ವಿಶ್ಲೇಷಣೆ
ಮಣಿಕಂಠ ತ್ರಿಶಂಕರ್
ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆ ಸಮೀಪಿಸುತ್ತಿದೆ ಎಂದಾಕ್ಷಣ ನಮಗೆ ಮೊದಲು ಹೊಳೆಯುವುದೇ ಆ ಕರಾಳ ಛಾಯೆ. ಈ ದೇಶದಲ್ಲಿ ಪ್ರಜಾಪ್ರಭುತ್ವದಲ್ಲಿ ಅದೊಂದು ಕರಾಳ ಅಧ್ಯಾಯ ಎಂದು ಕರೆಯುತ್ತೇವೆ. ಅವತ್ತು ಮಾಧ್ಯಮಗಳನ್ನು ಅಕ್ಷರಶಃ ಸಂವೇದಕ ಮಾಡಿದರು, ಮುದ್ರಣಾ ಲಯಗಳನ್ನು ಮುಚ್ಚಿ ಹಾಕಿದ್ದರು, ೧೧ಲಕ್ಷ ಜನರನ್ನು ಜೈಲಿಗೆ ಅಟ್ಟಿದ್ದರು, ಸಂಸತ್ತಿನಲ್ಲಿ ಪ್ರಶ್ನೋತ್ತರ ಅವಧಿಯನ್ನು ಕಿತ್ತುಹಾಕಿದರು ಮಾತ್ರವಲ್ಲ, ಸರ್ವೋಚ್ಚ ನ್ಯಾಯಾಲಯದ ಅಧಿಕಾರವನ್ನೂ ಕಿತ್ತುಕೊಂಡಿದ್ದರು.
ಇವತ್ತು ನಾವೆಲ್ಲ ಜೋರಾಗಿ ಹೋರಾಟ ಮಾಡುತ್ತೇವೆ, ಚೀನ್ ಕರ್ ಆಜಾದಿ ಲೇಂಗೆ (ಸ್ವತಂತ್ರ ವನ್ನು ಕಿತ್ತುಕೊಳ್ಳುತ್ತೇವೆ) ಎಂದು ಘೋಷಣೆ ಕೂಗುತ್ತೇವೆ. ಆದರೆ ಅಕ್ಷರಶಃ ಈ ದೇಶದ ಪ್ರತಿಯೊಬ್ಬ ಪ್ರಜೆಯ ಹಕ್ಕು, ಅಧಿಕಾರ ಹಾಗೂ ಸ್ವಾತಂತ್ರ್ಯವನ್ನು ಕಿತ್ತುಕೊಂಡಿದ್ದರು. ಈ ದೇಶದಲ್ಲಿ‘ತುರ್ತುಪರಿಸ್ಥಿತಿ’ ಜಾರಿಗೆ ಬಂದಿತ್ತು.
ಅಂದಿನ ಪ್ರಧಾನಿ ಇಂದಿರಾಗಾಂಧಿ ತುರ್ತು ಪರಿಸ್ಥಿತಿಯನ್ನು ಜಾರಿಗೆ (೧೯೭೫)ತಂದು ೨೦೨೫ಕ್ಕೆ ೫೦ ವರ್ಷಗಳಾಗುತ್ತಿವೆ. ಬಹುತೇಕ ಈಗಿನ ಯುವ ಪೀಳಿಗೆಯವರಿಗೆ ಇಂಥದ್ದೊಂದು ವಿಷಯದ ಕುರಿತು ಅರಿವೇ ಇಲ್ಲ. ಇವತ್ತಿನ ಹೋರಾಟಗಾರರೂ ಅವತ್ತಿನ ದಿನಗಳನ್ನು ನೆನಪು
ಮಾಡಿ ಕೊಳ್ಳುವುದಿಲ್ಲ. ಆದರೆ ಪ್ರಜಾಪ್ರಭುತ್ವ ವ್ಯವಸ್ಥೆಯ ರಕ್ಷಣೆಯ ದೃಷ್ಟಿಯಿಂದ ಈ ದೇಶದ ಪ್ರತಿಯೊಬ್ಬ ಯುವಕ, ಚಿಂತಕ, ಕಾರ್ಮಿಕ, ರೈತ, ವಿದ್ಯಾರ್ಥಿ ಹಾಗೂ ದಲಿತರು ತುರ್ತು ಪರಿಸ್ಥಿತಿಯ ಅವಲೋಕನ ಮಾಡಲೇ ಬೇಕಾದ್ದು ಅನಿವಾರ್ಯ.
