ಯಾಂಕಿ0ಗ್ ಅನ್ನು ಸುರಕ್ಷಿತ ಮತ್ತು ಅನುಕೂಲಕರವಾಗಿಸು ಆ್ಯಪ್ ಒದಗಿಸುವುದಾಗಿದೆ.