೧೯೭೧ರ ಚುನಾವಣೆಯಲ್ಲಿ ಇಂದಿರಾ ವಿರುದ್ಧ ಅಭ್ಯರ್ಥಿ ರಾಜ್ ನಾರಾಯಣ ಸೋತರು. ಆದರೆ ವಾತಾವರಣ ಹಾಗಿರಲಿಲ್ಲ, ‘ನಾನು ಗೆಲ್ಲಬಹು ದಾಗಿತ್ತು ಏಕೆ ಸೋತೆ’ ಎಂಬ ಸತ್ಯ ಅರಿತ ರಾಜ್ ನಾರಾಯಣ್, ಅಲಹಾಬಾದ್ ಹೈಕೋರ್ಟ್ನಲ್ಲಿ ಇಂದಿರಾ ವಿರುದ್ಧ ಆರು ಆರೋಪಗಳ ಮನವಿ ಸಲ್ಲಿಸಿದರು. ವಿಚಾರಣೆ ನಡೆಸಿದ ಕೋರ್ಟ್, ಜೂನ್ ೧೨, ೧೯೭೫ರಂದು ಇಂದಿರಾ ವಿರುದ್ಧದ ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ ಇಂದಿರಾಗಾಂಧಿಯವರ ಗೆಲುವನ್ನು ಅಸಿಂಧುಗೊಳಿಸಿ, ಕೂಡಲೆ ರಾಜೀನಾಮೆ ನೀಡುವಂತೆ ಆದೇಶಿಸಿತು.
ಇದನ್ನು ಪ್ರಶ್ನಿಸಿ, ಇಂದಿರಾ ಸರ್ವೋಚ್ಚ ನ್ಯಾಯಾಲಯದ ಮೊರೆ ಹೋದರು. ವಿಚಾರಣೆಗೆ ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್ ಸಹ ಅಲಹಾಬಾದ್ ಹೈಕೋರ್ಟ್ ಆದೇಶಕ್ಕೆ ತಡೆ ನೀಡಲು ನಿರಾಕರಿಸಿ, ವಿಚಾರಣೆ ಮುಗಿಯುವವರೆಗೆ ಪ್ರಧಾನಿ ಸ್ಥಾನದಲ್ಲಿ ಇಂದಿರಾ ಮುಂದುವರಿಯಬಹುದು.
ಆದರೆ ಸಂಸತ್ತಿನ ಕಲಾಪದಲ್ಲಿ ಹಾಗೂ ಚುನಾವಣೆಯಲ್ಲಿ ಭಾಗವಹಿಸುವಂತಿಲ್ಲ ಎಂದು ಆದೇಶಿಸಿತು. ಈ ಹಿನ್ನಲೆಯಲ್ಲಿ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕೆಂದು ಇಂದಿರಾ ವಿರುದ್ಧ ಬೃಹತ್ ಹೋರಾಟ ಆರಂಭವಾಯಿತು. ಜೂನ್ ೨೪, ೨೫ರಮದು ದೆಹಲಿಯಲ್ಲಿ ಜಯಪ್ರಕಾಶ್ ನಾರಾಯಣ ನೇತೃತ್ವದಲ್ಲಿ ನಡೆದ ಬೃಹತ್ ರ್ಯಾಲಿಯಲ್ಲಿ ಲಕ್ಷಾಂತರ ಜನ ಪಾಲ್ಗೊಂಡರು.
‘ಖುರ್ಚಿ ಖಾಲಿ ಕರೋ ಜನತಾ ಆತಿ ಹೇ’ ಎಂಬುದು ಜೆಪಿ ಅವರ ಪ್ರಸಿದ್ಧ ಘೋಷವಾಕ್ಯವಾಗಿತ್ತು. ದಾರಿ ಕಾಣದ ಹತಾಶ ಇಂದಿರಾ, ರಾಜೀನಾಮೆ ಕೊಡಲು ಬದಲಾಗಿ ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿಯೇಬಿಟ್ಟರು. ಅದು ಜೂನ್ ೨೫, ೧೯೭೫. ಆ ದಿನ ರಾತ್ರಿ ೧೧:೦೦ಗೆ ಅವತ್ತಿನ ರಾಷ್ಟ್ರಪತಿ -ಕ್ರುದ್ದೀನ್ ಅಲಿ ಅಹಮದ್ ಮನೆಗೆ ಭೇಟಿ ನೀಡಿದ ಇಂದಿರಾ, ‘ತುರ್ತು ಪರಿಸ್ಥಿತಿಯನ್ನು ಹೇರುತ್ತಾ ಇದ್ದೇನೆ. ಪತ್ರವನ್ನು ಕಳುಹಿಸುವೆ ಅಂಕಿತ ಹಾಕಿ’ ಎಂದು ಅಕ್ಷರಶಃ ‘ಆದೇಶಿಸಿದರು’. ರಾಷ್ಟ್ರಪತಿಯವರಿಗೆ ಪ್ರಶ್ನೆ ಮಾಡುವ, ತಿರಸ್ಕಾರ ಮಾಡುವ, ಅಂಕಿತ ಹಾಕದಿರುವ ಹಾಗೂ ಸಂಪೂರ್ಣ ಮಾಹಿತಿ ಕೇಳುವ ಅಧಿಕಾರ ಸಂವಿಧಾನ ಪ್ರಕಾರ ಇತ್ತು. ಆದರೆ ಇಂದಿರಾ ಎದುರು ಇದ್ಯಾವುದೂ ನಿಲ್ಲುತ್ತಿರಲಿಲ್ಲ.
ಪ್ರಶ್ನಿಸದೇ ಸಹಿ ಹಾಕಿ ಕಳುಹಿಸಿದ್ದರು. ಅಷ್ಟೇ, ಶಾಂತಿಯುತ ಹೋರಾಟ ಮಾಡುತ್ತಿದ್ದ ಜೆಪಿಯವರನ್ನು ದಸ್ತಗಿರಿ ಮಾಡಲಾಯಿತು. ವಿಷಯ ಕೇಳಿ ಠಾಣೆಗೆ ಬಂದ ಚಂದ್ರಶೇಖರ್ ಅವರನ್ನು ಸಹ ಕೂಡಲೇ ಬಂಧಿಸಲಾಯಿತು. ಜತೆಗೆ ಮೊರಾರ್ಜಿ ದೇಸಾಯಿ, ಅಟಲ್ ಬಿಹಾರಿ ವಾಜಪೇಯಿ, ಎಲ್ ಕೆ
ಆಡ್ವಾಣಿ, ಜೆ ಬಿ ಕೃಪಲಾನಿ ಮತ್ತಿತ ಮಹಾನ್ ನಾಐಕರೆಲ್ಲರನ್ನೂ ಸೆರೆಗೆ ತಳ್ಳಲಾಯಿತು. ದೆಹಲಿಯಲ್ಲಿದ್ದ ಮುದ್ರಣಾಲಯಗಳಿಗೆ ವಿದ್ಯುತ್
ಸರಬರಾಜು ಕಡಿತಗೊಳಿಸಲಾಯಿತು.
ತುರ್ತುಪರಿಸ್ಥಿತಿಯನ್ನು ರಾಷ್ಟ್ರದ ಜನತೆಗೆ ತಿಳಿಸಲು ಆಪ್ತ ಕಾರ್ಯದರ್ಶಿಗೆ ಸರಳ ಕಡತವನ್ನು ತಯಾರಿಸಲು ಸೂಚಿಸಿ, ಅಂದಿನ ಕ್ಯಾಬಿನೆಟ್ ಸಚಿವರಿಗೆ ‘ನಾಳೆ ಬೆಳಗ್ಗೆ ೬ ಗಂಟೆಗೆ ಕ್ಯಾಬಿನೆಟ್ ಸಭೆಯಲ್ಲಿ ಭಾಗಿಯಾಗಿ’ ಎಂದು ತಿಳಿಸಿದರು. ಸುಮಾರು ಎಂಟು ಸಚಿವರು ಹಾಗೂ ಕ್ಯಾಬಿನೆಟ್ ಸಚಿವರು ಸಭೆಗೆ ಆಗಮಿಸಿದಾಗ ಕೆಲವರಿಗೆ ರಾಜೀನಾಮೆ ನೀಡಲು ಸೂಚಿಸಲು ಕರೆದಿರಬಹುದು ಎಂದುಕೊಳ್ಳಲಾಗಿತ್ತು. ಆದರೆ ಅಲ್ಲಿ ಇಂದಿರಮ್ಮ ಘೋಷಿಸಿದ್ದೇನು ಗೊತ್ತೇ? ‘ಎಛ್ಞಿಠ್ಝಿಛಿಞZ, ಛಿಞಛ್ಟಿಜಛ್ಞ್ಚಿqs eZo ಚಿಛಿಛ್ಞಿ bಛ್ಚ್ಝಿZಛಿb Zb Zಛಿoಠಿಛಿb ಒ P ಘೆZZqsZ, Iಟ್ಟZಜಿ ಈಛಿoZಜಿ, ಅ ಆ
ZmZqsಛಿಛಿ, ಔ ಓ ಅbqZಜಿ Zb ಟಠಿeಛ್ಟಿo’ ಅಲ್ಲಿಂದ ಇಂದಿರಾ ನೇರವಾಗಿ ತೆರಳಿದ್ದು, ಆಕಾಶವಾಣಿ ಕೇಂದ್ರಕ್ಕೆ.
ದೇಶದ ಜನೆತೆ ವಾರ್ತೆ ಕೇಳಲು ಬೆಳಗ್ಗೆ ೮ಕ್ಕೆ ರೇಡಿಯೋ ಹಚ್ಚಿದರೆ, ದಿಢೀರನೆ ಕೇಳಿದ್ದು, ಪ್ರಧಾನಿ ಇಂದಿರಾ ಧ್ವನಿ! – ‘ಬೆಹೆನೋ ಔರ್ ಭಾಯಿಯೋ
ರಾಷ್ಟ್ರಪತಿಜೀನೇ ಆಪತ್ಕಾಲ್ ಘೋಷಣಾ ಕೀ ಹೈ, ಇಸೆ ಆತಂಕಿತ್ ಹೋನೆ ಕಾ ಕಾರಣ್ ನಹೀ ಹೈ’ ಎಂದು ತಣ್ಣಗೆ ಹೇಳಿದ್ದರು. ಅನಂತರದ್ದು ಇತಿಹಾಸ. ದೇಶದಲ್ಲಿ ೧೦ ಲಕ್ಷಕ್ಕಿಂತ ಹೆಚ್ಚು ಮಂದಿಯನ್ನು ಸೆರೆಗಟ್ಟಲಾಯಿತು. ಪತ್ರಿಕೆಗಳು ನಿರ್ಬಂಧಿಸಲ್ಪಟ್ಟವು. ಸಂಸತ್ತಿನ ಅಧಿಕಾರ
ಪ್ರಶ್ನೋತ್ತರ ಅವಽಯನ್ನು ಅಮಾನತು ಮಾಡಿದರು ಹಾಗೂ ನ್ಯಾಯಾಂಗದ ಅಽಕಾರವನ್ನು ಕಿತ್ತುಕೊಂಡರು.
೩೮, ೩೯ ಹಾಗೂ ೪೦ನೇ ತಿದ್ದುಪಡಿ: ಇಷ್ಟೆಲ್ಲ ಆದರೂ ಇಂದಿರಾ ಒಂದು ತೂಗುಗತ್ತಿ ಇತ್ತು. ಸುಪ್ರೀಂ ಕೋಟ್ನ ವಿಚಾರಣೆ ಬಾಕಿ ಇತ್ತು. ತಡೆ ಆe ಕೋರಿದ್ದ ಅರ್ಜಿ ಎಲ್ಲಿ ವಜಾ ಆಗಿಬಿಡುತ್ತದೆಯೋ ಎಂಬ ಆತಂಕವನ್ನು ದೂರ ಮಾಡಿಕೊಳ್ಳಲು ಸಂವಿಧಾನದ ೩೮ ಹಾಗೂ ೩೯ ತಿದ್ದುಪಡಿಯನ್ನು ಜಾರಿಗೆ ತಂದರು. ಈ ದೇಶದಲ್ಲಿ ಇವತ್ತಿನವರೆಗೆ ಸಂವಿಧಾನಕ್ಕೆ ೧೦೫ಕ್ಕಿಂತ ಹೆಚ್ಚು ತಿದ್ದುಪಡಿಗಳು ಆಗಿವೆ. ಸಂವಿಧಾನದ ೩೬೮ನೇ ವಿಧಿ ಯಾವ ಕಾರಣಕ್ಕೆ ತಿದ್ದುಪಡಿ ಮಾಡಬೇಕು ಎಂದು ಸಂಪೂರ್ಣ ವಿವರವಾಗಿ ಹೇಳುತ್ತದೆ.
ಜಗತ್ತಿನ ಎಲ್ಲ ಸಂವಿಧಾನದಲ್ಲೂ ತಿದ್ದುಪಡಿ ಯಾಗುತ್ತದೆ, ಆದರೆ ಒಬ್ಬ ವ್ಯಕ್ತಿಯ ರಕ್ಷಣೆಯ ಸಲುವಾಗಿ, ಅಧಿಕಾರ ಉಳಿಸಿಕೊಳ್ಳುವ ಸಲುವಾಗಿ ಈ ಜಗತ್ತಿನಲ್ಲಿ ಸಂವಿಧಾನ ತಿದ್ದುಪಡಿಯಾಗಿದೆ ಎಂದರೆ ಅದು ನಮ್ಮ ಭಾರತ ಸಂವಿಧಾನದ ೩೮ ಹಾಗೂ ೩೯ನೇ ತಿದ್ದುಪಡಿ ಮಾತ್ರ.
೩೮ನೇ ತಿದ್ದುಪಡಿ: ರಾಷ್ಟ್ರಪತಿಯ ಸಮಾಧಾನವೇ ಅಂತಿಮ ಹಾಗೂ ನಿರ್ಣಾಯಕ ಹಾಗೂ ಅದನ್ನು ಯಾವುದೇ ನ್ಯಾಯಾಲಯದಲ್ಲಿ ಪ್ರಶ್ನಿಸು ವಂತಿಲ್ಲ. ತುರ್ತು ಪರಿಸ್ಥಿತಿಯ ಘೋಷಣೆ ಜಾರಿಯಲ್ಲಿದ್ದಾಗ ಸಂವಿಧಾನದ ೩೫೯ನೇ ಅನುಚ್ಛೇದದ ೩ನೇ ಭಾಗದಿಂದ ಪ್ರದತ್ತವಾದ ಹಕ್ಕುಗಳನ್ನು ಮೊಟಕುಗೊಳಿಸುವ ಅಥವಾ ಅಮಾನತ್ತಿನಲ್ಲಿಡುವ ಅಧಿಕಾರವನ್ನು ರಾಷ್ಟ್ರಪತಿಗೆ ವಹಿಸಲಾಗಿದೆ.
೩೯ನೇ ತಿದ್ದುಪಡಿ: ಪ್ರಧಾನಮಂತ್ರಿಯ ಚುನಾವಣೆಯ ಬಗ್ಗೆ ಯಾವುದೇ ನ್ಯಾಯಾಲಯದಲ್ಲಿ ಪ್ರಶ್ನಿಸುವಂತಿಲ್ಲ. ಇದೂ ನಿಜಕ್ಕೂ ಸಂವಿಧಾನದ ಮೇಲಿನ ಬಹು ದೊಡ್ಡ ಅಕ್ರಮಣವೇ ಆಗಿತ್ತು. ಕೊನೆಗೆ ಜನತಾಪಕ್ಷದ ಸರಕಾರ ಅಧಿಕಾರ ಬಂತು, ಮೊರಾಜಿ ದೇಸಾಯಿ ಪ್ರಧಾನಿ ಯಾದರು. ಆ ಸರಕಾರದಲ್ಲಿ ಅಟಲ್ ಬಿಹಾರಿ ವಾಜಪೇಯಿ ಹಾಗೂ ಎಲ್ ಕೆ ಆಡ್ವಾಣಿಯವರು ಸಹ ಇದ್ದರು. ಅವರು ೪೪ನೇ ತಿದ್ದುಪಡಿ ಜಾರಿಗೊಳಿಸಿದರು.
೪೪ನೇ ತಿದ್ದುಪಡಿಯ ಮೂಲಕ ಮೂಲ ಸಂವಿಧಾನದಲ್ಲಿದ್ದ ಅಂಶಗಳನ್ನು ಎತ್ತಿ ಹಿಡಿದರು. ತುರ್ತುಪರಿಸ್ಥಿತಿಯಲ್ಲಿ ಮಾಡಿದಂತಹ ಎಲ್ಲ ತಿದ್ದುಪಡಿ ಗಳನ್ನು ಹಿಂಪಡೆದು ನ್ಯಾಯಾಂಗಕ್ಕೆ ಸ್ವತಂತ್ರ ಅಧಿಕಾರವನ್ನು ನೀಡಲಾಯಿತು ಎಂಬುದು ಬೇರೆ ಪ್ರಶ್ನೆ. ಹೀಗಾಗಿ ಇಂದಿಗೂ ಭಾರತದಲ್ಲಿ ಪ್ರಜಾಪ್ರಭುತ್ವ ಉಳಿದಿದೆ.
೪೪ನೇ ತಿದ್ದುಪಡಿ: ಯಾವುದೇ ಸುಗ್ರೀವಾಜ್ಞೆ ಜಾರಿಗೊಳಿಸುವ ಮುನ್ನ ಕೇಂದ್ರ ಸರಕಾರವು ದೃಢ ನಿರ್ಧಾರ ಮಾಡಬೇಕು, ರಾಷ್ಟ್ರಪತಿಗಳಿಂದ ಅಂಕಿತಗೊಂಡ ೩೦ ದಿನದೊಳಗೆ ಸಂಸತ್ತಿನಲ್ಲಿ ೨/೩ ಬಹುಮತದ ಮೇರೆಗೆ ಒಪ್ಪಿಗೆ ತೆಗೆದುಕೊಳ್ಳಬೇಕು. ಶಸಸ ದಂಗೆ ಎದ್ದಾಗ ಮಾತ್ರ
ಆಂತರಿಕವಾಗಿ ಜಾರಿಗೊಳಿಸಬಹುದು, ದೇಶದ ಯಾವ ಪ್ರಜೆಯಾದರು ತುರ್ತು ಪರಿಸ್ಥಿತಿ ಜಾರಿಯಾಗುವುದರ ಕುರಿತು ನ್ಯಾಯಾಲಯದಲ್ಲಿ ಪ್ರಶ್ನಿಸಬಹುದು ಹಾಗೂ ಯಾವುದೇ ಸಂದರ್ಭದಲ್ಲಿ ಸಹ ಜೀವಿಸುವ ಹಾಗೂ ಬದುಕುವ ಹಕ್ಕನ್ನು ಕಿತ್ತುಕೊಳ್ಳಬಾರದು.
ತುರ್ತು ಪರಿಸ್ಥಿತಿ ಜಾರಿ ಮಾಡಿದಾಗ ಅಂದಿನ ಸಚಿವರಿಗೆ ಮತ್ತು ಬೆಂಬಲ ನೀಡಿದ ಹಿರಿಯರು ಈ ಕಳಂಕವನ್ನು ಹೊತ್ತುಕೊಳ್ಳಬೇಕಾದ ಪರಿಸ್ಥಿತಿ ಒದಗಿದೆ. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಅತ್ಯಂತ ಕರಾಳ ಛಾಯೆಯನ್ನು, ತುರ್ತು ಪರಿಸ್ಥಿತಿಯನ್ನು ತಂದಂತಹ ಸನ್ನಿವೇಶ ಅದು ಬಹಳ
ದೊಡ್ಡದಾಗಿ ಮಾನವ ಕುಲದ ಮೇಲೆ ಮಾಡಿರುವ ಅಕ್ರಮಣವಾಗಿದೆ. ಈ ಆಕ್ರಮಣದ ಕುರಿತು ಇವತ್ತಿನ ಯುವಕರಿಗೆ ಈ ವಿಷಯ ತಿಳಿದಿಲ್ಲ. ತುರ್ತು ಪರಿಸ್ಥಿತಿ ಹೇಗೆ ಜಾರಿಯಾಯಿತು? ಏಕಾಯಿತು? ಅದರ ಪರಿಣಾಮವೇನಾಯಿತು? ಎಂಬುದರ ಬಗ್ಗೆಯೂ ಸಹ ಅರಿವಿಲ್ಲ. ಆದರೆ ಗೊತ್ತಾಗಬೇಕು. ಏಕೆಂದರೆ ಅದೇ ಪಕ್ಷದ ವರಿಷ್ಠ ನಾಯಕ ರಾಹುಲ್ ಗಾಂಽ ವಿದೇಶಗಳಿಗೆ ಹೋಗಿ ‘ಬಾಋತದ ಪ್ರಜಾಪ್ರಭುತ್ವ ಅಪಾಯದಲ್ಲಿ’ ಎಂದಿದ್ದಾರೆ. ಮತ್ತೆ ಅದೇ ಕಾಂಗ್ರೆಸಿಗರು ಗಾಂದಿ ಹಿಂಬಾಲಕರಾಗಿ, ತಮ್ಮ ನಾಯಕನ ಮಾತುಗಳನ್ನು ಕುರುಡಾಗಿ ಸಮರ್ಥಿಸಿಕೊಳ್ಳುತ್ತಿದ್ದಾರೆ.